ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Astro Tips: ವಜ್ರ ಧಾರಣೆ: ಯಾವ ರಾಶಿಗೆ ಶುಭ? ಯಾರಿಗೆ ಅಶುಭ? ಜ್ಯೋತಿಷ್ಯ ಹೇಳುವುದೇನು?

ಜ್ಯೋತಿಷ್ಯದಲ್ಲಿ ವಜ್ರಕ್ಕೆ ವಿಶೇಷ ಸ್ಥಾನವಿದ್ದು, ಅದು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ. ಸರಿಯಾದ ವಿಧಾನದಲ್ಲಿ ಹಾಗೂ ಅನುಕೂಲಕರ ಜಾತಕ ಹೊಂದಿರುವವರು ವಜ್ರ ಧರಿಸಿದರೆ ಸುಖ, ಸಮೃದ್ಧಿ ಮತ್ತು ವೈವಾಹಿಕ ಜೀವನದಲ್ಲಿ ಸುಧಾರಣೆ ಕಾಣಬಹುದು. ಹಾಗಾದ್ರೆ ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಯಾವಾಗ, ಯಾರು ವಜ್ರ ಧರಿಸಿದ್ದರೆ ಒಳ್ಳೆಯದು..? ಅದಕ್ಕೆ ಪಾಲಿಸಬೇಕಾದ ಕ್ರಮಗಳು ಏನು ಎಂಬುದನ್ನು ತಿಳಿದುಕೊಳ್ಳೋಣ.

ವಜ್ರ

ಬೆಂಗಳೂರು: ವಜ್ರವು (Diamond Gemstone) ಅತ್ಯಂತ ಅಮೂಲ್ಯವಾದ ರತ್ನವಾಗಿದ್ದು, ಇತರೆ ಎಲ್ಲಾ ಹರಳುಗಳಿಗಿಂತ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಧಾರ್ಮಿಕ ನಂಬಿಕೆಗಳಲ್ಲಿಯೂ (Astrology) ಹಾಗೂ ವೈಜ್ಞಾನಿಕ ದೃಷ್ಟಿಯಿಂದಲೂ ವಜ್ರಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಇಂಗಾಲದಿಂದ ರೂಪುಗೊಳ್ಳುವ ಈ ರತ್ನವು ಮನುಷ್ಯನ ಜೀವನದ ಮೇಲೆ ಆಳವಾದ ಪ್ರಭಾವ ಬೀರುತ್ತದೆ ಎನ್ನುವುದು ಸಾಮಾನ್ಯ ನಂಬಿಕೆ.

ಕೆಲವು ಧಾರ್ಮಿಕ ನಂಬಿಕೆ ಹಾಗೂ ಜ್ಯೋತಿಷ್ಯ ಶಾಸ್ತ್ರ ಪ್ರಕಾರ, ವಜ್ರ ಧಾರಣೆ ವ್ಯಕ್ತಿಗೆ ಅದೃಷ್ಟ, ಐಶ್ವರ್ಯ ಹಾಗೂ ಯಶಸ್ಸನ್ನು ತಂದುಕೊಡುತ್ತದೆ. ಆದರೆ ಅದು ಸೂಕ್ತವಾದ ರೀತಿಯಲ್ಲಿ ಧರಿಸಿದ್ದರೆ ಮಾತ್ರ... ತಪ್ಪಾದ ಸಮಯದಲ್ಲಿ ಅಥವಾ ತಪ್ಪಾದ ವ್ಯಕ್ತಿ ಧರಿಸಿದರೆ, ಅದು ದುರಾದೃಷ್ಟಕ್ಕೆ ಕಾರಣವಾಗಬಹುದು ಶಾಸ್ತ್ರದಲ್ಲಿ ಉಲ್ಲೇಖ ಇದೆ. ವಜ್ರವನ್ನು ಧರಿಸುವುದರಿಂದ ವ್ಯಕ್ತಿಗೆ ಧನಾತ್ಮಕ ಹಾಗೂ ಕೆಲ ಸಂದರ್ಭಗಳಲ್ಲಿ ಋಣಾತ್ಮಕ ಅನುಭವಗಳು ಎದುರಾಗಬಹುದು ಎಂದು ಹೇಳಲಾಗುತ್ತದೆ.

ಹಾಗಾದ್ರೆ ಜ್ಯೋತಿಷ್ಯ ಶಾಸ್ತ್ರ ಪ್ರಕಾರ(Astro Tips) ಯಾವಾಗ, ಯಾರು ವಜ್ರ ಧರಿಸಿದ್ದರೆ ಒಳ್ಳೆಯದು..? ಅದಕ್ಕೆ ಪಾಲಿಸಬೇಕಾದ ಕ್ರಮಗಳು ಏನು.? ಎಂಬ ಮಾಹಿತಿ ಇಲ್ಲಿದೆ...

ಜ್ಯೋತಿಷ್ಯದಲ್ಲಿ ವಜ್ರದ ಮಹತ್ವ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಜ್ರವು ಶುಕ್ರ ಗ್ರಹವನ್ನು ಪ್ರತಿನಿಧಿಸುತ್ತದೆ. ಶುಕ್ರನು ವ್ಯಕ್ತಿಯ ಸೌಂದರ್ಯ, ವೈವಾಹಿಕ ಜೀವನ, ಕುಟುಂಬ ಸಂಬಂಧಗಳು, ಐಶ್ವರ್ಯ ಮತ್ತು ಭೋಗವಿಲಾಸಗಳನ್ನು ನಿಯಂತ್ರಿಸುತ್ತಾನೆ. ಜಾತಕದಲ್ಲಿ ಶುಕ್ರನ ಸ್ಥಾನ ಬಲವಾಗಿದ್ದರೆ, ವಜ್ರ ಧರಿಸುವುದರಿಂದ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ಆದರೆ ಶುಕ್ರ ದುರ್ಬಲ ಅಥವಾ ದೋಷಪೀಡಿತವಾಗಿದ್ದರೆ, ವಜ್ರ ಧಾರಣೆ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಜ್ಯೋತಿಷ್ಯರು ಎಚ್ಚರಿಸುತ್ತಾರೆ.

ವಜ್ರ ಧಾರಣೆಗೆ ಶುಭ ರಾಶಿಗಳು

ಜ್ಯೋತಿಷ್ಯದ ಪ್ರಕಾರ, ವೃಷಭ, ಮಿಥುನ, ಕನ್ಯಾ, ತುಲಾ ಹಾಗೂ ಕುಂಭ ರಾಶಿಯವರು ವಜ್ರವನ್ನು ಧರಿಸಿದರೆ ಶುಭ ಫಲಗಳನ್ನು ಪಡೆಯುತ್ತಾರೆ. ಜೊತೆಗೆ, ಜಾತಕದಲ್ಲಿ ಶುಕ್ರನ ಸ್ಥಾನ ಅನುಕೂಲಕರವಾಗಿರುವವರಿಗೂ ವಜ್ರ ಧಾರಣೆ ಲಾಭಕರವಾಗುತ್ತದೆ.

Astro Tips: ಶನಿವಾರ ಕಪ್ಪು ಹಸು ಎದುರಿಗೆ ಬಂದರೆ ಏನರ್ಥ ಗೊತ್ತಾ?

ವಜ್ರ ಧರಿಸಲು ಅಶುಭ ರಾಶಿಗಳು

ಮೇಷ, ಕಟಕ, ವೃಶ್ಚಿಕ ಹಾಗೂ ಮೀನ ರಾಶಿಯವರಿಗೆ ವಜ್ರ ಧರಿಸುವುದು ಅಶುಭಕಾರಿಯಾಗಿದೆ ಎಂದು ಹೇಳಲಾಗುತ್ತದೆ. ಹೀಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಜಾತಕ ಪರಿಶೀಲನೆ ಅತ್ಯಂತ ಅಗತ್ಯ.

ವಜ್ರ ಧರಿಸುವುದರಿಂದ ಆಗುವ ಲಾಭಗಳು

ವ್ಯಕ್ತಿತ್ವದಲ್ಲಿ ಆಕರ್ಷಣೆ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ.

ವೈವಾಹಿಕ ಜೀವನದಲ್ಲಿ ಸುಧಾರಣೆ ಕಂಡುಬರುತ್ತದೆ.

ಮಾಧ್ಯಮ, ಸಿನೆಮಾ, ಫ್ಯಾಷನ್ ಮತ್ತು ಸೃಜನಾತ್ಮಕ ಕ್ಷೇತ್ರಗಳಲ್ಲಿ ಕಾರ್ಯನಿರತರಿಗೆ ಲಾಭವಾಗುತ್ತದೆ.

ಮನೋಬಲ ಹಾಗೂ ಧನಾತ್ಮಕ ಚಿಂತನೆ ಹೆಚ್ಚಾಗುತ್ತದೆ.

ವಜ್ರ ಧರಿಸುವ ಸರಿಯಾದ ವಿಧಾನ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವಜ್ರವನ್ನು ಚಿನ್ನ ಅಥವಾ ಬೆಳ್ಳಿಯ ಉಂಗುರದಲ್ಲಿ ಧರಿಸಬೇಕು. 0.50 ರಿಂದ 2 ಕ್ಯಾರೆಟ್ ವಜ್ರವನ್ನು ಬಳಸುವುದು ಸೂಕ್ತ. ಶುಕ್ಲ ಪಕ್ಷದ ಶುಕ್ರವಾರದಂದು ಸೂರ್ಯೋದಯದ ನಂತರ ವಜ್ರವನ್ನು ಧರಿಸುವುದು ಅತ್ಯಂತ ಶುಭಕರವೆಂದು ಪರಿಗಣಿಸಲಾಗಿದೆ.
ನಿಮ್ಮ ರಾಶಿ ವಜ್ರಕ್ಕೆ ಅನುಕೂಲಕರವಾಗಿದ್ದರೆ ಮತ್ತು ಸರಿಯಾದ ವಿಧಾನವನ್ನು ಪಾಲಿಸಿದರೆ, ವಜ್ರ ಧಾರಣೆ ನಿಮ್ಮ ಜೀವನಕ್ಕೆ ಸುಖ, ಶಾಂತಿ, ಐಶ್ವರ್ಯ ಮತ್ತು ಸಮೃದ್ಧಿಯನ್ನು ತಂದುಕೊಡುತ್ತದೆ ಎಂದು ನಂಬಲಾಗಿದೆ.