ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇತ್ತೀಚೆಗೆ ಹೆಣ್ಣು ಮಕ್ಕಳೇಕೆ ದಾರಿ ತಪ್ಪುತ್ತಿದ್ದಾರೆ? ವಿಜ್ಞಾನ ಏನು ಹೇಳುತ್ತದೆ? ಎಲ್ಲ ಪೋಷಕರು ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ

Vishwavani Health: ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿವೆ. ಇದರಲ್ಲಿ ಕೇವಲ ಅವರ ತಪ್ಪು ಇರುವುದಿಲ್ಲ. ಪೋಷಕರ ತಪ್ಪು ಕೂಡ ಇರುತ್ತದೆ. ಪೋಷಕರ ನಿರ್ಲಕ್ಷ್ಯವೇ ಇದಕ್ಕೆ ಮುಖ್ಯ ಕಾರಣ ಎನ್ನುತ್ತಾರೆ ಮೈಸೂರು ವಿವಿಯ ಡಾ. ಸುತ್ತೂರು ಮಾಲಿನಿ.

ಡಾ. ಸುತ್ತೂರು ಮಾಲಿನಿ

ಬೆಂಗಳೂರು: ಹೆಣ್ಣು ಮಕ್ಕಳೆಂದರೆ ದಯೆ, ಕರುಣೆ, ಪ್ರೀತಿ ಇರುವಂತವಳು ಎನ್ನುವ ಭಾವನೆ ಇದೆ. ಹೀಗಾಗಿಯೇ ಅವರನ್ನು ದೇವರಿಗೆ ಹೋಲಿಸಲಾಗುತ್ತದೆ. ಆದರೆ ಇವತ್ತು ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇದಕ್ಕೆ ಮುಖ್ಯ ಕಾರಣ ಇತ್ತೀಚೆಗೆ ನಡೆದಿರುವ ಕೆಲವು ಘಟನೆಗಳು ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ನಮ್ಮ ಮಕ್ಕಳು ತಪ್ಪೇ ಮಾಡಲ್ಲ ಎಂದು ತಂದೆ ತಾಯಿ ಭಾವಿಸಿದ್ದರೆ ಅದು ಅವರ ಮೂರ್ಖತನವೆಂದೇ ಹೇಳಬೇಕು ಎನ್ನುತ್ತಾರೆ ಮೈಸೂರು ವಿವಿಯ ಜೆನೆಟಿಕ್ಸ್‌ ಮತ್ತು ಜಿನೋಮಿಕ್ಸ್‌ ಅಧ್ಯಯನ ವಿಭಾಗದ ಅಧ್ಯಕ್ಷೆ ಡಾ. ಸುತ್ತೂರು ಮಾಲಿನಿ (Dr. Suttur Malini). 'ವಿಶ್ವವಾಣಿ ಹೆಲ್ತ್' (Vishwavani Health) ಯುಟ್ಯೂಬ್‌ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಅವರು ಮಾತನಾಡಿದರು.

ಇವತ್ತು ಹೆಣ್ಣು ಮಕ್ಕಳು ಕೂಡ ದಾರಿ ತಪ್ಪುತ್ತಿದ್ದಾರೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳಲ್ಲಿ ಕಾಳಜಿ ಹೆಚ್ಚಿರುತ್ತದೆ. ಆದರೆ ಗಂಡು ಮಕ್ಕಳಲ್ಲಿ ಕೀಟಲೆ ಗುಣಗಳು ಇರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳಲ್ಲಿ ಅಪಾಯಕಾರಿ ವರ್ತನೆಗಳು ಹೆಚ್ಚಾಗಿ ಕಂಡು ಬರುತ್ತಿದೆ. ಅರಿವಿಲ್ಲದೆ ಇದೆಲ್ಲವು ನಡೆಯುತ್ತಿದೆ ಎಂದು ಅವರು ಹೇಳಿದರು.

ಡಾ. ಸುತ್ತೂರು ಮಾಲಿನಿ ಜತೆಗಿನ ಸಂದರ್ಶನ:



ಹೆಣ್ಣು ಮಕ್ಕಳಲ್ಲಿ ಈ ರೀತಿಯ ವರ್ತನೆಗೆ ಮುಖ್ಯ ಕಾರಣ ಅವರ ಮುಂಭಾಗದ ಮೆದುಳು ಬೆಳೆಯದೇ ಇರುವುದು. ಯಾವುದೇ ವಿಷಯ ಇಷ್ಟವಿಲ್ಲದೆ ಇದ್ದರೆ ನೇರವಾಗಿ ಹೇಳಿ ಬಿಡಿ. ಇದರಿಂದ ಸಾಕಷ್ಟು ಸಮಸ್ಯೆಗಳು ತುಂಬಾ ಸುಲಭವಾಗಿ ಪರಿಹಾರವಾಗುತ್ತದೆ ಎಂದು ಅವರು ತಿಳಿಸಿದರು.

ಪ್ರೀತಿಯಲ್ಲಿ ಬಿದ್ದ ಮೇಲೆ ಯುವಕ-ಯುವತಿಯರಿಗೆ ಮನೆಯವರೇ ವೈರಿಗಳಾಗುವುದೇಕೆ?

ಹಠಾತ್ ವರ್ತನೆ, ತಕ್ಷಣ ಪ್ರತಿಕ್ರಿಯೆ ನೀಡುವುದಕ್ಕೆ ಸಾಮಾಜಿಕ ಒತ್ತಡವೇ ಮುಖ್ಯ ಕಾರಣ. ಗೆಳೆಯ ಇಲ್ಲ ಎನ್ನುವುದನ್ನು ಅವಮಾನ ಎನ್ನುವಂತೆ ಮಾಡಲಾಗುತ್ತದೆ. ಇದರಿಂದ 25ರೊಳಗಿನ ಮಕ್ಕಳು ಇಂತಹ ತಪ್ಪುಗಳನ್ನು ಹೆಚ್ಚಾಗಿ ಮಾಡುತ್ತಾರೆ. ಆಕರ್ಷಣೆಗೆ ಬೀಳುವ ಮಕ್ಕಳು ಅದನ್ನೇ ಪ್ರೀತಿ ಎಂದುಕೊಂಡಿರುತ್ತಾರೆ. ಭಾವನೆಗಳಿಗೆ ಒಳಗಾಗಿ ತೆಗೆದುಕೊಳ್ಳುವ ನಿರ್ಧಾರಗಳಿಂದ ಅಪಾಯಗಳು ಹೆಚ್ಚಾಗಿರುತ್ತದೆ ಎಂದು ಹೇಳಿದರು.

ಹಿಂಭಾಗದ ಮೆದುಳು ಮೊದಲು ಆಕ್ಟಿವೇಟ್ ಆಗಿರುವುದರಿಂದ ಅದು ಡೊಕೋಮೈನ್, ಸರೊಮೈನ್, ಆಕ್ಸಿಟಾಕ್ಸಿನ್ ಹಾರ್ಮೋನ್ ಗಳನ್ನು ಬಿಡುಗಡೆ ಮಾಡುತ್ತದೆ. ಇದು ಭಾವನೆಗಳಿಗೆ ಹೆಚ್ಚಿನ ಒತ್ತು ನೀಡುವಂತೆ ಮಾಡುತ್ತದೆ. ಇವತ್ತಿನ ಮಕ್ಕಳಿಗೆ ಸೋಲ್, ಸೋಲ್ ಮೇಟ್ ಎಂದರೇನು ಎಂಬುದೇ ಗೊತ್ತಿಲ್ಲ. ಏನು ಹೇಳಿದರೂ ನಂಬುವಂತಹ ವಯಸ್ಸಾಗಿರುತ್ತದೆ. ಹೀಗಾಗಿ ಪೋಷಕರು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎನ್ನುತ್ತಾರೆ ಸುತ್ತೂರು ಮಾಲಿನಿ.

ಹಿಂಭಾಗದ ಮೆದುಳು ಆಕ್ಟಿವೇಟ್ ಆದಾಗ ಮುಂಭಾಗದ ಮೆದುಳು ಶಟ್ ಡೌನ್ ಆಗುತ್ತದೆ. ಅದೇ ರೀತಿ ಮುಂಭಾಗದ ಮೆದುಳು ಆಕ್ಟಿವೇಟ್ ಆದಾಗ ಮುಂಭಾಗದ ಮೆದುಳು ಶಟ್ ಡೌನ್ ಆಗುತ್ತದೆ. ನಾವು ಮಕ್ಕಳ ಮುಂಭಾಗದ ಮೆದುಳು ಬೇಗನೆ ಆಕ್ಟಿವೇಟ್ ಆಗುವಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬ ಪೋಷಕರು ಕೂಡ ಮಕ್ಕಳ ಬಗ್ಗೆ ಗಮನ ಕೊಡಲೇಬೇಕು. ಅವರಲ್ಲಾಗುವ ಬದಲಾವಣೆಗಳ ಬಗ್ಗೆ ಕಾಳಜಿ ಗಮನಿಸಲೇಬೇಕು ಎನ್ನುತ್ತಾರೆ ಅವರು.

ಮಕ್ಕಳಿಗೆ ಪ್ರೀತಿಯನ್ನು ಕೊಡಲೇ ಬೇಕು. ನನಗೆ ನೀನು ಮುಖ್ಯ ಎನ್ನುವುದನ್ನು ಅವರಿಗೆ ತಿಳಿಸಬೇಕು. ಅವರನ್ನು ಸೇವಾ ಕಾರ್ಯ, ಶೈಕ್ಷಣಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಅದು ಅವರಲ್ಲಿ ಸಾಮಾಜಿಕ ಬದ್ಧತೆಯನ್ನು ಬೆಳೆಸುತ್ತದೆ. ಇದರೊಂದಿಗೆ ಸಂಬಂಧಿಕರನ್ನು ಪರಿಚಯಿಸುವುದು, ಅವರ ಶಕ್ತಿಯನ್ನು ಉಳಿಸುವಂತೆ ಮಾಡುವುದು ಕೂಡ ಮುಖ್ಯವಾಗುತ್ತದೆ ಎಂದರು.

ನಮ್ಮ ನಿಮ್ಮ ಸಂಸ್ಕೃತಿಯು ಕಟ್ಟಿಕೊಡುವ ಕಾಯಿಲೆಗಳು

ಮಕ್ಕಳಲ್ಲಿ ಓದುವ ಅಭ್ಯಾಸವನ್ನು ಬೆಳೆಸಬೇಕು. ಯಾಕೆಂದರೆ ಸಾಹಿತ್ಯ ಸಂಸ್ಕಾರವನ್ನು ಕಲಿಸುತ್ತದೆ. ಒಳ್ಳೆಯ ಆಹಾರ ಸೇವನೆ, ನಿದ್ರೆ ಕೂಡ ಮಕ್ಕಳಿಗೆ ಅತ್ಯಗತ್ಯ. ಯಾವುದೇ ವಿಷಯ ಅರ್ಥವಾಗದೇ ಇದ್ದಾಗಲೇ ಮಕ್ಕಳ ಮನಸ್ಸು ಬೇರೆ ಕಡೆಗೆ ಸೆಳೆಯಲ್ಪಡುತ್ತದೆ ಎಂಬುದನ್ನು ಪೋಷಕರು ತಿಳಿದುಕೊಂಡಿರಬೇಕು ಎನ್ನುತ್ತಾರೆ ಡಾ. ಸುತ್ತೂರು ಮಾಲಿನಿ.

ವಿದ್ಯಾ ಇರ್ವತ್ತೂರು

View all posts by this author