ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರೀತಿಯಲ್ಲಿ ಬಿದ್ದ ಮೇಲೆ ಯುವಕ-ಯುವತಿಯರಿಗೆ ಮನೆಯವರೇ ವೈರಿಗಳಾಗುವುದೇಕೆ? ಇದರ ಹಿಂದಿರುವ ವೈಜ್ಞಾನಿಕ ಕಾರಣ ಏನು? ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ

Vishwavani Health: ಪ್ರೀತಿಯಲ್ಲಿ ಮೋಸ ಮಾಡುವುದು, ಮೋಸ ಹೋಗುವುದು, ತಪ್ಪು ಮಾಡುವುದು ಸಾಮಾನ್ಯ ಎಂಬಂತಾಗಿದೆ. ಆದರೆ ಇದರ ಹಿಂದೆ ಸಾಕಷ್ಟು ಯೋಜನೆ ಇರುತ್ತದೆ. ಇದು ಏಕಾಏಕಿ ನಡೆಯುವುದಿಲ್ಲ. ಇದಕ್ಕಾಗಿ ಕನಿಷ್ಠ ಆರು ತಿಂಗಳಾದರೂ ಬೇಕಾಗುತ್ತದೆ. ಇದು ಪೋಷಕರಿಗೆ ಗೊತ್ತೇ ಇಲ್ಲ ಎನ್ನುವುದು ಸಾಧ್ಯವಿಲ್ಲ. ಅವರು ಮಕ್ಕಳಲ್ಲಿ ಆಗಿರುವ ಬದಲಾವಣೆಯನ್ನು ಗಮನಿಸದೇ ಇರುವುದು ಇದಕ್ಕೆ ಮುಖ್ಯ ಕಾರಣವಾಗಿರುತ್ತದೆ ಎನ್ನುತ್ತಾರೆ ಮೈಸೂರು ವಿವಿಯ ಡಾ. ಸುತ್ತೂರು ಮಾಲಿನಿ.

ಡಾ. ಸುತ್ತೂರು ಮಾಲಿನಿ

ಬೆಂಗಳೂರು: ಯಾರು ಒಬ್ಬಂಟಿಯಾಗಿ ಇರುತ್ತಾರೋ, ಕುಟುಂಬದಲ್ಲಿ ನೆಮ್ಮದಿ ಇರುವುದಿಲ್ಲವೋ, ಮನೆಯಲ್ಲಿ ಯಾರಿಗೆ ಪ್ರೀತಿ ಸಿಗುವುದಿಲ್ಲವೋ, ಕುಟುಂಬ, ಶೈಕ್ಷಣಿಕ ತೊಂದರೆಯನ್ನು ಎದುರಿಸುತ್ತಿರುತ್ತಾರೋ ಇಂತವರು ಸಾಮಾನ್ಯವಾಗಿ ಪ್ರೀತಿಯಲ್ಲಿ ಬೀಳುತ್ತಾರೆ. ಪ್ರೀತಿಯಲ್ಲಿ ಮುಖ್ಯವಾಗಿ ನಾಲ್ಕು ಹಂತಗಳಿವೆ. ಇದರ ಪ್ರಕಾರವೇ ಅದು ನಡೆಯುತ್ತದೆ ಎನ್ನುತ್ತದೆ ಮನಃಶಾಸ್ತ್ರ ಎಂಬುದಾಗಿ ಮೈಸೂರು ವಿವಿಯ ಜೆನೆಟಿಕ್ಸ್‌ ಮತ್ತು ಜಿನೋಮಿಕ್ಸ್‌ ಅಧ್ಯಯನ ವಿಭಾಗದ ಅಧ್ಯಕ್ಷೆ ಡಾ. ಸುತ್ತೂರು ಮಾಲಿನಿ (Dr. Suttur Malini) ಹೇಳಿದ್ದಾರೆ. 'ವಿಶ್ವವಾಣಿ ಹೆಲ್ತ್' (Vishwavani Health) ಯುಟ್ಯೂಬ್‌ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಅವರು ಮಾತನಾಡಿದರು.

ಪ್ರಪಂಚದಲ್ಲಿ ಎಲ್ಲರೂ ಒಳ್ಳೆಯವರು ಎಂದುಕೊಳ್ಳುವುದು ತಪ್ಪಲ್ಲ. ಆದರೆ ಎಲ್ಲರೂ ಒಳ್ಳೆಯವರೆಂದು ಕಣ್ಣುಮುಚ್ಚಿ ನಂಬುವುದು ತಪ್ಪು ಎನ್ನುವ ಅವರು, ಮಕ್ಕಳು ಹೊರಗಿನವರೊಂದಿಗೆ ಪ್ರೀತಿಯಲ್ಲಿ ಬೀಳಲು ಪೋಷಕರೇ ಜವಾಬ್ದಾರರಾಗಿರುತ್ತದೆ ಎನ್ನುತ್ತಾರೆ ಅವರು.

ವಿಡಿಯೊ ಇಲ್ಲಿದೆ:



ಪ್ರೀತಿಯಲ್ಲಿ ನಡೆಯುವ ದುರ್ಘಟನೆಗಳು ಒಂದು ದಿನದಲ್ಲಿ ನಡೆಯುವುದಿಲ್ಲ. ಇದಕ್ಕಾಗಿ ಕನಿಷ್ಠ 6 ತಿಂಗಳಾದರೂ ಬೇಕಾಗುತ್ತದೆ. ಇದು ಸಂಪೂರ್ಣವಾಗಿ ಯೋಜನೆ ಪ್ರಕಾರವೇ ನಡೆಯುತ್ತದೆ. ಇದರಿಂದ ಒಂದು ಕುಟುಂಬವೇ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಮನಃಶಾಸ್ತ್ರದಲ್ಲಿ ಲವ್ ಬಾಂಬಿಂಗ್ ಎನ್ನುವುದು ಇದೆ. ಇದರಲ್ಲಿ ನಾಲ್ಕು ಹಂತಗಳಿವೆ. ಮೊದಲನೆಯದು ಗುರುತಿಸುವುದು, ಎರಡನೆಯದು ವಿಶ್ವಾಸ ಗಳಿಸುವುದು, ಮೂರನೆಯದು ನಂಬಿಕೆ ಹೆಚ್ಚಿಸುವುದು ಮತ್ತು ನಾಲ್ಕನೆಯದು ಹತ್ತಿರದ ಸಂಬಂಧಗಳನ್ನು ಮುರಿಯುವಂತೆ ಮಾಡುವುದಾಗಿದೆ ಎಂದು ಅವರು ಹೇಳಿದರು.

ಎಚ್‌ಪಿವಿ ಲಸಿಕೆ ಕ್ಯಾನ್ಸರ್‌ ವಿರುದ್ಧದ ಪರಿಣಾಮಕಾರಿ ರಕ್ಷಣೆ

ಸಾಮಾನ್ಯವಾಗಿ ಹೆಚ್ಚಾಗಿ ಒಬ್ಬಂಟಿಯಾಗಿರುವವರು, ಕುಟುಂಬದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದವರು, ಮನೆಯಲ್ಲಿ ಪ್ರೀತಿ ಸಿಗದವರು, ಸಮಾಜ ನನ್ನ ಗುರುತಿಸಬೇಕು ಎನ್ನುವವರು, ವಿದ್ಯಾಭ್ಯಾಸದಲ್ಲಿ ತೊಂದರೆ, ಕೀಳರಿಮೆ ಇದ್ದವರು ಇದಕ್ಕೆ ಗುರಿಯಾಗುತ್ತಾರೆ. ಆರಂಭದಲ್ಲಿ ವಿಶ್ವಾಸಗಳಿಸುವ, ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತದೆ. ಬಳಿಕ ತುಂಬಾ ಹತ್ತಿರವಾಗಲು ಪ್ರಯತ್ನಿಸುತ್ತಾರೆ. ಈ ಸಮಯದಲ್ಲೇ ನಾವು ಒಬ್ಬರನ್ನು ಕಣ್ಣುಮುಚ್ಚಿ ನಂಬಿ ಬಿಡುವ ಹಂತಕ್ಕೆ ಹೋಗುತ್ತೇವೆ ಎನ್ನುತ್ತಾರೆ ಡಾ. ಸುತ್ತೂರು ಮಾಲಿನಿ.

ಇದೆಲ್ಲವೂ ಹಂತಹಂತವಾಗಿ ನಡೆಯುತ್ತದೆ. ಮಕ್ಕಳ ಬಗ್ಗೆ ನಿರ್ಲಕ್ಷ್ಯ ವಹಿಸಿದಾಗ ಇದೆಲ್ಲ ನಡೆಯುತ್ತದೆ. ಹೀಗಾಗಿ ಪೋಷಕರು ಮಕ್ಕಳಲ್ಲಿ ಆಗುತ್ತಿರುವ ಬದಲಾವಣೆಯನ್ನು ಗುರುತಿಸಬೇಕು. ಪ್ರೀತಿಯಲ್ಲಿ ದೂರವಾಗ ಬಯಸುವವರು ಮೊದಲು ನಿಧಾನವಾಗಿ ದೂರವಾಗಲು ಪ್ರಯತ್ನಿಸುತ್ತಾರೆ. ಬಳಿಕ ನಿಮ್ಮ ಹತ್ತಿರದ ಸಂಬಂಧಗಳನ್ನು ದೂರ ಮಾಡಿಸುತ್ತಾರೆ. ತಂದೆ ತಾಯಿಗಳ ಬಗ್ಗೆಯೇ ಮನದಲ್ಲಿ ವಿಷ ತುಂಬಿಸುತ್ತಾರೆ. ಇನ್ನೊಬ್ಬರ ಬಗ್ಗೆ ದ್ವೇಷ ಹುಟ್ಟುವ ಹಾಗೆ ಮಾಡಿಸುತ್ತಾರೆ. ಭಾವನಾತ್ಮಕವಾಗಿ ಹಿಡಿದಿಟ್ಟುಕೊಳ್ಳುವ ಪ್ರಯತ್ನ ನಡೆಸುತ್ತಾರೆ. ಇದು ತುಂಬಾ ಅಪಾಯಕಾರಿಯಾಗಿರುತ್ತದೆ. ಯಾಕೆಂದರೆ ಇದಕ್ಕಾಗಿ ಅವರು ಹೇಳಿದ್ದನ್ನು ಕೇಳಲೇಬೇಕು ಎನ್ನುತ್ತಾರೆ.

ಪ್ರೀತಿ ಎನ್ನುವುದು ಒಂದು ರೀತಿಯಲ್ಲಿ ಟ್ರ್ಯಾಪಿಂಗ್ ಆಗಿದೆ.ಇದರಲ್ಲಿ ಹೆಣ್ಣು ಮಕ್ಕಳು ಹೆಚ್ಚಾಗಿ ಮೋಸ ಹೋಗುತ್ತಾರೆ. ಯಾಕೆಂದರೆ ಅವರಿಗೆ ಸಮಾಜದ ಭಯ ಹೆಚ್ಚಾಗಿರುತ್ತದೆ.ಹೀಗಾಗಿ ಅವರ ಬಳಿ ಯಾವುದೇ ರೀತಿಯ ಆಯ್ಕೆಗಳೇ ಇರುವುದಿಲ್ಲ ಎಂದು ಅವರು ತಿಳಿಸಿದರು.

ಇವತ್ತು ಪೋಷಕರು ತಮ್ಮ ಕೆಲಸ ಕಾರ್ಯಗಳಲ್ಲೇ ಬ್ಯುಸಿಯಾಗಿದ್ದಾರೆ. ಅವರಿಗೆ ಮಕ್ಕಳಲ್ಲಿ ಆಗುವ ವ್ಯತ್ಯಾಸಗಳನ್ನು ತಿಳಿಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಶೈಕ್ಷಣಿಕವಾಗಿ, ಕ್ರೀಡೆ, ಅಧ್ಯಾತ್ಮ, ಸಂಗೀತ, ಸಾಹಿತ್ಯ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಇಂತಹ ಘಟನೆಗಳು ನಡೆದಿದ್ದರೆ ಅದನ್ನು ಧೈರ್ಯವಾಗಿ ಎದುರಿಸಲು ಪೋಷಕರು ಅವರೊಂದಿಗೆ ನಿಲ್ಲಬೇಕು. ಶಿಕ್ಷೆ, ಬಲವಂತ ಮಾಡುವುದನ್ನು ಬಿಟ್ಟು ಸುರಕ್ಷೆಯ ಸಂಬಂಧಗಳನ್ನು ಅವರಿಗೆ ಕೊಡಿಸಬೇಕು ಎಂದರು.

ಸಾಧಕರಾಗಲು ಯಾವ ಸೂಪರ್ ಡ್ರಿಂಕ್ಸ್ ಕುಡಿಯಬೇಕು ಗೊತ್ತೆ?

ಒಳ್ಳೆಯ ಆಹಾರ, ನಿದ್ರೆ, ದಿನಚರಿಯನ್ನು ಮಕ್ಕಳಿಗೆ ಅಭ್ಯಾಸ ಮಾಡಿಸಬೇಕು. ಸಂಸ್ಕಾರ ಕೊಡಬೇಕು, ಅವರ ಜವಾಬ್ದಾರಿಗಳನ್ನು ತಿಳಿಸಿಕೊಡುವುದು ತಂದೆ-ತಾಯಿಯ ಜವಾಬ್ದಾರಿಯಾಗಿದೆ ಎಂದು ಡಾ. ಸುತ್ತೂರು ಮಾಲಿನಿ ತಿಳಿಸಿದರು.

ವಿದ್ಯಾ ಇರ್ವತ್ತೂರು

View all posts by this author