ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Winter Fashion 2025: ವಿಂಟರ್ ಫ್ಯಾಷನ್‌ಗೆ ಲಗ್ಗೆ ಇಟ್ಟ ಡೆನಿಮ್ ಜಂಪ್ ಸೂಟ್ಸ್

Fashion News: ಈ ವಿಂಟರ್ ಸೀಸನ್ ಫ್ಯಾಷನ್‌ನಲ್ಲಿ ದೇಹವನ್ನು ಬೆಚ್ಚಗಿಡುವ ಡೆನಿಮ್ ಜಂಪ್ ಸೂಟ್‌ಗಳು ಆಗಮಿಸಿವೆ. ಡೆನಿಮ್ ಫ್ಯಾಬ್ರಿಕ್‌ನ ಜಂಪ್‌ ಸೂಟ್‌ಗಳು ಯುವತಿಯರನ್ನು ಆಕರ್ಷಿಸುತ್ತಿವೆ. ಯಾವ್ಯಾವ ಡಿಸೈನ್‌ನವು ಟ್ರೆಂಡಿಯಾಗಿವೆ? ಸ್ಟೈಲಿಂಗ್ ಹೇಗೆ? ಇಲ್ಲಿದೆ ಡಿಟೇಲ್ಸ್.

ಡೆನಿಮ್ ಜಂಪ್ ಸೂಟ್‌ನಲ್ಲಿ ಯುವತಿಯರು. (ಚಿತ್ರಕೃಪೆ: ಪಿಕ್ಸೆಲ್)
1/5

ವೈವಿಧ್ಯಮಯ ಡೆನಿಮ್ ಜಂಪ್ ಸೂಟ್‌ಗಳು ಈ ಬಾರಿಯ ವಿಂಟರ್ ಸೀಸನ್‌ನಲ್ಲಿ ನಾನಾ ವಿನ್ಯಾಸದಲ್ಲಿ ಬಂದಿದ್ದು, ಟ್ರೆಂಡಿಯಾಗಿವೆ. ಹೌದು, ಈ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವ ಈ ಡೆನಿಮ್ ಫ್ಯಾಬ್ರಿಕ್‌ನ ಜಂಪ್‌ ಸೂಟ್‌ಗಳು ಯುವತಿಯರನ್ನು ಸವಾರಿ ಮಾಡುತ್ತಿವೆ.

2/5

ವೆರೈಟಿ ಜಂಪ್‌ ಸೂಟ್ಸ್

ಇನ್ನು ಹಾಲಿವುಡ್ ಹಾಗೂ ಬಾಲಿವುಡ್ ಸೆಲೆಬ್ರಿಟಿಗಳು ಜಂಪ್‌ ಸೂಟ್‌ನಲ್ಲೆ ಸಾಕಷ್ಟು ಪಾಪುಲರ್ ಆಗಿರುವ ರಾಂಪರ್ಸ್, ಓವರ್‌ಆಲ್ಸ್, ಫುಲ್ ಲೆಗ್ಡ್ ಜಂಪ್ ಸೂಟ್ಸ್ , ಬಾಯ್ಲರ್ ಸೂಟ್ಸ್, ಮೆಕಾನಿಕ್ ಸೂಟ್ಸ್ ಹೀಗೆ ನಾನಾ ಶೈಲಿಯ ಜಂಪ್‌ ಸೂಟ್‌ಗಳನ್ನು ಪ್ರಯೋಗ ಮಾಡುತ್ತಿದ್ದಾರೆ. ಹೊಸ ರೂಪದಲ್ಲಿ ಸೀಸನ್ ಫ್ಯಾಷನ್‌ಗೆ ಎಂಟ್ರಿ ನೀಡಿರುವ ಇವುಗಳಿಗೆ ವಾರ್ಡ್ರೋಬ್‌ನಲ್ಲಿ ಸ್ಥಾನ ನೀಡಿದ್ದಾರೆ. ಇನ್ನು ಯಂಗ್ ಲುಕ್ ಹಾಗೂ ಫ್ರೆಶ್ ಲುಕ್ ನೀಡುವ ಕ್ವಿರ್ಕ್, ಗಿಗ್ನಂನಂತಹ ಡಿವೈಡರ್ ಜಂಪ್ ಸೂಟ್‌ಗಳು ಸದ್ಯಕ್ಕೆ ಪೋಟೋಶೂಟ್‌ಗಳಿಗೆ ಸೀಮಿತವಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.

3/5

ಜಂಪ್‌ಸೂಟ್ ವಿನ್ಯಾಸ

ಸ್ಟೈಲಿಸ್ಟ್‌ಗಳು ಹೇಳುವಂತೆ, ಜಂಪ್ ಸೂಟ್‌ಗಳೆಂದಾಕ್ಷಣಾ ಎಲ್ಲವೂ ಒಂದೇ ಬಗೆಯದ್ದಾಗಿ ಇರುವುದಿಲ್ಲ! ನೋಡಲು ವಿನ್ಯಾಸ ಒಂದೇ ತರಹದ್ದಾಗಿದ್ದರೂ ಅವುಗಳ ಪ್ರಿಂಟ್ಸ್, ನೆಕ್ಲೈನ್, ವೇಸ್ಟ್‌ಲೈನ್ ಹಾಗೂ ಸ್ಲೀವ್‌ಗಳಿಂದ ಅವನ್ನು ವಿಂಗಡಿಸಬಹುದು. ಅವರವರ ಆಯ್ಕೆಗೆ ತಕ್ಕಂತೆ ಅವು ಹೈಲೈಟಾಗುತ್ತವೆ ಎನ್ನುತ್ತಾರೆ.

4/5

ಹುಡುಗಿಯರ ಚಾಯ್ಸ್‌ನಲ್ಲಿರುವ ಜಂಪ್ ಸೂಟ್ಸ್

ಇದೀಗ ಕೋಲ್ಡ್ ಶೋಲ್ಡರ್‌ನವು ಸೈಡಿಗೆ ಸರಿದಿವೆ. ಸ್ಲೀವ್ ಜಂಪ್‌ಸೂಟ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇನ್ನು ಟೈಯಿಂಗ್ ನೆಕ್ಲೈನ್ ಇರುವಂತವಕ್ಕೆ ಡಿಮ್ಯಾಂಡ್ ಸೃಷ್ಟಿಯಾಗಿದೆ. ಮಾನೋಕ್ರೊಮ್ ಶೇಡ್‌ಗಳವು ಮತ್ತೊಮ್ಮೆ ಟ್ರೆಂಡಿಯಾಗಿವೆ. ವರ್ಕಿಂಗ್ ವುಮೆನ್ ಕೆಟಗರಿಯಲ್ಲಿ ಕಾಣಿಸಿಕೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.

5/5

ಜಂಪ್ ಸೂಟ್‌ನಲ್ಲಿ ಸ್ಟೈಲಿಶ್ ಆಗಿ ಕಾಣಿಸಲು ಹೀಗೆ ಮಾಡಿ

  • ಜಂಟ್‌ಸೂಟ್‌ನ ನೆಕ್ಲೈನ್‌ಗೂ ಪ್ರಾಮುಖ್ಯತೆ ನೀಡಿ.
  • ವೆಸ್ಟರ್ನ್ ಲುಕ್‌ಗೆ ಹೊಂದುವಂತ ಮೇಕೋವರ್‌ಗೆ ಸೈ ಎನ್ನಿ.
  • ಮಿನಿಮಲ್ ಆಕ್ಸೆಸರೀಸ್ ಧರಿಸಿ.
  • ತಕ್ಷಣಕ್ಕೆ ಬದಲಿಸಲು ಸಾಧ್ಯವಿಲ್ಲ ಎಂಬುದು ಗೊತ್ತಿರಲಿ.

ಶೀಲಾ ಸಿ ಶೆಟ್ಟಿ

View all posts by this author