ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Organ donation: ಅಪಘಾತದಲ್ಲಿ ಮೃತಪಟ್ಟರೂ 6 ಜನರ ಬಾಳಿಗೆ ಬೆಳಕಾದ ಮಂಡ್ಯದ ದರ್ಶನ್

ಅಪಘಾತದ ಬಳಿಕ ಬ್ರೇನ್‌ ಡೆತ್‌ಗೆ ಒಳಗಾಗಿದ್ದ ದರ್ಶನ್‌ ಅವರ ಯಕೃತ್ತು, ಮೂತ್ರಪಿಂಡ, ಹೃದಯ ನಾಳಗಳು, ಇತರೆ ಅಂಗ ಪಡೆದು ಅರ್ಹರಿಗೆ ಅಳವಡಿಸಲಾಗಿದೆ. ಈ ಘಟನೆ ಅಂಗಾಂಗ ದಾನದ ಮಹತ್ವವನ್ನು ಮತ್ತೊಮ್ಮೆ ಒತ್ತಿ ಹೇಳಿದ್ದು, ಮಗನ ಸಾವಿನ ದುಃಖದ ನಡುವೆಯೂ ಕುಟುಂಬಸ್ಥರು ಹಲವರಿಗೆ ಮಾದರಿಯಾಗಿದ್ದಾರೆ.

ಅಪಘಾತದಲ್ಲಿ ಮೃತಪಟ್ಟರೂ 6 ಜನರ ಬಾಳಿಗೆ ಬೆಳಕಾದ ಮಂಡ್ಯದ ದರ್ಶನ್

ಅಪಘಾತದಲ್ಲಿ ಮೃತಪಟ್ಟ ದರ್ಶನ್ -

ಹರೀಶ್‌ ಕೇರ
ಹರೀಶ್‌ ಕೇರ Feb 26, 2026 10:23 AM

ಮಂಡ್ಯ, ಫೆ.26: ಬೈಕ್‌ ಅಪಘಾತದಲ್ಲಿ (rod accident) ತಲೆಗೆ ಪೆಟ್ಟುಬಿದ್ದು, ಮೆದುಳು ನಿಷ್ಕ್ರಿಯವಾಗಿದ್ದ (brain death) ಚಿಕ್ಕ ಮಂಡ್ಯ ಗ್ರಾಮದ ದರ್ಶನ್‌ ಎಂಬ ಯುವಕನ ಅಂಗಾಂಗಗಳನ್ನು ಕುಟುಂಬದವರು ದಾನ ಮಾಡುವ ಮೂಲಕ 6 ಜನರ ಬಾಳಿಗೆ (organ donation) ಬೆಳಕಾಗಿದ್ದಾರೆ.‌ ಮಂಡ್ಯದ (mandya news) ಕಸಬಾ ಹೋಬಳಿಯ ಚಿಕ್ಕ ಮಂಡ್ಯ ಗ್ರಾಮದ ದರ್ಶನ್‌ ಫೆ. 22ರಂದು ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದು, ಆತುರದಲ್ಲಿ ಮನೆಗೆ ಬಂದು ರಾತ್ರಿ ಮಲಗಿದ್ದ. ಆದರೆ, ಆತನ ತಲೆಗೆ ತೀವ್ರ ಪೆಟ್ಟಾಗಿರುವುನ್ನು ಕಂಡ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ವೇಳೆ ತಲೆಯೊಳಗೆ ರಕ್ತಸ್ರಾವವಾಗಿರುವುದು ಪತ್ತೆಯಾಯಿತು.

ಕೂಡಲೇ ಆತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್‌ ಸೆಂಟರ್‌ಗೆ ಕರೆದುಕೊಂಡು ಬರಲಾಯಿತು. ಹಲವಾರು ಪರೀಕ್ಷೆಗಳಿಗೆ ಒಳಪಡಿಸಿದರೂ ಆತ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಎರಡು ದಿನಗಳ ನಂತರ ಪರೀಕ್ಷೆ ನಡೆಸಿದ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡಾ. ಕಾವ್ಯಾ, ಡಾ. ದೀಪಕ್‌, ಡಾ. ಆಸೀಮಾ ಬಾನು ಒಳಗೊಂಡ ಉನ್ನತ ವೈದ್ಯರ ತಂಡ ‘ಬ್ರೇನ್‌ ಡೆಡ್‌’ ಎಂದು ಘೋಷಿಸಿತು. ನಂತರ ‘ ಜೀವ ಸಾರ್ಥಕತೆ ’ ತಂಡ, ಕುಟುಂಬ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದ ನಂತರ, ಅಂಗಾಂಗ ದಾನ ಮಾಡಲು ಸಮ್ಮತಿಸಿ ಸಾರ್ಥಕತೆ ಮೆರೆದರು.

ಅಂಗಾಗದಾನ ಮಾಡಿ ಕುಟುಂಬಸ್ಥರ ಸಾರ್ಥಕತೆ

ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಟ್ರಾಮಾ ಮತ್ತು ಎಮರ್ಜೆನ್ಸಿ ಕೇರ್‌ ಸೆಂಟರ್‌ನಲ್ಲಿ ನಡೆದ ಅಂಗಾಂಗ ಕಸಿ ಚಿಕಿತ್ಸೆ ಯಶಸ್ವಿಯಾಗಿದ್ದು, ದರ್ಶನ್‌ ಅವರ ಯಕೃತ್ತು, ಮೂತ್ರಪಿಂಡ, ಹೃದಯ ನಾಳಗಳು, ಇತರೆ ಅಂಗ ಪಡೆದು ಅರ್ಹರಿಗೆ ಅಳವಡಿಸಲಾಗಿದೆ. ಕುಟುಂಬಸ್ಥರ ಈ ಮಾದರಿ ನಡೆ ಕುರಿತು ಮೆಡಿಕಲ್‌ ಸೂಪರಿಂಟೆಂಡೆಂಟ್‌ ಡಾ. ದೀಪಕ್‌ ಹಾಗೂ ಟ್ರಾಮಾ ಎಮರ್ಜೆನ್ಸಿ ಕೇರ್‌ ಸೆಂಟರ್‌ನ ವಿಶೇಷ ಅಧಿಕಾರಿ ಡಾ. ಅಸೀಮಾ ಬಾನು ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಘಟನೆ ಅಂಗಾಗ ದಾನದ ಮಹತ್ವವನ್ನು ಮತ್ತೊಮ್ಮೆ ಒತ್ತಿ ಹೇಳಿದ್ದು, ಮಗನ ಸಾವಿನಲ್ಲೂ ಕುಟುಂಬಸ್ಥರು ಹಲವರಿಗೆ ಮಾದರಿಯಾಗಿದ್ದಾರೆ.

ಕೇರಳದ ಅತ್ಯಂತ ಕಿರಿಯ ಅಂಗಾಂಗ ದಾನಿಗೆ ಕಣ್ಣೀರ ವಿದಾಯ; ಸರ್ಕಾರಿ ಗೌರವಗಳೊಂದಿಗೆ ಮಣ್ಣಲ್ಲಿ ಮಣ್ಣಾದ ಕಂದಮ್ಮ