ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss: ಗೋಡೆ ಏರಿ ಪರಾರಿಗೆ ಯತ್ನಿಸಿದ ಬಿಗ್‌ ಬಾಸ್‌ ಸ್ಪರ್ಧಿ; ವಿಡಿಯೊ ವೈರಲ್‌

Bigg Boss: ನಟ ವಿಜಯ್ ಸೇತುಪತಿ (vijay Sethupathi) ಕಳೆದ ಕೆಲವು ವರ್ಷಗಳಿಂದ ಈ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ. ನಾನಾ ರೀತಿಯ ಸ್ಪರ್ಧಿಗಳು ಶೋನಲ್ಲಿ ಭಾಗವಹಿಸಿದ್ದಾರೆ. ಇದೀಗ ಬಿಗ್​​ಬಾಸ್ ಸ್ಪರ್ಧಿಯೊಬ್ಬ ಸೀಸನ್ ಶುರುವಾಗಿ ಎರಡೇ ದಿನಕ್ಕೆ ಮನೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ. ವಿಡಿಯೋ ಇದೀಗ ವೈರಲ್‌ ಆಗಿದೆ.

ಬಿಗ್‌ ಬಾಸ್‌ ತಮಿಳು

ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ತಮಿಳಿನ (Bigg Boss tamil 10) 10 ನೇ ಸೀಸನ್ ಸೆಪ್ಟೆಂಬರ್ 6 ರಂದು ಅದ್ದೂರಿಯಾಗಿ ಪ್ರಾರಂಭವಾಯಿತು. ಈ ಸೀಸನ್ ಅನ್ನು ನಟ ವಿಜಯ್ ಸೇತುಪತಿ ನಿರೂಪಣೆ ಮಾಡಿದ್ದಾರೆ. ನಟ ಕಮಲ್ ಹಾಸನ್ ಅವರು ಬಿಗ್ ಬಾಸ್ ತಮಿಳು ಕಾರ್ಯಕ್ರಮವನ್ನು ಮೊದಲು ನಿರೂಪಣೆ ಮಾಡಿದರು. ಅದಾದ ನಂತರ, ನಟ ವಿಜಯ್ ಸೇತುಪತಿ (vijay Sethupathi) ಕಳೆದ ಕೆಲವು ವರ್ಷಗಳಿಂದ ಈ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ. ನಾನಾ ರೀತಿಯ ಸ್ಪರ್ಧಿಗಳು ಶೋನಲ್ಲಿ ಭಾಗವಹಿಸಿದ್ದಾರೆ. ಇದೀಗ ಬಿಗ್​​ಬಾಸ್ ಸ್ಪರ್ಧಿಯೊಬ್ಬ ಸೀಸನ್ ಶುರುವಾಗಿ ಎರಡೇ ದಿನಕ್ಕೆ ಮನೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ. ವಿಡಿಯೋ ಇದೀಗ ವೈರಲ್‌ ಆಗಿದೆ.

ಆರವ್, ಋತ್ವಿಕಾ, ಮುಗನ್ ರಾವ್, ಅರಿ ಅರ್ಜುನ್, ರಾಜು ಜಯಮೋಹನ್, ಮುಹಮ್ಮದ್ ಅಸಿಮ್, ಅರ್ಚನಾ ರವಿಚಂದ್ರನ್, ಮುತ್ತುಕುಮಾರನ್ ಮತ್ತು ದಿವ್ಯಾ ಗಣೇಶ್ ಅವರನ್ನು ಇದುವರೆಗಿನ ಸೀಸನ್‌ಗಳ ವಿಜೇತರೆಂದು ಘೋಷಿಸಲಾಯಿತು. ಈ 10 ನೇ ಸೀಸನ್ ಅನೇಕ ಅಭೂತಪೂರ್ವ ಘಟನೆಗಳಿಗೆ ಸಾಕ್ಷಿಯಾಗಿದೆ. ಕಾರ್ಯಕ್ರಮದ ಆರಂಭದಿಂದಲೇ ಕೆಲವು ಸ್ಪರ್ಧಿಗಳನ್ನು ಹೊರಹಾಕಲಾಗಿದೆ. ಕೇವಲ 19 ಸ್ಪರ್ಧಿಗಳನ್ನು ಮನೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ: Bigg Boss Kannada 13: ನಾಮಿನೇಷನ್ ಬಗ್ಗೆ ಓಪನ್ ಗೇಮ್ ಪ್ಲ್ಯಾನ್‌! ಗಗನ್ -ತಾಂಡವ್ ರೂಲ್ಸ್‌ ಬ್ರೇಕ್‌



ಬಿಗ್​​ಬಾಸ್ ಶುರು ಆಗಿ ಒಂದೇ ದಿನಕ್ಕೆ ಸ್ಪರ್ಧಿಯೊಬ್ಬ ಬಿಗ್​​ಬಾಸ್ ಮನೆಯಿಂದ ಎಸ್ಕೇಪ್​​ ಆಗಲು ಯತ್ನಿಸಿದ್ದಾನೆ. ಶೋ ಶುರುವಾಗಿ ಒಂದು ದಿನ ಮುಗಿಯುತ್ತಿದ್ದಂತೆ ಒಬ್ಬ ಸ್ಪರ್ಧಿ ಮನೆಯಿಂದಲೇ ಎಸ್ಕೇಪ್ ಆಗುವ ಯತ್ನ ಮಾಡಿದ್ದಾನೆ. ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕುಕ್ ವಿತ್ ಕೋಮಲಿ’ ಕಾರ್ಯಕ್ರಮದ ಮೂಲಕ ಜನಪ್ರಿಯರಾದ ಅನ್ಸರ್ ಕೂಡ ಇದರಲ್ಲಿ ಪಾಲ್ಗೊಂಡಿದ್ದರು. ಅನ್ಸರ್, ಮೊದಲಿಗೆ ಬಿಗ್​​ಬಾಸ್​​ನ ಮುಖ್ಯ ಗೇಟನ್ನು ತಟ್ಟಿದ್ದಾರೆ. ಯಾರೂ ತೆರೆಯದಿದ್ದಾಗ ಗೋಡೆ ಹತ್ತಿ ಮೇಲೆ ಹೋಗಿದ್ದಾರೆ. ಆದರೆ ಅವರು ಹೊರಗೆ ಹೋಗಲು ಯಶಸ್ವಿ ಆಗಿದ್ದಾರೆ ಇಲ್ಲವೋ ಎಂಬುದು ಖಾತ್ರಿ ಆಗಿಲ್ಲ.

ಇದನ್ನೂ ಓದಿ: Bigg Boss Kannada 13: ಅಡುಗೆ ಮಾಡೋದು ದೊಡ್ಡ ಕೆಲ್ಸನಾ? ಸಂಗೀತಾ ಮೇಲೆ ಓಂ ಪ್ರಕಾಶ್ ಗರಂ

ಈ ಸೀಸನ್‌ನಲ್ಲಿ 'ಮಹಾನಟಿ' ಧಾರಾವಾಹಿ ತಾರೆ ಲಕ್ಷ್ಮಿ ಪ್ರಿಯಾ, ನಟಿ ಶಾದಿಕಾ, 'ಪಾಂಡ್ಯನ್ ಸ್ಟೋರ್ಸ್' ನಟಿ ಚಾಂದಿನಿ ತಮಿಳರಸನ್, ನಟ ಬ್ಲಾಕ್ ಪಾಂಡಿ, ನಿರೂಪಕ ವಿನೋತ್ ಬಾಬು, ನಟ ಕುಮಾರನ್, ನಿರೂಪಕ ರಾಘವನ್ ರಘುನಾಥನ್, ಪೃಥ್ವಿನಾಥ್, ಧಾರಾವಾಹಿ ನಟಿ ಮುತಾಲಘಿ, ನಟಿ ತಾನ್ಯಾ, ಮೇಕಪ್ ಆರ್ಟಿಸ್ಟ್ ಅಶ್ಮಿತಾ, ಧಾರಾವಾಹಿಯ ನಟ ಅವಿನಾಶ್, ಕೋಕ್ ಧಾರಾವಾಹಿಯ ನಟ ಅವಿನಾಶ್, ಧಾರಾವಾಹಿಯ ನಟ ಅವಿನಾಶ್ ಸ್ವಾಮಿತಾ, ಜಾವಿದ್ ಭಾಗವಹಿಸುತ್ತಿದ್ದಾರೆ

Yashaswi Devadiga

View all posts by this author