ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Suniel Shetty: ಆಮೀರ್‌ ಖಾನ್‌ಗಿದ್ಯಾ ಅಂಡರ್‌ವರ್ಲ್ಡ್‌ನಿಂದ ಜೀವ ಬೆದರಿಕೆ; ಸುನೀಲ್‌ ಶೆಟ್ಟಿ ಬಿಚ್ಚಿಟ್ಟ ಆ ಭಯಾನಕ ಸಂಗತಿ ಏನು?

ಬಾಲಿವುಡ್ ಇಂಡಸ್ಟ್ರಿ ಮತ್ತು ಭೂಗತ ಜಗತ್ತಿನ ನಂಟು ಸದಾ ಸುದ್ದಿಯಲ್ಲಿದೆ. ಭೂಗತ ಜಗತ್ತಿನೊಂದಿಗೆ ನಂಟು ಹೊಂದಿರುವ ಅನೇಕರು ಚಿತ್ರರಂಗವನ್ನು ನಡೆಸುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಈಗ ಮತ್ತೊಮ್ಮೆ ಅಂಡರ್‌ವರ್ಲ್ಡ್‌ ಮತ್ತು ಚಿತ್ರರಂಗದ ನಂಟಿನ ಬಗ್ಗೆ ಬಗ್ಗೆ ಚರ್ಚೆಯಾಗುತ್ತಿದೆ. ವಾಸ್ತವವಾಗಿ, ಸುನೀಲ್ ಶೆಟ್ಟಿ ಇತ್ತೀಚೆಗೆ ಈ ಬಗ್ಗೆ ಮಾತನಾಡಿದ್ದಾರೆ.

ಮುಂಬೈ: ಬಾಲಿವುಡ್ (Bollywood) ಮತ್ತು ಮುಂಬೈನ ಅಂಡರ್‌ವರ್ಲ್ಡ್ (Mumbai Underworld) ನಡುವಿನ ಸಂಬಂಧ ಒಂದು ಕಾಲದಲ್ಲಿ ಗಾಢವಾಗಿತ್ತು ಎಂಬ ಮಾತುಗಳು ಇಂದಿಗೂ ಚರ್ಚೆಯಲ್ಲಿವೆ. ಕಪ್ಪು ಹಣದಿಂದ ಚಿತ್ರಗಳಿಗೆ ಆರ್ಥಿಕ ನೆರವು, ಪಾತ್ರವರ್ಗ ಆಯ್ಕೆಯಲ್ಲಿ ಮಾಫಿಯಾದ ಪಾತ್ರ ಮತ್ತು ರಕ್ಷಣೆಯ ಹೆಸರಿನಲ್ಲಿ ದೊಡ್ಡ ಸ್ಟಾರ್‌ಗಳಿಂದ ವಸೂಲಿಯಂತಹ ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ಸುನೀಲ್ ಶೆಟ್ಟಿ (Suniel Shetty), ದೇವ್ ಆನಂದ್ ಮತ್ತು ಕಮಲ್ ಹಾಸನ್ (Kamal Haasan) ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ರೆಡಿಫ್‌ನಲ್ಲಿ ಅಭಿಮಾನಿಗಳೊಂದಿಗಿನ ಚಾಟ್‌ನಲ್ಲಿ ಸುನೀಲ್ ಶೆಟ್ಟಿಯವರಿಗೆ, “ಬಾಲಿವುಡ್ ತಾರೆಯರು ಅಂಡರ್‌ವರ್ಲ್ಡ್ ಬೆದರಿಕೆಯಲ್ಲಿ ಜೀವಿಸುತ್ತಾರೆಯೇ? ಆಮಿರ್ ಖಾನ್ ಪಿಸ್ತುಲ್ ತೆಗೆದುಕೊಂಡು ಹೋಗುತ್ತಾರೆ ಎಂಬುದು ನಿಜವೇ?” ಎಂದು ಕೇಳಲಾಗಿತ್ತು. ಇದಕ್ಕೆ ಸುನೀಲ್ ಶೆಟ್ಟಿ, “ಇವೆಲ್ಲ ಸುಳ್ಳು. ಕೇಳಿದ್ದು, ಓದಿದ್ದು ಯಾವಾಗಲೂ ಸತ್ಯವಲ್ಲ. ನಾವು ಇಲ್ಲಿ ಸಂಪೂರ್ಣ ಸುರಕ್ಷಿತರಾಗಿದ್ದೇವೆ,” ಎಂದು ಉತ್ತರಿಸಿದ್ದರು.

ಆದರೆ, ಹಿರಿಯ ನಟರಾದ ದೇವ್ ಆನಂದ್ ಮತ್ತು ಕಮಲ್ ಹಾಸನ್ ಬಾಲಿವುಡ್ ಹಾಗೂ ಅಂಡರ್‌ವರ್ಲ್ಡ್ ಗೆ ಇರುವು ನಂಟನ್ನು ಒಪ್ಪಿಕೊಂಡಿದ್ದಾರೆ. 1998ರ ರೆಡಿಫ್ ಚಾಟ್‌ನಲ್ಲಿ ದೇವ್ ಆನಂದ್‌ರಿಗೆ ಚಿತ್ರರಂಗ ಮತ್ತು ಅಂಡರ್‌ವರ್ಲ್ಡ್ ಸಂಪರ್ಕದ ಬಗ್ಗೆ ಕೇಳಲಾಗಿತ್ತು. ಆಗ ದೇವ್ ಆನಂದ್, “ಕೆಲವೊಮ್ಮೆ ಫಿನ್ಶಿಯಲ್ ಸಪೋರ್ಟ್ ಅಂಡರ್‌ವರ್ಲ್ಡ್‌ನಿಂದ ಬಂದಿರಬಹುದು. ಹೊರಗಿನವರಿಗೆ ಇದು ತಿಳಿಯುವುದಿಲ್ಲ, ಅದು ಕಷ್ಟ ಸಾಧ್ಯ ಕೂಡ” ಎಂದು ಹೇಳಿದ್ದರು. 1950ರ ದಶಕದಲ್ಲಿ ಕೆಲವು ಬಾಲಿವುಡ್ ಚಿತ್ರಗಳಿಗೆ ಮಾಫಿಯಾ ಆರ್ಥಿಕ ನೆರವು ನೀಡಿತ್ತು ಎಂಬುದನ್ನು ಅವರು ಈ ಮೂಲಕ ದೃಢಪಡಿಸಿದ್ದರು.

ಹಾಗೇ 2017ರಲ್ಲಿ ಕಮಲ್ ಹಾಸನ್ ಕೂಡ ಈ ಕುರಿತು ಮಾತಾನಾಡಿದ್ದು, ತಾವೇಕೆ ಬಾಲಿವುಡ್‌ನಲ್ಲಿ ಕಡಿಮೆ ಚಿತ್ರಗಳನ್ನು ಮಾಡಿದ್ದರು ಎಂಬುದನ್ನು ತಿಳಿಸಿದ್ದರು. “ಆ ಕಾಲದಲ್ಲಿ ಬಾಲಿವುಡ್ ಶ್ರೀಮಂತವಾಗಿತ್ತು. ಒಂದು ಚಿತ್ರವನ್ನು ಎರಡೂವರೆ ವರ್ಷಗಳವರೆಗೆ ನಿರ್ಮಿಸುತ್ತಿದ್ದರು, ಒಂದೇ ಸಮಯದಲ್ಲಿ ಆರು ಚಿತ್ರಗಳನ್ನು ಮಾಡುತ್ತಿದ್ದರು. ನೈತಿಕವಾಗಿ ಮತ್ತು ತಾಂತ್ರಿಕವಾಗಿ ಹೇಳುವುದಾದರೆ, ಪಾತ್ರ ನಿರ್ಮಾಣದಲ್ಲಿ ಅದು ಸೋಲುವಂತಿತ್ತು. ಇದರ ಜೊತೆಗೆ, ಅಂಡರ್‌ವರ್ಲ್ಡ್ ಸಂಪರ್ಕವೂ ಒಂದು ಕಾರಣವಾಗಿತ್ತು. ನನಗೆ ಆ ದುಡ್ಡಿನ ಆಸೆ ಇರಲಿಲ್ಲ, ಆದ ಕಾರಣ ತಾವು ಬಾಲಿವುಡ್ ಯಿಂದ ದೂರ ಉಳಿದೆ ಎಂದು ಅಂದಿದ್ದರು.

ಈ ಸುದ್ದಿಯನ್ನೂ ಓದಿ: Actor Aamir Khan: ಸೂಪರ್‌ ಹಿಟ್‌ ಚಿತ್ರ ʻದಂಗಲ್‌ʼ ಪಾಕ್‌ನಲ್ಲಿ ಏಕೆ ರಿಲೀಸ್‌ ಆಗಿಲ್ಲ? ಆಮೀರ್‌ ಖಾನ್‌ ಬಿಚ್ಚಿಟ್ಟ ಆ ಸತ್ಯ ಏನು?

ಇದನ್ನು ಗಮನಿಸಿದ್ದರೆ ಹಿಂದೆ ಬಾಲಿವುಡ್‌ ಗೂ ಹಾಗೂ ಅಂಡರ್‌ವರ್ಲ್ಡ್ ಲೋಕಕ್ಕೂ ನಂಟಿನ ಬಗ್ಗೆ ತಿಳಿಯುತ್ತದೆ. ಬಿಟೌನ್ ಸ್ಟಾರ್ ಗಳ ಚಿತ್ರಕ್ಕೆ ಇದೇ ಭೂಗತ ಲೋಕದಿಂದ ಫಡಿಂಗ್ ಆಗುತ್ತಿತ್ತು ಎಂಬುದು ಸುಳ್ಳಲ್ಲ ಅನ್ನಿಸುತ್ತದೆ. ಆದ್ರೆ ಸುನೀಲ್ ಶೆಟ್ಟಿಯಂತಹ ಕೆಲ ನಟರು ಈ ಆರೋಪವನ್ನು ತಳ್ಳಿಹಾಕಿದ್ದಾರೆ,