ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻ3 ಈಡಿಯಟ್ಸ್‌ ಪಾರ್ಟ್ 2 ಬರೋದು ಪಕ್ಕಾʼ ಎಂದ ಆಮಿರ್ ಖಾನ್; 10 ವರ್ಷಗಳ ನಂತರ ರಾಂಚೋ ಗ್ಯಾಂಗ್ ಹೇಗಿರುತ್ತೆ?

2009ರಲ್ಲಿ ಸಂಚಲನ ಮೂಡಿಸಿದ್ದ ʻ3 ಈಡಿಯಟ್ಸ್ʼ ಚಿತ್ರದ ಎರಡನೇ ಭಾಗ ಬರಲಿದೆ ಎಂಬ ಸುದ್ದಿಯನ್ನು ನಟ ಆಮಿರ್ ಖಾನ್ ಖಚಿತಪಡಿಸಿದ್ದಾರೆ. ನಿರ್ದೇಶಕ ರಾಜಕುಮಾರ್ ಹಿರಾನಿ ಅವರು ಸೀಕ್ವೆಲ್‌ನ ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿದ್ದು, ಮೊದಲ ಭಾಗದ ಘಟನೆಗಳು ನಡೆದ 10 ವರ್ಷಗಳ ನಂತರದ ಕಥೆಯನ್ನು ಇದು ಆಧರಿಸಿರಲಿದೆ ಎಂದು ಆಮಿರ್‌ ತಿಳಿಸಿದ್ದಾರೆ.

2009ರಲ್ಲಿ ತೆರೆಕಂಡಿದ್ದ ʻ3 ಈಡಿಯಟ್ಸ್ʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ದಾಖಲೆಯನ್ನು ಬರೆದಿತ್ತು. ಇದೀಗ ಈ ಸಿನಿಮಾದ ಸೀಕ್ವೆಲ್‌ಗೆ ಸಕಲ ಸಿದ್ದತೆಗಳು ನಡೆಯುತ್ತಿವೆ ಎಂಬ ಮಾತುಗಳು ಕೇಳಿಬಂದಿವೆ. ಅದನ್ನು ಸ್ವತಃ ನಟ ಆಮಿರ್‌ ಖಾನ್‌ ಖಚಿತಪಡಿಸಿದ್ದಾರೆ. ಹೌದು, ನಿರ್ದೇಶಕ ರಾಜಕುಮಾರ್ ಹಿರಾನಿ ಅವರು ʻ3 ಈಡಿಯಟ್ಸ್ʼ ಚಿತ್ರದ ಭಾಗ 2ರ ಕಥೆಯನ್ನು ಸಿದ್ಧಪಡಿಸುತ್ತಿದ್ದಾರೆ ಎಂದು ನಟ ಆಮಿರ್‌ ಖಾನ್ ಹೇಳಿಕೊಂಡಿದ್ದಾರೆ.

ʻ3 ಈಡಿಯಟ್ಸ್ʼ ಸೀಕ್ವೇಲ್‌ ಬಗ್ಗೆ ಆಮಿರ್‌ ಖಾನ್ ಹೇಳಿದ್ದೇನು?

ʻ3 ಈಡಿಯಟ್ಸ್ʼ ಸಿನಿಮಾದ ಸೀಕ್ವೇಲ್‌ ಕುರಿತು ಮಾತನಾಡಿರುವ ಆಮಿರ್‌ ಖಾನ್‌ , "ನಾನು ಈಗಾಗಲೇ ಸೀಕ್ವೆಲ್‌ನ ಕಥೆಯನ್ನು ಕೇಳಿದ್ದೇನೆ,ಅ ದು ಅದ್ಭುತವಾಗಿದೆ. ಸದ್ಯ ಚಿತ್ರಕಥೆಯನ್ನು ಇನ್ನಷ್ಟು ಸುಧಾರಿಸುವ ಕೆಲಸ ನಡೆಯುತ್ತಿದೆ. ಮೊದಲ ಭಾಗದ ಘಟನೆಗಳು ನಡೆದ ಸುಮಾರು 10 ವರ್ಷಗಳ ನಂತರದ ರಾಂಚೋ, ಫರ್ಹಾನ್ ಮತ್ತು ರಾಜು ಅವರ ಜೀವನವನ್ನು ಈ ಸೀಕ್ವೆಲ್ ಆಧರಿಸಿರಲಿದೆ" ಎಂದು ಹೇಳಿದ್ಧಾರೆ.

ಥಿಯೇಟರ್‌, ಯೂಟ್ಯೂಬ್ ಆಯ್ತು, ಈಗ ಒಟಿಟಿಗೆ ಬರ್ತಿದೆ 'ಸಿತಾರೆ ಜಮೀನ್ ಪರ್'; ಉಲ್ಟಾ ಹೊಡೆದ ಆಮಿರ್‌ ಖಾನ್‌

ಪುನ್ಸುಖ್ ವಾಂಗ್ಡು ಪಾತ್ರ ಮಾಡಲು ಉತ್ಸುಕನಾಗಿದ್ದೇನೆ

"ರಾಜು (ರಾಜಕುಮಾರ್ ಹಿರಾನಿ) ಸದ್ಯ ʻ3 ಈಡಿಯಟ್ಸ್ ಪಾರ್ಟ್‌ 2' ಚಿತ್ರದ ಕೆಲಸಗಳಲ್ಲಿ ತೊಡಗಿದ್ದಾರೆ. ಅವರಿಗೆ ಬರಹಗಾರ ಅಭಿಜಾತ್ ಜೋಶಿ ಸಾಥ್‌ ನೀಡಿದ್ದಾರೆ. ಚಿತ್ರಕಥೆಯ ಕೆಲಸ ಇನ್ನೂ ಸ್ವಲ್ಪ ಬಾಕಿ ಇದ್ದರೂ, ಇದರ ಮೂಲ ಆಲೋಚನೆ ಬಹಳ ವಿಭಿನ್ನವಾಗಿದೆ. ಇದು ಮೊದಲ ಭಾಗದಂತೆಯೇ ಹಾಸ್ಯಮಯವಾಗಿದ್ದು, 10 ವರ್ಷಗಳ ನಂತರ ಈ ಪಾತ್ರಗಳು ಹೇಗಿರುತ್ತವೆ ಎಂದು ಹೇಳಲಾಗುತ್ತಿದೆ.. ನಾನಂತೂ ಪುನ್ಸುಖ್ ವಾಂಗ್ಡು ಪಾತ್ರಕ್ಕೆ ಮರಳಲು ಉತ್ಸುಕನಾಗಿದ್ದೇನೆ" ಎಂದು ಆಮಿರ್‌ ಖಾನ್‌ ತಿಳಿಸಿದ್ದಾರೆ.

'3 ಈಡಿಯಟ್ಸ್' ಸಿನಿಮಾದ ಬಗ್ಗೆ

2009ರಲ್ಲಿ ಬಿಡುಗಡೆಯಾಗಿದ್ದ '3 ಈಡಿಯಟ್ಸ್' ಚಿತ್ರದಲ್ಲಿ ಆಮಿರ್‌ ಖಾನ್‌ ಜೊತೆಗೆ ಆರ್. ಮಾಧವನ್, ಶರ್ಮನ್ ಜೋಶಿ ಮತ್ತು ಕರೀನಾ ಕಪೂರ್ ಖಾನ್ ನಟಿಸಿದ್ದರು. ಭಾರತದ ಶಿಕ್ಷಣ ಪದ್ಧತಿ, ಸ್ನೇಹ ಮತ್ತು ಸಮಾಜದ ನಿರೀಕ್ಷೆಗಳಿಗಿಂತ ತಮ್ಮ ಆಸಕ್ತಿಗೆ ಆದ್ಯತೆ ನೀಡುವುದನ್ನು ಈ ಸಿನಿಮಾದಲ್ಲಿ ಹೇಳಲಾಗಿತ್ತು. ವಿಧು ವಿನೋದ್‌ ಚೋಪ್ರಾ ಅವರು 55 ಕೋಟಿ ರೂ. ಬಂಡವಾಳದಲ್ಲಿ ನಿರ್ಮಾಣ ಮಾಡಿದ್ದ ಈ ಸಿನಿಮಾವು 400 ಕೋಟಿ ರೂ.ಗಳನ್ನು ಬಾಚಿಕೊಂಡಿತ್ತು.

Aamir Khan: ತೆರೆ ಮೇಲೆ ಬರಲಿದೆ ಮೇಘಾಲಯ ಮರ್ಡರ್‌ ಕೇಸ್‌; ಸೋನಂ- ರಾಜಾ ಸ್ಟೋರಿ ಮಾಡ್ತಾರಾ ಆಮಿರ್‌ ಖಾನ್?‌

ಸಖತ್‌ ಬ್ಯುಸಿ ಇರುವ ಆಮಿರ್‌ ಖಾನ್

ಇನ್ನು, ರಾಜ್‌ಕುಮಾರ್ ಹಿರಾನಿ ಅವರೊಂದಿಗೆ ಆಮಿರ್‌ ಖಾನ್ ಮಾಡಬೇಕಿದ್ದ ದಾದಾಸಾಹೇಬ್ ಫಾಲ್ಕೆ ಅವರ ಬಯೋಪಿಕ್ ಚಿತ್ರಕಥೆಯ ಕಾರಣದಿಂದ ಸದ್ಯಕ್ಕೆ ‌ನಿಂತಿದೆ. ಈ ವಿಚಾರವನ್ನು ಸ್ವತಃ ಆಮಿರ್‌ ಮಾಹಿತಿ ನೀಡಿದ್ದಾರೆ. ಇದಲ್ಲದೆ, 'ಭಾರತ್ ಪೇ' ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ ಅವರ ಬಯೋಪಿಕ್‌ನಲ್ಲಿ ನಟಿಸಲು ಆಮಿರ್‌ ಖಾನ್‌ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಚಿತ್ರಕ್ಕೆ ಶ್ರದ್ಧಾ ಕಪೂರ್ ನಾಯಕಿಯಾಗಿ ನಟಿಸಲಿದ್ದು, ರಾಹುಲ್ ಮೋದಿ ನಿರ್ದೇಶನ ಮಾಡುವ ಸಾಧ್ಯತೆಯಿದೆ. ಈ ಮಧ್ಯೆ ತಮ್ಮ ಪುತ್ರ ಜುನೈದ್‌ ಖಾನ್‌ ನಟನೆಯ ಏಕ್‌ ದಿನ್‌ ಸಿನಿಮಾವನ್ನು ಆಮಿರ್‌ ಖಾನ್‌ ನಿರ್ಮಾಣ ಮಾಡಿದ್ದು, ಮೇ 1 ರಂದು ಈ ಸಿನಿಮಾ ಬಿಡುಗಡೆಯಾಗಲಿದೆ.