ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆಮಿರ್ ಖಾನ್‌ಗೆ 3ನೇ ಮದುವೆ ಫಿಕ್ಸ್; 47 ವರ್ಷದ ಗರ್ಲ್‌ಫ್ರೆಂಡ್‌ ಗೌರಿ ಜೊತೆ ಸಿಂಪಲ್‌ ಆಗಿ ನಡೆಯಲಿದೆ ಕಲ್ಯಾಣ

ಬಾಲಿವುಡ್ ನಟ ಆಮಿರ್ ಖಾನ್ ತಮ್ಮ 47 ವರ್ಷದ ಗೆಳತಿ ಗೌರಿ ಸ್ಪ್ರ್ಯಾಟ್ ಜೊತೆ ಜುಲೈ 5 ರಂದು ತಮ್ಮ ನಿವಾಸದಲ್ಲಿ ಅತ್ಯಂತ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಇದು ಅವರಿಗೆ ಮೂರನೇ ಮದುವೆ ಎನ್ನಲಾಗಿದೆ. ಕಳೆದ ಒಂದು ವರ್ಷದಿಂದ ಲಿವ್-ಇನ್‌ನಲ್ಲಿದ್ದ ಈ ಜೋಡಿಯ ಈ ಮದುವೆ ನಿರ್ಧಾರಕ್ಕೆ ಕುಟುಂಬಸ್ಥರು ಬೆಂಬಲ ನೀಡಿದ್ದಾರೆ.

ಬಾಲಿವುಡ್‌ ನಟ ಆಮಿರ್‌ ಖಾನ್ ಮೂರನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಮ್ಮ ಗರ್ಲ್‌ಫ್ರೆಂಡ್ ಗೌರಿ ಸ್ಪ್ರ್ಯಾಟ್ (Gauri Spratt) ಅವರ ಜೊತೆಗೆ ಅತ್ಯಂತ ಸರಳವಾಗಿ ಮದುವೆಯಾಗಲು ಆಮಿರ್‌ ಖಾನ್‌ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಯಾವುದೇ ಅಬ್ಬರ ಅಥವಾ ಅದ್ದೂರಿತನವಿಲ್ಲದೇ ಕೇವಲ ಎರಡೂ ಕುಟುಂಬಗಳು ಮತ್ತು ಕೆಲವೇ ಕೆಲವು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಮನೆಯಲ್ಲೇ ಮದುವೆ ಮಾಡಿಕೊಳ್ಳಲಿದ್ದಾರೆ.

ಕಳೆದ ಕೆಲವು ಸಮಯದಿಂದ ಆಮಿರ್‌ ಖಾನ್‌ ಮತ್ತು ಗೌರಿ ಒಟ್ಟಿಗೆ ವಾಸಿಸುತ್ತಿದ್ದು, ಇದೀಗ ಅದೇ ಮನೆಯಲ್ಲಿ ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಲಿದ್ದಾರೆ. ಕುಟುಂಬದ ಆಪ್ತ ಮೂಲಗಳ ಪ್ರಕಾರ, ಆಮಿರ್‌ ಮತ್ತು ಗೌರಿ ಕಳೆದ ಒಂದು ವರ್ಷದಿಂದ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ. "ಅವರು ಒಟ್ಟಿಗೆ ಅತ್ಯಂತ ಸಂತೋಷದ ಹಾಗೂ ಸ್ಥಿರವಾದ ಜೀವನವನ್ನು ಕಟ್ಟಿಕೊಂಡಿದ್ದಾರೆ. ಈಗ ಕುಟುಂಬದವರ ಸಮ್ಮುಖದಲ್ಲಿ ಅದನ್ನು ಅಧಿಕೃತಗೊಳಿಸಲು ನಿರ್ಧರಿಸಿದ್ದಾರೆ" ಎಂದು ಆಪ್ತರು ತಿಳಿಸಿದ್ದಾರೆ. ಈ ವಿವಾಹವನ್ನು ಜುಲೈ 5 ರಂದು ಆಮಿರ್ ಖಾನ್ ನಿವಾಸದಲ್ಲೇ ನಡೆಸಲು ನಿರ್ಧರಿಸಲಾಗಿದೆಯಂತೆ.

ಥಿಯೇಟರ್‌, ಯೂಟ್ಯೂಬ್ ಆಯ್ತು, ಈಗ ಒಟಿಟಿಗೆ ಬರ್ತಿದೆ 'ಸಿತಾರೆ ಜಮೀನ್ ಪರ್'; ಉಲ್ಟಾ ಹೊಡೆದ ಆಮಿರ್‌ ಖಾನ್‌

ಗೌರಿಗೆ ಈಗಾಗಲೇ ಮದುವೆ ಆಗಿತ್ತು

47 ವರ್ಷದ ಗೌರಿ ಅವರಿಗೆ ಮೊದಲ ಮದುವೆಯಿಂದ ಕ್ವಿನ್ (Quinn) ಎಂಬ ಏಳು ವರ್ಷದ ಮಗನಿದ್ದಾನೆ. ಗೌರಿ ಅವರ ತಾತ ಫಿಲಿಪ್ ಸ್ಪ್ರ್ಯಾಟ್ (Philip Spratt) ಬ್ರಿಟನ್‌ನಲ್ಲಿ ಜನಿಸಿದ ಕಮ್ಯುನಿಸ್ಟ್ ಆಗಿದ್ದು, 1920 ರ ದಶಕದಲ್ಲಿ ಭಾರತಕ್ಕೆ ಬಂದು ಇಲ್ಲಿನ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಭಾರತದಲ್ಲೇ ವಾಸಿಸುತ್ತಿರುವ ಗೌರಿ, ಮೊದಲ ಪತಿಯಿಂದ ದೂರವಾಗಿದ್ದು, ಈಗ ಆಮಿರ್‌ ಖಾನ್‌ ಜೊತೆ ಹೊಸ ಬದುಕನ್ನು ಕಟ್ಟಿಕೊಳ್ಳಲು ಸಜ್ಜಾಗಿದ್ದಾರೆ. ಈ ಮದುವೆಗೆ ಆಮಿರ್ ಮತ್ತು ಗೌರಿ ಇಬ್ಬರೂ ಸಹ ತಮ್ಮ ಕುಟುಂಬಗಳ ಪ್ರೀತಿ ಮತ್ತು ಬೆಂಬಲದೊಂದಿಗೆ ಈ ಹೊಸ ಜೀವನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಗೌರಿಗೆ 47 ವರ್ಷ ವಯಸ್ಸಾಗಿದ್ದರೆ, ಆಮಿರ್‌ ಖಾನ್‌ಗೆ ಈಗ 61 ವರ್ಷ ವಯಸ್ಸು. ಇನ್ನು, ಈ ಮದುವೆಗೆ ಶಾರು ಖಾನ್‌, ಸಲ್ಮಾನ್‌ ಖಾನ್‌ ಮುಂತಾದವರು ಆಗಮಿಸಲಿದ್ದಾರೆ ಎನ್ನಲಾಗಿದೆ.

Aamir Khan: ತೆರೆ ಮೇಲೆ ಬರಲಿದೆ ಮೇಘಾಲಯ ಮರ್ಡರ್‌ ಕೇಸ್‌; ಸೋನಂ- ರಾಜಾ ಸ್ಟೋರಿ ಮಾಡ್ತಾರಾ ಆಮಿರ್‌ ಖಾನ್?‌

ಮೂರನೇ ಮದುವೆಗೆ ಸಜ್ಜಾದ ಆಮಿರ್‌ ಖಾನ್

ಆಮಿರ್‌ ಖಾನ್‌ ಅವರು ಈ ಹಿಂದೆ ರೀನಾ ದತ್ತಾ ಅವರನ್ನು ವಿವಾಹವಾಗಿದ್ದರು, ಅವರಿಗೆ ಜುನೈದ್ ಮತ್ತು ಇರಾ ಎಂಬ ಇಬ್ಬರು ಮಕ್ಕಳಿದ್ದಾರೆ. ಆನಂತರ ಅವರು ನಿರ್ದೇಶಕಿ ಕಿರಣ್ ರಾವ್ ಅವರನ್ನು ವಿವಾಹವಾಗಿದ್ದರು. ಕಿರಣ್ ಮತ್ತು ಆಮಿರ್‌ ದಂಪತಿಗೆ ಆಜಾದ್ ಎಂಬ ಮಗನಿದ್ದಾನೆ. 2021 ರಲ್ಲಿ ಕಿರಣ್ ರಾವ್ ಅವರಿಂದ ಪಡೆದ ವಿಚ್ಛೇದನವನ್ನು ಆಮಿರ್‌ ಪಡೆದರು. ಇಬ್ಬರು ಪತ್ನಿಯರಿಗೆ ಆಮಿರ್‌ ಖಾನ್‌ ವಿಚ್ಛೇದನ ನೀಡಿದ್ದರೂ, ಈಗಲೂ ಅವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಹೊಸ ಗರ್ಲ್‌ಫ್ರೆಂಡ್‌ ಗೌರಿ ಹಾಗೂ ಮಾಜಿ ಪತ್ನಿಯರ ಜೊತೆಗೆ ಆಮಿರ್‌ ಖಾನ್‌ ಒಮ್ಮೊಮ್ಮೆ ಒಟ್ಟಿಗೆ ಪಾರ್ಟಿಗಳಲ್ಲಿ ಭಾಗಿಯಾಗುವುದು ವಿಶೇಷ.