ಮುಂಬೈ: ಬಾಲಿವುಡ್ ನಟ ಆಮಿರ್ ಖಾನ್ ನಟನೆಯ ಸಿತಾರೆ ಜಮೀನ್ (Sitaare Zameen Par) ಬಿಡುಗಡೆಯ ದಿನಾಂಕ ಹತ್ತಿರದಲ್ಲಿಯೇ ಇದೆ. ಮೂರು ವರ್ಷಗಳ ಬಳಿಕ ಆಮಿರ್ ಮತ್ತೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ ನಟನ ತಾಯಿ ಕೂಡ ಇದರಲ್ಲಿ ನಟಿಸುತ್ತಿದ್ದಾರೆ. 90 ವರ್ಷದ ತಾಯಿ ಜೀನತ್ ಖಾನ್ ಮೊದಲ ಬಾರಿಗೆ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ಆಮಿರ್ ಬಹಿರಂಗ ಪಡಿಸಿದ್ದಾರೆ. ಅವರ ತಾಯಿ ಇತ್ತೀಚೆಗಷ್ಟೇ 90 ನೇ ವರ್ಷದ ಹುಟ್ಟು ಹಬ್ಬವನ್ನು ಕುಟುಂಬದವರೊಂದಿಗೆ ಆಚರಿಸಿದ್ದರು. ಇದೀಗ ನಟನೆಯಲ್ಲಿ ತೊಡಗಿಕೊಳ್ಳಲಿದ್ದಾರೆ.
ಈ ಚಿತ್ರ 2007 ರ ಮಾಸ್ಟರ್ ಪೀಸ್ ಚಿತ್ರ ತಾರೆ ಜಮೀನ್‌ನ ಮುಂದುವರಿದ ಭಾಗವಾಗಿದೆ. ಈ ಚಿತ್ರದಲ್ಲಿ ಜನಿಲಿಯಾ ದೇಶ್‌ಮುಖ್ ಕೂಡ ನಟಿಸಿದ್ದಾರೆ. ಆಮಿರ್ ತನ್ನ ತಾಯಿಯ ನಟನೆ ಕುರಿತು ಭಾವುಕವಾಗಿ ಮಾತನಾಡಿದ್ದಾರೆ. ಇದೆಲ್ಲವೂ ಅನಿರೀಕ್ಷಿತವಾಗಿ ಹೇಗೆ ಪ್ರಾರಂಭವಾಯಿತು. ಮಮ್ಮೀ ಯಾವತ್ತೂ ಸಿನಿಮಾದ ಕುರಿತು ಅಷ್ಟೊಂದು ಆಸಕ್ತಿ ತೋರಿದವರಲ್ಲ. ಯಾವತ್ತೂ ಶೂಟಿಂಗ್ ಸ್ಪಾಟ್‌ಗೆ ಬಂದವರಲ್ಲ. ಆದರೆ ಒಂದು ದಿನ ಎಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆಂದು ನೋಡುವ ಹಠಾತ್ ಬಯಕೆಯನ್ನು ವ್ಯಕ್ತಪಡಿಸಿದರು. "ನನಗೆ ಆಶ್ಚರ್ಯವಾಯಿತು. ಅವರು ಯಾವತ್ತೂ ಈ ರೀತಿ ಕೇಳಿದವರಲ್ಲ. ಇಂದು ಯಾಕೆ ಹೀಗೆ ಎಂದು ಅನುಮಾನವಾಯಿತು. ಒಂದು ದಿನ ಬೆಳಿಗ್ಗೆ ನನ್ನ ಸಹೋದರಿ ವೀಲ್‌ಚೇರ್‌ನಲ್ಲಿ ಅವರನ್ನು ಸೆಟ್‌ಗೆ ಕರೆ ತಂದರು.
ಆ ದಿನ ಚಿತ್ರೀಕರಣಗೊಳ್ಳುತ್ತಿದ್ದ ದೃಶ್ಯವು ಒಂದು ರೋಮಾಂಚಕ ವಿವಾಹದ ದೃಶ್ಯವಾಗಿತ್ತು. ಆಗ ನಿರ್ದೇಶಕ ಆರ್.ಎಸ್. ಪ್ರಸನ್ನ ನನ್ನನ್ನು ಗೌರವಯುತ ಮತ್ತು ಸ್ವಾಭಾವಿಕವಾದ ವಿನಂತಿಯೊಂದಿಗೆ ಕೋರಿಕೆಯೊಂದನ್ನು ಮುಂದಿಟ್ಟರು. ನಿಮ್ಮ ತಾಯಿ ಒಂದು ಸೀನ್‌ನಲ್ಲಿ ಕಾಣಿಸಿಕೊಳ್ಳಬಹುದೇ ಎಂದು ಕೇಳಿದರು. ನನಗಾಗ ಭಯವಿತ್ತು ಮಮ್ಮೀ ಏನು ಹೇಳುತ್ತಾರೆ ಎಂದು. ಅವರು ಸಂತೋಷದಿಂದ ಒಪ್ಪಿಂಕೊಂಡರು ಎಂದು ಆಮಿರ್ ಹೇಳಿದ್ದಾರೆ. ಆದರೆ ಇಷ್ಟೇ ಅಲ್ಲ. ಆಮಿರ್ ಸಹೋದರಿ ಕೂಡ ಸೀತಾರೆ ಜಮೀನ್ ಪರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ - ಇದು ಅವರ ಮೊದಲ ತೆರೆಯ ಮೇಲೆ ಒಟ್ಟಿಗೆ ಕೆಲಸ ಮಾಡುವ ಚಿತ್ರವಾಗಿದೆ.
ಈ ಸುದ್ದಿಯನ್ನೂ ಓದಿ: Aamir Khan: ಮಹಾಭಾರತ ಸಿನಿಮಾ ನಿರ್ದೇಶನ ಬಳಿಕ ಚಿತ್ರರಂಗಕ್ಕೆ ಗುಡ್‌ಬೈ ಹೇಳ್ತಾರಾ ನಟ ಆಮಿರ್ ಖಾನ್?..
ಜೂನ್ 20, 2025 ರಂದು ಬಿಡುಗಡೆಯಾಗಲಿರುವ ಸೀತಾರೆ ಜಮೀನ್ ಪರ್ ಆಮಿರ್ ಖಾನ್ ಅವರ ಮತ್ತೊಂದು ಚಿತ್ರವಲ್ಲ - ಇದು ಒಂದು ಹೃದಯಸ್ಪರ್ಶಿ ಕುಟುಂಬ ಮೈಲಿಗಲ್ಲು. ಟ್ರೇಲರ್ ಬಿಡುಗಡೆ ಆದಾಗ ‘ಸಿತಾರೆ ಜಮೀನ್ ಪರ್’ ಸಿನಿಮಾದ ಬಗ್ಗೆ ಟೀಕೆ ವ್ಯಕ್ತವಾಯಿತು. ಯಾಕೆಂದರೆ, ಇದು ‘ಚಾಂಪಿಯನ್’ ಸಿನಿಮಾದ ಕಾಪಿ ಎಂದು ಜನರು ಪತ್ತೆ ಹಚ್ಚಿದರು. ಇದು ಅಧಿಕೃತ ರಿಮೇಕ್ ಎಂದು ‘ಸಿತಾರೆ ಜಮೀನ್ ಪರ್’ ಸಿನಿಮಾ ಒಪ್ಪಿಕೊಂಡಿತ್ತು.