ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Abhishek-Aishwarya Rai: ಕಜ್ರಾ ರೇ ಹಾಡಿಗೆ ಹೆಜ್ಜೆ ಹಾಕಿದ ಅಭಿಷೇಕ್, ಐಶ್ವರ್ಯಾ ಜೋಡಿ- ಈ ಕ್ಯೂಟ್‌ ವಿಡಿಯೊ ನೋಡಿ

ಮುಂಬೈನಲ್ಲಿ ಮೇ 17ರಂದು ಶನಿವಾರ ರಾತ್ರಿ ನಡೆದ ಮದುವೆ ಕಾರ್ಯಕ್ರಮದಲ್ಲಿ ನಟಿ ಐಶ್ವರ್ಯ ರೈ ಮತ್ತು ನಟ ಅಭಿಷೇಕ್ ಬಚ್ಚನ್ ತಮ್ಮ ಮಗಳು ಆರಾಧ್ಯ ಅವರೊಂದಿಗೆ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದ ಗಾಯಕ ರಾಹುಲ್ ವೈದ್ಯ ಅವರು ಹಾಡಿದ ಕಜ್ರಾ ರೇ.. ಎಂಬ ಐಕಾನಿಕ್ ಟ್ರ್ಯಾಕ್ ಗೆ ಅಭಿಷೇಕ್ ಮತ್ತು ಐಶ್ವರ್ಯ ಹೆಜ್ಜೆ ಹಾಕಿದ್ದಾರೆ. ಮಗಳು ಆರಾಧ್ಯ ಇವರಿಗೆ ಸಾಥ್ ನೀಡಿದ್ದಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ಕಜ್ರಾ ರೇ ಹಾಡಿಗೆ ಹೆಜ್ಜೆ ಹಾಕಿದ ಅಭಿಷೇಕ್, ಐಶ್ವರ್ಯಾ

ಮುಂಬೈ: ಮದುವೆ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನ ಸೆಲೆಬ್ರಿಟಿ ಜೋಡಿಗಳಾದ (Bollywood celebrity couple) ಐಶ್ವರ್ಯಾ (Aishwarya rai) ಮತ್ತು ಅಭಿಷೇಕ್ (Abhishek Bachchan) ಕಜ್ರಾ ರೇ ಹಾಡಿಗೆ ಹೆಜ್ಜೆ ಹಾಕಿದರು. ಇವರಿಗೆ ಮಗಳು ಆರಾಧ್ಯ (Aaradhya Bachchan) ಸಾಥ್ ನೀಡಿದಳು. ಇತ್ತೀಚೆಗೆ ಐಶ್ವರ್ಯಾ ಮತ್ತು ಅಭಿಷೇಕ್ ವಿಚ್ಛೇದನದ ವದಂತಿ ಹಬ್ಬಿದ್ದು ಈ ಬಗ್ಗೆ ಬಚ್ಚನ್ ಕುಟುಂಬದ ಯಾವೊಬ್ಬ ಸದಸ್ಯನೂ ಸರಿಯಾದ ಸ್ಪಷ್ಟಿಕರಣ ನೀಡಿರಲಿಲ್ಲ. ಆದರೆ ಇತ್ತೀಚೆಗೆ ಕೆಲವು ಸಂದರ್ಭಗಳಲ್ಲಿ ಐಶ್ವರ್ಯಾ ಮತ್ತು ಅಭಿಷೇಕ್ ಜೊತೆಯಾಗಿ ಕಾಣಿಸಿಕೊಂಡು ವಿಚ್ಛೇದನದ ವದಂತಿಯನ್ನು ತಳ್ಳಿ ಹಾಕಿದ್ದಾರೆ.

ಮುಂಬೈನಲ್ಲಿ ನಡೆದ ಸಂಬಂಧಿಗಳ ಮದುವೆ ಕಾರ್ಯಕ್ರಮದಲ್ಲಿ ಒಂದೇ ಬಣ್ಣದ ಉಡುಗೆಯಲ್ಲಿ ಜೊತೆಯಾಗಿ ಕಾಣಿಸಿಕೊಂಡ ಐಶ್ವರ್ಯ, ಅಭಿಷೇಕ್ ಮತ್ತು ಆರಾಧ್ಯ ಕಜ್ರಾ ರೇ ಹಾಡಿಗೆ ಹೆಜ್ಜೆ ಹಾಕಿದರು. ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಇತ್ತೀಚಿನ ವಿಡಿಯೊ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಇದರ ಕ್ಲಿಪ್‌ಗಳನ್ನು ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದ ಗಾಯಕ ರಾಹುಲ್ ವೈದ್ಯ ಅವರು ಹಂಚಿಕೊಂಡಿದ್ದಾರೆ.

ಮೇ 17ರಂದು ಶನಿವಾರ ರಾತ್ರಿ ಮುಂಬೈನಲ್ಲಿ ನಡೆದ ಮದುವೆಯಲ್ಲಿ ನಟಿ ಐಶ್ವರ್ಯ ರೈ ಮತ್ತು ನಟ ಅಭಿಷೇಕ್ ಬಚ್ಚನ್ ತಮ್ಮ ಮಗಳು ಆರಾಧ್ಯ ಅವರೊಂದಿಗೆ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದ ಗಾಯಕ ರಾಹುಲ್ ವೈದ್ಯ ಅವರು ಹಾಡಿದ ಕಜ್ರಾ ರೇ.. ಎಂಬ ಐಕಾನಿಕ್ ಟ್ರ್ಯಾಕ್ ಗೆ ಅಭಿಷೇಕ್ ಮತ್ತು ಐಶ್ವರ್ಯ ಹೆಜ್ಜೆ ಹಾಕಿದ್ದಾರೆ. ಮಗಳು ಆರಾಧ್ಯ ಇವರಿಗೆ ಸಾಥ್ ನೀಡಿದ್ದಾರೆ. ಈ ವಿಡಿಯೊವನ್ನು ರಾತ್ರಿಯೇ ವೈದ್ಯ ಹಂಚಿಕೊಂಡಿದ್ದು, ಭಾರಿ ವೈರಲ್ ಆಗಿದೆ.

ವೈರಲ್‌ ವಿಡಿಯೊ ಇಲ್ಲಿದೆ

ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ ನಲ್ಲಿ ನಡೆದ ಮದುವೆ ಸಮಾರಂಭಕ್ಕೆ ಐಶ್ವರ್ಯ ಮತ್ತು ಅಭಿಷೇಕ್ ದಂಪತಿ ಒಂದೇ ಬಣ್ಣದ ಉಡುಪುಗಳಲ್ಲಿ ಜೋಡಿಯಾಗಿ ಕಾಣಿಸಿಕೊಂಡರು. ಈ ವಿಡಿಯೊದಲ್ಲಿ, ಐಶ್ವರ್ಯ ಮತ್ತು ಅಭಿಷೇಕ್ 'ಬಂಟಿ ಔರ್ ಬಬ್ಲಿ' ಚಿತ್ರದ 'ಕಜ್ರಾ ರೇ' ಹಾಡಿಗೆ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು. ರಾಹುಲ್ ವೈದ್ಯ ಹಾಡನ್ನು ಲೈವ್ ಆಗಿ ಪ್ರದರ್ಶಿಸುತ್ತಿದ್ದರೆ ಐಶ್ವರ್ಯ ಉತ್ಸಾಹದಿಂದ ನೃತ್ಯ ಮಾಡುವುದು ಅಭಿಷೇಕ್ ನಗುತ್ತಾ, ಚಪ್ಪಾಳೆ ತಟ್ಟಿ ಆ ಕ್ಷಣವನ್ನು ಆನಂದಿಸುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: Operation Sindoor: ಭಾರತ ಮತ್ತೆ ದಾಳಿ ಮಾಡುತ್ತದೆ.... ಅಮೆರಿಕದ ಬಳಿ ಕದನ ವಿರಾಮದ ಕುರಿತು ಪಾಕ್‌ ಬೇಡಿದ್ದೇನು?

ಕಳೆದ ತಿಂಗಳಷ್ಟೇ ಐಶ್ವರ್ಯಾ ಮತ್ತು ಅಭಿಷೇಕ್ ಜೋಡಿಯ ಮತ್ತೊಂದು ವಿಡಿಯೊ ವೈರಲ್ ಆಗಿತ್ತು. ಅದು ಪುಣೆಯಲ್ಲಿ ನಡೆದ ಐಶ್ವರ್ಯಾ ಅವರ ಸೋದರಸಂಬಂಧಿಯ ಮದುವೆ ಕಾರ್ಯಕ್ರಮದ್ದಾಗಿತ್ತು. 2007ರಲ್ಲಿ ಅದ್ಧೂರಿ ಸಮಾರಂಭದಲ್ಲಿ ವಿವಾಹವಾಗಿದ್ದ ಐಶ್ವರ್ಯಾ ಮತ್ತು ಅಭಿಷೇಕ್ ದಂಪತಿ 2011ರಲ್ಲಿ ಮಗಳು ಆರಾಧ್ಯ ಅವರನ್ನು ಸ್ವಾಗತಿಸಿದರು. ಕೊನೆಯ ಬಾರಿಗೆ ಐಶ್ವರ್ಯಾ ತಮಿಳು ಚಲನಚಿತ್ರ 'ಪೊನ್ನಿಯಿನ್ ಸೆಲ್ವನ್' ನಲ್ಲಿ ಕಾಣಿಸಿಕೊಂಡಿದ್ದು, ಅಭಿಷೇಕ್ 'ಬಿ ಹ್ಯಾಪಿ' ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.