ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Coolie Movie: ಕೂಲಿ ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ನಟ ಆಮೀರ್ ಖಾನ್ ಸಿಡಿಮಿಡಿ? ಈ ಬಗ್ಗೆ ಹೇಳಿದ್ದೇನು?

Actor Aamir Khan: ಬಾಲಿವುಡ್ ನಟ ಆಮೀರ್ ಖಾನ್ ಅವರು ಕೂಲಿ ಸಿನಿಮಾ ಒಪ್ಪಿಕೊಳ್ಳಬಾರದಿತ್ತು ಎಂದು ಹೇಳುವಂತ ಪೋಸ್ಟ್ ಒಂದು ವೈರಲ್ ಆಗಿದ್ದು ಇದನ್ನು ಕಂಡು ಅಭಿಮಾನಿಗಳು ಕೂಡ ಅಚ್ಚರಿಗೊಂಡಿದ್ದಾರೆ. ಅಷ್ಟಕ್ಕೂ ನಟ ಆಮಿರ್ ಖಾನ್ ಅವರ ಪೋಸ್ಟ್‌ ಏನಿದೆ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ಇಲ್ಲಿದೆ.

ನವದೆಹಲಿ: ಸೂಪರ್ ಸ್ಟಾರ್ ರಜನೀಕಾಂತ್ (Rajinikanth) ಅವರ ಸಿನಿಮಾ ಎಂದರೆ ಸಾಮಾನ್ಯ ವಾಗಿ ಪ್ರೇಕ್ಷಕರಿಗೆ ಉತ್ತಮ ಕುತೂಹಲ ಇದ್ದೇ ಇರುತ್ತದೆ‌. ಅಂತೆಯೇ ಅವರ ಅಭಿನಯದ ಕೂಲಿ ಸಿನಿಮಾ ರಿಲೀಸ್‌ಗೂ ಮುನ್ನವೇ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿತ್ತು. ಆದರೆ ಲೋಕೇಶ್ ಕನಗರಾಜ್ ನಿರ್ದೇಶನದ ಕೂಲಿ ಸಿನಿಮಾ ಸಾಧಾರಣ ಯಶಸ್ಸನ್ನು ಪಡೆದಿದ್ದರೂ ಅಂದು ಕೊಂಡ ಮಟ್ಟಕ್ಕೆ ದೊಡ್ಡ ಯಶಸ್ಸು ಮಾತ್ರ ಈ ಸಿನಿಮಾಕ್ಕೆ ಸಿಗಲಿಲ್ಲ ಎಂದೇ ಹೇಳಬಹುದು. ಇದೇ ಸಿನಿಮಾದಲ್ಲಿ ರಜನೀಕಾಂತ್ ಜೊತೆಗೆ ರಿಯಲ್ ಸ್ಟಾರ್ ಉಪೇಂದ್ರ, ರಚಿತಾ ರಾಮ್, ಆಮೀರ್ ಖಾನ್ ಕೂಡ ಅಭಿನ ಯಿಸಿದ್ದರು. ಸಣ್ಣ ಪುಟ್ಟ ಅಥಿತಿ ಪಾತ್ರಕ್ಕೂ ದೊಡ್ಡ ತಾರಾಗಣ ವನ್ನೇ ಈ ಸಿನಿಮಾ ಸಂಗಮ ಮಾಡಿದೆ. ಈ ಸಿನಿಮಾ ರಿಲೀಸ್ ಆಗಿ ಒಟಿಟಿಯಲ್ಲೂ ತೆರೆಕಂಡ ಬಳಿಕ ಇದೀಗ ಬಾಲಿವುಡ್ ನಟ ಆಮೀರ್ ಖಾನ್ ಅವರು ಕೂಲಿ ಸಿನಿಮಾ ಒಪ್ಪಿಕೊಳ್ಳಬಾರದಿತ್ತು ಎಂದು ಹೇಳುವಂತ ಪೋಸ್ಟ್ ಒಂದು ವೈರಲ್ ಆಗಿದ್ದು ಇದನ್ನು ಕಂಡು ಅಭಿಮಾನಿಗಳು ಕೂಡ ಅಚ್ಚರಿಗೊಂಡಿದ್ದಾರೆ. ಅಷ್ಟಕ್ಕೂ ನಟ ಆಮಿರ್ ಖಾನ್ ಅವರ ಪೋಸ್ಟ್ ನಲ್ಲಿ ಏನಿದೆ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ಇಲ್ಲಿದೆ.

ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಅವರ ಪೋಸ್ಟ್ ಒಂದು ಸೋಶಿಯಲ್ ಮಿಡಿಯಾ ಸಂಚಲನ ಉಂಟು ಮಾಡುತ್ತಿದೆ. ನಾನು ಕೂಲಿ ಸಿನಿಮಾ ಒಪ್ಪಿಕೊಳ್ಳಲೇ ಬಾರದಿತ್ತು, ತಪ್ಪು ಮಾಡಿ ಬಿಟ್ಟೆ‌ ಎಂದು ಆಮಿರ್ ಖಾನ್ ಅವರು ಹೇಳಿದ್ದಾರೆ ಎನ್ನುವ ಸ್ಕ್ರೀನ್ ಶಾರ್ಟ್ ನ ಪೋಸ್ಟ್‌ ಒಂದು ವೈರಲ್ ಆಗುತ್ತಿವೆ. ಆದರೆ ನಟ ಆಮೀರ್ ಖಾನ್ ಅವರು ಈ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಚಿತ್ರದ ಬಗ್ಗೆ ಅವರು ಯಾವುದೇ ನಕಾರಾತ್ಮಕ ಟೀಕೆ ಮಾಡಿಲ್ಲ. ಸಿನಿಮಾದ ಬಗ್ಗೆ ತನಗೆ ಗೌರವ ಹೊಂದಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ನಟ ಆಮೀರ್ ಖಾನ್ ಅವರು ಇತ್ತೀಚೆಗಷ್ಟೇ ಕೂಲಿ ಸಿನಿಮಾದ ಅತಿಥಿ ಪಾತ್ರವನ್ನು ರಜನಿ ಸರ್‌ಗೋಸ್ಕರ ಒಪ್ಪಿಕೊಂಡಿದ್ದೇನೆ. ಆದರೆ ನನ್ನ ಪಾತ್ರದ ಬಗ್ಗೆ ನನಗೆ ಅಸಮಾಧಾನವಿದೆ. ಅದನ್ನು ತೆರೆ ಮೇಲೆ ತರುವ ಹಿಂದಿನ ಉದ್ದೇಶ ಏನೆಂದು ನನಗೆ ಅರ್ಥ ವಾಗಿಲ್ಲ. ನಾನು ಈ ಸಿನಿಮಾದಲ್ಲಿ ಇಲ್ಲದಿದ್ದರೂ ಏನು ವ್ಯತ್ಯಾಸವಾಗಲಾರದು. ಈ ಸಿನಿಮಾದಲ್ಲಿ ನಾನು ಒಂದೆರೆಡು ಡೈಲಾಗ್ ಹೇಳಿ ಮಾಯವಾದಂತೆ ಇತ್ತು. ಇನ್ನು ಮುಂದಿನ ದಿನದಲ್ಲಿ ಸಿನಿಮಾ ಒಪ್ಪುವಾಗ ಹೆಚ್ಚಿನ ಕಾಳಜಿ ವಹಿಸುವೆನು ಎಂದು ಆಮಿರ್ ಖಾನ್ ಹೇಳಿದ್ದರು ಎಂಬ ಪೊಸ್ಟ್ ವೈರಲ್ ಮಾಡಲಾಗಿತ್ತು.

ಕೂಲಿ ಸಿನಿಮಾದಲ್ಲಿ ನಾನು ಅಭಿನಯಿಸುವ ಬಗ್ಗೆ ಜನರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಸಿನಿಮಾ ತೆರೆ ಮೇಲೆ ಬಂದ ಬಳಿಕ ಅಭಿಮಾನಿಗಳು ನಿರಾಸೆಗೊಂಡರು. ಮುಂದಿನ ದಿನದಲ್ಲಿ ಈ ತಪ್ಪು ಮರುಕಳಿಸಲಾರದು ಎಂದು ಆಮೀರ್ ಹೇಳಿದ್ದಾರೆಂಬ ಸ್ಕ್ರೀನ್‌ಶಾಟ್ ಒಂದು ಪೋಸ್ಟ್ ನಂತೆ ಉಲ್ಲೇಖಿಸಲಾಗಿದೆ. ಆದರೆ ನಟ ಆಮೀರ್ ಖಾನ್ ಅವರು ಇದೆಲ್ಲವೂ ಸುಳ್ಳು ಸುದ್ದಿ.‌‌‌ ನಾನು 'ಕೂಲಿ' ಸಿನಿಮಾ ತಂಡದ ಬಗ್ಗೆ ಅಥವಾ ಆ ಸಿನಿಮಾದಲ್ಲಿ ನನ್ನ ಅಭಿನಯ ಬಗ್ಗೆ ಆ ರೀತಿ ಏನೂ ಹೇಳಿಕೆ ನೀಡಿಲ್ಲ ಎಂಬುದು ಈಗ ಸ್ಪಷ್ಟಪಡಿಸಿದ್ದಾರೆ.

ಇದನ್ನು ಓದಿ:Vayuputra Movie: ವಾಯುಪುತ್ರ ಅನಿಮೇಷನ್‌ ಸಿನಿಮಾ ಅನೌನ್ಸ್: ದಸರಾಗೆ ಪಂಚ ಭಾಷೆಯಲ್ಲಿ ರಿಲೀಸ್!

ಬಾಲಿವುಡ್ ನಟ ಆಮೀರ್ ಖಾನ್ ಅವರು ಲಾಲ್ ಸಿಂಗ್‌ ಚಡ್ಡಾ ಸಿನಿಮಾ ಬಳಿಕ ಸಿನಿಮಾ ವಿಚಾರದಲ್ಲಿ ಸಾಕಷ್ಟು ನಿರಾಸೆ ಗೊಂಡಿದ್ದರು. ಬಳಿಕ ಸಿತಾರೆ ಜಮೀನ್ ಪರ್ ಸಿನಿಮಾ ಮಾಡಿ ಆ ಸಿನಿಮಾ ಅವರಿಗೆ ದೊಡ್ಡ ಮಟ್ಟಿನ ಯಶಸ್ಸು ತಂದುಕೊಟ್ಟಿತು. ಅದರ ಬೆನ್ನಲ್ಲೆ ನಟ 'ಸೂಪರ್ ಸ್ಟಾರ್‌' ರಜನಿಕಾಂತ್ ಅವರ 'ಕೂಲಿ' ಸಿನಿಮಾದಲ್ಲಿ ಅತಿಥಿ ಪಾತ್ರ ನಟಿಸಿದ್ದರು. ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಬಂದ ಆಮೀರ್ ಖಾನ್‌ಗೆ ಜಾಸ್ತಿ ಡೈಲಾಗ್‌ಗಳೇನು ಇರಲಿಲ್ಲ. ಹೀಗಾಗಿ ಈ ಸಿನಿಮಾದಲ್ಲಿ ನಟ ಆಮಿರ್ ಖಾನ್ ಅವರು ಇದ್ದರೂ ಇದ್ದಂತಿಲ್ಲ ಎಂಬುದೇ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ ಎನ್ನಬಹುದು. ಸದ್ಯ 'ಕೂಲಿ' ಸಿನಿಮಾ ಸಿನಿಮಾ ತೆರೆ ಕಂಡ ಬಳಿಕ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದ್ದು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಕೂಡ ಪಡೆಯುತ್ತಿದೆ.