ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Ajay Rao: ಸ್ಯಾಂಡಲ್‌ವುಡ್‌ ನಟ ಅಜಯ್‌ ರಾವ್‌ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ಗೆ ಅರ್ಜಿ

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಜೋಡಿಯ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ. ಕನ್ನಡ ಚಿತ್ರರಂಗದ ಜನಪ್ರಿಯ ನಟ ಅಜಯ್ ರಾವ್ (Actor Ajay Rao) ಮತ್ತು ಅವರ ಪತ್ನಿ ಸ್ವಪ್ನಾ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಆ ಮೂಲಕ ಇವರಿಬ್ಬರ 11 ವರ್ಷಗಳ ದಾಂಪತ್ಯ ಜೀವನ ಮುರಿದು ಬಿದ್ದಿದೆ.

ಸ್ಯಾಂಡಲ್‌ವುಡ್‌ ನಟ ಅಜಯ್‌ ರಾವ್‌ ದಾಂಪತ್ಯದಲ್ಲಿ ಬಿರುಕು

Ramesh B Ramesh B Aug 16, 2025 3:17 PM

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಜೋಡಿಯ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ. ಕನ್ನಡ ಚಿತ್ರರಂಗದ ಜನಪ್ರಿಯ ನಟ ಅಜಯ್ ರಾವ್ (Actor Ajay Rao) ಮತ್ತು ಅವರ ಪತ್ನಿ ಸ್ವಪ್ನಾ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಆ ಮೂಲಕ ಇವರಿಬ್ಬರ 11 ವರ್ಷಗಳ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಇವರಿಬ್ಬರು 2014ರಲ್ಲಿ ಹೊಸೇಪಟೆಯಲ್ಲಿ ಸರಳವಾಗಿ ವಿವಾಹವಾಗಿದ್ದರು. ದಂಪತಿಗೆ ಚರಿಷ್ಮಾ ಹೆಸರಿನ ಮಗಳಿದ್ದಾಳೆ. ವಿಚ್ಛೇದನಕ್ಕೆ ನಿಖರ ಕಾರಣಗಳು ತಿಳಿದು ಬಂದಿಲ್ಲ.

ಅಜಯ್ ರಾವ್ ವಿರುದ್ಧ ಸಪ್ನಾ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ಸಹ ದಾಖಲಿಸಿದ್ದಾರೆ ಎನ್ನಲಾಗುತ್ತಿದೆ. ಕಳೆದ ವರ್ಷವಷ್ಟೇ ಈ ಜೋಡಿ ಮನೆ ನಿರ್ಮಿಸಿ ಅದ್ಧೂರಿಯಾಗಿ ಗೃಹ ಪ್ರವೇಶ ಸಮಾರಂಭ ನಡೆಸಿತ್ತು. ಆದರೆ ಇದ್ದಕ್ಕಿದ್ದಂತೆ ದೂರವಾಗಲು ಯಾಕೆ ನಿರ್ಧರಿಸಿದರು ಎನ್ನುವುದು ಯಕ್ಷಪ್ರಶ್ನೆ. ಪರಸ್ಪರ ನಿರ್ಧಾರ ಮಾಡಿಯೇ ಬೇರೆ ಆಗಲು ಈ ದಂಪತಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.

2003ರಲ್ಲಿ ತೆರೆಕಂಡ ʼಕಿಚ್ಚʼ ಕನ್ನಡ ಚಿತ್ರದ ಸಣ್ಣ ಪಾತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಅಜಯ್‌ ರಾವ್‌ ಬಳಿಕ ʼಎಕ್ಸ್‌ಕ್ಯೂಸ್‌ ಮೀʼ ಮೂಲಕ ನಾಯಕನಾಗಿ ಭಡ್ತಿ ಪಡೆದರು. ನಿರ್ಮಾಪಕರಾಗಿಯೂ ಗುರುತಿಸಿಕೊಂಡಿರುವ ಅವರು ಸುಮಾರು 2 ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಅವರು ನಿರ್ಮಿಸಿ, ನಾಯಕನಾಗಿ ನಟಿಸಿದ ʼಯುದ್ಧಕಾಂಡ ಚಾಪ್ಟರ್‌ 2ʼ ಸಿನಿಮಾ ಗಮನ ಸೆಳೆದಿತ್ತು.

ಈ ಸುದ್ದಿಯನ್ನೂ ಓದಿ: Actress Karishma Kapoor: ನಟಿ ಕರಿಷ್ಮಾ ಮತ್ತು ಸಂಜಯ್ ಡಿವೋರ್ಸ್‌ಗೆ ಅಸಲಿ ಕಾರಣ ಏನು ಗೊತ್ತಾ?

ಕೃಷ್ಣ ಎಂದೇ ಜನಪ್ರಿಯ

ಅಜಯ್‌ ರಾವ್‌ ಸ್ಯಾಂಡಲ್‌ವುಡ್‌ನಲ್ಲಿ ಕೃಷ್ಣ ಎಂದೇ ಗುರುತಿಸಿಕೊಂಡಿದ್ದಾರೆ. 2010ರಲ್ಲಿ ತೆರೆಕಂಡ ʼಕೃಷ್ಣನ್‌ ಲವ್‌ ಸ್ಟೋರಿʼ ಸಿನಿಮಾದಲ್ಲಿ ಅಜಯ್‌ ರಾವ್‌ ನಾಯಕನಾಗಿ ನಟಿಸಿದ್ದರು. ಬಾಕ್ಸ್‌ ಆಫೀಸ್‌ನಲ್ಲಿ ಈ ಚಿತ್ರ ಸೂಪರ್‌ ಹಿಟ್‌ ಆಗುವ ಜತೆಗೆ ಅವರು ಕೃಷ್ಣ ಎಂದೇ ಜನಪ್ರಿಯರಾದರು. ಅದಾದ ಬಳಿಕ ʼಕೃಷ್ಣನ್‌ ಮ್ಯಾರೇಜ್‌ ಸ್ಟೋರಿʼ, ʼಕೃಷ್ಣ-ಲೀಲಾʼ, ʼಕೃಷ್ಣ-ರುಕ್ಕುʼ, ʼಕೃಷ್ಣ ಸನ್‌ ಆಫ್‌ ಸಿಎಂʼ, ʼಕೃಷ್ಣ ಟಾಕೀಸ್‌ʼ ಮುಂತಾದ ಕೃಷ್ಣ ಸೀರಿಸ್‌ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.