ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Ajay Rao: ಒಂದೇ ವರ್ಷಕ್ಕೆ ಡಿವೋರ್ಸ್​ ಆಗುತ್ತೆ; ನಟ ಅಜಯ್‌ ರಾವ್‌ ಮದುವೆ ವೇಳೆ ಭವಿಷ್ಯ ನುಡಿದಿದ್ದ ಜ್ಯೋತಿಷಿ!

Actor Ajay Rao: ಮದುವೆಯಾದ ಮುಹೂರ್ತ ಸರಿಯಿಲ್ಲ, ʻನೀವಿಬ್ಬರೂ ಒಂದು ವರ್ಷವೂ ಜತೆ ಇರಲ್ಲ, ಡಿವೋರ್ಸ್‌ ಆಗುತ್ತೆʼ ಅಂದಿದ್ದರು. ಆದರೆ ನಾನು ಯಾವ ಮುಹೂರ್ತವೂ ನೋಡಲ್ಲ. ನನಗೆ ಜ್ಯೋತಿಷ್ಯ ಓದುವುದಕ್ಕೆ ಬರುತ್ತೆ ಎಂದು ಈ ಹಿಂದೆ ನಟ ಅಜಯ್‌ ರಾವ್‌ ಸಂದರ್ಶನವೊಂದರಲ್ಲಿ ಹೇಳಿದ್ದರು.

ಅಜಯ್‌ ರಾವ್‌ಗೆ ಒಂದೇ ವರ್ಷಕ್ಕೆ ಡಿವೋರ್ಸ್​ ಆಗುತ್ತೆ ಎಂದಿದ್ದ ಜ್ಯೋತಿಷಿ!

Prabhakara R Prabhakara R Aug 16, 2025 5:14 PM

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಸ್ಟಾರ್‌ ಜೋಡಿ ವಿಚ್ಛೇದನದ ಹಾದಿಯಲ್ಲಿದೆ. ನಟ ಅಜಯ್ ರಾವ್ ಅವರ (Actor Ajay Rao) ಪತ್ನಿ ಸ್ವಪ್ನ ರಾವ್ ಡಿವೋರ್ಸ್‌ಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ತಿಳಿದುಬಂದಿದೆ. ಈ ನಡುವೆ ಮಧ್ಯೆ ಅಜಯ್ ರಾವ್ ಅವರು ಈ ಹಿಂದೆ ಸಂದರ್ಶನವೊಂದರಲ್ಲಿ ವಿಚ್ಛೇದನದ ಬಗ್ಗೆ ಮಾತನಾಡಿಡಿರುವ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

‘ಎಕ್ಸ್‌ಕ್ಯೂಸ್‌ ಮಿ’ ಸಿನಿಮಾ ನಂತರ ಹಲವು ಫೈಲ್ಯೂರ್‌ ಬಳಿಕ ತಾಜ್‌ ಮಹಲ್‌ ದೊಡ್ಡ ಹಿಟ್‌ ಕೊಟ್ಟಿತ್ತು. ಅಂದಿನಿಂದ ಇಲ್ಲಿಯವರೆಗೂ ನನಗೆ ಯಾವ ಫೈಲ್ಯೂರ್‌ ಮತ್ತು ಸಕ್ಸಸ್‌ ಕೂಡ ಮ್ಯಾಟರ್‌ ಆಗಲಿಲ್ಲ. ನಾನು ಪರ್ಸ್‌ನಲ್‌ ಆಗಲಿ ಅಥವಾ ಪ್ರೊಫೆಶನಲ್ ಆಗಲಿ‌, ಟೈಂ ಮತ್ತು ಮುಹೂರ್ತ ನೋಡುವುದಕ್ಕೆ ಹೋಗೋದಿಲ್ಲ. ನಾನು ಶಾಸ್ತ್ರಗಳನ್ನು ನಂಬುತ್ತೇನೆ. ಆದರೆ, ಫಾಲೋ ಮಾಡಲ್ಲ ಎಂದು ನಟ ಹೇಳಿದ್ದರು.

ಇದು ಕೆಟ್ಟ ಮುಹೂರ್ತ ಹೋಗಬೇಡ ಎಂದು ಹೇಳಿದರೆ ನಾನು ಹೋಗಲ್ಲ. ಯಾರ ಮುಖಾಂತರವಾದರೂ ಗೊತ್ತಾದರೆ ನಾನು ಪಾಲಿಸುತ್ತೇನೆ. ನಾನಾಗಿಯೇ ಹುಡುಕಿಕೊಂಡು ಹೋಗಿ ಮಾಡುವವನಲ್ಲ. ನಾನು ಮದುವೆ ಆಗಿದ್ದು, ನನ್ನ ಪ್ರೊಡಕ್ಷನ್ ಮೂಲಕ ಬಂದ ಕೃಷ್ಣಲೀಲಾ ಮಾಡಿದ್ದು ತಪ್ಪಾದ ಮುಹೂರ್ತದಲ್ಲಿ. ನನ್ನ ಯುದ್ಧಕಾಂಡ ಸಿನಿಮಾ ಮಾಡಿದ್ದು ಯಾವ ಮುಹೂರ್ತ ಅನ್ನೋದು ಗೊತ್ತಿಲ್ಲ. ಸಿನಿಮಾ ಡಿಸಾಸ್ಟರ್ ಕಣೋ ಅಂದಿದ್ರು. ತಪ್ಪಾದ ಮುಹೂರ್ತದಲ್ಲಿ ವಿವಾಹ ಆಗಿದ್ದೀಯಾ ಹೀಗಾಗಿ, ನಿನ್ನ ಮದುವೆ ಒಂದು ವರ್ಷವೂ ಇರಲ್ಲ, ಡಿವೋರ್ಸ್​ ಆಗುತ್ತದೆ ಎಂದು ಜ್ಯೋತಿಷಿಯೊಬ್ಬರು ಹೇಳಿದ್ದರು ಎಂದು ನಟ ಹೇಳಿದ್ದರು.

ಮದುವೆಯಾದ ಮುಹೂರ್ತದಲ್ಲಿ, ʻನೀವಿಬ್ಬರು ಒಂದು ವರ್ಷವೂ ಜತೆ ಇರಲ್ಲ, ಡಿವೋರ್ಸ್‌ ಆಗುತ್ತೆʼ ಅಂದಿದ್ದರು. ಆದರೆ ನಾನು ಯಾವ ಮುಹೂರ್ತವೂ ನೋಡಲ್ಲ. ನನಗೆ ಜ್ಯೋತಿಷ್ಯ ಓದುವುದಕ್ಕೆ ಬರುತ್ತೆ. ನಾನು ಸ್ಟಡಿ ಮಾಡಿದಾಗ, ಹೌದಲ್ವಾ ಇದು ತಪ್ಪು ಮುಹೂರ್ತ ಅನ್ನೋದು ನಂತರ ಗೊತ್ತಾಯ್ತು. ಆದರೆ ಎಲ್ಲವೂ ಸರಿಯಿದೆ. ಸಿನಿಮಾ ಕೂಡ ಬ್ಲಾಕ್‌ ಬಸ್ಟರ್‌ ಹಿಟ್‌ ಆಯ್ತು. ಜೀವನದಲ್ಲಿ ಏನೂ ಬಂದರೂ ನಾನು ಸ್ವೀಕರಿಸುತ್ತೇನೆ ಎಂದು ನಟ ಅಜಯ್‌ ರಾವ್‌ ಹೇಳಿಕೊಂಡಿದ್ದರು.

ಈ ಸುದ್ದಿಯನ್ನೂ ಓದಿ | Actor Ajay Rao: ಸ್ಯಾಂಡಲ್‌ವುಡ್‌ ನಟ ಅಜಯ್‌ ರಾವ್‌ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ಗೆ ಅರ್ಜಿ

ಅಜಯ್ ರಾವ್ ಮತ್ತು ಸ್ವಪ್ನ ರಾವ್ ಇಬ್ಬರು ಪ್ರೀತಿಸಿ 2014ರ ಡಿಸೆಂಬರ್ 18ರಲ್ಲಿ ಮದುವೆ ಆಗಿದ್ದರು. ಈ ಜೋಡಿಯದ್ದು ಲವ್‌ ಕಂ ಅರೇಂಜ್‌ ಮ್ಯಾರೇಜ್‌. ಇಬ್ಬರ ಪರಿಚಯ ಸ್ನೇಹಕ್ಕೆ ಮತ್ತು ಸ್ನೇಹ ಪ್ರೀತಿಗೆ ತಿರುಗಿ ನಂತರ ಸಪ್ತಪದಿ ತುಳಿದಿದ್ದರು. ಸದ್ಯ ಈ ಜೋಡಿಗೆ ಚೆರಿಷ್ಮಾ ಎಂಬ ಹೆಸರಿನ ಮುದ್ದಾದ ಮಗಳಿದ್ದಾಳೆ. 11 ವರ್ಷಗಳ ಬಳಿಕ ಅಜಯ್‌ರಾವ್‌ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ತಿಳಿದುಬಂದಿದೆ.