The Devil First Day Collection: ‘ಡೆವಿಲ್’ಅಬ್ಬರ! ಮೊದಲ ದಿನ ಸಿನಿಮಾ ಕಲೆಕ್ಷನ್ ಮಾಡಿದ್ದೆಷ್ಟು ಗೊತ್ತಾ?
Box Office Collection:ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ಡಿ. 11 ರಂದು ಅದ್ಧೂರಿಯಾಗಿ ತೆರೆ ಕಂಡಿತ್ತು. ನಟ ದರ್ಶನ್ ಅವರು ಜೈಲಿನಲ್ಲಿರುವಾಗಲೇ ‘ಡೆವಿಲ್’ ಸಿನಿಮಾ ರಿಲೀಸ್ ಆಗಿದೆ. ನಿನ್ನೆ ಬಹುತೇಕ ಥಿಯೇಟರ್‌ಗಳು ಹೌಸ್‌ಫುಲ್ ಆಗಿದೆ. ಇದೀಗ ಡೆವಿಲ್ ಮೊದಲ ದಿನದ ಕಲೆಕ್ಷನ್ ಬಗ್ಗೆ ಸಖತ್ ಸುದ್ದಿಯಾಗುತ್ತಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ಲೆಕ್ಕ ನೀಡುವ sacnilk ಈಗ ಡೆವಿಲ್ ಸಿನಿಮಾ ಕಲೆಕ್ಷನ್ ಬಗ್ಗೆ ಮಾಹಿತಿ ನೀಡಿದೆ.
ನಟ ದರ್ಶನ್ -
ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ನಟನೆಯ ದಿ ಡೆವಿಲ್ (The Devil Movie) ಸಿನಿಮಾ ಡಿ. 11 ರಂದು ಅದ್ಧೂರಿಯಾಗಿ ತೆರೆ ಕಂಡಿತ್ತು. ನಟ ದರ್ಶನ್ ಅವರು ಜೈಲಿನಲ್ಲಿರುವಾಗಲೇ ‘ಡೆವಿಲ್’ ಸಿನಿಮಾ (Devil Movie) ರಿಲೀಸ್ ಆಗಿದೆ. ನಿನ್ನೆ ಬಹುತೇಕ ಥಿಯೇಟರ್‌ಗಳು ಹೌಸ್‌ಫುಲ್ ಆಗಿದೆ. ಇದೀಗ ಡೆವಿಲ್ ಮೊದಲ ದಿನದ ಕಲೆಕ್ಷನ್ ಬಗ್ಗೆ ಸಖತ್ ಸುದ್ದಿಯಾಗುತ್ತಿದೆ. ಬಾಕ್ಸ್ ಆಫೀಸ್ (Box Office) ಕಲೆಕ್ಷನ್ ಲೆಕ್ಕ ನೀಡುವ sacnilk ಈಗ ಡೆವಿಲ್ ಸಿನಿಮಾ ಕಲೆಕ್ಷನ್ (Collection) ಬಗ್ಗೆ ಮಾಹಿತಿ ನೀಡಿದೆ. ಮೊದಲ ದಿನ ಕಲೆಕ್ಷನ್ ಮಾಡಿದ್ದು ಎಷ್ಟು?
ಕಲೆಕ್ಷನ್ ಎಷ್ಟು?
‘ಡೆವಿಲ್ ಸಿನಿಮಾ ರಿಲೀಸ್ ಆಗುವ ಸಂದರ್ಭದಲ್ಲಿ ದರ್ಶನ್ ಜೈಲಿನಲ್ಲಿದ್ದಾರೆ. ಸಿನಿಮಾ ಪ್ರಚಾರವನ್ನ ಸ್ವತಃ ವಿಜಯಲಕ್ಷ್ಮಿ ವಹಿಸಿಕೊಂಡಿದ್ದರು. ಫ್ಯಾನ್ಸ್ ಕೂಡ ಪ್ರಚಾರಕ್ಕೆ ಸಪೋರ್ಟ್ ಮಾಡಿದ್ದರು. ‘ಡೆವಿಲ್’ ಸಿನಿಮಾ ಮೊದಲ ದಿನ 10 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು sacnilk ವರದಿ ಮಾಡಿದೆ. ಇದು ಕರ್ನಾಟಕದ ಕಲೆಕ್ಷನ್ ಮಾತ್ರ.
ಪಿವಿಆರ್, ಐನಾಕ್ಸ್ ಸೇರಿದಂತೆ ಬಹುತೇಕ ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ದರ ಕನಿಷ್ಠ 500 ರೂಪಾಯಿ ಇಂದ ಆರಂಭ ಆಗಿತ್ತು. ಏಕಪರದೆಯಲ್ಲಿ 400 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿತ್ತು. ದಿ ಡೆವಿಲ್ ಡೇ 1 ಕನ್ನಡ (2D) ಚಿತ್ರಮಂದಿರಗಳಲ್ಲಿ , ಬೆಳಗ್ಗೆ ಪ್ರದರ್ಶನಗಳು: 60.44%, ಮಧ್ಯಾಹ್ನ ಪ್ರದರ್ಶನಗಳು: 51.74%, ಸಂಜೆ ಪ್ರದರ್ಶನಗಳು: 63.47% ರಾತ್ರಿ ಪ್ರದರ್ಶನಗಳು: 79.34% ಆಗಿವೆ.
ಬಹಳ ವರ್ಷಗಳ ನಂತರ ಪೊಲಿಟಿಕಲ್ ಕಂಟೆಟ್ ಇರುವ ಸಿನಿಮಾದಲ್ಲಿ ದರ್ಶನ್ ಮಿಂಚಿದ್ದಾರೆ. ಇದ್ರೆ ನೆಮ್ಮದಿಯಾಗಿರಬೇಕು ಸಾಂಗ್ ನೋಡಲು ಚೆಂದ. ರಚನಾ ರೈ ತೆರೆ ಮೇಲೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ದರ್ಶನ್ ಫ್ಯಾನ್ಸ್‌ಗೆ ಹಬ್ಬದಂತಿದೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ವಿಲನ್ ಆದ್ರೆ, ರಕ್ಷಿತಾ ಕುತಂತ್ರಿ ಎಂದ ಕಾವ್ಯ!
ಕೃಷ್ಣ – ರುಕ್ಮಿಣಿಯಾಗಿ ದರ್ಶನ್ ಮತ್ತು ರಚನಾ ರೈ ಅಭಿನಯಿಸಿದ್ದಾರೆ. ಪೊಲಿಟಿಕಲ್ ಕಹಾನಿ ನಡುವೆ ಲವ್ ಸ್ಟೋರಿ ಕೂಡ ಈ ಚಿತ್ರದಲ್ಲಿ ಇದೆ.ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ದರ್ಶನ್. ಒಬ್ಬ ಸಿಂಪಲ್ ಮ್ಯಾನ್. ಇನ್ನೊಬ್ಬ ಮನುಷ್ಯ ರೂಪದ ರಾಕ್ಷಸ. ದ್ವಿಪಾತ್ರದ ಕಾರಣದಿಂದ ಕಥೆಗೆ ಟ್ವಿಸ್ಟ್ ಇದೆ ಅಂತ ಹಂಚಿಕೊಂಡಿದ್ದಾರೆ ಫ್ಯಾನ್ಸ್.