ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ಝಾಂಬಿ ಡ್ರಗ್ಸ್! ನಿಂತಲ್ಲೇ ನಿಂತಿದ್ದ ಯುವಕನನ್ನು ಕಂಡು ನಟ ʻದುನಿಯಾʼ ವಿಜಯ್ ಹೇಳಿದ್ದೇನು?

Zombie Drug In Bengaluru: ಬೆಂಗಳೂರಿನಲ್ಲಿ ಝಾಂಬಿ ಡ್ರಗ್ಸ್ ಸೇವಿಸಿದ ಯುವಕನೊಬ್ಬ ರಸ್ತೆ ಮಧ್ಯೆ ಚಲನೆಯಿಲ್ಲದೆ ನಿಂತಿರುವ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ 'ದುನಿಯಾ' ವಿಜಯ್, ಈ ಡ್ರಗ್ ಬಗ್ಗೆ ತನಿಖೆ ನಡೆಸಲು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಈಚೆಗೆ ದೇಶಾದ್ಯಂತ ಝಾಂಬಿ ಡ್ರಗ್ಸ್ ಭಾರಿ ಸದ್ದು ಮಾಡುತ್ತಿದೆ. ಈಗಾಗಲೇ ದೇಶದ ವಿವಿಧ ನಗರಗಳಲ್ಲಿ ಇದನ್ನು ಸೇವಿಸಿದ ವ್ಯಕ್ತಿಗಳು ನಿಂತಲ್ಲಿಯೇ ನಿಲ್ಲುವ ವಿಲಕ್ಷಣ ಬೆಳವಣಿಗೆಳು ಕಂಡುಬಂದಿವೆ. ಆತಂಕಕಾರಿ ವಿಚಾರ ಏನೆಂದರೆ, ಬೆಂಗಳೂರಿನಲ್ಲೂ ಇದನ್ನು ಸೇವಿಸಿದ ಯುವಕನೊಬ್ಬ ರಸ್ತೆ ಮಧ್ಯೆ ನಿಂತಲ್ಲೇ ನಿಂತಿದ್ದಾನೆ. ಈಗಾಗಲೇ ಆ ವ್ಯಕ್ತಿಯ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದರ ಬಗ್ಗೆ ಈಗ ನಟ ದುನಿಯ ವಿಜಯ್‌ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ವಿಡಿಯೋ ಮೂಲಕ ಸಂದೇಶ ನೀಡಿದ ದುನಿಯ ವಿಜಯ್

"ನಾವು ‘ಭೀಮ’ ಸಿನಿಮಾನಲ್ಲಿ ಗಾಂಜಾ, ಟೈಡಲ್ ಮತ್ತು ಇತರೆ ಕೆಲ ಡ್ರಗ್ಸ್ ಬಗ್ಗೆ ಮಾತನಾಡಿದ್ದೆವು. ಅವುಗಳ ವಿರುದ್ಧ ಜಾಗೃತಿ ಮೂಡಿಸುವ ಪ್ರಯತ್ನವನ್ನು ಕೂಡ ಮಾಡಿದ್ದೆವು. ಈಗ ಝಾಂಬಿ ಹೆಸರಿನ ಡ್ರಗ್ ಬಂದಿದೆ ಎಂಬ ಮಾತು ಕೇಳಿಬಂದಿದೆ. ಈ ಕುರಿತು ಯುವಕರು ಮತ್ತು ಪೋಷಕರು ಜಾಗೃತವಾಗಿರಬೇಕು. ಇದರ ವ್ಯಸನಕ್ಕೆ ಯುವ ಜನಾಂಗ ಬಲಿಯಾಗಬಾರದು" ಎಂದು ನಟ ವಿಜಯ್ ಮನವಿ ಮಾಡಿಕೊಂಡಿದ್ದಾರೆ.

Duniya Vijay: ಮತ್ತೊಂದು ತೆಲುಗು ಚಿತ್ರದಲ್ಲಿ ದುನಿಯಾ ವಿಜಯ್‌; ಪುರಿ ಜಗನ್ನಾಥ್-ವಿಜಯ್‌ ಸೇತುಪತಿ ಸಿನಿಮಾಕ್ಕೆ ಎಂಟ್ರಿ

ಇಂತಹವರು ಕಂಡರೆ ಪೊಲೀಸರಿಗೆ ಮಾಹಿತಿ ನೀಡಿ

"ಈ ಝಾಂಬಿ ಡ್ರಗ್ಸ್ ನಿಜವಾ? ಸುಳ್ಳಾ? ಎಂಬುದನ್ನು ಪೊಲೀಸರು ಕೂಡಲೇ ತನಿಖೆ ಮಾಡಬೇಕಿದೆ. ಈಗಾಗಲೇ ಮಾದಕ ವಸ್ತು ನಿಗ್ರಹಕ್ಕೆ ಪೊಲೀಸರು ಸಾಕಷ್ಟು ಕೆಲಸ ಮಾಡಿದ್ದಾರೆ. ಈ ಹೊಸ ರೀತಿಯ ಡ್ರಗ್ಸ್ ಬಗ್ಗೆ ಅವರು ತನಿಖೆ ನಡೆಸಿ ಇದರಿಂದ ಯುವ ಜನಾಂಗವನ್ನು ರಕ್ಷಿಸಬೇಕು ಎಂದು ನಾನು ಕರ್ನಾಟಕ ಪೊಲೀಸರ ಬಳಿ ಮನವಿ ಮಾಡುತ್ತೇನೆ. ಜೊತೆಗೆ ಈ ರೀತಿ ಝಾಂಬಿ ಡ್ರಗ್ಸ್ ಅಥವಾ ಅದನ್ನು ತೆಗೆದುಕೊಂಡಿರುವವರು ನಿಮ್ಮ ಪ್ರದೇಶದಲ್ಲಿ ಕಂಡರೆ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ನಾನು ಯುವಕರಲ್ಲಿ ಮನವಿ ಮಾಡುತ್ತೇನೆ" ಎಂದು ದುನಿಯಾ ವಿಜಯ್‌ ಅವರು ತಿಳಿಸಿದ್ದಾರೆ.

SIIMA Awards 2025: ಸೈಮಾ ಪ್ರಶಸ್ತಿ ವಿತರಣೆ ವೇಳೆ ಕನ್ನಡಿಗರಿಗೆ ಅವಮಾನ; ದುನಿಯಾ ವಿಜಯ್‌ ಆಕ್ರೋಶ

ಈಚೆಗೆ ಚಂಡೀಗಢದಲ್ಲಿ ವ್ಯಕ್ತಿಯೊಬ್ಬ ವಸತಿ ಪ್ರದೇಶದಲ್ಲಿ ಸುಮಾರು 2 ಗಂಟೆಗಳ ಕಾಲ ನಿಂತಲ್ಲೇ ನಿಂತಿದ್ದ. ಅರೆ ಪ್ರಜ್ಞಾವಸ್ಥೆಯಲ್ಲಿದ್ದಂತೆ ಕಂಡುಬಂದ ಆ ವ್ಯಕ್ತಿ ಯಾವುದೇ ಚಲನೆ ಇಲ್ಲದೆ ಹಾಗೆಯೇ ನಿಂತುಕೊಂಡಿದ್ದ. ಆ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ದುನಿಯಾ ವಿಜಯ್‌ ಅವರ ಪೋಸ್ಟ್‌



ಝಾಂಬಿ ಡ್ರಗ್‌ ಅಂದ್ರೇನು?

ಮೂಲತಃ ಪ್ರಾಣಿಗಳಿಗೆ ಬಳಸಲಾಗುವ 'ಕ್ಸೈಲಜಿನ್' (Xylazine) ಎಂಬ ಅರಿವಳಿಕೆ ಅಥವಾ ಟ್ರ್ಯಾಂಕ್ವಿಲೈಜರ್ ಅನ್ನು 'ಝಾಂಬಿ ಡ್ರಗ್' ಎಂದು ಕರೆಯಲಾಗುತ್ತದೆ. ಪ್ರಾಣಿಗಳ ನೋವು ಶಮನಗೊಳಿಸಲು ಮತ್ತು ಅವುಗಳನ್ನು ಶಾಂತಗೊಳಿಸಲು ಈ ಔಷಧವನ್ನು ಬಳಸಲಾಗುತ್ತದೆ. ಆದರೆ ಇತ್ತೀಚೆಗೆ ಇದನ್ನು ಫೆಂಟನಿಲ್, ಹೆರಾಯಿನ್ ಮತ್ತು ಮಾರ್ಫಿನ್‌ನಂತಹ ಮಾದಕ ದ್ರವ್ಯಗಳೊಂದಿಗೆ ಬೆರೆಸಿ ಮಾರಾಟ ಮಾಡಲಾಗುತ್ತಿದೆ. ಈ ದ್ರವ್ಯವನ್ನು ಸೇವಿಸಿದ ಮನುಷ್ಯರು ತಮ್ಮ ಪ್ರಜ್ಞೆ ಕಳೆದುಕೊಂಡು, ದೇಹದ ಮೇಲೆ ಹತೋಟಿಯಿಲ್ಲದೆ ವಿಚಿತ್ರವಾಗಿ ವರ್ತಿಸುವುದರಿಂದ ಇದಕ್ಕೆ ಝಾಂಬಿ ಡ್ರಗ್‌ ಎಂಬ ಹೆಸರು ಬಂದಿದೆ.