ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻನಾಚಿಕೆ ಇಲ್ಲದವರು, ಮಗಳ ವಯಸ್ಸಿನ ಹುಡುಗಿ ಜೊತೆ ಓಡಾಡ್ತಿದ್ದಾರೆʼ; ಪತ್ನಿಯ ಕೀಳುಮಟ್ಟದ ಲೇವಡಿಗೆ ನಟ ಗೋವಿಂದಾ ಖಡಕ್‌ ತಿರುಗೇಟು!

ಬಾಲಿವುಡ್ ನಟ ಗೋವಿಂದಾ ಮತ್ತು ಪತ್ನಿ ಸುನೀತಾ ಅಹುಜಾ ನಡುವಿನ ಜಟಾಪಟಿ ತೀವ್ರಗೊಂಡಿದೆ. ನಟಿ ಕೋಮಲ್ ರಾಣಿ ಜೊತೆ ಕಾಣಿಸಿಕೊಂಡಿದ್ದಕ್ಕೆ ಪತ್ನಿ ಲೇವಡಿ ಮಾಡಿದ್ದಕ್ಕೆ ಗೋವಿಂದಾ ತಿರುಗೇಟು ನೀಡಿದ್ದಾರೆ. ತಮ್ಮ ವೃತ್ತಿಪರ ಕೆಲಸಗಳಿಗೆ ಅಡ್ಡಿಪಡಿಸದೆ ಮಿತಿಯಲ್ಲಿದ್ದರೆ ಒಳಿತು ಎಂದು ಎಚ್ಚರಿಸಿದ್ದಾರೆ.

ಬಾಲಿವುಡ್‌ನ ಖ್ಯಾತ ನಟ ಗೋವಿಂದಾ ಮತ್ತು ಅವರ ಪತ್ನಿ ಸುನೀತಾ ಅಹುಜಾ ನಡುವಿನ ಕೌಟುಂಬಿಕ ಜಟಾಪಟಿ ಇದೀಗ ಬೀದಿಗೆ ಬಿದ್ದಿದೆ. ತಮ್ಮ ಮುಂದಿನ ಚಿತ್ರದ ನಾಯಕಿ ಕೋಮಲ್ ರಾಣಿ ಸ್ವರ್ಣಕಾರ್ ಅವರೊಂದಿಗೆ ಗೋವಿಂದಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರ ಬಗ್ಗೆ ಸುನೀತಾ ಗಂಭೀರ ಹೇಳಿಕೆ ನೀಡಿದ್ದರು. ಇದರಿಂದ ಸಿಟ್ಟಿಗೆದ್ದಿರುವ ನಟ ಗೋವಿಂದಾ ಬಹಿರಂಗ ವಿಡಿಯೋ ಮೂಲಕ ಪತ್ನಿಗೆ ಖಡಕ್‌ ರಿಪ್ಲೈ ನೀಡಿದ್ದಾರೆ.

ಪತ್ನಿ ವಿರುದ್ಧ ಗೋವಿಂದಾ ಅಸಮಾಧಾನ

ಸುನೀತಾ ತಮ್ಮ ವೃತ್ತಿಪರ ಕೆಲಸದಲ್ಲಿ ಅನಗತ್ಯವಾಗಿ ಮೂಗು ತೂರಿಸುತ್ತಿದ್ದಾರೆ ಮತ್ತು ಸಾರ್ವಜನಿಕವಾಗಿ ತಮ್ಮ ಘನತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಗೋವಿಂದಾ ದೂರಿದ್ದಾರೆ. "ನನ್ನ ಕೆಲಸ ನಡೆಯುವುದು ಮನೆಯ ಹೊರಗೆ. ಹಿಂದೆ ಸುನೀತಾ ತಮ್ಮ ಶೋಗಳಾದ 'ಮಾ ಹೈ ನಾ' ಮತ್ತು 'ಲಾಕ್ ಅಪ್ ಸೀಸನ್ 2' ಸಂದರ್ಭದಲ್ಲಿ ಮಗಳು ಟೀನಾ ಮೂಲಕ ನನ್ನ ಬೆಂಬಲ ಪಡೆದಿದ್ದರು. ಆದರೆ, ನಾನೀಗ ಹೊಸ ಪ್ರಾಜೆಕ್ಟ್ ಆರಂಭಿಸುತ್ತಿದ್ದಂತೆ ಅಪಖ್ಯಾತಿ ತರಲು ಮತ್ತು ವ್ಯವಹಾರಕ್ಕೆ ನಷ್ಟವುಂಟು ಮಾಡಲು ಯತ್ನಿಸುತ್ತಿದ್ದಾರೆ" ಎಂದು ಗೋವಿಂದಾ ಆರೋಪಿಸಿದ್ದಾರೆ.

ದಯವಿಟ್ಟು ನಿಮ್ಮ ಮಿತಿಯಲ್ಲಿರಿ

"ಸುನೀತಾ ಸಾರ್ವಜನಿಕವಾಗಿ ತೀರಾ ಕೆಟ್ಟ ಪದಗಳನ್ನು ಬಳಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಸಾರ್ವಜನಿಕ ವ್ಯಕ್ತಿಗಳು ಇಂತಹ ಭಾಷೆ ಬಳಸಬಾರದು. ಶ್ರೀಮಂತಿಕೆ ಇದೆ, ಅಧಿಕಾರವಿದೆ ಎಂಬ ಕಾರಣಕ್ಕೆ ಚಿತ್ರರಂಗಕ್ಕೆ ಹೊಸದಾಗಿ ಬರುವ ಸಾಮಾನ್ಯ ಹಿನ್ನೆಲೆಯ ಜನರನ್ನು ಸಾರ್ವಜನಿಕವಾಗಿ ಅವಮಾನಿಸುವುದು ಶೋಭೆ ತರುವುದಿಲ್ಲ. ಸುನೀತಾ ಅವರ ಬೆನ್ನ ಹಿಂದೆ ಒಂದು ಗುಂಪು ಕೆಲಸ ಮಾಡುತ್ತಿದೆ. ಪಾಡ್‌ಕ್ಯಾಸ್ಟ್‌ಗಳಲ್ಲಿ ನೀಡುತ್ತಿರುವ ಹೇಳಿಕೆಗಳನ್ನು ಪುನರ್‌ಪರಿಶೀಲಿಸಿ, ದಯವಿಟ್ಟು ನಿಮ್ಮ ಮಿತಿಯಲ್ಲಿರಿ. ಭವಿಷ್ಯದಲ್ಲಿ ನಿಮ್ಮ ವೃತ್ತಿಜೀವನಕ್ಕೆ ಮತ್ತೆ ನನ್ನ ಬೆಂಬಲ ಬೇಕಾಗಬಹುದು" ಎಂದು ಪತ್ನಿಗೆ ಗೋವಿಂದಾ ಎಚ್ಚರಿಸಿದ್ದಾರೆ.

Actor Govinda: 30 ವರ್ಷದ ಆ ನಟಿ ಜೊತೆ ಗೋವಿಂದಾ ಅಫೇರ್‌? ಡಿವೋರ್ಸ್ ಅರ್ಜಿ ಸಲ್ಲಿಸಿದ ಪತ್ನಿ ಸುನೀತಾ ಅಹುಜಾ!

ನಟಿಯ ವಯಸ್ಸಿನ ಅಂತರದ ಬಗ್ಗೆ ಪ್ರತಿಕ್ರಿಯೆ

"ದೇಶದ ಬಹುತೇಕ ಪ್ರಮುಖ ನಟರು ತಮಗಿಂತ ಕಿರಿಯ ವಯಸ್ಸಿನ ನಟಿಯರೊಂದಿಗೆ ನಟಿಸಿದ್ದಾರೆ. ಇದರಿಂದ ಹೊಸ ನಟಿಯರಿಗೆ ಉತ್ತಮ ಅವಕಾಶ ಸಿಕ್ಕರೆ, ನಾಯಕ ನಟರೂ ತೆರೆಯ ಮೇಲೆ ಯುವಕರಂತೆ ಕಾಣಿಸಿಕೊಳ್ಳಲು ಸಾಧ್ಯವಾಗುತ್ತದೆ. ಸಣ್ಣಪುಟ್ಟ ಅಸೂಯೆಗಳಿಗಾಗಿ ದೊಡ್ಡ ವ್ಯವಹಾರ ಮತ್ತು ಸಿನಿಮಾಗಳನ್ನು ಹಾಳುಮಾಡಲಾಗುತ್ತಿದೆ" ಎಂದು ಗೋವಿಂದಾ ಅವರು ಹೇಳಿದ್ದಾರೆ.

Sunita Ahuja: ಬಾಲಿವುಡ್ ನಟ ಗೋವಿಂದಾ ವಿಚ್ಛೇದನ ವದಂತಿಗೆ ಬ್ರೇಕ್‌? ಪತ್ನಿ ಸುನೀತಾ ಸ್ಪಷ್ಟನೆ ಏನು?

ಏನಿದು ವಿವಾದ?

ಆಗಸ್ಟ್ 14ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಗೋವಿಂದಾ ಮತ್ತು ನಟಿ ಕೋಮಲ್ ಒಟ್ಟಿಗೆ ಕಾಣಿಸಿಕೊಂಡಾಗ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಸುನೀತಾ ಅಹುಜಾ, "ಸಿನಿಮಾ ಸಿದ್ಧವಾಗುವ ಮುನ್ನವೇ ಪ್ರಚಾರವೇನು? ಮಗಳ ವಯಸ್ಸಿನ ಹುಡುಗಿಯೊಂದಿಗೆ ಸುತ್ತಾಡಲು ನಾಚಿಕೆಯಾಗಬೇಕು. ಆಕೆಯ ಶುಗರ್ ಡ್ಯಾಡಿ ಅಷ್ಟೊಂದು ಶ್ರೀಮಂತರಾಗಿದ್ದರೆ ಯೋಗ್ಯವಾದ ಬಟ್ಟೆ ಧರಿಸಬೇಕಿತ್ತು" ಎಂದು ಕಟುವಾಗಿ ಲೇವಡಿ ಮಾಡಿದ್ದರು.

ಗೋವಿಂದಾ ನೀಡಿದ ಪ್ರತಿಕ್ರಿಯೆ



ಯಾರಿದು ಕೋಮಲ್ ರಾಣಿ ಸ್ವರ್ಣಕಾರ್?

ಗೋವಿಂದಾ ನಿರ್ಮಿಸಿ, ಕಮ್‌ಬ್ಯಾಕ್ ಮಾಡುತ್ತಿರುವ 'ರೂಪಾ' ಚಿತ್ರದ ಮೂಲಕ ಕೋಮಲ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈಚೆಗೆ ಇವರಿಬ್ಬರು ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡ ಬಳಿಕ ಡೇಟಿಂಗ್ ವದಂತಿಗಳು ಹಬ್ಬಿದ್ದವು. ಆದರೂ ಈ ಬಗ್ಗೆ ಅವರಿಬ್ಬರೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.