ಚಂದನವನದ ನವರಸ ನಾಯಕ, ಭಿನ್ನವಾಗಿ ಕಾಮಿಡಿ ಮಾಡುವ ಮೂಲಕ ಕನ್ನಡಿಗರ ಮನಗೆದ್ದ ಜಗ್ಗೇಶ್ (Jaggesh) ಆಗಾಗ ಪೋಸ್ಟ್‌ಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇಬ್ಬರು ಮಕ್ಕಳು, ಸೊಸೆ, ಮೊಮ್ಮಗ ಮತ್ತು ಪತ್ನಿ ಬಗ್ಗೆ ಆಗಾಗ ಬರೆದುಕೊಳ್ಳುತ್ತಿರುತ್ತಾರೆ. ಮೊಮ್ಮಗ ಅರ್ಜುನ (Arjun) ಜೊತೆ ಕಾಲಕಳೆದ ಸಂತೋಷದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಸ್ನೇಹಿತರಂತೆ ಕಾಲಕಳೆದ ಕ್ಷಣ
ಜಗ್ಗೇಶ್ ಪೋಸ್ಟ್‌ನಲ್ಲಿ, ವಿರಾಮ ದಿನದಲ್ಲಿ ಜಗ್ಗಿತಾತ (ಅರ್ಜುನ ನನ್ನ ಕರೆಯೋದು ಹಾಗೆ) ಮೊಮ್ಮಗ ಅರ್ಜುನ coffeeday ಯಲ್ಲಿ ಸ್ನೇಹಿತರಂತೆ ಕಾಲಕಳೆದ ಕ್ಷಣ.
ಇದನ್ನೂ ಓದಿ: Dhurandhar 2: ನಿಗೂಢವಾಗೆ ಉಳಿದ ಬಡೇ ಸಾಬ್! ಧುರಂಧರ 2ನಲ್ಲಿ ಈ ಪಾತ್ರ ನಿರ್ವಹಿಸೋದು ಯಾರು?
ನಮ್ಮ ತಾತ ತೀರಿಕೊಂಡಾಗ ನಾನು 18 ವರ್ಷದ ಯುವಕ. ನಾನು ನಮ್ಮ ತಾತನ ಜೊತೆ ಹೀಗೆ ಕಾಲ ಕಳೆಯುತ್ತಿದ್ದೆ ಆದರೆ ಇಂಥ ಐಷರಾಮಿ ಜಾಗದಲ್ಲಿ ಅಲ್ಲಾ, ಬದಲಿಗೆ ರಸ್ತೆ ಬದಿಯ ತಳ್ಳೋಗಾಡಿ ಹೋಟೆಲ್ ನಲ್ಲಿ, ಕಾರಣ ತಾತ ಒಬ್ಬ ಸಣ್ಣ ರೈತ. ಆತನಿಗೆ ಹಣ ಹೇಗೆ ಎಲ್ಲಿ ವ್ಯಯಿಸಬೇಕು ಎಂದು ಚೆನ್ನಾಗಿ ಅರಿತಿದ್ದ. ಹಳ್ಳಿಯ ಅರ್ಥಶಾಸ್ತ್ರ ಪಂಡಿತ. ಅದೇ ಗುಣ ನನ್ನಲ್ಲೂ ಇದೆ. ನಮ್ಮ ತಾತ ನನಗೆ ಕೊಡಿಸುತ್ತಿದ್ದದ್ದು ಮಸಾಲೆವಡೆ. ಇಸ್ತ್ರಿ ಎಲೆ ಮೇಲೆ ವಡೆ ಪಡೆದು ಪುಟ್ಪಾತ್ ಮೇಲೆ ಕುಳಿತು ನಾವಿಬ್ಬರು ಮಾತಾನಾಡುತ್ತ ಗಂಟೆಗಟ್ಟಲೆ ಕೂರುತ್ತಿದ್ದೆವು.
ಇಷ್ಟದ ಮಲ್ಲೇಶ್ವರ
ರಾಜಣ್ಣನ ಸಿನಿಮಾ ಬಿಡುಗಡೆ ಆದರೆ ನಮ್ಮ ಇಷ್ಟದ ಮಲ್ಲೇಶ್ವರ #ಗೀತಾಂಜಲಿ ಚಿತ್ರಮಂದಿರದಲ್ಲಿ 70 ಪೈಸೆ ಟಿಕೆಟ್. ನಾವಿಬ್ಬರು ನೋಡಿದ ಚಿತ್ರಗಳು "ಆಪರೇಷನ್ ಡೈಮೆಂಡ್ ರಾಕೆಟ್, ಮೈಯೂರ, ಸಂಪತ್ತಿಗೆ ಸವಾಲ್, ಅಣ್ಣ ತಂಗಿ, ಬೂತಯ್ಯನ ಮಗ ಅಯ್ಯು, ನಾ ನಿನ್ನ ಮರೆಯಲಾರೆ, ಸನಾದಿ ಅಪ್ಪಣ್ಣ, ಶಂಕರ್ ಗುರು ಇನ್ನು ಹತ್ತಾರು.
ತಾತ ರಾಜಣ್ಣನ ಅಭಿಮಾನಿ
ತಾತ ರಾಜಣ್ಣನ ಅಭಿಮಾನಿ, ಅವರಿಂದ ನಾನೂ ರಾಜಣ್ಣನ ಅಭಿಮಾನಿ ಆದೆ. ತಾತ ಮೊಮ್ಮಕ್ಕಳಿಗೆ ದೇವತಾಮನುಷ್ಯ.ಮೊಮ್ಮಕ್ಕಳು ತಾತನಿಗೆ ಹರ್ಷದ ಹೊನಲು. ತಾತ ಅಜ್ಜಿಯ ಪ್ರೀತಿ ಮಾತ್ರ ಮೊಮ್ಮಕ್ಕಳ ಮಸ್ತಕದಲ್ಲಿ ಮರೆಲಾಗದ ಶಾಶ್ವತ ಆಸ್ತಿ.
ಇದನ್ನೂ ಓದಿ: Anasuya Bharadwaj: ನಟಿ, ನಿರೂಪಕಿ ಅನಸೂಯಾ ವಿರುದ್ಧ ಅಶ್ಲೀಲ ಪೋಸ್ಟ್; ಇಬ್ಬರ ಬಂಧನ
ನಾನು ಈಗ ತಾತನಾದರು ನನ್ನ ತಾತನ ನೆನೆದರೆ ಏನೋ ಒಂದು ರೀತಿ ಆನಂದ. ನಮ್ಮ ತಾತನ ಹೆಸರು ಕೆಂಪನಂಜೆಗೌಡ ಅಲಿಯಾಸ್ ಗಿರಿಜಾಮೀಸೆ ನಂಜೆಗೌಡ ಎಂದು ಬರೆದುಕೊಂಡಿದ್ದಾರೆ.