ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranveer Singh: ಎರಡೇ ದಿನಕ್ಕೆ 60 ಕೋಟಿ ರೂ. ಬಾಚಿಕೊಂಡ ʻಧುರಂಧರ್‌ʼ; ಬಾಕ್ಸ್‌ ಆಫೀಸ್‌ನಲ್ಲಿ ಮುಂದುವರಿದ ನಾಗಾಲೋಟ!

Dhurandhar Box Office Collection: ರಣವೀರ್‌ ಸಿಂಗ್, ಸಾರಾ ಅರ್ಜುನ್‌ ನಟನೆಯ ʻಧುರಂಧರ್ʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಎರಡೇ ದಿನಕ್ಕೆ 60 ಕೋಟಿ ರೂ. ಕಲೆಕ್ಷನ್‌ ಆಗಿದೆ. ʻಉರಿʼ ಸಿನಿಮಾ ಖ್ಯಾತಿಯ ಆದಿತ್ಯ ಧರ್‌ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

ರಣವೀರ್‌ ಸಿಂಗ್‌ ನಟನೆಯ ʻಧುರಂಧರ್ʼ‌ ಸಿನಿಮಾವು ಡಿಸೆಂಬರ್‌ 5ರಂದು ತೆರೆಕಂಡಿತ್ತು. ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ ಈ ಸಿನಿಮಾವೀಗ ಬಾಕ್ಸ್‌ ಆಫೀಸ್‌ನಲ್ಲಿ ತನ್ನ ನಾಗಾಲೋಟವನ್ನು ಮುಂದುವರಿಸಿದೆ. ಮೊದಲ ದಿನವೇ ಭಾರತದಲ್ಲಿ 28.60 ಕೋಟಿ ರೂ. ಗಳಿಕೆ ಮಾಡಿ, ಆರಂಭಿಕ ಮುನ್ನಡೆ ಸಾಧಿಸಿದ್ದ ʻಧುರಂಧರ್‌ʼ ಸಿನಿಮಾವು ಇದೀಗ ಕಲೆಕ್ಷನ್‌ ಅನ್ನು ಏರಿಸಿಕೊಂಡಿದೆ. ಎರಡನೇ ದಿನ ಮೊದಲ ದಿನಕ್ಕಿಂತ ಹೆಚ್ಚಿನ ಗಳಿಕೆ ಆಗಿದೆ.

ಎರಡು ದಿನಗಳಿಗೆ 61.70 ಕೋಟಿ ರೂ. ಗಳಿಕೆ

ಹೌದು, ಮೊದಲ ದಿನ ಭಾರತದಲ್ಲಿ 28.60 ಕೋಟಿ ರೂ. ಕಲೆಕ್ಷನ್‌ ಮಾಡಿದ್ದ ʻಧುರಂಧರ್ʼ‌ ಸಿನಿಮಾವು ಎಡರನೇ ದಿನ 33.10 ಕೋಟಿ ರೂ. ಗಳಿಸುವ ಮೂಲಕ ಕಲೆಕ್ಷನ್‌ನಲ್ಲಿ ಏರಿಕೆ ಕಂಡಿದೆ. ಅಲ್ಲಿಗೆ ಮೊದಲ ಎರಡು ದಿನಗಳಿಗೆ 61.70 ಕೋಟಿ ರೂ. ಕಲೆಕ್ಷನ್‌ ಆಗಿದೆ. ಇನ್ನು, ಭಾನುವಾರ ರಜಾ ದಿನವಾದ್ದರಿಂದ ಇಂದು ಕೂಡ 30 ಕೋಟಿ ರೂ. ಮೇಲೆ ಗಳಿಕೆ ಆಗುವ ನಿರೀಕ್ಷೆ ಇದೆ. ಅಲ್ಲಿಗೆ ಮೊದಲ ಮೂರು ದಿನಗಳಿಗೆ ಧುರಂಧರ್‌ ಚಿತ್ರದ ಗಳಿಕೆಯು 90+ ಕೋಟಿ ರೂ. ಆಗಲಿದೆ.

Dhurandhar 2: ಧುರಂಧರ್ 2 ರಿಲೀಸ್‌ ಡೇಟ್‌ ಕನ್‌ಫರ್ಮ್‌; ಯಶ್‌ 'ಟಾಕ್ಸಿಕ್' ಚಿತ್ರಕ್ಕೆ ರಣವೀರ್‌ ನೇರಾ ನೇರ ಸವಾಲು

ಅಂದಹಾಗೆ, ಇದು ಭಾರತದಲ್ಲಿನ ಗಳಿಕೆ ಆಗಿದ್ದು, ವಿಶ್ವಾದ್ಯಂತ ಈ ಚಿತ್ರವು ಎರಡು ದಿನಕ್ಕೆ 93.69 ಕೋಟಿ ರೂ. ಗಳಿಸಿದೆ ಎಂಬ ಮಾಹಿತಿ ಸಿಕ್ಕಿದೆ. ʻಧುರಂಧರ್ʼ ಚಿತ್ರಕ್ಕೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಗಳು ಸಿಕ್ಕಿವೆ. ರಣವೀರ್ ಮತ್ತು ಅಕ್ಷಯ್ ಖನ್ನಾ ಅವರ ಅಭಿನಯ ಮತ್ತು ಶಾಶ್ವತ್ ಸಚ್‌ದೇವ್ ಅವರ ಹಿನ್ನೆಲೆ ಸಂಗೀತಕ್ಕಾಗಿ ಪ್ರಶಂಸೆ ವ್ಯಕ್ತವಾಗಿದೆ. ಭಾರತೀಯ ಗೂಢಚಾರನ ಪಾತ್ರದಲ್ಲಿ ರಣವೀರ್ ನಟಿಸಿದ್ದಾರೆ.

Ranveer Singh: ಎರಡು ಭಾಗಗಳಲ್ಲಿ ಬರುತ್ತಾ ಧುರಂಧರ್? ರಣವೀರ್ ಸಿಂಗ್ ಮೂವಿಯಿಂದ ಬಂತು ಬಿಗ್‌ ಅಪ್‌ಡೇಟ್‌!

ʻಧುರಂಧರ್ʼ‌ ಸಿನಿಮಾದ ಬಜೆಟ್‌ ಎಷ್ಟು?

ರಣವೀರ್‌ ಸಿಂಗ್‌, ಸಾರಾ ಅರ್ಜುನ್‌ ನಟನೆಯ ʻಧುರಂಧರ್ʼ‌ ಸಿನಿಮಾಕ್ಕೆ 140 ಕೋಟಿ ರೂ. ಖರ್ಚು ಮಾಡಲಾಗಿದೆಯಂತೆ. ʻಉರಿʼ ಸಿನಿಮಾವನ್ನು ನಿರ್ದೇಶಿಸಿದ್ದ ಆದಿತ್ಯ ಧರ್ ಅವರು ʻಧುರಂಧರ್ʼ‌ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದು, ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ. ಜೊತೆಗೆ ಲೋಕೇಶ್‌ ಧರ್‌, ಜ್ಯೋತಿ ದೇಶಪಾಂಡೆ ಕೂಡ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ಅಂದಹಾಗೆ ಈ ಚಿತ್ರದ ಅವಧಿಯು 214 ನಿಮಿಷಗಳಿದ್ದು, ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ದೀರ್ಘಾವಧಿ ಸಿನಿಮಾ ಬಾಲಿವುಡ್‌ನಲ್ಲಿ ತೆರೆಕಂಡಿರಲಿಲ್ಲ. ಅಂದಹಾಗೆ, 'ಧುರಂಧರ್' ಕಥೆ ಇನ್ನೂ ಮುಕ್ತಾಯವಾಗಿಲ್ಲ, ಹಾಗಾಗಿ ಇದರ ಪಾರ್ಟ್‌ 2 ಕೂಡ ಸಿದ್ಧಗೊಂಡಿದೆ. ಅದನ್ನು ಮಾರ್ಚ್ 19 ರಂದು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಧುರಂಧರ್‌ ಕಲೆಕ್ಷನ್‌ ರಿಪೋರ್ಟ್



ಈ ಸಿನಿಮಾದಲ್ಲಿ ಯಾರೆಲ್ಲಾ ನಟಿಸಿದ್ದಾರೆ?

ಈ ಚಿತ್ರದಲ್ಲಿ ರಣವೀರ್‌ ಸಿಂಗ್ ಜೊತೆಗೆ ಸಾರಾ ಅರ್ಜುನ್‌, ಅಕ್ಷಯ್‌ ಖನ್ನಾ, ಮಾಧವನ್, ಸಂಜಯ್‌ ದತ್‌, ಅರ್ಜುನ್‌ ರಾಮ್‌ ಪಾಲ್‌, ರಾಕೇಶ್‌ ಬೇಡಿ, ನವೀನ್‌ ಕೌಶಿಕ್‌ ಮುಂತಾದವರು ನಟಿಸಿದ್ದಾರೆ.