ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಗೆಲುವಿನ ಅವಶ್ಯಕತೆ ತುಂಬಾ ಇದೆ. ಆ ಹಿನ್ನೆಲೆಯಲ್ಲಿ ಅವರೀಗ ಟಾಲಿವುಡ್‌ನತ್ತ ಕಣ್ಣಿಟ್ಟಿದ್ದಾರೆ. ಸದ್ಯ ʻಮಾತೃಭೂಮಿʼ ಸಿನಿಮಾದಲ್ಲಿ ಬ್ಯುಸಿ ಇರುವ ಅವರು ಕೆಲ ದಿನಗಳ ಹಿಂದಷ್ಟೇ ತೆಲುಗಿನ ಖ್ಯಾತ ನಿರ್ದೇಶಕ ವಂಶಿ ಪೈಡಿಪಲ್ಲಿ ಅವರ ಜೊತೆ ಕೈಜೋಡಿಸಿದ್ದರು. ಇದೀಗ ಟಾಲಿವುಡ್ ಮೂಲದ ʻದಿ ಫ್ಯಾಮಿಲಿ ಮ್ಯಾನ್ʼ ಖ್ಯಾತಿಯ ರಾಜ್ ಮತ್ತು ಡಿಕೆ ನಿರ್ದೇಶನದ ಹೊಸ ಚಿತ್ರಕ್ಕೂ ಸಲ್ಮಾನ್ ಖಾನ್ ಗ್ರೀನ್ ಸಿಗ್ನಲ್ ನೀಡಿರುವ ಮಾಹಿತಿ ಸಿಕ್ಕಿದೆ.
ಈ ಸಿನಿಮಾ ಯಾವಾಗ ಶುರು?
ಇನ್ನೂ, ಹೆಸರಿಡದ ಈ ಚಿತ್ರವನ್ನು ಸಲ್ಮಾನ್ ಬಾವ ಅತುಲ್ ಅಗ್ನಿಹೋತ್ರಿ ನಿರ್ಮಿಸುತ್ತಿದ್ದು, ತೆಲುಗಿನ ಮೈತ್ರಿ ಮೂವಿ ಮೇಕರ್ಸ್ ಸ್ಟುಡಿಯೋ ಕೂಡ ಪಾಲುದಾರರಾಗಿ ಕೈಜೋಡಿಸುವ ಕುರಿತು ಮಾತುಕತೆ ನಡೆಯುತ್ತಿದೆಯಂತೆ. ಸದ್ಯ ಈ ಸಿನಿಮಾವು ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದು, ತಾಂತ್ರಿಕ ಅಂಶಗಳು ಮತ್ತು ಚಿತ್ರದ ವಿನ್ಯಾಸದ ಕುರಿತು ಕೆಲಸ ನಡೆಯುತ್ತಿದೆ. ಅಕ್ಟೋಬರ್‌ನಿಂದ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. "ಇದು ಜಾಗತಿಕ ಪ್ರೇಕ್ಷಕರಿಗಾಗಿ ರೂಪಿಸಲಾದ ಭಾರಿ ಬಜೆಟ್‌ನ ಸೂಪರ್ ಹೀರೋ ಕಾನ್ಸೆಪ್ಟ್‌ನ ಸಿನಿಮಾ. ಎಲ್ಲಾ ಪೂರ್ವಸಿದ್ಧತೆಗಳು ಮತ್ತು ಪ್ರಿ-ವಿಶುವಲೈಸೇಶನ್ ಕೆಲಸ ಮುಗಿದ ನಂತರ, ಅಕ್ಟೋಬರ್‌ನಿಂದ ಚಿತ್ರೀಕರಣ ಪ್ರಾರಂಭಿಸುವ ಗುರಿಯನ್ನು ತಂಡ ಹೊಂದಿದೆ" ಎಂದು ಮೂಲಗಳು ತಿಳಿಸಿವೆ.
Salman Khan: ʻಸಲ್ಮಾನ್ ಖಾನ್ ಮುಂದೆ ನೃತ್ಯ ಮಾಡಲು ಹೆದರಿಕೆ ಆಗತ್ತೆʼ; ಹೀಗ್ಯಾಕೆ ಅಂದ್ರು ವರುಣ್ ಧವನ್
ಸಮಂತಾ ಹೆಸರು ಕೇಳಿಬಂದಿದ್ದೇಕೆ?
ಈ ಚಿತ್ರಕ್ಕೆ ನಾಯಕಿ ಯಾರು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಆದರೆ ಈ ಹಿಂದೆ ಸಮಂತಾ ನಾಯಕಿಯಾಗಲಿದ್ದಾರೆ ಎಂಬ ವದಂತಿಗಳು ಕೇಳಿಬಂದಿದ್ದವು. ಆದರೆ ಅದೆಲ್ಲವೂ ಕೇವಲ ವದಂತಿಗಳಷ್ಟೇ ಎನ್ನಲಾಗಿದೆ. ಸದ್ಯ ಕೆಲವು ನಟಿಯರ ಹೆಸರುಗಳನ್ನು ಫೈನಲ್ ಮಾಡಲಾಗಿದ್ದು, ಮುಂದಿನ ಎರಡು ತಿಂಗಳೊಳಗೆ ನಾಯಕಿ ಫೈನಲ್ ಆಗುವ ಸಾಧ್ಯತೆಯಿದೆ. ಇನ್ನು ಸಮಂತಾ ಹೆಸರು ಚರ್ಚೆ ಬರುವುದಕ್ಕೂ ಕಾರಣ ಇದೆ. ಅದೆನೆಂದರೆ, ಈ ಚಿತ್ರದ ನಿರ್ದೇಶಕದ್ವಯರದಲ್ಲಿ ಒಬ್ಬರಾದ ರಾಜ್ ಅವರು ಸಮಂತಾ ಅವರ ಪತಿ. ಹಾಗಾಗಿ, ಪತ್ನಿ ಸಮಂತಾಗೆ ಈ ಸಿನಿಮಾದಲ್ಲಿ ರಾಜ್ ಚಾನ್ಸ್ ನೀಡಲಿದ್ದಾರಾ ಎಂಬ ಮಾತುಗಳು ಕೇಳಿಬಂದಿದ್ದವು.
Salman Khan: ʻಮಾತೃಭೂಮಿʼ ಸಿನಿಮಾಗೆ ರೀ-ಶೂಟ್ ಮಾಡಿದ್ದೇಕೆ?
ಈ ಮಧ್ಯೆ ವಂಶಿ ಪೈಡಿಪಲ್ಲಿ ನಿರ್ದೇಶನದ ಹೆಸರಿಡದ ಆಕ್ಷನ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಬ್ಯುಸಿಯಾಗಿದ್ದಾರೆ. ಇದರಲ್ಲಿ ನಯನತಾರಾ ನಾಯಕಿಯಾಗಿ ನಟಿಸುತ್ತಿದ್ದು, 2027ರ ಈದ್ ಹಬ್ಬಕ್ಕೆ ಈ ಸಿನಿಮಾ ಬಿಡುಗಡೆಯಾಗಲಿದೆ. ಅಪೂರ್ವ ಲಖಿಯಾ ನಿರ್ದೇಶನದ 'ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್' ಸಿನಿಮಾದಲ್ಲಿ ಸಲ್ಮಾನ್ ನಟಿಸಿದ್ದು, ಇದು 2020ರ ಗಲ್ವಾನ್ ಕಣಿವೆ ಸಂಘರ್ಷದ ಕುರಿತಾದ ಈ ಚಿತ್ರವಾಗಿದೆ. ಲಡಾಖ್ ಮತ್ತು ಮುಂಬೈನಲ್ಲಿ ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರಾಂಗದಾ ಸಿಂಗ್ ಮತ್ತು ಅಭಿಲಾಷ್ ಚೌಧರಿ ಚಿತ್ರದ ಪ್ರಮುಖ ಕಾಣಿಸಿಕೊಂಡಿದ್ದಾರೆ.