ನವದೆಹಲಿ, ಡಿ. 28: ಭಾರತೀಯ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟಿಯಾದ ಹುಮಾ ಖುರೇಷಿ (Huma Qureshi) ಅವರಿಗೆ ಭಾರತೀಯ ಸಿನಿಮಾ ರಂಗದಲ್ಲಿ ಬಹುಬೇಡಿಕೆ ಇದೆ. ಮೋನಿಕಾ ಓ ಮೈ ಡಾರ್ಲಿಂಗ್, ಜಾಲಿ ಎಲ್ಎಲ್ ಬಿ 3, ಡಬಲ್ ಎಕ್ಸೆಲ್ ಸೇರಿದಂತೆ ಅನೇಕ ಹಿಟ್ ಸಿನಿಮಾದಲ್ಲಿ ಅಭಿನಯಿಸಿದ್ದ ಇವರು ಸದ್ಯ ರಾಕಿಂಗ್ ಸ್ಟಾರ್’ ಯಶ್ (Rocking Star Yash) ಅಭಿನಯದ ‘ಟಾಕ್ಸಿಕ್ ’(Toxic) ಸಿನಿಮಾದಲ್ಲಿ ಕೂಡ ಅಭಿನಯಿಸುತ್ತಿದ್ದಾರೆ. ಕೆಜಿಎಫ್: ಚಾಪ್ಟರ್ 2’ ಬಳಿಕ ಯಶ್ ಅವರ ಸಿನಿಮಾ ರಿಲೀಸ್ ಆಗಿರಲಿಲ್ಲ. ಇದೀಗ ‘ಟಾಕ್ಸಿಕ್’ ಸಿನಿಮಾ ರಿಲೀಸ್ ಗೆ ರೆಡಿಯಾಗುತ್ತಿದ್ದು ಈ ಸಿನಿಮಾ ಬಗ್ಗೆ ಹೊಸ ಹೊಸ ಅಪ್ಡೇಟ್ ಮಾಹಿತಿ ಕೇಳಿ ಬರುತ್ತಲೇ ಇದೆ. ಬಹುತೇಕ ಸ್ಟಾರ್ ಕಲಾವಿದರ ಸಂಗಮ ಈ ಸಿನಿಮಾದಲ್ಲಿ ಇರಲಿದ್ದು ಮಾಸ್ ಕಥೆಯೊಂದಿಗೆ ಪ್ರೇಕ್ಷಕರನ್ನು ಟಾಕ್ಸಿಕ್ ಸಿನಿಮಾ ರಂಜಿಸಲು ಸಜ್ಜಾಗುತ್ತಿದೆ. ಟಾಕ್ಸಿಕ್ ಸಿನಿಮಾ ರಿಲಿಸ್ ಗೂ ಮೊದಲೇ ಪ್ರೇಕ್ಷಕರಲ್ಲಿ ಹೊಸ ನಿರೀಕ್ಷೆ ಹುಟ್ಟು ಹಾಕುತ್ತಿದ್ದು ಸಿನಿಮಾದಲ್ಲಿ ನಟಿ ಹಿಮಾ ಖುರೇಷಿ ಅವರ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗಷ್ಟೆ ಬಿಡುಗಡೆಯಾಗಿದೆ. ಈ ಫೋಟೊ ಸಿನಿ ಪ್ರಿಯರಿಗೆ ಮತ್ತಷ್ಟು ನಿರೀಕ್ಷೆ ಹುಟ್ಟಿಸುತ್ತಿದ್ದು ಅವರು ಗ್ಲಾಮರಸ್ ಆದ ಗೆಟಪ್ನಲ್ಲಿ ಕಾಣಿಸಿ ಕೊಂಡಿದ್ದಾರೆ. ಸದ್ಯ ಇವರ ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದೆ.
ಗೀತು ಮೋಹನ್ ದಾಸ್ ಆ್ಯಕ್ಷನ್ ಕಟ್ ಹೇಳಿರುವ ಟಾಕ್ಸಿಕ್ ಸಿನಿಮಾಕ್ಕೆ ರಾಕಿಂಗ್ ಸ್ಟಾರ್ ಯಶ್ ಮತ್ತು ವೆಂಕಟ್ ಕೆ. ನಾರಾಯಣ್ ಅವರು ನಿರ್ಮಾಣ ಮಾಡಿದ್ದಾರೆ. ಟಾಕ್ಸಿಕ್ - ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್ ಎನ್ನುವುದು ಈ ಸಿನಿಮಾದ ಪೂರ್ತಿ ಹೆಸರಾಗಿದ್ದು ಯಶ್ ಸಿನಿಮಾದ ಪ್ರಧಾನ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಅಂತೆಯೇ ಇದೆ ಸಿನಿಮಾದಲ್ಲಿ ಕಿಯಾರ ಅಡ್ವಾಣಿ ಹಾಗೂ ಬಹುಭಾಷಾ ನಟಿ, ಲೇಡಿ ಸೂಪರ್ ಸ್ಟಾರ್ ನಯನ ತಾರ ಕೂಡ ಅಭಿನಯಿಸಲಿದ್ದಾರೆ. ಇದೀಗ ಇದೆ ಸಿನಿಮಾದಲ್ಲಿ ನಟಿ ಹಿಮಾ ಖುರೇಷಿ ಕೂಡ ಅಭಿನಯಿಸುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಈ ಚಿತ್ರದಲ್ಲಿ ಅವರು ಎಲಿಜಬೆತ್ ಪಾತ್ರದಲ್ಲಿ ನಟಿಸುತ್ತಿದ್ದು ಅವರ ಫಸ್ಟ್ ಲುಕ್ ಸಿನಿ ಪ್ರಿಯರ ಮನಗೆದ್ದಿದೆ.
ಎಲಿಜಬೆತ್ ಆಗಿ ಹುಮಾ ಖುರೇಷಿ
ವೈರಲ್ ಆದ ಫೋಟೊದಲ್ಲಿ ನಟಿ ಹಿಮಾ ಖುರೇಷಿ ಅವರು ಗ್ಲಾಮರ್ ಮತ್ತು ಸ್ಟನಿಂಗ್ ಆಗಿ ಕಂಡಿದ್ದಾರೆ. ಅವರ ಲುಕ್ ಪಾತ್ರದ ಬಗ್ಗೆ ಹೊಸ ಕುತೂಹಲ ಉಂಟು ಮಾಡುವಂತಿದೆ. ಅವರು ಸ್ಮಶಾನದ ಹಿನ್ನೆಲೆ ಉಳ್ಳ ಬ್ಯಾಕ್ ಗ್ರೌಂಡ್ ನಲ್ಲಿ ಕ್ಲಾಸಿಕ್ ಕಪ್ಪು ಬಣ್ಣದ ಥಿಯರೆಟಿಕಲ್ ಗೌನ್ ಅನ್ನು ಧರಿಸಿದ್ದು ವಿಭಿನ್ನವಾಗಿ ಕಂಡಿದ್ದಾರೆ.ಅನುರಾಗ್ ಕಶ್ಯಪ್ ಅವರ ಕ್ರೈಂ ಥ್ರಿಲ್ಲರ್ಸ್ ಗಳಾದ ಗ್ಯಾಂಗ್ಸ್ ಆಫ್ ವಾಸ್ಸೇಪುರ್, ದೇಧ್ ಇಷ್ಕಿಯಾ ಮತ್ತು ಬದ್ಲಾಪುರ್ ನಲ್ಲಿ ನಟಿಸಿ ಮೆಚ್ಚುಗೆ ಪಡೆದ ಖುರೇಷಿ ಅವರು ಇದೀಗ ಟಾಕ್ಸಿಕ್ ನಲ್ಲಿಯೂ ವಿಭಿನ್ನ ಪಾತ್ರ ಅಭಿನಯಿ ಸುತ್ತಿರುವಂತೆ ಅವರ ಫಸ್ಟ್ ಲುಕ್ ಪೋಸ್ಟರ್ ಸುಳಿವು ನೀಡಿದೆ.
Vikalpa Movie: ವಾಸ್ತವ ಮತ್ತು ಕಲ್ಪನೆಗಳ ನಡುವಿನ ʻವಿಕಲ್ಪʼ ಸಿನಿಮಾದಲ್ಲಿ ಥ್ರಿಲ್ಲರ್ ಕಥೆ
ಇತ್ತೀಚೆಗಷ್ಟೇ ಅವರ ನಟನೆಯ ದೆಹಲಿ ಕ್ರೈಮ್ ಸೀಸನ್ 3 ಸರಣಿಯು ನೆಟ್‌ಫ್ಲಿಕ್ಸ್ ನಲ್ಲಿ ತೆರೆ ಕಂಡಿದ್ದು ಪ್ರೇಕ್ಷಕರ ಮನಗೆದ್ದಿತ್ತು. ಟೊರೊಂಟೊ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದ ಬಿಕಾಸ್ ರಂಜನ್ ಮಿಶ್ರಾ ಅವರ ಬಯಾನ್ ಎಂಬ ಸಿನಿಮಾದಲ್ಲಿಯೂ ಇವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೀಗ ಅದರ ಬೆನ್ನಲ್ಲೆ ಟಾಕ್ಸಿಕ್ ಸಿನಿಮಾದಲ್ಲಿ ದೊಡ್ಡ ದೊಡ್ಡ ಪ್ಯಾನ್ ಇಂಡಿಯಾ ಸ್ಟಾರ್ ನಟ ನಟಿಯರ ಜೊತೆಗೆ ಟಾಕ್ಸಿಕ್ ನಲ್ಲಿ ಕೂಡ ನಟಿ ಹಿಮಾ ಖುರೇಷಿ ಕಾಣಿಸಿಕೊಂಡಿದ್ದು ಅವರ ಅಭಿಮಾನಿಗಳಿಗೆ ಈ ವಿಚಾರ ಖುಷಿ ತರಿಸಿದೆ.
ಟಾಕ್ಸಿಕ್ ಸಿನಿಮಾದಲ್ಲಿ ಹಿಮಾ ಅವರ ಪಾತ್ರದ ಬಗ್ಗೆ ನಿರ್ದೇಶಕಿ ಗೀತು ಮೋಹನ್ ದಾಸ್ ಕೆಲವು ಮಾಹಿತಿಯನ್ನು ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾರೆ. ಈ ಪಾತ್ರದ ಆಯ್ಕೆ ಬಹಳ ಕಷ್ಟ ವಾಗಿದ್ದು ಹುಮಾ ಅವರನ್ನು ನಾನು ಆಯ್ಕೆ ಮಾಡಿಬಿಟ್ಟೆ. ಸಮಸ್ಯೆಗಳ ಬಗ್ಗೆ ತನಿಖೆ ಮಾಡುವ, ಅದನ್ನು ಸವಾಲಾಗಿ ಸ್ವೀಕರಿಸುವ ಈ ಎಲಿಜಬೆತ್ ಪಾತ್ರಕ್ಕೆ ಅವರು ಜೀವತುಂಬಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಟಾಕ್ಸಿಕ್ ಸಿನಿಮಾವನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು ಇದನ್ನು ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಇತರ ಭಾಷೆಗಳಿಗೆ ಡಬ್ ಮಾಡಿದ ಆವೃತ್ತಿಗಳನ್ನು ಬಿಡುಗಡೆ ಮಾಡಲು ಕೂಡ ಸಿನಿಮಾ ತಂಡ ಯೋಜನೆ ರೂಪಿಸಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಮೂಲಕ ವೆಂಕಟ್ ಕೆ. ನಾರಾಯಣ ಮತ್ತು ಯಶ್ ನಿರ್ಮಿಸಿರುವ ಟಾಕ್ಸಿಕ್ ಸಿನಿಮಾ 2026ರ ಮಾರ್ಚ್ 19 ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ.