ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರಭಾಸ್ ನಟನೆಯ ‘ಸ್ಪಿರಿಟ್’ ಚಿತ್ರಕ್ಕೆ ಕತ್ರಿನಾ ಕೈಫ್ ಎಂಟ್ರಿ? ಮಹತ್ವದ ಪಾತ್ರಕ್ಕೆ ಬಾಲಿವುಡ್ ಬ್ಯೂಟಿ ಫಿಕ್ಸ್?

‘ರೆಬೆಲ್ ಸ್ಟಾರ್’ ಪ್ರಭಾಸ್ ನಟನೆಯ, ‘ಅನಿಮಲ್’ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಹೈ-ವೋಲ್ಟೇಜ್ ಆಕ್ಷನ್ ಸಿನಿಮಾ ‘ಸ್ಪಿರಿಟ್’ಗೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ ಸದ್ದು ಮಾಡುತ್ತಿದೆ. ಪ್ರಭಾಸ್ ಖಡಕ್ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿರುವ ಈ ಚಿತ್ರದ 40% ಶೂಟಿಂಗ್ ಪೂರ್ಣಗೊಂಡಿದೆ.

ಪ್ರಭಾಸ್ ನಟನೆಯ, 'ಅನಿಮಲ್' ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಬಹುನಿರೀಕ್ಷಿತ ಆಕ್ಷನ್ ಎಂಟರ್ಟೈನರ್ ‘ಸ್ಪಿರಿಟ್’ ಸಿನಿಮಾದ ಬಗ್ಗೆ ಕುತೂಹಲಕಾರಿ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಹೈ-ವೋಲ್ಟೇಜ್ ಆಕ್ಷನ್ ಸಿನಿಮಾದ ಮಹತ್ವದ ಪಾತ್ರವೊಂದಕ್ಕಾಗಿ ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಅವರನ್ನು ಸಂಪರ್ಕಿಸಲಾಗಿದೆ ಎಂಬ ಮಾತುಗಳು ಚಿತ್ರರಂಗದಲ್ಲಿ ಬಲವಾಗಿ ಕೇಳಿಬರುತ್ತಿವೆ. ಆದರೆ, ಈ ವದಂತಿಯ ಕುರಿತು ಚಿತ್ರತಂಡದಿಂದ ಯಾವುದೇ ಅಧಿಕೃತ ಸ್ಪಷ್ಟನೆ ಅಥವಾ ಪ್ರಕಟಣೆ ಹೊರಬಿದ್ದಿಲ್ಲ.

ನಾಯಕಿಯಲ್ಲ, ಆದರೆ ಬಿಗ್ ರೋಲ್!

ಪ್ರಭಾಸ್ ಅವರಿಗೆ ಜೋಡಿಯಾಗಿ ಈಗಾಗಲೇ ನಟಿ ತೃಪ್ತಿ ದಿಮ್ರಿ ಆಯ್ಕೆಯಾಗಿದ್ದಾರೆ. ಹೀಗಾಗಿ, ಕತ್ರಿನಾ ಕೈಫ್ ಅವರಿಗೆ ನೀಡಲಾಗಿರುವ ಆಫರ್ ನಾಯಕಿಯ ಪಾತ್ರದ್ದಲ್ಲ, ಬದಲಿಗೆ ಕಥೆಗೆ ದೊಡ್ಡ ತಿರುವು ನೀಡುವಂತಹ ಮತ್ತೊಂದು ಪ್ರಮುಖ ಪಾತ್ರಕ್ಕಾಗಿ ಎನ್ನಲಾಗಿದೆ. ಹಾಗಾಗಿ, ಇವರ ಪಾತ್ರವು ಪ್ರಭಾಸ್‌ ಜೊತೆಗೆ ಡ್ಯುಯೆಟ್‌ ಹಾಡಲಿದೆಯೋ ಅಥವಾ ಮುಖಾಮುಖಿಯಾಗಿ ಹೋರಾಡಲಿದೆಯೋ ಎಂಬುದು ಇನ್ನೂ ಗೊತ್ತಾಗಿಲ್ಲ.

ಈ ಆಫರ್‌ಗೆ ಕತ್ರಿನಾ ಸಮ್ಮತಿ ಸೂಚಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಒಂದು ವೇಳೆ ಕತ್ರಿನಾ ಈ ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್ ನೀಡಿದರೆ, ಪ್ರಭಾಸ್ ಮತ್ತು ಕತ್ರಿನಾ ಕೈಫ್ ಮೊದಲ ಬಾರಿಗೆ ತೆರೆ ಹಂಚಿಕೊಂಡಂತಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ದಕ್ಷಿಣ ಭಾರತದ ಚಿತ್ರಗಳಿಂದ ಅಂತರ ಕಾಯ್ದುಕೊಂಡಿರುವ ಕತ್ರಿನಾಗೆ, 'ಸ್ಪಿರಿಟ್' ಮೂಲಕ ಬೃಹತ್ ಪಾನ್-ಇಂಡಿಯಾ ಸಿನಿಮಾಕ್ಕೆ ಕಂಬ್ಯಾಕ್ ಮಾಡಲು ಉತ್ತಮ ವೇದಿಕೆ ಸಿಕ್ಕಂತಾಗಲಿದೆ.

Prakash Raj: Spirit ಚಿತ್ರದಿಂದ ಪ್ರಕಾಶ್​ ರಾಜ್​ ಔಟ್ ಆಗಿದ್ದು ಹೌದಾ? ನಿಜಕ್ಕೂ ಆಗಿದ್ದೇನು?

ಈಗಾಗಲೇ 40% ಶೂಟಿಂಗ್ ಕಂಪ್ಲೀಟ್

ಇತ್ತೀಚೆಗೆ ಅಮೆರಿಕದಲ್ಲಿ ನಡೆದ ತೆಲಂಗಾಣ ಟ್ಯಾಲೆಂಟ್ ಅಸೋಸಿಯೇಷನ್ (TTA) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, "ಚಿತ್ರದ ಶೇಕಡಾ 40 ರಷ್ಟು ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ" ಎಂದು ಮಾಹಿತಿ ನೀಡಿದ್ದರು. ಈ ಸಿನಿಮಾದಲ್ಲಿ ಪ್ರಭಾಸ್ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟಿ-ಸೀರೀಸ್ ಮತ್ತು ಭದ್ರಕಾಳಿ ಪಿಕ್ಚರ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ. ವೇಗವಾಗಿ ಚಿತ್ರೀಕರಣ ಮುಗಿಸಲು ಯೋಜಿಸಿರುವ ಚಿತ್ರತಂಡ, ಸಿನಿಮಾವನ್ನು 2027ರ ಮಾರ್ಚ್‌ನಲ್ಲಿ ವಿಶ್ವಾದ್ಯಂತ ತೆರೆಗೆ ತರಲು ಸಜ್ಜಾಗಿದೆ.