ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಜನಿಕಾಂತ್‌ ವಾಸ ಮಾಡ್ತಿರುವ ಏರಿಯಾದಲ್ಲೇ ಐಷಾರಾಮಿ ಮನೆ ಖರೀದಿಸಿದ ನಟಿ ನಯನತಾರಾ; ಇದರ ಬೆಲೆ ಎಷ್ಟು ಗೊತ್ತಾ?

Nayanthara's New Luxury Home: ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿ ಚೆನ್ನೈನ ಅತ್ಯಂತ ಹೈ-ಪ್ರೊಫೈಲ್ ಏರಿಯಾವಾದ ಪೊಯೆಸ್‌ ಗಾರ್ಡನ್‌ನಲ್ಲಿ ಐಷಾರಾಮಿ ಡ್ಯೂಪ್ಲೆಕ್ಸ್‌ ಅಪಾರ್ಟ್‌ಮೆಂಟ್‌ ಅನ್ನು ಖರೀದಿ ಮಾಡಿದ್ದಾರೆ. 'ಲೆಗಸಿ' ವಸತಿ ಸಂಕೀರ್ಣದ 4 ಮತ್ತು 5ನೇ ಮಹಡಿಯಲ್ಲಿ ಈ ಮನೆ ಇದೆ.

ದಕ್ಷಿಣ ಭಾರತದ ಅತ್ಯಂತ ಪ್ರಭಾವಿ ಸೆಲೆಬ್ರಿಟಿ ದಂಪತಿಗಳಲ್ಲಿ ಒಬ್ಬರಾದ ನಯನತಾರಾ ಮತ್ತು ವಿಘ್ನೇಶ್ ಶಿವನ್, ಚೆನ್ನೈನಲ್ಲಿ ಐಷಾರಾಮಿ ಡ್ಯೂಪ್ಲೆಕ್ಸ್‌ ಅಪಾರ್ಟ್‌ಮೆಂಟ್‌ ಅನ್ನು ಖರೀದಿ ಮಾಡಿದ್ದಾರೆ. ಇದರ ಬೆಲೆ ಸುಮಾರು 31.50 ಕೋಟಿ ರೂ. ಎಂದು ಹೇಳಲಾಗಿದೆ. ಅಂದಹಾಗೆ, ಐಷಾರಾಮಿ ಅಪಾರ್ಟ್‌ಮೆಂಟ್‌ ಇರುವುದು ಚೆನ್ನೈನ ಪ್ರತಿಷ್ಠಿತ ಪೊಯೆಸ್‌ ಗಾರ್ಡನ್ (Poes Garden) ಏರಿಯಾದಲ್ಲಿ ಎಂಬುದು ವಿಶೇಷ. ಇದು ತಮಿಳುನಾಡಿನ ಅತ್ಯಂತ ಪ್ರತಿಷ್ಠಿತ ಮತ್ತು ಹೈ-ಪ್ರೊಫೈಲ್ ಏರಿಯಾವಾಗಿದ್ದು, ಇಲ್ಲಿ ಹೆಚ್ಚಾಗಿ ರಾಜಕೀಯ ಮತ್ತು ಸಿನಿಮಾ ರಂಗದ ದಿಗ್ಗಜರು ವಾಸಿಸುತ್ತಿದ್ದಾರೆ.

ಐಷಾರಾಮಿ ಡ್ಯೂಪ್ಲೆಕ್ಸ್‌ ಅಪಾರ್ಟ್‌ಮೆಂಟ್‌ ವಿಶೇಷತೆಗಳೇನು?

ನಯನತಾರಾ ತಮ್ತು ವಿಘ್ನೇಶ್‌ ಶಿವನ್‌ ದಂಪತಿ ಖರೀದಿ ಮಾಡಿರುವ ಈ ಐಷಾರಾಮಿ ಡ್ಯೂಪ್ಲೆಕ್ಸ್‌ ಅಪಾರ್ಟ್‌ಮೆಂಟ್‌ ಪೋಯಸ್ ಗಾರ್ಡನ್‌ನಲ್ಲಿರುವ 'ಲೆಗಸಿ' ಎಂಬ ವಸತಿ ಸಂಕಿರ್ಣದಲ್ಲಿದೆ. ನಾಲ್ಕು ಮತ್ತು ಐದನೇ ಮಹಡಿಯಲ್ಲಿ ಈ ಡ್ಯೂಪ್ಲೆಕ್ಸ್‌ ಅಪಾರ್ಟ್‌ಮೆಂಟ್‌ ಇದ್ದು, ಒಟ್ಟು 14,369 ಚದರ ಅಡಿ ವಿಸ್ತೀರ್ಣ ಹೊಂದಿದೆ. ವ್ಯವಹಾರದ ಮೌಲ್ಯದ ಪ್ರಕಾರ ಪ್ರತಿ ಚದರ ಅಡಿಗೆ ಸುಮಾರು 21,946 ಬೆಲೆ ಬಾಳುತ್ತದೆ ಎಂಬುದು ಮೂಲಗಳ ಮಾಹಿತಿ.

Yash: ಗಂಗಾ ಪಾತ್ರದಲ್ಲಿ ಬೆರಗು ಮೂಡಿಸಿದ ನಯನತಾರಾ; ʻಟಾಕ್ಸಿಕ್‌ʼ ಸಿನಿಮಾದ ಮತ್ತೊಂದು ಬಿಗ್‌ ಸಿಕ್ರೇಟ್‌ ರಿವೀಲ್!‌

ಅಪಾರ್ಟ್‌ಮೆಂಟ್‌ನ ಮಾಲೀಕತ್ವದಲ್ಲಿ ನಯನತಾರಾಗೆ ಶೇ. 90 ರಷ್ಟು ಪಾಲನ್ನು ಇದ್ದರೆ, ವಿಘ್ನೇಶ್ ಶಿವನ್ ಉಳಿದ ಶೇ. 10 ರಷ್ಟು ಪಾಲು ಹೊಂದಿದ್ದಾರೆ. ಈ ಅಪಾರ್ಟ್‌ಮೆಂಟ್‌ ಎಂಟು ಪಾರ್ಕಿಂಗ್ ಸ್ಲಾಟ್‌ಗಳನ್ನು ಸಹ ಒಳಗೊಂಡಿದೆಯಂತೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಈ ಆಸ್ತಿಯ ನೋಂದಣಿ ನಡೆದಿದ್ದು, ಲ್ಯಾಂಡ್‌ಮಾರ್ಕ್ ಮೆಟ್ರೋ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಈ ಕಟ್ಟಡವನ್ನು ನಯನತಾರಾಗೆ ದಂಪತಿಗೆ ಮಾರಾಟ ಮಾಡಿದೆ.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ನಯನತಾರಾ ದಂಪತಿ, ಸರ್ಪಸಂಸ್ಕಾರದಲ್ಲಿ ಭಾಗಿ

ಪೊಯೆಸ್‌ ಗಾರ್ಡನ್ ಏರಿಯಾದ ಬಗ್ಗೆ..

ಅಂದಹಾಗೆ, ಪೊಯೆಸ್‌ ಗಾರ್ಡನ್ ಏರಿಯಾದಲ್ಲಿ ರಜನಿಕಾಂತ್‌, ಧನುಷ್‌, ಮಾಜಿ ಸಿಎಂ ಜಯಲಲಿತಾ, ಅವರ ಸ್ನೆಹಿತೆ ಶಶಿಕಲಾ ಜೊತೆಗೆ ಅನೇಕ ದೊಡ್ಡ ಉದ್ಯಮಿಗಳು, ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ಮತ್ತು ಪ್ರಭಾವಿ ರಾಜಕಾರಣಿಗಳು ಮನೆಗಳು ಇದೇ ಏರಿಯಾದಲ್ಲಿವೆ. ಇಲ್ಲಿ ಅತಿ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳು ಮತ್ತು ಪೊಲೀಸ್ ಭದ್ರತೆ ಇರುತ್ತದೆ. ಇದು ಚೆನ್ನೈನ ಅತಿ ಸುರಕ್ಷಿತ ಮತ್ತು ಅತ್ಯಂತ ದುಬಾರಿ ರಿಯಲ್ ಎಸ್ಟೇಟ್ ಪ್ರದೇಶಗಳಲ್ಲಿ ಒಂದಾಗಿದೆ ಎಂಬ ಮಾಹಿತಿ ಇದೆ.

ಸಾಕಷ್ಟು ಆಸ್ತಿ ಹೊಂದಿರುವ ನಯನತಾರಾ

ನಯನತಾರಾ ಅವರು ಚೆನ್ನೈ, ಹೈದರಾಬಾದ್ ಮತ್ತು ಕೇರಳದ ವಿವಿಧ ಭಾಗಗಳಲ್ಲಿ ಹಲವಾರು ಆಸ್ತಿಗಳನ್ನು ಹೊಂದಿದ್ದಾರೆ. ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿ ತಲಾ 15 ಕೋಟಿ ರೂ. ಮೌಲ್ಯದ ಎರಡು ಮನೆಗಳನ್ನು ಅವರು ಹೊಂದಿದ್ದಾರೆ ಎನ್ನಲಾಗಿದೆ. ಜೊತೆಗೆ ಐಷಾರಾಮಿ ಕಾರುಗಳನ್ನು ಸಹ ನಯನತಾರಾ ಹೊಂದಿದ್ದಾರೆ.

ಈಚೆಗಷ್ಟೇ ಚಿರಂಜೀವಿ ನಟನೆಯ 'ಮನ ಶಂಕರ ವರ ಪ್ರಸಾದ್ ಗಾರು' ಚಿತ್ರದಲ್ಲಿ ನಯನತಾರಾ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿತ್ತು. ಸದ್ಯ ಅವರ 'ಮೂಕುತಿ ಅಮ್ಮನ್ 2', 'ಮಣ್ಣಂಗಟ್ಟಿ ಸಿನ್ಸ್ 1960' ಮತ್ತು 'ರಕ್ಕಾಯಿ', 'ಪೇಟ್ರಿಯಾಟ್', 'ಡಿಯರ್ ಸ್ಟೂಡೆಂಟ್ಸ್' ಮತ್ತು 'ಪಾಟ್ಟು' ಸಿನಿಮಾಗಳು ತೆರೆಗೆ ಬರಬೇಕಿವೆ. ಯಶ್‌ ನಟನೆಯ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ 'ಟಾಕ್ಸಿಕ್'ನಲ್ಲೂ ನಯನತಾರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.