ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕಡಲೆ ಕಾಯಿ ಪರಿಷೆಯಲ್ಲಿ ಕಾಣಿಸಿಕೊಂಡ ಸ್ಯಾಂಡಲ್‌ವುಡ್‌ನ ʻಸ್ಟಾರ್‌ʼ ನಟಿ; ಯಾರಿರಬಹುದು ಗೆಸ್‌ ಮಾಡಿ!

Kadalekai Parishe: ಬೆಂಗಳೂರಿನ ಬಸವನಗುಡಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಸ್ಯಾಂಡಲ್‌ವುಡ್‌ನ ʻಡಿಂಪಲ್‌ ಕ್ವೀನ್ʼ ರಚಿತಾ ರಾಮ್‌ ಅವರು ಭೇಟಿ ನೀಡಿದ್ದಾರೆ. ಮಾಸ್ಕ್‌ ಧರಿಸಿ ತಮ್ಮ ತಂಡದೊಂದಿಗೆ ಜನಸಾಗರದ ಮಧ್ಯೆ ಸುತ್ತಾಡಿದ್ದಾರೆ ರಚಿತಾ ರಾಮ್. "18 ವರ್ಷಗಳ ಬಳಿಕ ಕಡಲೆಕಾಯಿ ಪರಿಷೆಗೆ ಹೋಗಿಬಂದೆ. ಎಂತಹ ಅದ್ಭುತ ಅನುಭವ ಇದು" ಎಂದು ರಚಿತಾ ರಾಮ್‌ ಸಂತಸ ಹಂಚಿಕೊಂಡಿದ್ದಾರೆ.

ಸೆಲೆಬ್ರಿಟಿಗಳಿಗೂ ಸಾಮಾನ್ಯರಂತೆ ಓಡಾಡಬೇಕು, ರಸ್ತೆ ಬದಿ ಚಾಟ್ಸ್ ತಿನ್ನಬೇಕು, ಜಾತ್ರೆಗಳಲ್ಲಿ ಅಡ್ಡಾಡಬೇಕು ಎಂಬ ಆಸೆ ಇರುತ್ತದೆ. ಆದರೆ ಅದು ಈಗಂತೂ ಸಾಧ್ಯವಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್‌ ಆದವರು ಕೂಡ ಈಗ ಎಲ್ಲರಂತೆ ಸಾಮಾನ್ಯವಾಗಿ ಬದುಕಲು ಸಾಧ್ಯವಿಲ್ಲ. ಎಲ್ಲೇ ಕಂಡರೂ ಸೆಲ್ಫಿಗಾಗಿ ಜನರು ಮುಗಿಬೀಳುತ್ತಾರೆ. ಅಂಥದ್ದರಲ್ಲಿ ಸ್ಟಾರ್‌ ಕಲಾವಿದರು ಸಾಮಾನ್ಯರಂತೆ ಎಲ್ಲೆಂದರಲ್ಲಿ ಓಡಾಡಲು ಸಾಧ್ಯವೇ? ಅದನ್ನು ಸಾಧ್ಯವಾಗಿಸಿಕೊಂಡಿದ್ದಾರೆ ಡಿಂಪಲ್‌ ಕ್ವೀನ್ ನಟಿ ರಚಿತಾ‌ ರಾಮ್! ‌

ಕಡಲೆಕಾಯಿ ಪರಿಷೆಯಲ್ಲಿ ಅಡ್ಡಾಡಿದ ರಚಿತಾ ರಾಮ್

ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಯು ಆರಂಭವಾಗಿದೆ. ಅಲ್ಲಿಗೆ ನಟಿ ರಚಿತಾ ರಾಮ್‌ ಅವರು ಕೂಡ ಹೋಗಿಬಂದಿದ್ದಾರೆ. ಅಷ್ಟೊಂದು ಜನ ಸಾಗರದ ಮಧ್ಯೆ ರಚಿತಾ ರಾಮ್‌ ಹೋಗುವುದು ಸುಲಭವಲ್ಲ. ಆದರೂ ಮಾಸ್ಕ್‌ ಧರಿಸಿ, ಎಲ್ಲಿಯೂ ತಮ್ಮ ಗುರುತನ್ನು ಬಿಟ್ಟುಕೊಡದೇ ಓಡಾಡಿಕೊಂಡು ಬಂದಿದ್ದಾರೆ ರಚಿತಾ ರಾಮ್.‌ ಆ ಕುರಿತ ಪೋಸ್ಟ್‌ ಅನ್ನು ಕೂಡ ರಚಿತಾ ರಾಮ್‌ ಹಂಚಿಕೊಂಡಿದ್ದಾರೆ. "ನಮ್ಮ ಹುಡುಗರ ಜೊತೆಗೆ 18 ವರ್ಷಗಳ ಬಳಿಕ ಕಡಲೆಕಾಯಿ ಪರಿಷಿಗೆ ಹೋಗಿಬಂದೆ. ಎಂತಹ ಅದ್ಭುತ ಅನುಭವ ಇದು" ಎಂದು ರಚಿತಾ ರಾಮ್‌ ಹೇಳಿಕೊಂಡಿದ್ದಾರೆ.

Rachita Ram: 8 ವರ್ಷಗಳ ಬಳಿಕ ಧ್ರುವ ಸರ್ಜಾಗೆ ಜೋಡಿಯಾಗ್ತಾರೆ ನಟಿ ರಚಿತಾ ರಾಮ್! ಯಾವ ಸಿನಿಮಾ, ಡೈರೆಕ್ಟರ್‌ ಯಾರು?

"ನಮಸ್ಕಾರ.. ಇವತ್ತು ನನ್ನ ಸಿನಿಮಾ ಕ್ರಿಮಿನಲ್‌ ಇವೆಂಟ್‌ ಮುಗಿಸಿಕೊಂಡು ಕಡೆಲಕಾಯಿ ಪರಿಷೆಗೆ ಹೋಗಿದ್ದು ಹೀಗೆ. ಎಷ್ಟು ಮಜಾ ಮಾಡಿದ್ದೀನಿ ಗೊತ್ತಾ? ಈ ತಂಡವನ್ನು ಹೊಂದಿರುವುದಕ್ಕೆ ನಾನು ಧನ್ಯ" ಎಂದು ಹೇಳಿದ್ದಾರೆ ರಚಿತಾ ರಾಮ್.‌ ಪ್ರತಿ ಬಾರಿಯು ಸೆಲೆಬ್ರಿಟಿಗಳು ಹೀಗೆ ಮುಖ ಮುಚ್ಚಿಕೊಂಡು ಕಡಲೆಕಾಯಿ ಪರಿಷೆಯಲ್ಲಿ ಭಾಗಿಯಾವುದು ಹೊಸದೇನಲ್ಲ. ಆದರೆ ಈ ಬಾರಿ ರಚಿತಾ ರಾಮ್‌ ಅವರಂತಹ ಸ್ಟಾರ್‌ ನಟಿಯೊಬ್ಬರು ಕಡಲೆಕಾಯಿ ಪರಿಷೆಯಲ್ಲಿ ಜನರ ಮಧ್ಯೆ ಹೋಗಿ ಖುಷಿಪಟ್ಟಿರುವುದು ವಿಶೇಷ.

ಕಡಲೆಕಾಯಿ ಪರಿಷೆಯಲ್ಲಿ ರಚಿತಾ ರಾಮ್



ಬಸವನಗುಡಿಗೆ ಬಂದಿದ್ದ ರಚಿತಾ ರಾಮ್‌

ಅಂದಹಾಗೆ, ನವೆಂಬರ್‌ 18ರಂದು ರಚಿತಾ ರಾಮ್‌ ಅವರು ತಮ್ಮ ಹೊಸ ಸಿನಿಮಾ ʻಕ್ರಿಮಿನಲ್‌ʼ ಮುಹೂರ್ತಕ್ಕಾಗಿ ಬಸವನಗುಡಿಗೆ ಆಗಮಿಸಿದ್ದರು. ಧ್ರುವ ಸರ್ಜಾ ಹೀರೋ ಆಗಿರುವ ಈ ಸಿನಿಮಾವನ್ನು ರಾಜ್‌ ಗುರು ನಿರ್ದೇಶನ ಮಾಡುತ್ತಿದ್ದಾರೆ. ʻಭರ್ಜರಿʼ ನಂತರ ಎಂಟು ವರ್ಷಗಳ ಬಳಿಕ ರಚಿತಾ ರಾಮ್‌ ಮತ್ತು ಧ್ರುವ ಸರ್ಜಾ ಅವರು ಒಂದಾಗಿದ್ದು, ಗ್ರಾಮೀಣ ಹಿನ್ನೆಲೆಯ ಈ ʻಕ್ರಿಮಿನಲ್‌ʼ ಸಿನಿಮಾವನ್ನು ಮನೀಶ್‌ ಶಾ ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ನೈಜ ಘಟನೆ ಆಧಾರಿತ ಸಿನಿಮಾವಂತೆ.

ʻಕ್ರಿಮಿನಲ್‌ʼ ಸಿನಿಮಾದ ಇವೆಂಟ್‌ ಕೂಡ ಕಡಲೆಕಾಯಿ ಪರಿಷೆ ನಡೆಯುತ್ತಿದ್ದ ಜಾಗದಲ್ಲೇ ಇತ್ತು. ಹಾಗಾಗಿ, ಸಿನಿಮಾ ಇವೆಂಟ್‌ ಮುಗಿಸಿ, ಬಳಿಕ ರಚಿತಾ ರಾಮ್‌ ಅವರು ತಮ್ಮ ತಂಡದೊಂದಿಗೆ ಕಡಲೆಕಾಯಿ ಪರಿಷೆಯಲ್ಲಿ ಕೆಲ ಹೊತ್ತು ಸಮಯ ಕಳೆದಿದ್ದಾರೆ.