ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಶ್ಮಿಕಾ ಮಂದಣ್ಣ ಸಾಧನೆಗೆ ಪುನೀತ್‌ ರಾಜ್‌ಕುಮಾರ್‌ ಸ್ಪೂರ್ತಿಯಾಗಿದ್ದು ಹೇಗೆ? ಅಪರೂಪದ ವಿಚಾರ ಬಿಚ್ಚಿಟ್ಟ ʻನ್ಯಾಷನಲ್‌ ಕ್ರಶ್‌ʼ

ನಟಿ ರಶ್ಮಿಕಾ ಮಂದಣ್ಣ ಅವರು ಇಂದು ವಿವಿಧ ಭಾಷೆಗಳಲ್ಲಿ 'ನ್ಯಾಷನಲ್ ಕ್ರಶ್' ಆಗಿ ಗುರುತಿಸಿಕೊಳ್ಳಲು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ನೀಡಿದ್ದ ಸ್ಫೂರ್ತಿಯೇ ಕಾರಣ ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ. 'ಅಂಜನಿಪುತ್ರ' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಪುನೀತ್ ಅವರು ರಶ್ಮಿಕಾ ಅವರ ಪ್ರತಿಭೆಯನ್ನು ಗುರುತಿಸಿ, ದೊಡ್ಡ ಮಟ್ಟದಲ್ಲಿ ಸಾಧಿಸುವಂತೆ ಧೈರ್ಯ ತುಂಬಿದ್ದರಂತೆ.

ನಟಿ ರಶ್ಮಿಕಾ ಮಂದಣ್ಣ ಅವರು ಈಗ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿದ್ದಾರೆ. ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಂತೂ ರಶ್ಮಿಕಾಗೆ ದೊಡ್ಡಮಟ್ಟದ ಬೇಡಿಕೆ ಇದೆ. ಸ್ಟಾರ್‌ ಹೀರೋ ಸಿನಿಮಾಗಳಿಗೆ ರಶ್ಮಿಕಾ ಅವರೇ ಫಸ್ಟ್‌ ಚಾಯ್ಸ್‌ ಅನ್ನುವಂತಹ ವಾತಾವರಣ ಇದೆ. ಸದ್ಯ ಸಂದರ್ಶನವೊಂದರಲ್ಲಿ ರಶ್ಮಿಕಾ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಬಗ್ಗೆ ಮಾತನಾಡಿದ್ದಾರೆ. ಇಂದು ವಿವಿಧ ಭಾಷೆಯ ಸಿನಿಮಾಗಳಲ್ಲಿ ತಾನು ನಟಿಸುತ್ತಿರುವುದಕ್ಕೆ ಪುನೀತ್‌ ಅವರೇ ಸ್ಪೂರ್ತಿ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.

ಅಪ್ಪು ಸರ್‌ ನನ್ನ ಕೆಲಸದ ಮೇಲೆ ನಂಬಿಕೆ ಇಟ್ಟಿದ್ದರು

"ಅಪ್ಪು ಸರ್‌ ಜೊತೆ ನಾನು ಅಂಜನಿಪುತ್ರ ಸಿನಿಮಾದಲ್ಲಿ ನಟಿಸಿದ್ದೆ. ಅವರು ನನ್ನ ಕೆಲಸದ ಮೇಲೆ ನಂಬಿಕೆ ಇಟ್ಟಿದ್ದರು. ಆರಂಭದಲ್ಲಿ ನಾನು ಇಲ್ಲಿರುವುದಕ್ಕೆ ನನ್ನ ಅದೃಷ್ಟ ಕೆಲಸ ಮಾಡಿದೆ ಎಂದುಕೊಂಡಿದ್ದೆ. ಆದರೆ ಅಪ್ಪು ಸರ್‌ ಜೊತೆಗೆ ಕೆಲಸ ಮಾಡುವಾಗ ಅವರು ನನಗೆ, ʻನೀನು ಎಷ್ಟು ಪ್ರತಿಭಾವಂತೆ, ನೀನು ಸಾಧಿಸುತ್ತಿದ್ದೀಯಾ ಎಂಬುದು ನಿನಗೇ ಗೊತ್ತಿಲ್ಲ, ನಿನ್ನ ಕೆಲಸದ ಮೇಲೆ ನೀನು ಹೆಚ್ಚು ಫೋಕಸ್‌ ಮಾಡು, ಈ ಪ್ರಪಂಚದಲ್ಲಿ ಏನೂ ಬೇಕಾದರೂ ಮಾಡಬಹುದುʼ ಅಂತ ಹೇಳಿದರು" ಎಂದು ರಶ್ಮಿಕಾ ಮಂದಣ್ಣ ಅವರು ತಿಳಿಸಿದ್ದಾರೆ.

ʻಮೈಸಾ' ಚಿತ್ರಕ್ಕಾಗಿ ಬ್ಯಾಂಕಾಕ್‌ನಲ್ಲಿ ರಶ್ಮಿಕಾ ಮಂದಣ್ಣ ಕಠಿಣ ತಯಾರಿ; ಪ್ರತಿದಿನ 8 ಗಂಟೆ ಶ್ರಮಿಸುತ್ತಿರುವ ʻನ್ಯಾಷನಲ್‌ ಕ್ರಶ್‌ʼ!

ಪುನೀತ್‌ ಅವರನ್ನು ಭೇಟಿಯಾಗಿದ್ದಕ್ಕೆ ದೇವರಿಗೆ ಥ್ಯಾಂಕ್ಸ್

"ನಾನು ಅಂಜನಿಪುತ್ರ ಸಿನಿಮಾದಲ್ಲಿ ನಟಿಸಿದ ಮೇಲೆ, ಓಕೆ ನಾನು ಬೇರೆ ಭಾಷೆಯಲ್ಲೂ ನಟಿಸಬಹುದು ಎಂಬ ನಂಬಿಕೆ ಬಂತು. ಆಗಲೇ ನಾನು ತೆಲುಗಿನ ಛಲೋ ಸಿನಿಮಾಗೆ ಒಪ್ಪಿಕೊಂಡೆ. ನಾನು ದೊಡ್ಡ ದೃಷ್ಟಿಕೋನದಲ್ಲಿ ಯೋಚನೆ ಮಾಡುವುದಕ್ಕೆ ಪುನೀತ್‌ ಸರ್‌ ನನಗೆ ಸ್ಪೂರ್ತಿಯಾದರು. ನಾನು ಪುನೀತ್‌ ಸರ್‌ನ ಭೇಟಿಯಾಗಿದ್ದಕ್ಕೆ ದೇವರಿಗೆ ಧನ್ಯವಾದ ಹೇಳುತ್ತೇನೆ. ಇವತ್ತು ನಾನು ನಾಲ್ಕು ಬೇರೆ ಬೇರೆ ಭಾಷೆಯ ಚಿತ್ರರಂಗದಲ್ಲಿ ಕೆಲಸ ಮಾಡುತ್ತೀದ್ದೇನೆ. ಅದೇ ನನಗೆ ಅಚ್ಚರಿಯನ್ನು ಉಂಟು ಮಾಡುತ್ತದೆ. ನಾನು ಈಗಲೂ ಅಪ್ಪು ಸರ್‌ಗೆ ಥ್ಯಾಂಕ್ಯೂ ಸರ್‌ ಥ್ಯಾಂಕ್ಯೂ ಅಂತ ಹೇಳುತ್ತಲೇ ಇರುತ್ತೇನೆ" ಎಂದು ರಶ್ಮಿಕಾ ಮಂದಣ್ಣ ಅವರು ಹೇಳಿಕೊಂಡಿದ್ದಾರೆ.

Anand Deverakonda: ರಶ್ಮಿಕಾ-ವಿಜಯ್‌ ಜೊತೆ ಭರ್ಜರಿ ಡ್ಯಾನ್ಸ್ ಮಾಡಿದ ಆನಂದ್ ದೇವರಕೊಂಡ

ರಶ್ಮಿಕಾ ಮಂದಣ್ಣ ಅವರ ಸಂದರ್ಶನ



ಅಂಜನಿಪುತ್ರದಲ್ಲಿ ನಟನೆ

ರಕ್ಷಿತ್‌ ಶೆಟ್ಟಿ ಜೊತೆ ಕಿರಿಕ್‌ ಪಾರ್ಟಿ ಸಿನಿಮಾದಲ್ಲಿ ನಟಿಸಿದ ರಶ್ಮಿಕಾ ಎರಡನೇ ಅವಕಾಶವೇ ಅಂಜನಿಪುತ್ರ ಸಿನಿಮಾದ್ದು. ಪುನೀತ್‌ ರಾಜ್‌ಕುಮಾರ್‌ ಎದುರಿಗೆ ಮೊದಲ ಬಾರಿಗೆ ನಾಯಕಿಯಾಗಿ ನಟಿಸುವ ಚಾನ್ಸ್‌ ಪಡೆದಿದ್ದರು ರಶ್ಮಿಕಾ. ಆ ಸಿನಿಮಾದ ನಂತರ ಚಮಕ್‌ ಚಿತ್ರದಲ್ಲೂ ನಟಿಸಿದರು. ಬಳಿಕವೇ ತೆಲುಗಿನ ಛಲೋ ಚಿತ್ರದಲ್ಲೂ ನಟಿಸುವ ಚಾನ್ಸ್‌ ಪಡೆದು, ಟಾಲಿವುಡ್‌ನಲ್ಲಿ ತಮ್ಮ ಪಯಣವನ್ನು ಮುಂದುವರಿಸಿದರು. ಛಲೋ ನಂತರ ಗೀತಾ ಗೋವಿಂದಂ, ಸರಿಲೇರು ನೀಕೆವ್ವರು, ಭೀಷ್ಮ, ಪುಷ್ಪ ಹೀಗೆ ಸಾಲು ಸಾಲು ಹಿಟ್‌ ಸಿನಿಮಾಗಳಲ್ಲಿ ರಶ್ಮಿಕಾ ನಟಿಸಿದ್ದಾರೆ.