ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಗಂಡುಮಕ್ಕಳಿಗೆ ಮರ್ಯಾದೆ ಇದ್ದರೆ ಚಂದ ಕಂದʼ; ಪಂಚಿಂಗ್‌ ಡೈಲಾಗ್‌ ಹೊಡೆಯುತ್ತ ʻಟಾಕ್ಸಿಕ್‌ʼ ಹೀರೋ ಯಶ್‌ಗೆ ಟಕ್ಕರ್‌ ಕೊಟ್ರಾ ರಿಷಿಕಾ ಸಿಂಗ್?

ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದ ಟ್ರೇಲರ್ ವಿಶ್ವದಾದ್ಯಂತ ಭಾರಿ ಮೆಚ್ಚುಗೆ ಪಡೆಯುತ್ತಿರುವ ಬೆನ್ನಲ್ಲೇ, ನಟಿ ರಿಷಿಕಾ ಸಿಂಗ್ ಯಶ್ ವಿರುದ್ಧ ನೀಡಿದ ವೀಡಿಯೋ ಹೇಳಿಕೆ ಕ್ರಾಂತಿಕಾರಕ ವಿವಾದಕ್ಕೆ ಕಾರಣವಾಗಿದೆ. ಟ್ರೇಲರ್‌ನಲ್ಲಿನ ದೃಶ್ಯಗಳನ್ನು ಲೇವಡಿ ಮಾಡಿ ಯಶ್‌ಗೆ ಕರ್ನಾಟಕದಿಂದ ಜಾಗ ಖಾಲಿ ಮಾಡಿಸುವುದಾಗಿ ರಿಷಿಕಾ ಎಚ್ಚರಿಸಿದ್ದಾರೆ.

ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' (Toxic) ಸಿನಿಮಾದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ, ವಿಶ್ವದಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಟ್ರೇಲರ್ ಅನ್ನು ಹಾಲಿವುಡ್ ಮಟ್ಟದಲ್ಲಿದೆ ಎಂದು ಕೊಂಡಾಡುತ್ತಿದ್ದರೆ, ಇತ್ತ ಕನ್ನಡ ನಟಿ ರಿಷಿಕಾ ಸಿಂಗ್ ಟ್ರೇಲರ್ ಹಾಗೂ ಯಶ್ ವಿರುದ್ಧ ನೀಡಿರುವ ಹೇಳಿಕೆ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಹಿರಿಯ ನಿರ್ದೇಶಕ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿ ಹಾಗೂ ನಟ ಆದಿತ್ಯ ಅವರ ಸಹೋದರಿಯಾಗಿರುವ ನಟಿ ರಿಷಿಕಾ ಸಿಂಗ್, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ 'ಟಾಕ್ಸಿಕ್' ಟ್ರೇಲರ್ ಬಗ್ಗೆ ಋಣಾತ್ಮಕವಾಗಿ ಮಾತನಾಡಿದ್ದಾರೆ.

ವಿಡಿಯೋದಲ್ಲಿ ರಿಷಿಕಾ ಸಿಂಗ್ ಹೇಳಿದ್ದೇನು?

ಟ್ರೇಲರ್‌ನಲ್ಲಿ ಹಸಿಬಿಸಿ ದೃಶ್ಯಗಳಿವೆ ಮತ್ತು ಯಶ್ ನಗ್ನವಾಗಿ ಕಾಣಿಸಿಕೊಂಡಿದ್ದಾರೆ ಎಂದು ಲೇವಡಿ ಮಾಡಿರುವ ರಿಷಿಕಾ, "ಐ ಆಮ್ ಟಾಕ್ಸಿಕ್" (I am Toxic) ಹೆಸರಿನ ವಿಡಿಯೋದಲ್ಲಿ ಯಶ್‌ಗೆ ಕರ್ನಾಟಕದಿಂದ ಜಾಗ ಖಾಲಿ ಮಾಡಿಸುವುದಾಗಿ ಎಚ್ಚರಿಕೆ ನೀಡುವ ಧಾಟಿಯಲ್ಲಿ ಮಾತನಾಡಿದ್ದಾರೆ.

ರಿಷಿಕಾ ಸಿಂಗ್‌ ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ



ವಿಡಿಯೋದಲ್ಲಿ ರಿಷಿಕಾ ಸಿಂಗ್ ಹೇಳಿದ್ದೇನು?

"ಹೆಣ್ಣುಮಕ್ಕಳಿಗೆ ಅಂದ ಇದ್ದರೆ ಚಂದ, ಗಂಡುಮಕ್ಕಳಿಗೆ ಮರ್ಯಾದೆ ಇದ್ದರೆ ಚಂದ ಕಂದ. ಇದೇನು ಪ್ಯಾಂಟ್ ಬಿಟ್ಟುಕೊಂಡು ಆಗಿಬಿಟ್ಟಿದ್ದೀಯಾ ಮಂಗ? ಮನೆಯಲ್ಲಿ ಹೆಂಡತಿ ಇದ್ದಾಳೆ, ಇದೇನು ಹೀರೋಯಿನ್‌ಗಳ ಜೊತೆ ನಿನ್ನ ಚಕ್ಕಂದ ಕಂದ? ನನಗಂತೂ ಇಷ್ಟ ಆಗಲಿಲ್ಲ ನಿನ್ನ ಹೊಸ ಗಂಧ. ನಿನಗೂ ಹೆಣ್ಣುಮಗಳಿದ್ದಾಳೆ, ದೊಡ್ಡದಾಗಿ ಡೈಲಾಗ್ ಹೊಡೆಯೋಕೆ ಬಂದ? ಹೆಣ್ಮಕ್ಕಳಿಗೆ ರೆಸ್ಪೆಕ್ಟ್ ಇರ್ಲಿ, ಇಲ್ಲಾಂದ್ರ ಜಾಗ ಖಾಲಿ ಮಾಡ್ಸಿಬಿಡ್ತೀವಿ ಕರ್ನಾಟಕದಿಂದ. ಐ ಆಮ್ ಟಾಕ್ಸಿಕ್''‌ ಎಂದು ಹೇಳಿದ್ದಾರೆ ರಿಷಿಕಾ.

Yash: ಟಾಕ್ಸಿಕ್‌ ಸಿನಿಮಾದಲ್ಲಿ ಅಭಿನಯ! ಯಶ್‌ ಹೊಗಳಿ ಈ ಬಾಲಿವುಡ್‌ ನಟಿ ಹೇಳಿದ್ದೇನು?

ಸಿಡಿದೆದ್ದ ಯಶ್ ಅಭಿಮಾನಿಗಳು

ರಿಷಿಕಾ ಅವರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಯಶ್ ಅಭಿಮಾನಿಗಳು ಹಾಗೂ ನೆಟ್ಟಿಗರು ಅವರ ವಿರುದ್ಧ ತಿರುಗಿಬಿದ್ದಿದ್ದಾರೆ. "ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ ನಟಿಯರಿಗೇ ಇಲ್ಲದ ಸಮಸ್ಯೆ ಇವರಿಗೇಕೆ?" ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. "ನಟಿಯರು ಒಪ್ಪಂದದ ಪ್ರಕಾರ, ಸಂಭಾವನೆ ಪಡೆದು ತಮ್ಮ ಮಿತಿಗೆ ಒಳಪಟ್ಟು ನಟಿಸಿದ್ದಾರೆ. ನಟಿಯರೇ ಸ್ವತಃ ವೇದಿಕೆ ಮೇಲೆ ಬಂದು ಯಶ್ ಜೊತೆ ನಟಿಸಿದ್ದು ಖುಷಿ ನೀಡಿದೆ ಎಂದಮೇಲೆ ಇವರೇಕೆ ಪ್ರಶ್ನೆ ಮಾಡುತ್ತಿದ್ದಾರೆ?" ಎಂದು ಆಕ್ರೋಶ ಹೊರಹಾಕಿದ್ದಾರೆ.

Toxic Movie: ಯಶ್‌ ಬರ್ತ್‌ಡೇಗೆ 'ಟಾಕ್ಸಿಕ್‌' ಸರ್ಪ್ರೈಸ್ ಗಿಫ್ಟ್- ಟೀಸರ್‌ನಲ್ಲಿ ರಾಕಿಂಗ್‌ ಸ್ಟಾರ್‌ ಮ್ಯಾನರಿಸಂಗೆ ಫ್ಯಾನ್ಸ್‌ ಫುಲ್‌ ಫಿದಾ!

ಇನ್ನು ಕೆಲವರು ನಟಿ ರಿಷಿಕಾ ಸಿಂಗ್ ಈ ಹಿಂದೆ ಸಿನಿಮಾಗಳಲ್ಲಿ ನಟಿಸಿದ್ದಾಗ ಧರಿಸಿದ್ದ ಬಿಕಿನಿ ದೃಶ್ಯಗಳ ಸ್ಕ್ರೀನ್‌ಶಾಟ್‌ಗಳು ಹಾಗೂ ಹಾಟ್ ಫೋಟೋಗಳನ್ನು ಹಂಚಿಕೊಂಡು, "ಇದು ನಿಮ್ಮ ಸಂಸ್ಕಾರವೇ?" ಎಂದು ಟ್ರೋಲ್ ಮಾಡುತ್ತಿದ್ದಾರೆ. ನಟಿ ರಿಷಿಕಾ ಸಿಂಗ್ ಈ ಹಿಂದೆ ದುನಿಯಾ ವಿಜಯ್ ಜೊತೆ 'ಕಂಠೀರವ', 'ಕಳ್ಳ ಮಳ್ಳ ಸುಳ್ಳ', 'ಬೆಂಕಿ ಬಿರುಗಾಳಿ', 'ತುಂಟರು' ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಜೊತೆಗೆ ಕನ್ನಡದ ಮೊದಲ 'ಬಿಗ್ ಬಾಸ್' ರಿಯಾಲಿಟಿ ಶೋನಲ್ಲೂ ಸ್ಪರ್ಧಿಯಾಗಿದ್ದರು.