ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಮನವಮಿಯ ಪ್ರಯುಕ್ತ ರಾಮಭಕ್ತನ ಕುರಿತ ʻಮಹರ್ಷಿ ವಾಲ್ಮಿಕಿʼ ಕಿರುಚಿತ್ರ ರಿಲೀಸ್‌

Maharshi Valmiki Short Film: ರಾಮನವಮಿಯ ಪ್ರಯುಕ್ತ ನಿರ್ದೇಶಕ ಪ್ರವೀಣ್ ಶಿವಣ್ಣ ಅವರು "ಮಹರ್ಷಿ ವಾಲ್ಮೀಕಿ" ಎಂಬ 21 ನಿಮಿಷಗಳ ಕಿರುಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ರತ್ನ ದಾಸ್ ನಿರ್ಮಾಣದ ಈ ಚಿತ್ರವು ಬೇಡ ರತ್ನಾಕರ ಮಹರ್ಷಿ ವಾಲ್ಮೀಕಿಯಾಗಿ ಬದಲಾದ ಮತ್ತು ರಾಮಾಯಣ ರಚಿಸಿದ ಸ್ಫೂರ್ತಿದಾಯಕ ಕಥೆಯನ್ನು ಒಳಗೊಂಡಿದೆ.

ಬೇಡನಾಗಿದ್ದ ರತ್ನಕಾರ, ಋಷಿಗಳ ಉಪದೇಶದಿಂದ ಮಹರ್ಷಿ ವಾಲ್ಮೀಕಿಯಾಗಿದ್ದು ಎಲ್ಲರಿಗೂ ತಿಳಿದ ಸಂಗತಿ. ಕ್ರೌಂಚ ಪಕ್ಷಿಯ ಸಾವನ್ನು ಕಣ್ಣಾರೆ ಕಂಡ ವಾಲ್ಮೀಕಿ ಮಹರ್ಷಿಗಳಿಗೆ ಆ ಘಟನೆ ರಾಮಾಯಣ ಬರೆಯಲು ಸ್ಪೂರ್ತಿಯಾಯಿತು. ಅದು ವಾಲ್ಮೀಕಿ ರಾಮಾಯಣ ಎಂದೇ ಪ್ರಸಿದ್ದವಾಯಿತು. ಅಂತಹ ವಾಲ್ಮೀಕಿ ಋಷಿಗಳ ಜೀವನ ಚರಿತ್ರೆಯನ್ನು ಕಿರುಚಿತ್ರದ ಮೂಲಕ ಹೊರತಂದಿದ್ದಾರೆ ನಿರ್ದೇಶಕ ಪ್ರವೀಣ್ ಶಿವಣ್ಣ.

ರಾಮನವಮಿ ಸಂದರ್ಭದಲ್ಲೇ ಕಿರುಚಿತ್ರ ರಿಲೀಸ್‌

21 ನಿಮಿಷಗಳ ಈ ಅದ್ಭುತ ಕಿರುಚಿತ್ರಕ್ಕೆ "ಮಹರ್ಷಿ ವಾಲ್ಮೀಕಿ" ಎಂದು ಹೆಸರಿಡಲಾಗಿದೆ. ರತ್ನ ದಾಸ್ ಅವರ ನಿರ್ಮಾಣದ ಈ ಕಿರುಚಿತ್ರದ ಅನಾವರಣ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನೆರವೇರಿತು. ರಾಮನವಮಿ ಸಂದರ್ಭದಲ್ಲೇ ಈ ಕಿರುಚಿತ್ರ ಅನಾವರಣವಾಗಿರುವುದು ವಿಶೇಷ. ಶ್ರೀರಿಷಿ ಅವಿರ್ಭವ ಗುರು ಪೂರ್ಣದೈತಿ, ರಾಷ್ಟ್ರಪ್ರಶಸ್ತಿ ವಿಜೇತ ಸಂಕಲನಕಾರ ಸುರೇಶ್ ಅರಸ್, ನಟ ಗಣೇಶ್ ರಾವ್ ಕೇಸರ್ಕರ್, ಪದ್ಮಶ್ರೀ ವೆಂಕಟೇಶ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಮಹರ್ಷಿ ವಾಲ್ಮೀಕಿ ನಾಯಕ ಸಮಾಜದಿಂದ ಪ್ರತಿಭಟನೆ: ಎಸ್ಸಿ ಎಸ್ಟಿ ಹೆಚ್ಚಿನ ಮೀಸಲಾತಿ ಜಾರಿಗೆ ಆಗ್ರಹ

ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣ

"ನಾನು ಸಂಕಲನಕಾರನಾಗಿ ಸಾಕಷ್ಟು ಚಿತ್ರಗಳಿಗೆ ಕಾರ್ಯ ನಿರ್ವಹಿಸಿದ್ದೇನೆ. ನಿರ್ದೇಶಕನಾಗಿ ಇದು ಮೊದಲ ಕಿರುಚಿತ್ರ. ನಿರ್ಮಾಪಕರ, ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ ʻಮಹರ್ಷಿ ವಾಲ್ಮೀಕಿʼ ಕಿರುಚಿತ್ರ ಉತ್ತಮವಾಗಿ ಮೂಡಿಬಂದಿದೆ. ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಈ ಕಿರುಚಿತ್ರ ಅನಾವರಣ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ" ಎಂದರು ನಿರ್ದೇಶಕ ಪ್ರವೀಣ್ ಶಿವಣ್ಣ.

ವಾಲ್ಮೀಕಿ ಜನಾಂಗಕ್ಕೆ ಪರಿಷ್ಕೃತ ಮೀಸಲಾತಿಯಂತೆ ಸರ್ಕಾರಿ ಉದ್ಯೋಗಗಳಲ್ಲಿ ನೇಮಕಾತಿ ಮಾಡದಿದ್ದರೆ ಉಗ್ರ ಹೋರಾಟ

ವಾಲ್ಮೀಕಿ ಪಾತ್ರದಲ್ಲಿ ಸುಜಿತ್ ಶೆಟ್ಟಿ

"ರಾಮ ಹದಿನಾಲ್ಕು ವರ್ಷಗಳ ವನವಾಸ ಮುಗಿಸಿ ಬಂದ ಹಾಗೆ. ನಾನು ಕೂಡ ನಟನೆ ಮಾಡಲು ಹದಿನಾಲ್ಕು ವರ್ಷಗಳು ಬೇಕಾಯಿತು. ಅದು ರಾಮಭಕ್ತ "ಮಹರ್ಷಿ ವಾಲ್ಮೀಕಿ" ಅವರ ಕಥೆಯ ಮೂಲಕವೇ ಆಗಿರುವುದು ಕಾಕತಾಳೀಯ. ನಾನು ವಾಲ್ಮೀಕಿ ಮಹರ್ಷಿಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಶಿವಮಣಿ ಅವರಂತಹ ಹಿರಿಯ ಕಲಾವಿದರ ಜೊತೆಗೆ ಅಭಿನಯಿಸಿದ್ದು ಖುಷಿಯಾಗಿದೆ" ಎಂದರು ವಾಲ್ಮೀಕಿ ಪಾತ್ರಧಾರಿ ಸುಜಿತ್ ಶೆಟ್ಟಿ. ನಟಿ ರೂಪ ಮುತ್ತುರಾಯಪ್ಪ ಕೂಡ ಈ ಕಿರುಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಛಾಯಾಗ್ರಹಣವನ್ನು ತನ್ವಿಕ್ ಮಾಡಿದ್ದು, ಸಂಗೀತ ನಿರ್ದೇಶನವನ್ನು ರಾಮಾನುಜನ್ ಮಾಡಿದ್ದಾರೆ.