ನವದೆಹಲಿ: ಟಾಲಿವುಡ್ ಸ್ಟಾರ್ ನಾಯಕಿ ಸಮಂತಾ ರುತ್ ಪ್ರಭು (Samantha) ಸದಾ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುವ ನಟಿ. ತಮ್ಮ ವೃತ್ತಿ ಜೀವನದ ಜೊತೆಗೆ, ತಮ್ಮ ವೈಯಕ್ತಿಕ ಜೀವನದಿಂದಲೂ ಸುದ್ದಿಯಲ್ಲಿರುತ್ತಾರೆ. ಟಾಲಿವುಡ್‌ನಲ್ಲಿ ಚಾರ್ಮಿಂಗ್ ಕಪಲ್ ಅಂತ ಜನಪ್ರಿಯತೆ ಪಡೆದಿದ್ದ ಸಮಂತಾ ಮತ್ತು ನಾಗ ಚೈತನ್ಯ ಸದ್ಯ ಡಿವೋರ್ಸ್ ಪಡೆದು ಇದೀಗ ದೂರಾಗಿದ್ದಾರೆ. ಸದ್ಯ ಸಿನಿಮಾದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದೆ ವೆಬ್ ಸೀರಿಸ್‌ನಲ್ಲಿ ನಟಿಸುವತ್ತ ನಟಿ ಸಂಪೂರ್ಣ ಗಮನ ಹರಿಸುತ್ತಿದ್ದಾರೆ. ಇದರ ಜೊತೆ ನಟಿ ಸಮಂತಾ ಮಹಿಳೆಯರ ಪರವಾಗಿಯೂ ಹೆಚ್ಚಾಗಿ ಧ್ವನಿ ಎತ್ತುವ ಮೂಲಕ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಅವರು ಋತುಚಕ್ರದ ಬಗ್ಗೆ ಮಾತನಾಡಿದ್ದು, ಈ ವಿಚಾರವನ್ನು ಇಂದಿಗೂ ಓಪನ್ ಆಗಿ ಮಾತನಾಡಲು ಹಿಂಜರಿಯುವ ಸ್ಥಿತಿ ಇದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಮಹಿಳೆಯರ ಅಭಿವೃದ್ಧಿ ಎಂದು ನಾವು ಎಷ್ಟೇ ಹೇಳಿದ್ದರೂ ಋತುಚಕ್ರದ ವಿಚಾರಗಳ ಬಗ್ಗೆ ಮಾತನಾಡುವಾಗ ನಾವು ಮೌನ ವಹಿಸುತ್ತೇವೆ. ಇದರ ಬಗ್ಗೆ ಗುಟ್ಟಾಗಿಯೇ ಮಾತನಾಡುತ್ತೇವೆ ಎಂದು ಸಂದರ್ಶನವೊಂದರಲ್ಲಿ ನಟಿ ಸಮಂತಾ ಹೇಳಿಕೊಂಡಿದ್ದಾರೆ. ಋತುಚಕ್ರವನ್ನು ಇಂದಿಗೂ ಅವಮಾನ ಎಂದು ಭಾವಿಸುತ್ತೇವೆ ಎಂದು ಸಮಂತಾ ಬೇಸರ ವ್ಯಕ್ತ ಪಡಿಸಿ ದ್ದಾರೆ. ಈ ಮನಸ್ಥಿತಿ ನಮ್ಮ ಪ್ರತಿ ಮಹಿಳೆಯರಲ್ಲಿ ಬದಲಾಗಬೇಕು. ಈ ಬಗ್ಗೆ ಮುಕ್ತ ವಾಗಿ ಮಾತನಾಡುವಂತೆ ಅಗಬೇಕು, ಇದು ಖಂಡಿತವಾಗಿಯೂ ಮುಜುಗರ ಅಥವಾ ಹಗುರವಾಗಿ ಪರಿಗಣಿಸುವ ವಿಷಯವಲ್ಲ ಅಂದಿದ್ದಾರೆ. ಋತುಚಕ್ರ ನಮ್ಮ ಮನಸ್ಸು ಮತ್ತು ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಪ್ರತಿಯೊಬ್ಬರು ಅರಿತು ಕೊಳ್ಳಬೇಕು ಎಂದು ತಿಳಿಸಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿ ಅಭಿಮಾನಿಗಳನ್ನು ರಂಜಿಸಿರುವ ಸಮಂತಾ, ಇತ್ತೀಚೆಗೆ "ಸಿಟಾಡೆಲ್ ಹನಿ ಬನ್ನಿ"ಎಂಬ ವೆಬ್ ಸರಣಿಯ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದರು. ಸದ್ಯ ನಟಿಯಾಗಿ ಬಹಳ ಹೆಸರು ಮಾಡಿರುವ ಸಮಂತಾ ಇದೀಗ ನಿರ್ಮಾಪಕಿ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಟ್ರಲಾಲ ಮೂವಿ ಪಿಕ್ಚರ್ಸ್ ಹೆಸರಿನ ಸಿನಿಮಾ ನಿರ್ಮಾಣ ಸಂಸ್ಥೆ ಪ್ರಾರಂಭ ಮಾಡಿದ್ದು, ಶುಭಂ’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದಾರೆ..
ಇದನ್ನು ಓದಿ: Suthradhari Movie: ಚಂದನ್ ಶೆಟ್ಟಿ ಅಭಿನಯದ ʼಸೂತ್ರಧಾರಿʼ ಚಿತ್ರ ಮೇ 9 ಕ್ಕೆ ರಿಲೀಸ್
ಇದರ ಜೊತೆಗೆ ಸಮಂತಾ ವೆಬ್ ಸೀರಿಸ್ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಸದ್ಯ ಮಾ ಇಂಟಿ ಬಂಗಾರಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ವರ್ಷ ಈ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ. ಇನ್ನು, ರಾಜ್ ಹಾಗೂ ಡಿಕೆ ನಿರ್ದೇಶನ ಮಾಡುತ್ತಿರುವ ‘ರಕ್ತ ಬ್ರಹ್ಮಾಂಡ ದಿ ಬ್ಲಡಿ ಕಿಂಗ್ಡಮ್’ ಹೆಸರಿನ ಸೀರಿಸ್‌ನಲ್ಲಿ ನಟಿಸುತ್ತಿದ್ದಾರೆ. ಇನ್ನು, ಸಮಂತಾ ಡೇಟಿಂಗ್ ವಿಚಾರವು ಬಹಳಷ್ಟು ಗಾಸಿಪ್ ಆಗಿದೆ. ಸಿಟೆಡಾಲ್ ಹನಿ ಬನ್ನಿ ನಿರ್ದೇಶಕ ರಾಜ್ ನಿಡಿಮೋರು ಜೊತೆ ಸಮಂತಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ. ಆದರೆ ಈ ಬಗ್ಗೆ ಸಮಂತಾ ಇನ್ನು ಖಚಿತಪಡಿಸಿಲ್ಲ.