ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಾಜಿ ಮೈದುನ ಅಖಿಲ್‌ ನಟನೆಯ ʻಲೆನಿನ್‌ʼ ಚಿತ್ರಕ್ಕೆ ಮನಸಾರೆ ಹಾರೈಸಿದ ಸಮಂತಾ; ಮಾಜಿ ಅತ್ತಿಗೆಯ ಮಾತಿಗೆ ಕರಗಿದ ನಾಗ ಚೈತನ್ಯ ಸಹೋದರ

ಅಕ್ಕಿನೇನಿ ಅಖಿಲ್ ನಟನೆಯ ‘ಲೆನಿನ್’ ಸಿನಿಮಾ ಜುಲೈ 10 ರಂದು ಭರ್ಜರಿಯಾಗಿ ತೆರೆಕಂಡಿದ್ದು, ಮಾಜಿ ಅತ್ತಿಗೆ ಸಮಂತಾ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಇತ್ತೀಚೆಗಷ್ಟೇ ಸಮಂತಾ ನಟನೆಯ 'ಮಾ ಇಂಟಿ ಬಂಗಾರಂ' ಚಿತ್ರವನ್ನು ಅಖಿಲ್ ಮುಕ್ತಕಂಠದಿಂದ ಶ್ಲಾಘಿಸಿದ್ದರು. ಅಕ್ಕಿನೇನಿ ಕುಟುಂಬದಿಂದ ಸ್ಯಾಮ್‌ ದೂರವಾಗಿದ್ದರೂ, ಆತ್ಮೀಯತೆಯನ್ನು ಹಾಗೇ ಉಳಿಸಿಕೊಂಡಿರುವುದು ವಿಶೇಷ.

ಅಕ್ಕಿನೇನಿ ಅಭಿಮಾನಿಗಳು ಅತ್ಯಂತ ಕುತೂಹಲದಿಂದ ಕಾಯುತ್ತಿದ್ದ 'ಲೆನಿನ್' ಸಿನಿಮಾ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ. ಅಖಿಲ್ ನಾಯಕರಾಗಿ ನಟಿಸಿರುವ ಈ ಚಿತ್ರ ಇಂದು (ಜುಲೈ 10) ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಮೂರು ವರ್ಷಗಳ ನಂತರ ಪ್ರೇಕ್ಷಕರ ಮುಂದೆ ಬಂದಿರುವ ಅಖಿಲ್‌ಗೆ ಈ ಬಾರಿ ಬ್ಲಾಕ್‌ಬಸ್ಟರ್ ಹಿಟ್ ಗೆಲುವು ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಪಾಸಿಟಿವ್‌ ವಿಮರ್ಶೆಗಳು ಕೇಳಿಬಂದಿವೆ. ಇವೆಲ್ಲದರ ಮಧ್ಯೆ ಅಖಿಲ್‌ಗೆ ಸಮಂತಾ ಕಡೆಯಿಂದ ಶುಭ ಹಾರೈಕೆ ಸಿಕ್ಕಿರುವುದು ಎಲ್ಲರ ಗಮನ ಸೆಳೆದಿದೆ.

ಲೆನಿನ್ ಟೀಮ್‌ಗೆ ಸ್ಯಾಮ್‌ ಹಾರೈಕೆ

ಮಾಜಿ ಮೈದುನ ಅಖಿಲ್ ಜೊತೆಗೆ ಇಡೀ ‘ಲೆನಿನ್’ ಚಿತ್ರತಂಡಕ್ಕೆ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರಿದ್ದಾರೆ. "ಲೆನಿನ್ ಚಿತ್ರತಂಡಕ್ಕೆ ಮತ್ತು ಅಖಿಲ್‌ಗೆ ಆಲ್ ದಿ ವೆರಿ ಬೆಸ್ಟ್. ಈಗಾಗಲೇ ಬಿಗ್ ಬ್ಲಾಕ್‌ಬಸ್ಟರ್ ವೈಬ್ಸ್ ಕಾಣಿಸುತ್ತಿವೆ.." ಎಂದು ಸಮಂತಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಅಖಿಲ್ ಅವರನ್ನು ಟ್ಯಾಗ್ ಮಾಡಿ, ಚಿತ್ರದ ಟ್ರೈಲರ್ ಅನ್ನು ಹಂಚಿಕೊಂಡಿದ್ದಾರೆ. ಅಕ್ಕಿನೇನಿ ಹೀರೋಗೆ ಸಮಂತಾ ಶುಭ ಹಾರೈಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಮಾಜಿ ಅತ್ತಿಗೆಗೆ ಥ್ಯಾಂಕ್ಸ್‌ ಹೇಳಿದ ಅಖಿಲ್

ಇದಕ್ಕೆ ಪ್ರತಿಕ್ರಿಯೆಯಾಗಿ ಅಖಿಲ್ ಕೂಡ ಮಾಜಿ ಅತ್ತಿಗೆ ಸಮಂತಾ ಸ್ಟೋರಿಗೆ ಪ್ರತಿಕ್ರಿಯೆ ನೀಡಿದ್ದಾರೆ. "ತುಂಬಾ ಧನ್ಯವಾದಗಳು ಸ್ಯಾಮ್... ನನ್ನ ತಂಡ ಮತ್ತು ನಾನು ನಿಮ್ಮ ಶುಭ ಹಾರೈಕೆಗಳನ್ನು ನಿಜವಾಗಿಯೂ ಗೌರವಿಸುತ್ತೇವೆ" ಎಂದು ಬರೆದು ಕೈಮುಗಿಯುವ 3 ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.

Samantha Ruth Prabhu: ಸಮಂತಾ-ನೀಡಿಮೋರ್ ಡೇಟಿಂಗ್ ಮಾಡುತ್ತಿರುವುದು ನಿಜವೇ? ಏನು ಹೇಳುತ್ತಿವೆ ಈ ಚಿತ್ರಗಳು?

ಸಮಂತಾ ಸಿನಿಮಾ ಬಗ್ಗೆ ಮಾತನಾಡಿದ್ದ ಅಖಿಲ್

ಇತ್ತೀಚೆಗಷ್ಟೇ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾವನ್ನು ಅಖಿಲ್ ಮುಕ್ತಕಂಠದಿಂದ ಶ್ಲಾಘಿಸಿದ್ದರು. 'ಲೆನಿನ್' ಸಿನಿಮಾದ ಪ್ರಚಾರದ ವೇಳೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ಈ ಚಿತ್ರವು ತುಂಬಾ ಫ್ರೆಶ್ ಕಾನ್ಸೆಪ್ಟ್‌ನೊಂದಿಗೆ ಬಂದಿದೆ ಮತ್ತು ಅದರ ವೈಬ್ ತುಂಬಾ ಚೆನ್ನಾಗಿದೆ ಎಂದು ಹೇಳಿದ್ದರು.

"ಲೆನಿನ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದರಿಂದ ಇನ್ನೂ 'ಮಾ ಇಂಟಿ ಬಂಗಾರಂ' ನೋಡಲು ಸಾಧ್ಯವಾಗಿಲ್ಲ. ಆದರೆ ಸಿನಿಮಾದ ಟ್ರೈಲರ್ ನೋಡಿದ್ದೇನೆ, ನನಗೆ ತುಂಬಾ ಇಷ್ಟವಾಯಿತು. ಸಿನಿಮಾದ ವೈಬ್ ಅದ್ಭುತವಾಗಿದೆ. ಇದು ಖಂಡಿತಾ ಹಿಟ್ ಆಗುತ್ತದೆ ಎಂದು ನನಗನಿಸಿತ್ತು. ಚಿತ್ರತಂಡಕ್ಕೆ ಅಭಿನಂದನೆಗಳು. ಈ ಸಿನಿಮಾ ಕೇವಲ ಸ್ಥಳೀಯ ಸೊಗಡನ್ನು ಮಾತ್ರ ಹೊಂದಿಲ್ಲ, ಬದಲಿಗೆ ಇದರಲ್ಲಿ ಒಂದು ಆಸಕ್ತಿದಾಯಕ ಕಾನ್ಸೆಪ್ಟ್ ಇದೆ" ಎಂದಿದ್ದರು ಅಖಿಲ್.

ಅಯ್ಯೋ, ಜೀವನಪೂರ್ತಿ ರುಚಿ ಇಲ್ಲದ ಊಟ ಮಾಡಬೇಕಾ ನಟಿ ಸಮಂತಾ? ಆಘಾತಕಾರಿ ವಿಚಾರ ಬಾಯ್ಬಿಟ್ಟ ‌ʻಮಾ ಇಂಟಿ ಬಂಗಾರಂʼ ಡೈರೆಕ್ಟರ್!

ಸಮಂತಾ ನಟನೆ ಪ್ರಶಂಸನೀಯ

"ಮಾ ಇಂಟಿ ಬಂಗಾರಂ ಎಂದು ಹೆಸರಿಟ್ಟುಕೊಂಡು, ಒಂದು ಮನೆಯೊಳಗೆ ಅಂತಹ ಆಕ್ಷನ್ ಸೀನ್‌ಗಳನ್ನು ಚಿತ್ರೀಕರಿಸಿರುವುದು ಕುತೂಹಲಕಾರಿಯಾಗಿದೆ. ಮುಖ್ಯವಾಗಿ ಮಹಿಳಾ ಪಾತ್ರದ ಮೂಲಕ ಆ ಮಟ್ಟದ ಆಕ್ಷನ್ ದೃಶ್ಯಗಳನ್ನು ಮಾಡಿಸಿರುವುದು ನಿಜಕ್ಕೂ ಅದ್ಭುತ. ಒಟ್ಟಾರೆಯಾಗಿ ಆ ಸಿನಿಮಾದ ವೈಬ್ ಚೆನ್ನಾಗಿ ವರ್ಕ್ ಆಗಿದೆ. ಸಮಂತಾ ನಟನೆ ಪ್ರಶಂಸನೀಯ. ಕಂಗ್ರಾಟ್ಸ್ ಸ್ಯಾಮ್.." ಎಂದು ಅಖಿಲ್ ಕೊಂಡಾಡಿದ್ದರು.

ಇದೀಗ ಅಖಿಲ್ ನಟನೆಯ 'ಲೆನಿನ್' ಸಿನಿಮಾಗೆ ಸಮಂತಾ ಶುಭ ಕೋರಿದ್ದಾರೆ. ಅಂದಹಾಗೆ, ಅಖಿಲ್‌ ಸಹೋದರ ನಾಗ ಚೈತನ್ಯ ಅವರನ್ನು ಸಮಂತಾ ಮದುವೆ ಆಗಿದ್ದರು. ಆನಂತರ ಇಬ್ಬರ ನಡುವೆ ಹೊಂದಾಣಿಕೆ ಸಮಸ್ಯೆಯಿಂದಾಗಿ ವಿಚ್ಛೇದನ ಪಡೆದುಕೊಂಡರು. ನಟಿ ಶೋಭಿತಾ ಜೊತೆ ಚೈತನ್ಯ ಎರಡನೇ ಮದುವೆಯಾದರೆ, ನಿರ್ದೇಶಕ ರಾಜ್‌ ನಿಡಿಮೋರು ಅವರನ್ನು ಸಮಂತಾ ವರಿಸಿದರು.

ಇನ್ನು, 'ಲೆನಿನ್' ಚಿತ್ರವನ್ನು ಮುರಳಿ ಕಿಶೋರ್ ಅಬ್ಬೂರು ನಿರ್ದೇಶಿಸಿದ್ದಾರೆ. ಇದರಲ್ಲಿ ಅಖಿಲ್ ಜೊತೆಯಾಗಿ ಭಾಗ್ಯಶ್ರೀ ಬೋರ್ಸೆ ನಾಯಕಿಯಾಗಿ ನಟಿಸಿದ್ದಾರೆ. ಇದು ರಾಯಲಸೀಮಾ ಹಿನ್ನೆಲೆಯಲ್ಲಿ ಮೂಡಿಬಂದಿರುವ ಗ್ರಾಮೀಣ ಆಕ್ಷನ್ ಡ್ರಾಮಾ ಸಿನಿಮಾವಾಗಿದ್ದು, ಕನ್ನಡದ ಪ್ರಮೋದ್‌ ಪಂಜು, ರಮೇಶ್ ಇಂದಿರಾ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಅಕ್ಕಿನೇನಿ ನಾಗಾರ್ಜುನ ಮತ್ತು ನಾಗವಂಶಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.