ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

MBBS ಪಾಸ್‌ ಮಾಡಿ ಡಾಕ್ಟರ್‌ ಆದ ಶ್ರೀಲೀಲಾ ಮುಂದೇನು ಮಾಡ್ತಾರೆ? ಅಮ್ಮನಿಂದಲೇ ಸಿಕ್ತು ಹೊಸ ಅಪ್ಡೇಟ್‌!

ಎಂಬಿಬಿಎಸ್ ಮುಗಿಸಿ ಡಾಕ್ಟರ್ ಆಗಿರುವ ನಟಿ ಶ್ರೀಲೀಲಾ ಜೂನ್‌ನಲ್ಲಿ ನಡೆಯಲಿರುವ ನೀಟ್-ಪಿಜಿ ಪರೀಕ್ಷೆಯ ಉನ್ನತ ಶಿಕ್ಷಣದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ವಿಷಯವನ್ನು ಅವರ ತಾಯಿ ಡಾ. ಸ್ವರ್ಣಲತಾ ಖಚಿತಪಡಿಸಿದ್ದಾರೆ. ಇತ್ತೀಚಿನ ಚಿತ್ರಗಳ ಸೋಲಿನಿಂದಾಗಿ ಹೊಸ ಸಿನಿಮಾಗಳಿಂದ ದೂರವಿರುವ ಶ್ರೀಲೀಲಾ, ಸದ್ಯ ವಿದ್ಯಾಭ್ಯಾಸದ ಕಡೆಗೆ ಗಮನ ನೀಡಿದ್ದಾರಂತೆ.

ನಟಿ ಶ್ರೀಲೀಲಾ ಅವರು ಕೆಲ ತಿಂಗಳ ಹಿಂದಷ್ಟೇ ಎಂಬಿಬಿಎಸ್‌ ಪಾಸ್‌ ಆಗಿ, ಕೊನೆಗೂ ಡಾಕ್ಟರ್‌ ಎನಿಸಿಕೊಂಡಿದ್ದರು. ಅಷ್ಟೊಂದು ಸಿನಿಮಾಗಳಲ್ಲಿ ಬ್ಯುಸಿ ಇದ್ದರೂ, ಎಂಬಿಬಿಎಸ್‌ ಎಂಬ ಕಠಿಣ ಕೋರ್ಸ್‌ ಅನ್ನು ಪಾಸ್‌ ಆಗಿದ್ದ ನಟಿ ಶ್ರೀಲೀಲಾ ಅವರ ಶ್ರದ್ಧೆ ಮತ್ತು ಆಸಕ್ತಿಯನ್ನು ಕಂಡು ನೆಟ್ಟಿಗರು ಭೇಷ್‌ ಎಂದಿದ್ದರು. ಇದೀಗ ಮತ್ತೊಂದು ಸಾಹಸಕ್ಕೆ ಶ್ರೀಲೀಲಾ ಮುಂದಾಗಿದ್ದಾರೆ.

ಪಿಜಿ ಮಾಡುವ ಉತ್ಸಾಹದಲ್ಲಿ ನಟಿ ಶ್ರೀಲೀಲಾ

ಹೌದು, ಎಂಬಿಬಿಎಸ್‌ ಮುಗಿಸಿರುವ ನಟಿ ಶ್ರೀಲೀಲಾ ಈಗ ಉನ್ನತ ಶಿಕ್ಷಣದತ್ತ ಗಮನ ನೀಡಿದ್ದಾರೆ. ಸಿನಿಮಾಗಳ ಚಿತ್ರೀಕರಣದಿಂದ ಬಿಡುವು ಸಿಕ್ಕಾಗಲೆಲ್ಲಾ ಅವರು ಜೂನ್‌ನಲ್ಲಿ ನಡೆಯಲಿರುವ ತಮ್ಮ ಮುಂಬರುವ ನೀಟ್-ಪಿಜಿ (NEET-PG) ಪರೀಕ್ಷೆಯ ತಯಾರಿಯಲ್ಲಿ ಬ್ಯುಸಿ ಆಗಿದ್ದಾರಂತೆ. ಈ ವಿಚಾರವನ್ನು ಸ್ವತಃ ಶ್ರೀಲೀಲಾ ಅವರ ತಾಯಿ ಡಾ. ಸ್ವರ್ಣಲತಾ ಅವರೇ ಹೇಳಿಕೊಂಡಿದ್ದಾರೆ. ಇದರ ಜೊತೆಗೆ "ಶ್ರೀಲೀಲಾ ಮನಸ್ಸಿನಲ್ಲಿ ಮದುವೆ ಅಥವಾ ರಿಲೇಷನ್‌ಶಿಪ್‌ ಕುರಿತು ಈಗಲೇ ಯಾವುದೇ ಯೋಚನೆ ಇಲ್ಲ" ಎಂಬುದನ್ನು ಸ್ವರ್ಣಲತಾ ಸ್ಪಷ್ಟಪಡಿಸಿದ್ದಾರೆ.

ಕ್ರಿಕೆಟರ್ ತಿಲಕ್‌ ವರ್ಮಾ ಜೊತೆ ನಟಿ ಶ್ರೀಲೀಲಾ ಡೇಟಿಂಗ್ ಮಾಡ್ತಿರೋದು ನಿಜವೇ? ಇಲ್ಲಿದೆ ನೋಡಿ ಅಸಲಿ ಸತ್ಯ!

ಸಿನಿಮಾಗಳಿಂದ ಬ್ರೇಕ್ ತೆಗೆದುಕೊಳ್ಳುತ್ತಾರಾ ಶ್ರೀಲೀಲಾ?

ಹೌದು, ಶ್ರೀಲೀಲಾ ಕಳೆದ 7 ವರ್ಷಗಳಲ್ಲಿ ಕನ್ನಡ, ತೆಲುಗು, ತಮಿಳು ಸೇರಿ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಬಹುತೇಕ ಸಿನಿಮಾಗಳು ಅಷ್ಟೇನೂ ಯಶಸ್ಸು ಕಂಡಿಲ್ಲ. ಕಳೆದ ವರ್ಷ ತೆರೆಕಂಡಿದ್ದ ಮೂರು ಸಿನಿಮಾಗಳು ಹಿಟ್‌ ಆಗಲಿಲ್ಲ, ಈ ವರ್ಷ ಬಂದ ಎರಡೂ ಬಿಗ್‌ ಬಜೆಟ್‌ ಸಿನಿಮಾಗಳು ಫ್ಲಾಪ್‌ ಆಗಿವೆ. ಸದ್ಯ ಶ್ರೀಲೀಲಾ ಕೈಯಲ್ಲಿ ಹಿಂದಿಯ ಕಾರ್ತಿಕ್‌ ಆರ್ಯನ್‌ ಸಿನಿಮಾ ಇದೆ. ಇದರ ಶೂಟಿಂಗ್ ಆಗಲೇ ಮುಗಿದಿದೆ. ಇತ್ತ ಧನುಷ್‌ ಜೊತೆ ಒಂದು ಸಿನಿಮಾವನ್ನು ಶ್ರೀಲೀಲಾ ಒಪ್ಪಿಕೊಂಡಿದ್ದು, ಅದರ ಶೂಟಿಂಗ್‌ ಇನ್ನಷ್ಟೇ ಆರಂಭವಾಗಬೇಕಿದೆ. ಸದ್ಯ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿರುವ ಶ್ರೀಲೀಲಾ ನೀಟ್‌ ಎಕ್ಸಾಮ್‌ ಕಡೆಗೆ ಗಮನ ನೀಡುತ್ತಿದ್ದಾರೆ ಎನ್ನಲಾಗಿದೆ.

Actress Sreeleela: ವೇದಿಕೆಯಲ್ಲಿ ನಟ ಮಹೇಶ್ ಕಂಡು ಶ್ರೀಲೀಲಾ ಗರಂ? ಅಸಲಿ ಮ್ಯಾಟರ್‌ ಏನು?

ಕ್ರಿಕೆಟರ್‌ ಜೊತೆ ಡೇಟಿಂಗ್‌ ಇಲ್ಲ!

ಈ ನಡುವೆ ಶ್ರೀಲೀಲಾ ಮತ್ತು ಭಾರತದ ಯುವ ಕ್ರಿಕೆಟಿಗ ತಿಲಕ್ ವರ್ಮಾ ನಡುವೆ ಪ್ರೇಮಾಂಕುರವಾಗಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದವು. ವೈಕುಂಠ ಏಕಾದಶಿ ಆಚರಣೆಯ ಸಂದರ್ಭದಲ್ಲಿ ಇಬ್ಬರೂ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಾಣಿಸಿಕೊಂಡ ನಂತರ ಈ ಊಹಾಪೋಹಗಳು ಶುರುವಾಗಿದ್ದವು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಶ್ರೀಲೀಲಾ ತಾಯಿ, "ಈ ಡೇಟಿಂಗ್ ಸುದ್ದಿಗಳು ಸಂಪೂರ್ಣ ಸುಳ್ಳು, ಆಧಾರರಹಿತ" ಎಂದು ಖಡಕ್ ಆಗಿ ಹೇಳಿದ್ದಾರೆ.

"ಆಯಾ ಸಂದರ್ಭಗಳಲ್ಲಿ ಅವರಿಬ್ಬರೂ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದು ಕೇವಲ ಕಾಕತಾಳೀಯ. ಯಾವುದೇ ಸಂಬಂಧವಿಲ್ಲದ ಸಂದರ್ಭಗಳನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳು ಹೇಗೆ ಕಟ್ಟುಕಥೆಗಳನ್ನು ಸೃಷ್ಟಿಸುತ್ತವೆ? ಇದು ನಿಜಕ್ಕೂ ಬೇಸರದ ಸಂಗತಿ. ಶ್ರೀಲೀಲಾ ಸದ್ಯ ತಮ್ಮ ವೃತ್ತಿಜೀವನ ಮತ್ತು ವೈದ್ಯಕೀಯ ಶಿಕ್ಷಣದ ಮೇಲಷ್ಟೇ ಸಂಪೂರ್ಣ ಗಮನವನ್ನು ಹರಿಸುತ್ತಿದ್ದಾರೆ" ಎಂದು ಸ್ವರ್ಣಲತಾ ಹೇಳಿದ್ದಾರೆ.