ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇತ್ತ ಸಿಎಂ ವಿಜಯ್‌ ಪ್ರಮಾಣ ವಚನ ಸಮಾರಂಭದಲ್ಲಿ ಎಲ್ಲರ ಕಣ್ಣು ಕುಕ್ಕಿದ ತ್ರಿಷಾ; ಅತ್ತ ನೆಟ್ಟಿಗರ ಮೆಚ್ಚುಗೆ ಪಡೆದ ʻದಳಪತಿʼ ಮಕ್ಕಳು!

ತಮಿಳುನಾಡಿನ ನೂತನ ಸಿಎಂ ಆಗಿ ದಳಪತಿ ವಿಜಯ್ ಪ್ರಮಾಣ ವಚನ ಸ್ವೀಕರಿಸುವ ವೇಳೆ ನಟಿ ತ್ರಿಷಾ ಕೃಷ್ಣನ್ ಕೇಂದ್ರಬಿಂದುವಾದರು. ಆದರೆ, ಇದೇ ವೇಳೆ ವಿಜಯ್ ಮಕ್ಕಳಾದ ಸಂಜಯ್ ಮತ್ತು ದಿವ್ಯಾ ಸಮಾರಂಭದಿಂದ ದೂರ ಉಳಿಯುವ ಮೂಲಕ ತಾಯಿ ಸಂಗೀತಾಗೆ ಬೆಂಬಲ ಸೂಚಿಸಿದ್ದು, ಅಮ್ಮಂದಿರ ದಿನದಂದೇ ತಂದೆಯ ಗೆಲುವನ್ನು ಮಕ್ಕಳೇ ಬಹಿಷ್ಕರಿಸಿದರಾ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

ತಮಿಳುನಾಡಿನ ಮುಖ್ಯಮಂತ್ರಿಯಾಗಿ ನಟ ʻದಳಪತಿʼ ಸಿ. ಜೋಸೆಫ್ ವಿಜಯ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಚೆನ್ನೈನ ಜವಾಹರ್ ಲಾಲ್ ನೆಹರು ಸ್ಟೇಡಿಯಂನಲ್ಲಿ ಈ ಕಾರ್ಯಕ್ರಮ ವೈಭವದಿಂದ ಜರುಗಿದೆ. ವಿಜಯ್ ಅವರ ಪೋಷಕರು, ಹಿತೈಷಿಗಳು ಮತ್ತು ಕುಟುಂಬ ಸದಸ್ಯರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಅವರೊಂದಿಗೆ ನಟಿ ತ್ರಿಶಾ ಕೃಷ್ಣನ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ಎಲ್ಲರ ಕಣ್ಣುಗಳು ಅವರತ್ತಲೇ ನೆಟ್ಟಿದ್ದವು.

ಸಮಾರಂಭದಲ್ಲಿ ತ್ರಿಶಾ ಫುಲ್‌ ಹೈಲೈಟ್

ಸಾಮಾನ್ಯವಾಗಿ ರಾಜಕಾರಣಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸುತ್ತಾರೆ. ಆದರೆ, ವಿಜಯ್ ಸೂಟ್ ಧರಿಸಿಕೊಂಡು ಬಂದು ಪ್ರಮಾಣ ವಚನ ಸ್ವೀಕರಿಸಿದರು. ತ್ರಿಶಾ ಅವರು ಸಾಂಪ್ರದಾಯಿಕ ಸೀರೆಯುಟ್ಟು ವೇದಿಕೆಗೆ ಆಗಮಿಸಿದ್ದರು. ನೀಲಿ ಬಣ್ಣದ ಸೀರೆ ಮತ್ತು ಅದಕ್ಕೆ ಮ್ಯಾಚಿಂಗ್ ಆದ ಕ್ರೀಮ್ ಬಣ್ಣದ ಬ್ಲೌಸ್ ಧರಿಸಿದ್ದರು. ಕೊರಳಲ್ಲಿ ಡೈಮಂಡ್ ನೆಕ್ಲೇಸ್, ಹಣೆಯ ಮೇಲೆ ಪುಟ್ಟ ಬೊಟ್ಟು, ಮುಡಿಯಲ್ಲಿ ಹೂವು ಮುಡಿದು, ಸರಳ ಮೇಕಪ್‌ನೊಂದಿಗೆ ಎಲ್ಲರ ಗಮನ ಸೆಳೆದರು. ಸ್ಟೇಡಿಯಂನಲ್ಲಿ ಸಾವಿರಾರು ಜನ ಸೇರಿದ್ದರೂ, ಕ್ಯಾಮೆರಾಗಳು ಮಾತ್ರ ತ್ರಿಶಾ ಅವರನ್ನು ಸೆರೆಹಿಡಿಯಲು ಪೈಪೋಟಿ ನಡೆಸುತ್ತಿದ್ದವು.‌

Thalapathy Vijay: ನಟ ವಿಜಯ್‌-ಸಂಗೀತಾ ಡಿವೋರ್ಸ್‌ ಪ್ರಕರಣ; ವಿಚಾರಣೆ ಮುಂದೂಡಿದ ಕೋರ್ಟ್‌

ವಿಜಯ್‌ ಮಾತು ಕೇಳಿ ತ್ರಿಶಾ ಭಾವುಕ

ಬೆಳಿಗ್ಗೆಯೇ ಪ್ರಮಾಣ ವಚನ ಸ್ವೀಕಾರದ ಸ್ಥಳಕ್ಕೆ ತ್ರಿಶಾ ಆಗಮಿಸಿದ್ದರು. ನಂತರ ವಿಜಯ್ ಅವರ ತಾಯಿ ಶೋಭಾ ಅವರನ್ನು ಆತ್ಮೀಯವಾಗಿ ಅಪ್ಪಿಕೊಂಡು ಶುಭ ಹಾರೈಸಿದರು. ವೇದಿಕೆಯ ಬಳಿ ದಳಪತಿ ಕುಟುಂಬ ಸದಸ್ಯರೊಂದಿಗೆ ಮೊದಲ ಸಾಲಿನಲ್ಲಿ ತ್ರಿಷಾ ಕುಳಿತಿದ್ದರು. ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ತ್ರಿಶಾ ಸಂಭ್ರಮಿಸಿದರು. ಜೊತೆಗೆ ತುಸು ಭಾವುಕರಾದರು.

ತ್ರಿಶಾ ಕೃಷ್ಣನ್‌ ಅವರ ವಿಡಿಯೋ ವೈರಲ್



ಡೇಟಿಂಗ್‌ ಮಾಡುತ್ತಿದ್ದಾರಾ ವಿಜಯ್‌ - ತ್ರಿಶಾ?

ವಿಜಯ್ ಮತ್ತು ತ್ರಿಶಾ ಹಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಸಿನಿಮಾದ ಹೊರತಾಗಿಯೂ ಇವರ ಸ್ನೇಹ ಮುಂದುವರಿದಿದೆ. ಚೆನ್ನೈನಲ್ಲಿ ನಡೆದ ನಿರ್ಮಾಪಕರೊಬ್ಬರ ಮಗನ ಮದುವೆಯ ರಿಸೆಪ್ಷನ್‌ಗೆ ವಿಜಯ್ ಮತ್ತು ತ್ರಿಶಾ ಒಂದೇ ಕಾರಿನಲ್ಲಿ ಒಟ್ಟಿಗೆ ಹೋಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇಬ್ಬರೂ ಹಲವು ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಡುತ್ತಿವೆ.

ವಿಜಯ್‌ ಮಕ್ಕಳು ಗೈರು!

ನಟ ವಿಜಯ್‌ ಅವರಿಗೆ ನಟಿಯೊಬ್ಬರ ಜೊತೆ ಸಂಬಂಧವಿದೆ ಎಂದು ಆರೋಪಿಸಿ ಪತ್ನಿ ಸಂಗೀತಾ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಅಂತಹ ಸಮಯದಲ್ಲಿ ವಿಜಯ್‌ ಮತ್ತು ತ್ರಿಶಾ ಹೆಚ್ಚು ಹೈಲೈಟ್‌ ಆಗುತ್ತಿರುವುದು ಚರ್ಚೆಗೆ ಕಾರಣವಾಗಿದೆ. ಇನ್ನು, ವಿಜಯ್‌ ಮಕ್ಕಳಾ ಜೇಸನ್‌ ಸಂಜಯ್‌ ಮತ್ತು ದಿವ್ಯಾ ಸಾಶಾ ಕೂಡ ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸಿರಲಿಲ್ಲ. "ವಿಜಯ್‌ ಮಕ್ಕಳು ತಂದೆಯ ಪ್ರಮಾಣ ವಚನ ಬಹಿಷ್ಕರಿಸಿ, ತಮ್ಮ ತಾಯಿಯೊಂದಿಗೆ ನಾವಿದ್ದೇವೆ ಎಂಬುದುನ್ನು ಪರೋಕ್ಷವಾಗಿ ಹೇಳಿದ್ದಾರೆ. ವಿಶ್ವ ಅಮ್ಮಂದಿರ ದಿನದಂದು ಸಂಗೀತಾಗೆ ಅವರ ಮಕ್ಕಳು ನೀಡಿದ ದೊಡ್ಡ ಉಡುಗೊರೆ ಇದು" ಎಂದು ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ.