ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ಧುರಂಧರ್ʼ ಸಿನಿಮಾ ಸಕ್ಸಸ್‌ ಬಳಿಕ ಬದಲಾಗಿಬಿಟ್ರಾ ನಿರ್ದೇಶಕ ಆದಿತ್ಯ ಧರ್;‌ ಪತ್ನಿ ಯಾಮಿ ಗೌತಮ್‌ ಬಿಚ್ಚಿಟ್ಟ ಸತ್ಯವೇನು?

ರಣವೀರ್ ಸಿಂಗ್ ನಟನೆಯ 'ಧುರಂಧರ್' ಸರಣಿಯು ಜಾಗತಿಕವಾಗಿ 3 ಸಾವಿರ ಕೋಟಿ ರೂ. ಗಳಿಸಿ ಹೊಸ ಇತಿಹಾಸ ಬರೆದಿದೆ. ಈ ಭರ್ಜರಿ ಯಶಸ್ಸಿನ ಹಿನ್ನೆಲೆಯಲ್ಲಿ ನಿರ್ದೇಶಕ ಆದಿತ್ಯ ಧರ್ ಬದಲಾಗಿದ್ದಾರಾ? ಆ ಬಗ್ಗೆ ಅವರ, ಪತ್ನಿ ನಟಿ ಯಾಮಿ ಗೌತಮ್ ಪ್ರತಿಕ್ರಿಯೆ ನೀಡಿದ್ದಾರೆ. ಕಷ್ಟದ ದಿನಗಳನ್ನು ಹತ್ತಿರದಿಂದ ಕಂಡಿರುವ ನಾವು ಯಶಸ್ಸನ್ನು ಹೇಗೆ ಸ್ವೀಕರಿಸಿದ್ದೇವೆ ಎಂಬುದನ್ನು ಹೇಳಿಕೊಂಡಿದ್ದಾರೆ.

ರಣವೀರ್‌ ಸಿಂಗ್‌ ನಟನೆಯ 'ಧುರಂಧರ್' ಸರಣಿಯ ಸಿನಿಮಾಗಳು ಭರ್ಜರಿ ಯಶಸ್ಸು ಕಂಡಿವೆ. ʻಉರಿʼ ಸಿನಿಮಾದ ನಂತರ ಆದಿತ್ಯ ಧರ್‌ ಈಗ 'ಧುರಂಧರ್' ಗೆಲುವಿನಿಂದಾಗಿ ಭಾರತದ ಟಾಪ್‌ ಟ್ರೆಂಡಿಂಗ್‌ ನಿರ್ದೇಶಕ ಎನಿಸಿಕೊಂಡಿದ್ದಾರೆ. ಅವರ ಮುಂದಿನ ಸಿನಿಮಾ ಯಾವುದು ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಅದರೆ ಈ ಚಿತ್ರದ ಗೆಲುವು ಆದಿತ್ಯ ಧರ್‌ ಮೇಲೆ ಪರಿಣಾಮ ಬೀರಿದೆಯಾ? ಅವರು ಬದಲಾಗಿದ್ದಾರಾ? ಆ ಬಗ್ಗೆ ಸ್ವತಃ ಅವರ ಪತ್ನಿ, ನಟಿ ಯಾಮಿ ಗೌತಮ್‌ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಆದಿತ್ಯ ವಿನಮ್ರ ಸ್ವಭಾವದ ವ್ಯಕ್ತಿ

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಯಾಮಿ ಗೌತಮ್‌, "ವ್ಯಕ್ತಿಗಳಾಗಿ ನಮ್ಮಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದಕ್ಕೆ ಆದಿತ್ಯ ಧರ್‌ ಅವರ ವ್ಯಕ್ತಿತ್ವವೇ ಕಾರಣ. ಅವರು ಯಾವುದಕ್ಕೂ ಅತಿಯಾಗಿ ತಲೆಕೆಡಿಸಿಕೊಳ್ಳದ ಮತ್ತು ಅತ್ಯಂತ ವಿನಮ್ರ ಸ್ವಭಾವದ ವ್ಯಕ್ತಿ. ನಾನು ಅವರ ಏಳುಬೀಳುಗಳನ್ನು ಹತ್ತಿರದಿಂದ ನೋಡಿದ್ದೇನೆ. ಕಷ್ಟದ ಸಮಯದಲ್ಲಿ ನಾವು ಎಂದಿಗೂ ಹತಾಶೆಯನ್ನು ಹೊರಹಾಕಿಲ್ಲ. ದೇವರ ದಯೆಯಿಂದ ಒಳ್ಳೆಯ ಕೆಲಸಗಳು ಸ್ವಲ್ಪ ತಡವಾಗಬಹುದು, ಆದರೆ ಅವು ನಮಗೆ ಸಿಗುವುದು ಖಂಡಿತ ಎಂಬ ನಂಬಿಕೆ ನಮಗಿದೆ" ಎಂದು ಹೇಳಿದ್ದಾರೆ.

Dhurandhar Movie: ‘ಧುರಂಧರ್’ ಸಿನಿಮಾದ ಮೇಕಿಂಗ್ ವಿಡಿಯೋ ಚಿತ್ರಮಂದಿರದಲ್ಲಿ? ರಿಲೀಸ್‌ ಯಾವಾಗ?

ಸಿನಿಮಾ ನಿರ್ದೇಶಕನ ಮಾಧ್ಯಮ

"ಸಿನಿಮಾ ಯಾವಾಗಲೂ ನಿರ್ದೇಶಕನ ಮಾಧ್ಯಮ. ಚಿತ್ರಕ್ಕೆ ಬೇಕಾದ ಮೂಲಭೂತ ಅಂಶಗಳಾದ ಸ್ಕ್ರಿಪ್ಟ್ ಮತ್ತು ಕಥೆಗಳಿಗೆ ಈಗ ಮತ್ತೆ ಮಹತ್ವ ಸಿಗುತ್ತಿದೆ. ಇದು ಕೇವಲ ಬಾಕ್ಸ್ ಆಫೀಸ್ ದಾಖಲೆಗಳ ಬಗ್ಗೆ ಅಲ್ಲ, ಚಿತ್ರಮಂದಿರಕ್ಕೆ ಜನರನ್ನು ಕರೆತರಲು ನಾವು ಪಡುತ್ತಿದ್ದ ಹರಸಾಹಸಕ್ಕೆ ಧುರಂಧರ್ ಸಿನಿಮಾ ಒಂದು ದಾರಿಯಾಗಿದೆ" ಎಂದು ಯಾಮಿ ಗೌತಮ್‌ ತಿಳಿಸಿದ್ದಾರೆ.

ಆದಿತ್ಯ ಧರ್ ನಿರ್ದೇಶನದ ಜೊತೆಗೆ ರಣ್ವೀರ್‌ ಸಿಂಗ್‌, ಅಕ್ಷಯ್ ಖನ್ನಾ, ಆರ್. ಮಾಧವನ್, ಸಂಜಯ್ ದತ್, ಅರ್ಜುನ್ ರಾಂಪಾಲ್ ಮತ್ತು ಸಾರಾ ಅರ್ಜುನ್ ಅವರಂತಹ ದೊಡ್ಡ ತಾರಾಗಣ ಈ ಸಿನಿಮಾದಲ್ಲಿದೆ. ಶಾಶ್ವತ್ ಸಚ್‌ದೇವ್ ಅವರ ಸಂಗೀತ ಕೂಡ ಧುರಂಧರ್‌ ಚಿತ್ರದ ಗೆಲುವಿಗೆ ಪ್ರಮುಖ ಪಾತ್ರವಹಿಸಿದೆ.

ಬಾಕ್ಸ್ ಆಫೀಸ್‌ನಲ್ಲಿ 'ಧುರಂಧರ್ 2' ಅಬ್ಬರ

ಮಾರ್ಚ್‌ 19ರಂದು ತೆರೆಕಂಡ 'ಧುರಂಧರ್ 2' ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಿಲೀಸ್‌ ಆಗಿ ಆರು ವಾರಗಳ ಕಳೆದರೂ ಈಗಲೂ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಈಗಾಗಲೇ ಕಲೆಕ್ಷನ್‌ ವಿಚಾರದಲ್ಲಿ ಈ ಸಿನಿಮಾ ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆ ಬರೆದಿದೆ. ಧುರಂಧರ್‌ ಚಿತ್ರದ ಎರಡೂ ಪಾರ್ಟ್‌ಗಳಿಂದ ಆಗಿರುವ ಒಟ್ಟು ಗಳಿಕೆ 3 ಸಾವಿರ ಕೋಟಿ ರೂ. ದಾಟಿದೆ. ಭಾರತ ಯಾವ ಸಿಕ್ವೇಲ್‌ ಸಿನಿಮಾಗಳು ಈ ದಾಕಲೆಯನ್ನು ಬರೆದಿಲ್ಲ.