ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Adilakshmi Purana Serial: ‘ಆದಿ ಲಕ್ಷ್ಮೀ ಪುರಾಣ’ದಿಂದ ಹೊರ ಬಂದಿದ್ದೇಕೆ? ಕಾರಣ ತಿಳಿಸಿದ ನಟಿ ರಕ್ಷಿತಾ

Adilakshmi Purana Serial: ಜೀ ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಶುರುವಾದ ಧಾರಾವಾಹಿ ಆದಿಲಕ್ಷ್ಮೀ ಪುರಾಣ . ಆದಿಲಕ್ಷ್ಮೀ ಪುರಾಣ ಧಾರಾವಾಹಿಯಿಂದ ಅಮೃತಾ ಪಾತ್ರಧಾರಿ ನಟಿ ರಕ್ಷಿತಾ ಹೊರ ಬಂದಿದ್ದರು. ಆದಿ ಲಕ್ಷ್ಮೀ ಜೋಡಿ ಜೊತೆಗೆ ಸಂಜೀವ್‌ ಮತ್ತು ಅಮೃತಾ ಜೋಡಿ ಕೂಡ ಜನಪ್ರಿಯತೆ ಪಡೆದಿತ್ತು. ಇದೇ ಪಾತ್ರಕ್ಕೆ ‘ಪಾರು’ ಖ್ಯಾತಿಯ ನಟಿ ಮಾನ್ಸಿ ಜೋಶಿ ಅವರು ಬಣ್ಣ ಹಚ್ಚಿದ್ದಾರೆ. . ಇದೀಗ ನಟಿ ರಕ್ಷಿತಾ ಸ್ವತಃ ತಾವು ಸೀರಿಯಲ್ ಬಿಡಲು ಕಾರಣ ಏನೆಂದು ತಿಳಿಸಿದ್ದಾರೆ.

ಆದಿ ಲಕ್ಷ್ಮೀ ಪುರಾಣ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಇತ್ತೀಚೆಗೆ ಶುರುವಾದ ಧಾರಾವಾಹಿ ಆದಿಲಕ್ಷ್ಮೀ ಪುರಾಣ (Adilakshmi Purana). ಆದಿಲಕ್ಷ್ಮೀ ಪುರಾಣ ಧಾರಾವಾಹಿಯಿಂದ ಅಮೃತಾ ಪಾತ್ರಧಾರಿ ನಟಿ ರಕ್ಷಿತಾ ಹೊರ ಬಂದಿದ್ದರು. ಆದಿ ಲಕ್ಷ್ಮೀ ಜೋಡಿ ಜೊತೆಗೆ ಸಂಜೀವ್‌ ಮತ್ತು ಅಮೃತಾ ಜೋಡಿ ಕೂಡ ಜನಪ್ರಿಯತೆ ಪಡೆದಿತ್ತು. ಇದೇ ಪಾತ್ರಕ್ಕೆ ‘ಪಾರು’ ಖ್ಯಾತಿಯ ನಟಿ ಮಾನ್ಸಿ ಜೋಶಿ (Mansi Joshi) ಅವರು ಬಣ್ಣ ಹಚ್ಚಿದ್ದಾರೆ. . ಇದೀಗ ನಟಿ ರಕ್ಷಿತಾ ಸ್ವತಃ ತಾವು ಸೀರಿಯಲ್ ಬಿಡಲು ಕಾರಣ ಏನೆಂದು ತಿಳಿಸಿದ್ದಾರೆ.

ವಿಶೇಷವಾದ ಪ್ರಯಾಣ

ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ರಕ್ಷಿತಾ ‘ಈ ದಿನ ಬರುತ್ತದೆ ಅಂತ ಯಾವತ್ತೂ ಅನಿಸಿರಲಿಲ್ಲ… ಆದರೆ ಕೆಲವು ಪರಿಸ್ಥಿತಿಗಳ ಕಾರಣದಿಂದ ಇಂದು ಈ ಮಾತು ಬರೆಯಬೇಕಾದ ಪರಿಸ್ಥಿತಿ ಬಂದಿದೆ. ಆದಿಲಕ್ಷ್ಮೀ ಪುರಾಣ, ಧಾರಾವಾಹಿಯಲ್ಲಿ ಅಮ್ಮು ಪಾತ್ರ ಮಾಡೋದು ನನಗೆ ತುಂಬಾ ವಿಶೇಷವಾದ ಪ್ರಯಾಣವಾಗಿತ್ತು. ಈ ಪಾತ್ರದ ಮೂಲಕ ನೀವು ಎಲ್ಲರೂ ನನ್ನ ಮೇಲೆ ತೋರಿಸಿದ ಪ್ರೀತಿ ಮತ್ತು ಬೆಂಬಲ ನನಗೆ ತುಂಬಾ ಅಮೂಲ್ಯ.

ಇದನ್ನೂ ಓದಿ: Vinay Gowda: ಸರಿಯಾಗಿ ನಾಯಿಗಳ ಹೆಸರೇ ಗೊತ್ತಿಲ್ಲ; ಇಂಥವರನ್ನ ಒದ್ದು ಓಡಿಸಬೇಕು: ಡಾಗ್‌ ಸತೀಶ್‌ ಬಗ್ಗೆ ವಿನಯ್‌ ಗೌಡ ಗರಂ

ಇದು ಒಂದು ಹೊಸ ಆರಂಭ

ನನಗೆ ಈಗ ತುಂಬಾ ಸಂದೇಶಗಳು ಬರುತ್ತಿವೆ – ನೀವು ಅಮ್ಮು ಪಾತ್ರವನ್ನು ಎಷ್ಟು ಇಷ್ಟಪಡ್ತೀರಾ ಅಂತ. ನಿಜ ಹೇಳಬೇಕಂದರೆ, ಆ ಕಮೆಂಟ್‌ ಮತ್ತು ಮೆಸೆಜ್‌ ಓದಿದಾಗ ನನ್ನ ಕಣ್ಣಲ್ಲಿ ನೀರು ಬರುತ್ತಿದೆ. ನಾನು ಈ ಧಾರಾವಾಹಿಯನ್ನು ಇನ್ನೂ ಬಹಳ ಕಾಲ ಮಾಡ್ತೀನಿ ಅಂತ ಭಾವಿಸಿದ್ದೆ… ಆದರೆ ಕೆಲವು ಪರಿಸ್ಥಿತಿಗಳ ಕಾರಣದಿಂದ ನಾನು ಈ ಧಾರಾವಾಹಿಗೆ ವಿದಾಯ ಹೇಳಬೇಕಾಗಿದೆ. ಈ ಸುಂದರ ಪ್ರಯಾಣಕ್ಕೆ ಕಾರಣವಾದ ನಮ್ಮ ಸಂಪೂರ್ಣ ತಂಡ ಮತ್ತು ಎಲ್ಲಾ ತಾಂತ್ರಿಕ ಸಿಬ್ಬಂದಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.

ವಿಶೇಷವಾಗಿ ಜೀ ಕನ್ನಡ ವಾಹಿನಿಗೆ , Sudheendra sir and Santosh Koti sir ಅವರಿಗೆ ನನಗೆ ಈ ಅದ್ಭುತ ಅವಕಾಶ ನೀಡಿ, ನಿಮ್ಮ ಮುಂದೆ ನಟಿ ಆಗಿ ಕಾಣಿಸಿಕೊಳ್ಳುವ ಅವಕಾಶ ಕೊಟ್ಟದ್ದಕ್ಕೆ ತುಂಬಾ ಧನ್ಯವಾದಗಳು. . ನಿಮ್ಮ ಪ್ರೀತಿ ಮತ್ತು ಬೆಂಬಲವೇ ನನಗೆ ಯಾವಾಗಲೂ ದೊಡ್ಡ ಶಕ್ತಿ. ಇದು ಅಂತ್ಯ ಅಲ್ಲ… ಇದು ಒಂದು ಹೊಸ ಆರಂಭ. ಮುಂದಿನ ನನ್ನ ಪ್ರಾಜೆಕ್ಟ್‌ಗಳಲ್ಲಿಯೂ ನೀವು ಇದೇ ರೀತಿ ನನ್ನನ್ನು ಪ್ರೀತಿಸಿ, ಬೆಂಬಲಿಸುತ್ತೀರಾ ಎಂದು ನಾನು ಆಶಿಸುತ್ತೇನೆ. ಅಮ್ಮು ಪಾತ್ರ ಯಾವಾಗಲೂ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿರುತ್ತದೆ… ಮತ್ತು ನೀವು ಎಲ್ಲರೂ ಕೂಡ. ಎಲ್ಲರಿಗೂ ನನ್ನ ತುಂಬು ಪ್ರೀತಿ.



Signing off - Ammu ಎಂದು ನಟಿ ರಕ್ಷಿತಾ ಬರೆದುಕೊಂಡಿದ್ದಾರೆ. ಆ ಮೂಲಕ ಎಲ್ಲಾ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಆದಿಲಕ್ಷ್ಮೀ ಪುರಾಣ ಕಥೆ ಏನು?

ಸಂಪ್ರದಾಯ ಮತ್ತು ಆಧುನಿಕತೆಯ ಮಧ್ಯೆ ನಿರ್ಮಾಣವಾದ ಕಥೆಯಾಗಿದೆ. ಹಳ್ಳಿ ಹುಡುಗಿ ಲಕ್ಷಿ, ಸಿಟಿ ಹುಡುಗ ಆದಿ ನಡುವಿನ ಕಥೆ. ಮೊದಲ ಭೇಟಿಯಲ್ಲೇ ಆದಿಯಿಂದ ತಿರಸ್ಕರಿಸಲ್ಪಟ್ಟ ಲಕ್ಷ್ಮಿ ಪುನಃ ಆತನ ಜಗತ್ತಿಗೆ ಮರಳಿ ಬರುತ್ತಾಳೆ.

ಇದನ್ನೂ ಓದಿ: Landlord Movie OTT: ಯುಗಾದಿ ಹಬ್ಬಕ್ಕೆ ಬರ್ತಿದ್ದಾನೆ ‘ಲ್ಯಾಂಡ್​​ಲಾರ್ಡ್’! ಸ್ಟ್ರೀಮಿಂಗ್‌ ಎಲ್ಲಿ?

ಆದಿಯ ಪ್ರೀತಿ ಪಡೆಯಲು ಪರದಾಡುವ ಲಕ್ಷ್ಮಿ ಆತನ ತಾತ ಧರ್ಮರಾಜ್ ಅವರು ನೀಡುವ ಕಠಿಣ ಸವಾಲುಗಳನ್ನು ಎದುರಿಸುತ್ತಾಳೆ. ಮನೆ, ಕಾಲೇಜು ಇವೆರಡರನ್ನು ಲಕ್ಷ್ಮಿ ಹೇಗೆ ಸರಿದೂಗಿಸಿಕೊಂಡು ಹೋಗುತ್ತಾಳೆ ಎಂಬುದು ಈ ಕಥೆಯ ಮುಖ್ಯ ಸಾರಾಂಶ.

Yashaswi Devadiga

View all posts by this author