ಧುರಂಧರ್ ದಿ ರಿವೆಂಜ್ (Dhurandhar The Revenge) ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದೆ. ವೀಕ್ಷಕರು ಮತ್ತು ಸೆಲೆಬ್ರಿಟಿಗಳಿಂದ ಭಾರಿ ಮೆಚ್ಚುಗೆಯನ್ನು ಗಳಿಸಿದೆ. IMDb ಜನಪ್ರಿಯ ಭಾರತೀಯ (IMDb Popular Indian Celebrities) ಸೆಲೆಬ್ರಿಟಿಗಳ ಪಟ್ಟಿಯಲ್ಲೂ ಈ ಚಿತ್ರದ ತಂಡವೇ ರಾರಾಜಿಸುತ್ತಿದೆ. ಅಗ್ರ ಸ್ಥಾನವನ್ನು ಯಾವುದೇ ನಟ ಹೊಂದಿಲ್ಲ, ಬದಲಾಗಿ ನಿರ್ದೇಶಕ ಆದಿತ್ಯ ಧರ್ (Aditya Dhar) ಹೊಂದಿದ್ದಾರೆ.
IMDb ಪಟ್ಟಿಯಲ್ಲಿ ಆದಿತ್ಯ ಧರ್
ಈ ವಾರದ ಐಎಮ್‌ಡಿಬಿ ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಧುರಂಧರ್: ದಿ ರಿವೆಂಜ್ ಚಿತ್ರದ ಪಾತ್ರವರ್ಗ ಮತ್ತು ತಂಡವು ಮುನ್ನಡೆಸುತ್ತಿದೆ ಎಂದು ಪುಟ ಹಂಚಿಕೊಂಡ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇಂತಹ ಪಟ್ಟಿಗಳಲ್ಲಿ ಸ್ಟಾರ್ ನಟರು ಮೊದಲ ಸ್ಥಾನದಲ್ಲಿರುತ್ತಾರೆ. ಆದರೆ ಈ ಬಾರಿ ‘ಧುರಂಧರ್’ ಚಿತ್ರದ ನಿರ್ದೇಶಕ ಆದಿತ್ಯ ಧರ್ ಅವರು ನಟರನ್ನೆಲ್ಲಾ ಹಿಂದಿಕ್ಕಿ ಮೊದಲ ಸ್ಥಾನ ಇದ್ದಾರೆ.
ಇದನ್ನೂ ಓದಿ: Ranveer Singh: ಎಐ ಮೂಲಕ ‘ಧುರಂಧರ್ 2’ ಚಿತ್ರದ ಕ್ಲೈಮ್ಯಾಕ್ಸ್ ಬದಲಾವಣೆ ; ಖುಷ್ ಆದ್ರು ಪ್ರೇಕ್ಷಕರು
ಸಾರಾ ಅರ್ಜುನ್ 2 ನೇ ಸ್ಥಾನದಲ್ಲಿ, ರಣವೀರ್ ಸಿಂಗ್ 3 ನೇ ಸ್ಥಾನದಲ್ಲಿ, ಉದಯಬೀರ್ ಸಂಧು 7 ನೇ ಸ್ಥಾನದಲ್ಲಿ, ಅರ್ಜುನ್ ರಾಂಪಾಲ್ 9 ನೇ ಸ್ಥಾನದಲ್ಲಿ, ಸೌಮ್ಯ ಟಂಡನ್ 10 ನೇ ಸ್ಥಾನದಲ್ಲಿ, ಗೌರವ್ ಗೆರಾ 12 ನೇ ಸ್ಥಾನದಲ್ಲಿ, ಡ್ಯಾನಿಶ್ ಇಕ್ಬಾಲ್ 13 ನೇ ಸ್ಥಾನದಲ್ಲಿ ಮತ್ತು ರಾಕೇಶ್ ಬೇಡಿ 20 ನೇ ಸ್ಥಾನದಲ್ಲಿದ್ದಾರೆ. ಮೊದಲ ಚಿತ್ರ ಧುರಂಧರ್‌ನಲ್ಲಿದ್ದ ಅಕ್ಷಯ್ ಖನ್ನಾ 16 ನೇ ಸ್ಥಾನದಲ್ಲಿದ್ದಾರೆ.
ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಯಾದ ಅನಸ್ವರ ರಾಜನ್ ಅವರ 'ವಿಥ್ ಲವ್' ಚಿತ್ರ 6 ನೇ ಸ್ಥಾನದಲ್ಲಿದೆ. ಇತ್ತೀಚೆಗೆ ಬಿಡುಗಡೆಯಾದ 'ಆಸ್ಪಿರಂಟ್ಸ್' ನ ಮೂರನೇ ಸೀಸನ್‌ನ ಭಾಗವಾಗಿರುವ ಜತಿನ್ ಗೋಸ್ವಾನಿ 14 ನೇ ಸ್ಥಾನದಲ್ಲಿದ್ದಾರೆ.
ಇದು ವಿಶ್ವಾದ್ಯಂತ ಐಎಮ್‌ಡಿಬಿಗೆ ಮಾಸಿಕ 200 ಮಿಲಿಯನ್‌ಗಿಂತಲೂ ಹೆಚ್ಚು ಭೇಟಿಗಳನ್ನು ಆಧರಿಸಿದೆ. ಮನರಂಜನಾ ಅಭಿಮಾನಿಗಳು ಪ್ರತಿ ವಾರ ಯಾರು ಟ್ರೆಂಡಿಂಗ್‌ನಲ್ಲಿದ್ದಾರೆ ಎಂಬುದನ್ನು ನೋಡಬಹುದು, ತಮ್ಮ ನೆಚ್ಚಿನ ಮನರಂಜಕರನ್ನು ಅನುಸರಿಸಬಹುದು ಮತ್ತು ಹೊಸ ಅದ್ಭುತ ಪ್ರತಿಭೆಯನ್ನು ಕಂಡುಹಿಡಿಯಬಹುದು.
ಐಎಂಡಿಬಿ ಒಂದು ಪ್ರಸಿದ್ಧ ಆನ್‌ಲೈನ್ ವೇದಿಕೆ ಆಗಿದ್ದು, ಸಿನಿಮಾ, ಟಿವಿ ಶೋಗಳು, ನಟರು, ನಿರ್ಮಾಪಕರ ಮತ್ತು ತಂತ್ರಜ್ಞರ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ಇಲ್ಲಿ ಜನರು ಸಿನಿಮಾಗಳಿಗೆ ರೇಟಿಂಗ್ ಮತ್ತು ವಿಮರ್ಶೆಗಳನ್ನು ನೀಡಬಹುದು. ನಿಖರ ಮಾಹಿತಿ, ನಟರ ವಿವರಗಳು ಮತ್ತು ಟ್ರೈಲರ್‌ಗಳು ಸುಲಭವಾಗಿ ಲಭ್ಯವಾಗುತ್ತವೆ.
ಸಾಮಾನ್ಯವಾಗಿ ಯಾವುದೇ ಪ್ಯಾನ್ ಇಂಡಿಯಾ ಸಿನಿಮಾ ತೆರೆಕಂಡರೂ, ಮೊದಲ ದಿನದಿಂದಲೇ ಅಧಿಕೃತ ಗಳಿಕೆಯನ್ನು ಚಿತ್ರತಂಡ ಹಂಚಿಕೊಳ್ಳುತ್ತಿರುತ್ತದೆ. ಆದರೆ ಧುರಂಧರ್ 2 ತೆರೆಕಂಡು ಐದು ದಿನಗಳಾದರೂ ನಿರ್ಮಾಪಕರು ಮಾತ್ರ ಕಲೆಕ್ಷನ್ ಬಗ್ಗೆ ಗಪ್ ಚುಪ್ ಆಗಿದ್ದರು. ಆದರೆ ಇದೀಗ ನಾಲ್ಕು ದಿನಗಳಿಗೆ ಆಗಿರುವ ಒಟ್ಟಾರೆ ಗಳಿಕೆಯ ಇಂಚಿಂಚೂ ಮಾಹಿತಿಯನ್ನು ತಿಳಿಸಿದ್ದಾರೆ.
ಇದನ್ನೂ ಓದಿ: Nagarjuna: ರಣವೀರ್ ಸಿನಿಮಾ ನೋಡಿ ನಟ ನಾಗಾರ್ಜುನ ಫುಲ್ ಫಿದಾ! ಹೇಳಿದ್ದೇನು?
ಕಳೆದ ನಾಲ್ಕು ದಿನಗಳಲ್ಲಿ ವಿಶ್ವಾದ್ಯಂತ ಈ ಸಿನಿಮಾವು 761 ಕೋಟಿ ರೂ. ಹಣವನ್ನು ಬಾಚಿಕೊಂಡಿದೆ ಎಂದು ಅಧಿಕೃತವಾಗಿ ಚಿತ್ರತಂಡ ತಿಳಿಸಿದೆ. ಈ ಪ್ರಮಾಣದ ಗಳಿಕೆಯನ್ನು ಈ ಹಿಂದೆ ಭಾರತದ ಯಾವ ಸಿನಿಮಾವೂ ಮಾಡಿರಲಿಲ್ಲ ಎಂಬುದು ವಿಶೇಷ.