ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Afro Tapaang: ಗಿಲ್ಲಿಯ ʻದೊಡ್ಡವ್ವʼಸಾಂಗ್‌ಗೆ ಶಿವಣ್ಣ, ರಾಜ್ ಬಿ ಶೆಟ್ಟಿ, ಉಪೇಂದ್ರ ಸ್ಟೆಪ್ಸ್ ಹಾಕಿದ್ರೆ ಹೇಗಿರತ್ತೆ? ಟ್ರೆಂಡ್‌ ಆಗ್ತಿದೆ AFRO ಟಪಾಂಗ್‌!

ಈಗಂತೂ ಸಿಕ್ಕಾಪಟ್ಟೆ ಟ್ರೆಂಡಿಂಗ್​ನಲ್ಲಿರೋ ಡೈಲಾಗ್​ ಅಂದ್ರೆ ಚಿಕ್ಕವ್ವ ಚಿಕ್ಕವ್ವ ದ್ವಾಸೆ ಕೊಡು.. ದೊಡ್ಡವ್ವ ದೊಡ್ಡವ್ವ ಚಟ್ನಿ ಕೊಡು..ಅಶ್ವಿನಿ ಗೌಡ ಮತ್ತು ಜಾನ್ವಿ ಅವರನ್ನು ಉದ್ದೇಶಿಸಿ ‘ದೊಡ್ಡವ್ವ ದೊಡ್ಡವ್ವ ದೋಸೆ ಕೊಡು, ಚಿಕ್ಕವ್ವ ಚಿಕ್ಕವ್ವ ಚಕ್ಲಿ ಕೊಡು’ ಎಂದು ಗಿಲ್ಲಿ ಬಿಗ್ ಬಾಸ್ ಮನೆಯಲ್ಲಿ ಡೈಲಾಗ್ ಹೇಳಿದ್ದರು. ಈ ಸಾಂಗ್‌ವನ್ನು ಸಾಕಷ್ಟು ಮಂದಿ ರೀಲ್ಸ್‌ ಮಾಡಿ ಶೇರ್‌ ಕೂಡ ಮಾಡಿದ್ದಾರೆ. ಆದರೀಗ ಮತ್ತೆ ಏಕೆ ಸುದ್ದಿಯಲ್ಲಿದೆ ಗೊತ್ತಾ?

bigg boss kannada

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (Bigg Boss Kannada 12) ಗಿಲ್ಲಿ ನಟ (Gilli) ಸಖತ್‌ ಶೈನ್‌ ಆಗ್ತಿದ್ದಾರೆ. ಗಿಲ್ಲಿ ನಟ ಕೂಡ ದರ್ಶನ್ (Darshan) ಜೊತೆ ‘ಡೆವಿಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಮುಖ ಪಾತ್ರವನ್ನು ಅವರು ಮಾಡುತ್ತಿದ್ದಾರೆ ಎಂದು ತಂಡ ಮಾಹಿತಿ ನೀಡಿದೆ. ಶರ್ಟ್ ಹಾಕಿ, ಅದಕ್ಕೆ ಟೈ ಹಾಕಿ ಗಿಲ್ಲಿ ಅವರು ಕಾಣಿಸಿಕೊಂಡಿದ್ದಾರೆ ಈ ಪೋಸ್ಟರ್‌ ವೈರಲ್‌ ಆಗ್ತಿದ್ದಂತೆ ಈಗ ಮತ್ತೆ ಗಿಲ್ಲಿಯ ಸಾಂಗ್‌ ಸುದ್ದಿಯಾಗಿದೆ.

ದೊಡ್ಡವ್ವ ದೊಡ್ಡವ್ವ ಚಟ್ನಿ ಕೊಡು

ಹೌದು ಈಗಂತೂ ಸಿಕ್ಕಾಪಟ್ಟೆ ಟ್ರೆಂಡಿಂಗ್​ನಲ್ಲಿರೋ ಡೈಲಾಗ್​ ಅಂದ್ರೆ ಚಿಕ್ಕವ್ವ ಚಿಕ್ಕವ್ವ ದ್ವಾಸೆ ಕೊಡು.. ದೊಡ್ಡವ್ವ ದೊಡ್ಡವ್ವ ಚಟ್ನಿ ಕೊಡು..ಅಶ್ವಿನಿ ಗೌಡ ಮತ್ತು ಜಾನ್ವಿ ಅವರನ್ನು ಉದ್ದೇಶಿಸಿ ‘ದೊಡ್ಡವ್ವ ದೊಡ್ಡವ್ವ ದೋಸೆ ಕೊಡು, ಚಿಕ್ಕವ್ವ ಚಿಕ್ಕವ್ವ ಚಕ್ಲಿ ಕೊಡು’ ಎಂದು ಗಿಲ್ಲಿ ಬಿಗ್ ಬಾಸ್ ಮನೆಯಲ್ಲಿ ಡೈಲಾಗ್ ಹೇಳಿದ್ದರು.

ಇದು ಸಾಕಷ್ಟು ಗಮನ ಸೆಳೆದಿತ್ತು. ‘ಟುಡೇಸ್ ಬೀಟ್ಸ್’ ಹೆಸರಿನ ಇನ್​ಸ್ಟಾಖಾತೆ ಹೊಂದಿರೋ ಐನ್​ಸ್ಟನ್ ಫರ್ನಾಂಡಿಸ್ ಅವರು ಈ ಡೈಲಾಗ್​ನ ರಿಮಿಕ್ಸ್ ಮಾಡಿದ್ದರು. ಇದರ ಬಳಿಕ ಈ ಸಾಂಗ್‌ವನ್ನು ಸಾಕಷ್ಟು ಮಂದಿ ರೀಲ್ಸ್‌ ಮಾಡಿ ಶೇರ್‌ ಕೂಡ ಮಾಡಿದ್ದಾರೆ. ಆದರೀಗ ಮತ್ತೆ ಏಕೆ ಸುದ್ದಿಯಲ್ಲಿದೆ ಗೊತ್ತಾ?

ಇದನ್ನೂ ಓದಿ: BBK 12: ʻನನ್ನ ವ್ಯಕ್ತಿತ್ವಕ್ಕೆ ಅವಮಾನ ಆಗೋ ರೀತಿ ಮಾಡಿದ್ದೇ ಅವಳುʼ ; ರಕ್ಷಿತಾಗೆ ಲೆಟರ್ ಸಿಗದಂತೆ ಮಾಡ್ತಾರಾ ಅಶ್ವಿನಿ?

45 ಸಿನಿಮಾದ ಪ್ರಮೋಷನಲ್‌ ಸಾಂಗ್

ಶಿವಣ್ಣ, ಉಪೇಂದ್ರ, ರಾಜ್‌ ಬಿ ಶೆಟ್ಟಿ ನಟಿಸಿರುವ 45 ಸಿನಿಮಾದ ಪ್ರಮೋಷನಲ್‌ ಸಾಂಗ್ ರಿಲೀಸ್‌ ಆದಾಗಿನಿಂದಲೂ ಸಿಕ್ಕಾಪಟ್ಟೆ ಸೌಂಡ್‌ ಮಾಡ್ತಿದೆ. ಶಿವಣ್ಣ ಜೊತೆಯಾಗಿ ಉಪೇಂದ್ರ, ರಾಜ್‌ ಬಿ ಶೆಟ್ಟಿ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಆದರೆ ಈ ಸ್ಟೆಪ್ಸ್‌ಗೆ ಗಿಲ್ಲಿಯ ದೊಡ್ಡವ್ವ ದೊಡ್ಡವ್ವ ದೋಸೆ ಸಾಂಗ್‌ವನ್ನು ಸಿಂಕ್‌ ಮಾಡಿ ವೈರಲ್‌ ಮಾಡ್ತಿದ್ದಾರೆ ಫ್ಯಾನ್ಸ್.‌ ಇನ್‌ಸ್ಟಾದಲ್ಲಿ ಈ ರೀಲ್ಸ್‌ ಭರ್ಜರಿ ಕಮಾಲ್‌ ಮಾಡ್ತಿದೆ.



ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನ

ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಅವರು ತಮ್ಮ ಸೂರಜ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಕನ್ನಡದ ಬಹುನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ.



ಇದನ್ನೂ ಓದಿ:BBK 12: ರಿಷಾ ಕೊಟ್ಟ ಕೌಂಟರ್‌ಗೆ ಕಣ್ಣೀರು ಹಾಕಿದ ಸ್ಪಂದನಾ ಹಾಗೂ ಸೂರಜ್; ಮನೆಯ ಪತ್ರ ನುಚ್ಚುನೂರು!

ಈ ಹಾಡಿನಲ್ಲಿ ಉಗಾಂಡ ದೇಶದ ಹೆಸರಾಂತ ಜಿಟೊ ಕಿಡ್ಸ್ ಜೊತೆಗೆ ಚಿತ್ರದ ನಾಯಕರಾದ ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.ಇದೇ ಮೊದಲ ಬಾರಿಗೆ ಈ ಹಾಡಿಗೆ ನೃತ್ಯ ಮಾಡಲು ಉಗಾಂಡದಿಂದ ಜಿಟೊ ಕಿಡ್ಸ್ ಎಂಬ ಹೆಸರಾಂತ ನೃತ್ಯಗಾರರು ಭಾರತಕ್ಕೆ ಬಂದಿದ್ದಾರೆ. ಡಿಸೆಂಬರ್ 25 ಕ್ಕೆ ಚಿತ್ರ ತೆರೆಗೆ ಬರಲಿದೆ.

Yashaswi Devadiga

View all posts by this author