Actor Bank Janardhan: ʻಶ್ʼ ಸಿನಿಮಾ ನೋಡಿ ಅಣ್ಣಾವ್ರೇ ಬ್ಯಾಂಕ್ ಜನಾರ್ದನ್ ಅಭಿಮಾನಿ ಆಗಿದ್ರಂತೆ!
Actor Bank Janardhan Passed away: 'ಓಂ' ಚಿತ್ರವನ್ನು ನಿರ್ಮಾಣ ಮಾಡುವ ಮುನ್ನ ಉಪೇಂದ್ರ ನಿರ್ದೇಶನದ ಸಿನಿಮಾ ನೋಡಬೇಕು ಎಂದು ಅಣ್ಣಾವ್ರ ಹೇಳಿದಾಗ 'ಶ್' ಸಿನಿಮಾ ತೋರಿಸಲಾಗಿತ್ತು. ಮೂರು ಬಾರಿ ಸಿನಿಮಾ ನೋಡಿ ಅಣ್ಣಾವ್ರ ಮೆಚ್ಚಿಕೊಂಡಿದ್ದರು. ಅದರಲ್ಲೂ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಬ್ಯಾಂಕ್ ಜನಾರ್ಧನ್ ಬೈಯ್ಯುವ ಸನ್ನಿವೇಶವನ್ನು ಡಾ. ರಾಜ್ ಬಹಳ ಎಂಜಾಯ್ ಮಾಡಿದ್ದರು. ಈ ವಿಚಾರವನ್ನು ಸಾಕಷ್ಟು ಸಂದರ್ಭಗಳಲ್ಲಿ ಬ್ಯಾಂಕ್ ಜನಾರ್ಧನ್ ಅವರಿಗೆ ಅಣ್ಣಾವ್ರು ಹೇಳಿದ್ದರು.



ಸ್ಯಾಂಡಲ್ವುಡ್ ಹಾಸ್ಯ ನಟ, ಹಿರಿಯ ನಟ ಬ್ಯಾಂಕ್ ಜನಾರ್ದನ್ (Actor Bank Janardhan) ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. 800ಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ಬ್ಯಾಂಕ್ ಜನಾರ್ಧನ್ ಅವರಿಗೆ ಸ್ವತಃ ವರನಟ ಡಾ. ರಾಜ್ಕುಮಾರ್(Dr. Rajkumar) ಅವರೇ ಅಭಿಮಾನಿ ಆಗಿದ್ರಂತೆ. ಉಪೇಂದ್ರ ನಿರ್ದೇಶನದ ʻಶ್ʼಸಿನಿಮಾದಲ್ಲಿ ಪೊಲೀಸ್ ಪಾತ್ರವನ್ನು ಅಣ್ಣಾವ್ರು ಬಹಳ ಮೆಚ್ಚಿಕೊಂಡಿದ್ದರಂತೆ.

'ಓಂ' ಚಿತ್ರವನ್ನು ನಿರ್ಮಾಣ ಮಾಡುವ ಮುನ್ನ ಉಪೇಂದ್ರ ನಿರ್ದೇಶನದ ಸಿನಿಮಾ ನೋಡಬೇಕು ಎಂದು ಅಣ್ಣಾವ್ರ ಹೇಳಿದಾಗ 'ಶ್' ಸಿನಿಮಾ ತೋರಿಸಲಾಗಿತ್ತು. ಮೂರು ಬಾರಿ ಸಿನಿಮಾ ನೋಡಿ ಅಣ್ಣಾವ್ರ ಮೆಚ್ಚಿಕೊಂಡಿದ್ದರು. ಅದರಲ್ಲೂ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಬ್ಯಾಂಕ್ ಜನಾರ್ಧನ್ ಬೈಯ್ಯುವ ಸನ್ನಿವೇಶವನ್ನು ಡಾ. ರಾಜ್ ಬಹಳ ಎಂಜಾಯ್ ಮಾಡಿದ್ದರು. ಈ ವಿಚಾರವನ್ನು ಸಾಕಷ್ಟು ಸಂದರ್ಭಗಳಲ್ಲಿ ಬ್ಯಾಂಕ್ ಜನಾರ್ಧನ್ ಅವರಿಗೆ ಅಣ್ಣಾವ್ರು ಹೇಳಿದ್ದರು. ಅಲ್ಲದೇ ಇಷ್ಟು ಚೆನ್ನಾಗಿ ಬೈಯಲು ಎಲ್ಲಿಂದ ಕಲಿತಿರಿ ಎಂದು ಆಗಾಗ ಕೇಳುತ್ತಿದ್ದರಂತೆ.

ಬ್ಯಾಂಕ್ ಜನಾರ್ದನ್ ಅವರಿಗೆ 76 ವರ್ಷ ವಯಸ್ಸಾಗಿತ್ತು. ಭಾನುವಾರ ಮಧ್ಯರಾತ್ರಿ 2.30ರ ಸುಮಾರಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಸುಮಾರು 40 ವರ್ಷಗಳ ಸಿನಿ ಪಯಣದಲ್ಲಿ ಬ್ಯಾಂಕ್ ಜನಾರ್ದನ್ 800ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ.

ಚಿತ್ರದುರ್ಗ ಮೂಲದ ಇವರು 1949ರಲ್ಲಿ ಜನಿಸಿದರು. 1985ರಲ್ಲಿ ಪಿತಾಮಹ ಸಿನಿಮಾದಲ್ಲಿ ಬಣ್ಣ ಹಚ್ಚುವ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಕೆ.ಎಸ್.ಎಲ್.ಸ್ವಾಮಿ ನಿರ್ದೇಶನದ ಈ ಸಿನಿಮಾದಲ್ಲಿ ನಟಿಸಿದ ಬಳಿಕ ಬ್ಯಾಂಕ್ ಜನಾರ್ದನ್ ಬಳಿಕ ಹಿಂದಿರುಗಿ ನೋಡಲೇ ಇಲ್ಲ. ಈ 4 ದಶಕಗಳಲ್ಲಿ ಅವರು ಬರೋಬ್ಬರಿ 850ಕ್ಕೂ ಹೆಚ್ಚು ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

ಜನಾರ್ದನ್ ಅವರು ಬ್ಯಾಂಕ್ ನೌಕರನಾಗಿದ್ದುಕೊಂಡೇ ಚಿತ್ರಗಳಲ್ಲಿ ನಟಿಸುತ್ತಿದ್ದರು. ಜನಾರ್ದನ್ ಎಂಬ ಹೆಸರಿನ ಸಾಕಷ್ಟು ಜನ ಆಗ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಅವರನ್ನು ಪ್ರತ್ಯೇಕವಾಗಿ ಗುರುತಿಸಲು ಬ್ಯಾಂಕ್ ಜನಾರ್ಧನ್ ಎಂದು ಬದಲಿಸಿಕೊಳ್ಳಿ ಹಿರಿಯರೊಬ್ಬರು ಸಲಹೆ ನೀಡಿದ್ದರಂತೆ. ಅವರ ಸಲಹೆಯಂತೆ ಬ್ಯಾಂಕ್ ಜನಾರ್ದನ್ ಎಂಬ ಹೆಸರು ಬಳಕೆಗೆ ಬಂತು.

ಕೋವಿಡ್ ಸಮಯದಲ್ಲಿ ಹಾಸ್ಯನಟ ಬ್ಯಾಂಕ್ ಜನಾರ್ಧನ್ ಸಂಕಷ್ಟ ಎದುರಿಸುವಂತಾಗಿತ್ತು. ಈಗ ಪೋಷಕ ಕಲಾವಿದರಿಗೆ ಹೆಚ್ಚು ಸಂಭಾವನೆ ಕೊಡುತ್ತಾರೆ. ನಮ್ಮ ಕಾಲದಲ್ಲಿ ಇರಲಿಲ್ಲ, ಆಗ ಸಿನಿಮಾ ನಿರ್ಮಾಣಕ್ಕೆ ಹೆಚ್ಚು ಬಜೆಟ್ ಇರುತ್ತಿರಲಿಲ್ಲ. ಈಗ ನಾವು ಹೆಸರು ಮಾಡಿದ್ದರೆ ಹೆಚ್ಚು ಹಣ ಸಂಪಾದನೆ ಮಾಡಬಹುದಿತ್ತು. ಆ ಸಂದರ್ಭದಲ್ಲಿ ಅವರು ಪೋಷಕ ಕಲಾವಿದರ ಪರವಾಗಿ ಧ್ವನಿ ಎತ್ತಿದ್ದರು.