ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

'ಧುರಂಧರ್ 2' ಬಾಕ್ಸ್ ಆಫೀಸ್ ಧಮಾಕಾ; 8300 ಪೇಯ್ಡ್‌ ಪ್ರೀಮಿಯರ್‌ ಶೋ, 4 ಲಕ್ಷ ಟಿಕೆಟ್‌ ಸೋಲ್ಡ್ ಔಟ್, 50 ಕೋಟಿ ರೂ. ಗಳಿಕೆ!

Dhurandhar 2: ಬಾಲಿವುಡ್ ನಟ ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾ ಬಿಡುಗಡೆಗೂ ಮುನ್ನವೇ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯುತ್ತಿದೆ. ಮಾರ್ಚ್ 18ರ ಪೇಯ್ಡ್ ಪ್ರೀಮಿಯರ್ ಶೋಗಳಿಗೆ ಈಗಾಗಲೇ 4 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿದ್ದು, ಭಾರತವೊಂದರಲ್ಲೇ 21.50 ಕೋಟಿ ರೂ. ಗಳಿಕೆಯಾಗಿದೆ.

ಪೇಯ್ಡ್‌ ಪ್ರೀಮಿಯರ್ ಶೋಗಳಿಂದಲೇ 21 ಕೋಟಿ ರೂ. ಬಾಚಿದ 'ಧುರಂಧರ್ 2'!

-

Avinash GR
Avinash GR Mar 13, 2026 8:09 AM

ಬಾಲಿವುಡ್‌ ನಟ ರಣವೀರ್‌ ಸಿಂಗ್‌ ನಟನೆಯ ʻಧುರಂಧರ್‌ 2ʼ ಸಿನಿಮಾವು ಮಾ.19ರಂದು ತೆರೆಗೆ ಬರಲು ಸಜ್ಜಾಗಿದೆ. ಆದರೆ ಅದಕ್ಕೂ ಮುನ್ನವೇ ಪೇಯ್ಡ್‌ ಪ್ರೀಮಿಯರ್‌ ಶೋಗಳಿಂದಲೇ ಭರ್ಜರಿ ಕಮಾಯಿ ಮಾಡುತ್ತಿದೆ ಈ ಸಿನಿಮಾ. ಅದು ಕೂಡ ದಾಖಲೆಗಳನ್ನು ಬರೆಯುತ್ತಾ! ಹೌದು, ಈವರೆಗೂ ಪೇಯ್ಡ್‌ ಪ್ರೀಮಿಯರ್‌ ಶೋಗಳಲ್ಲೇ ಬರೋಬ್ಬರಿ 4 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ!

8300ಕ್ಕೂ ಹೆಚ್ಚು ಪೇಯ್ಡ್‌ ಪ್ರೀಮಿಯರ್‌ ಶೋಗಳು

ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾ ಮಾರ್ಚ್ 18ರ ಸಂಜೆ 5 ಗಂಟೆಯ ನಂತರ ದೇಶಾದ್ಯಂತ ಹಲವಾರು ಪ್ರೀಮಿಯರ್‌ ಶೋಗಳನ್ನು ಹಮ್ಮಿಕೊಳ್ಳಲಾಗಿದೆ. 'ಸ್ಯಾಕ್ನಿಲ್ಕ್' ವರದಿ ಪ್ರಕಾರ, ಈಗಾಗಲೇ ದೇಶಾದ್ಯಂತ 8300ಕ್ಕೂ ಹೆಚ್ಚು ಪೇಯ್ಡ್‌ ಪ್ರೀಮಿಯರ್‌ ಶೋಗಳು ಮಾ.18ರಂದು ನಿಗದಿಯಾಗಿವೆಯಂತೆ. ಬಿಡುಗಡೆಗೆ ಇನ್ನು ಒಂದು ವಾರ ಬಾಕಿ ಇರುವಂತೆಯೇ, 'ಧುರಂಧರ್ 2' ವಿಶ್ವಾದ್ಯಂತ ಮೊದಲ ವಾರಾಂತ್ಯದ ಮುಂಗಡ ಬುಕ್ಕಿಂಗ್‌ನಿಂದಲೇ 50 ಕೋಟಿ ರೂ.ಗಳನ್ನು ಗಳಿಸಿದೆ. ಬೆಂಗಳೂರು, ಹೈದರಾಬಾದ್, ಮುಂಬೈ, ದೆಹಲಿ ಮತ್ತು ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿ ನಡೆಯುತ್ತಿದೆ.

Akhanda 2 Box Office Collection: ಡೆವಿಲ್‌, ಧುರಂಧರ್‌ ನಡುವೆಯೂ ಅಬ್ಬರಿಸಿದ 'ಅಖಂಡ 2' ! ಬಾಲಯ್ಯ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?

ಭಾರತದಲ್ಲಿ 21.50 ಕೋಟಿ ರೂ. ಗಳಿಕೆ

ಇನ್ನು, ಭಾರತದಲ್ಲಿ ಮಾರ್ಚ್ 18ರ ನಡೆಯಲಿರುವ ಪ್ರೀಮಿಯರ್ ಶೋಗಳಿಂದಲೇ ಭರ್ತಿ 21.50 ಕೋಟಿ ರೂ. ಗಳಿಕೆಯಾಗಿದ್ದರೆ, ವಿದೇಶಿ ಮಾರುಕಟ್ಟೆಗಳಿಂದ, ಸುಮಾರು 35 ಕೋಟಿ ಸಂಗ್ರಹವಾಗಿದೆ. ಅದರಲ್ಲೂ ವಿಶೇಷವಾಗಿ ಉತ್ತರ ಅಮೆರಿಕಾದಿಂದಲೇ 27 ಕೋಟಿ ರೂ. ಕಲೆಕ್ಷನ್‌ ಆಗಿರುವುದು ವಿಶೇಷ! ಕಳೆದ ಕೆಲವು ವಾರಗಳಿಂದ ಯಾವುದೇ ದೊಡ್ಡ ಸಿನಿಮಾಗಳು ಭಾರತದಲ್ಲಿ ಬಿಡುಗಡೆಯಾಗದ ಕಾರಣ ಧುರಂಧರ್‌ 2 ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಗುವ ನಿರೀಕ್ಷೆಯಿದೆ.

ʻನೋ toxicity, ಓನ್ಲೀ ಧುರಂಧರ್‌ʼ; ಯಶ್‌ ಸಿನಿಮಾವನ್ನೇ ಟ್ರೋಲ್‌ ಮಾಡಿದ್ರಾ ನಟಿ ಸಾರಾ ಅರ್ಜುನ್?‌ ಅಸಲಿ ವಿಚಾರ ಇಲ್ಲಿದೆ!

ಈ ಬಾರಿ ಪ್ಯಾನ್‌ ಇಂಡಿಯಾ ಪ್ರಯತ್ನ

ಮೊದಲ ಭಾಗವಾದ 'ಧುರಂಧರ್' ಕೆಲವು ಗಲ್ಫ್ ರಾಷ್ಟ್ರಗಳು ಮತ್ತು ಪಾಕಿಸ್ತಾನದಲ್ಲಿ ನಿಷೇಧಕ್ಕೊಳಗಾಗಿದ್ದರೂ ವಿಶ್ವಾದ್ಯಂತ 1,300 ಕೋಟಿ ರೂ.ಗಳಿಗೂ ಹೆಚ್ಚು ಹಣ ಗಳಿಸಿತ್ತು. ಆದರೆ ಮೊದಲ ಭಾಗವು ದಕ್ಷಿಣ ಭಾರತದ ಭಾಷೆಗಳಿಗೆ ಡಬ್ ಆಗಿರಲಿಲ್ಲ. ಆದರೆ ಈ ಬಾರಿ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಿಗೆ ಡಬ್‌ ಮಾಡಿ ಏಕಕಾಲಕ್ಕೆ ಧುರಂಧರ್‌ 2 ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಇದು ಕೂಡ ಕಲೆಕ್ಷನ್‌ ಹೆಚ್ಚು ಮಾಡುವ ನಿರೀಕ್ಷೆಯನ್ನು ಹುಟ್ಟುಹಾಕಿದೆ.