ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aishwarya-Abhishek: ನಟಿ ಐಶ್ವರ್ಯ- ಅಭಿಷೇಕ್ ವಿಚ್ಛೇದನ ವದಂತಿ ಬಗ್ಗೆ ಖ್ಯಾತ ನಿರ್ದೇಶಕ ಹೇಳಿದ್ದೇನು?

Aishwarya -Abhishek Divorce: ನಟಿ ಐಶ್ವರ್ಯ ಹಾಗೂ ಅಭಿಷೇಕ್ ಬಚ್ಚನ್ ಅವರ ನಡುವೆ ವೈಮ ನಸ್ಸು ಉಂಟಾಗಿದೆ ಅವರಿಬ್ಬರು ಶೀಘ್ರವೇ ದೂರಾಗುತ್ತಾರೆ ಎಂಬ ವದಂತಿಗಳು ಕಳೆದ ಕೆಲವು ವರ್ಷದಿಂದ ಕೇಳಿ ಬರುತ್ತಲೇ ಇದೆ. ಆದರೆ ಈ ಬಗ್ಗೆ ನಟಿ ಐಶ್ವರ್ಯ ಮತ್ತು ನಟ ಅಭಿಷೇಕ್ ಬಚ್ಚನ್ ಅವರು ಇದುವರೆಗೆ ಸಣ್ಣ ಪುಟ್ಟ ಪ್ರತಿಕ್ರಿಯೆ ಮಾತ್ರ ನೀಡಿ ಈ ವಿಚಾರವನ್ನೇ ತಳ್ಳಿಹಾಕಿದ್ದಾರೆ‌. ಈ ನಡುವೆ ಅವರ ವಿಚ್ಛೇದನ ವದಂತಿಗಳು ನಿಜವೇ ಅಥವಾ ಸುಳ್ಳೇ ಎಂಬ ಬಗ್ಗೆ ಜಾಹೀರಾತು ನಿರ್ದೇಶಕ ಪ್ರಹ್ಲಾದ್ ಕಕ್ಕರ್ ಅವರು ಹೇಳಿಕೆ ನೀಡಿದ್ದು ಸದ್ಯ ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ.

ನವದೆಹಲಿ: ಬಾಲಿವುಡ್ ನಟಿ ಐಶ್ವರ್ಯ ರೈ (Aishwarya Rai) ಮತ್ತು ಅಭಿಷೇಕ್ ಬಚ್ಚನ್ (Abhishek Bachchan) ಜೋಡಿಯೂ ಬಾಲಿವುಡ್ ಫೇಮಸ್ ಸೆಲೆಬ್ರಿಟಿ ಪೇರ್ ನಲ್ಲಿ ಒಂದಾಗಿದೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರು 'ಧಾಯ್ ಅಕ್ಷರ್ ಪ್ರೇಮ್ ಕೆ' 'ಕುಚ್ ನಾ ಕಹೋ', 'ಧೂಮ್ 2' ,'ಉಮ್ರಾವ್ ಜಾನ್', 'ಗುರು' ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರಿಬ್ಬರ ನಡುವೆ ಪ್ರೀತಿಯಾಗಿದ್ದು ತಮ್ಮ ಆಪ್ತರ ಸಮ್ಮುಖ ದಲ್ಲಿ 2007ರಲ್ಲಿ ವಿವಾಹವಾಗಿದ್ದಾರೆ. ಬರೋಬ್ಬರಿ 18ವರ್ಷಗಳವರೆಗೂ ಸುಖದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಹಾಗಿದ್ದರೂ ನಟಿ ಐಶ್ವರ್ಯ ಹಾಗೂ ಅಭಿಷೇಕ್ ಬಚ್ಚನ್ ಅವರ ನಡುವೆ ವೈಮ ನಸ್ಸು ಉಂಟಾಗಿದೆ ಅವರಿಬ್ಬರು ಶೀಘ್ರವೇ ದೂರಾಗುತ್ತಾರೆ ಎಂಬ ವದಂತಿಗಳು ಕಳೆದ ಕೆಲವು ವರ್ಷದಿಂದ ಕೇಳಿ ಬರುತ್ತಲೇ ಇದೆ. ಆದರೆ ಈ ಬಗ್ಗೆ ನಟಿ ಐಶ್ವರ್ಯ ಮತ್ತು ನಟ ಅಭಿಷೇಕ್ ಬಚ್ಚನ್ ಅವರು ಇದುವರೆಗೆ ಸಣ್ಣ ಪುಟ್ಟ ಪ್ರತಿಕ್ರಿಯೆ ಮಾತ್ರ ನೀಡಿ ಈ ವಿಚಾರವನ್ನೇ ತಳ್ಳಿಹಾಕಿದ್ದಾರೆ‌. ಈ ನಡುವೆ ಅವರ ವಿಚ್ಛೇದನ ವದಂತಿಗಳು ನಿಜವೇ ಅಥವಾ ಸುಳ್ಳೇ ಎಂಬ ಬಗ್ಗೆ ನಿರ್ದೇಶಕ ಪ್ರಹ್ಲಾದ್ ಕಕ್ಕರ್ ಅವರು ಹೇಳಿಕೆ ನೀಡಿದ್ದು ಸದ್ಯ ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ.

ಭಾರತದ ಖ್ಯಾತ ಆ್ಯಡ್ ಮೇಕರ್ ಆದಂತಹ ಪ್ರಹ್ಲಾದ್ ಕಕ್ಕರ್ ಅವರು ಇತ್ತೀಚಿನ ಸಂದರ್ಶನ ಒಂದರಲ್ಲಿ ಭಾಗವಹಿಸಿದ್ದು ಈ ವೇಳೆ ಅನೇಕ ವಿಚಾರದ ಬಗ್ಗೆ ಮಾತನಾಡಿದ್ದಾರೆ. ನಟಿ ಐಶ್ವರ್ಯ ರೈ ಅವರ ತಾಯಿ ವಾಸಮಾಡುವ ಬಿಲ್ಡಿಂಗ್‌ನಲ್ಲಿಯೇ ಪ್ರಹ್ಲಾದ್ ಕಕ್ಕರ್ ಕೂಡ ವಾಸ ಮಾಡಿದ್ದು ಐಶ್ವರ್ಯ ರೈ ಕುಟುಂಬದ ಜೊತೆಗೆ ಇವರು ಬಹಳ ಆಪ್ತ ಸಂಬಂಧವನ್ನು ಹೊಂದಿದ್ದಾರೆ. ಹೀಗಾಗಿ ಸಂದರ್ಶನದ ಸಂದರ್ಭದಲ್ಲಿ ನಟಿ ಐಶ್ವರ್ಯ ರೈ ಹಾಗೂ ಅವರ ಡಿವೋರ್ಸ್ ವದಂತಿಗಳ ಬಗ್ಗೆ ಕೂಡ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಐಶ್ವರ್ಯ ರೈ ಅವರು ಅಭಿಷೇಕ್ ಬಚ್ಚನ್ ಜೊತೆ ಹೆಚ್ಚಾಗಿ ಇರುವುದಿಲ್ಲ. ತವರು ಮನೆಯಲ್ಲಿ ಹೆಚ್ಚು ಕಾಲ ಕಳೆಯುತ್ತಾರೆ. ಆದರೆ ನಟಿ ಐಶ್ವರ್ಯ ಅವರು ತವರು ಮನೆಗೆ ಬರುವುದು ದಾಂಪತ್ಯ ದಲ್ಲಿನ ಕಲಹದಿಂದಾಗಿ ಅಲ್ಲ. ಅವರ ತಾಯಿ ವೃಂದಾ ರೈ ಅವರಿಗೆ ತುಂಬಾ ಆರೋಗ್ಯ ಸಮಸ್ಯೆ ಇದೆ. ಈ ಹಿನ್ನೆಲೆ ತಮ್ಮ ಮಗಳು ಆರಾಧ್ಯಳನ್ನು ಶಾಲೆಗೆ ಕಳುಹಿಸಿದ ನಂತರ ತಮ್ಮ ಅಮ್ಮನನ್ನು ಕಾಣಲು ಕಾಳಜಿಯಿಂದ ಮನೆಗೆ ಬರುತ್ತಾರೆ. ಇದು ಅವರ ದೈನಂದಿನ ದಿನಚರಿಯಾಗಿದೆ. ಮತ್ತೆ ಸಂಜೆ ತಮ್ಮ ಮಗಳ ಶಾಲೆಯ ಬಳಿ ತೆರಳಿ ಮಗಳನ್ನು ಕರೆದುಕೊಂಡು ತಮ್ಮ ಗಂಡನ ಮನೆಗೆ ಮರಳುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:Dad Movie: ಶಿವರಾಜ್‍ಕುಮಾರ್ ಅಭಿನಯದ ‘ಡ್ಯಾಡ್‍ʼ ಚಿತ್ರಕ್ಕೆ ನಂದಿ ಬೆಟ್ಟದಲ್ಲಿ 2ನೇ ಹಂತದ ಚಿತ್ರೀಕರಣ

ಬಳಿಕ ಮಾತನಾಡಿ, ಇನ್ನು ಕೆಲವೊಂದು ಸಲ ನಟಿ ಐಶ್ವರ್ಯ ಜೊತೆ ಅಭಿಷೇಕ್ ಬಚ್ಚನ್ ಕೂಡ ತಮ್ಮ ಅತ್ತೆಯ ಮನೆಗೆ ಬರುತ್ತಾರೆ. ಆರೋಗ್ಯವನ್ನು ವಿಚಾರಿಸಿಕೊಂಡು ಅಲ್ಲಿಯೇ ಕಾಲ ಕಳೆ ದದ್ದು ಇದೆ. ಜನ ಅಂದುಕೊಂಡತೆ ಅಭಿಷೇಕ್ ಬಚ್ಚನ್ ಮತ್ತು ಐಶ್ಚರ್ಯ ರೈ ಅವರ ದಾಂಪತ್ಯ ದಲ್ಲಿ ಯಾವ ಸಮಸ್ಯೆ ಇಲ್ಲ. ಅವರು ತುಂಬಾ ಅನೋನ್ಯವಾಗಿದ್ದಾರೆ. ಒಂದೇ ಮನೆಯಲ್ಲಿಯೇ ವಾಸ ಮಾಡುತ್ತಿದ್ದಾರೆ. ಅದರೆ ಇದ್ಯಾವುದರ ಬಗ್ಗೆ ಗೊತ್ತಿಲ್ಲದೆ ಕೆಲವರು ಸತ್ಯಗಳನ್ನು ಮರೆಮಾಚಿ ಸುಖಾ ಸುಮ್ಮನೆ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ಪ್ರಹ್ಲಾದ್ ಅವರು ಹೇಳಿದ್ದಾರೆ.

ನಟಿ ಐಶ್ವರ್ಯ ಮತ್ತು ಅಭಿಷೇಕ್ ಅವರು ಈ ವದಂತಿಗಳಿಗೆ ಹೆಚ್ಚು ತಲೆಕೆಡಿಸಿ ಕೊಳ್ಳಲಾರರು. ಯಾಕೆಂದರೆ ಅವರಿಗೆ ಸತ್ಯ ಏನೆಂದು ಗೊತ್ತು. ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂಬ ಬಗ್ಗೆಯೂ ಸ್ಪಷ್ಟತೆ ಇದೆ.ಹಾಗಿದ್ದ ಮೇಲೆ ಜನರಿಗೆ ಇದನ್ನು ಮನವರಿಕೆ ಮಾಡಿಸುವ ಅಗತ್ಯ ಅವರಿಗೆ ಇಲ್ಲ ಎನ್ನುವ ಮೂಲಕ ಐಶ್ವರ್ಯ ರೈ ಅವರ ವಿಚ್ಛೇದನ ವದಂತಿಗಳನ್ನು ಅವರು ತಳ್ಳಿಹಾಕಿದ್ದಾರೆ. ಆ್ಯಡ್ ಮೇಕರ್ ಪ್ರಹ್ಲಾದ್ ಕಕ್ಕರ್ ಅವರು, ಅಮಿತಾಬ್ ಬಚ್ಚನ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಪೆಪ್ಸಿ ಜಾಹೀರಾತು ಸೇರಿದಂತೆ ಅನೇಕ ಫೇಮಸ್ ಜಾಹೀರಾತುಗಳನ್ನು ನಿರ್ದೇಶಿಸಿದ್ದಾರೆ. ಈ ಮೂಲಕ ಸಂದರ್ಶನದಲ್ಲಿ ಅನೇಕ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.