ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aishwarya-Abhishek Anniversary: ಡಿವೋರ್ಸ್‌ ವದಂತಿ ಬೆನ್ನಲ್ಲೇ ವೆಡ್ಡಿಂಗ್‌ ಆ್ಯನಿವರ್ಸರಿ ಆಚರಿಸಿಕೊಂಡ ಐಶ್ವರ್ಯ- ಅಭಿಷೇಕ್‌; ಸ್ಪೆಷಲ್‌ ಫೋಟೋ ಪೋಸ್ಟ್‌

ನಟಿ ಐಶ್ವರ್ಯಾ ರೈ ತಮ್ಮ 18ನೇ ವಿವಾಹ ವಾರ್ಷಿಕೋತ್ಸವದ(Aishwarya-Abhishek Anniversary) ಸಂದರ್ಭದಲ್ಲಿ ಪತಿ ಅಭಿಷೇಕ್ ಬಚ್ಚನ್ ಜೊತೆ ಹೊಸ ಫೋಟೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋಗೆ ಅವರ ಅಭಿಮಾನಿಗಳು ಮೆಚ್ಚುಗೆ ನೀಡಿದ್ದು ಐಶ್ವರ್ಯಾ ರೈ ಹಾಗೂ ಅಭಿಷೇಕ್​ ಬಚ್ಚನ್ ಜೋಡಿಗೆ ಶುಭ ಕೋರಿದ್ದಾರೆ.

ವೆಡ್ಡಿಂಗ್‌ ಆ್ಯನಿವರ್ಸರಿ ಸಂಭ್ರಮದಲ್ಲಿ ಅಭಿಷೇಕ್​-​ಐಶ್ವರ್ಯಾ!

Profile Pushpa Kumari Apr 21, 2025 12:32 PM

ಮುಂಬೈ: ಬಾಲಿವುಡ್ ಸೆಲೆಬ್ರಿಟಿ ದಂಪತಿಗಳಲ್ಲಿ ನಟಿ ಐಶ್ವರ್ಯ ರೈ (Aishwarya Rai) ಮತ್ತು ಮತ್ತು ಅಭಿಷೇಕ್ ಬಚ್ಚನ್ (Abhishek Bachchan) ಕೂಡ ಒಂದು, ಕಳೆದ ಕೆಲವು ತಿಂಗಳ ಹಿಂದೆ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಸಂಬಂಧದಲ್ಲಿ ಬಿರುಕು ಮೂಡಿದೆ.ಇವರಿಬ್ಬರು ವಿಚ್ಛೇದನ ಪಡೆಯುತ್ತಾರೆ ಎನ್ನುವ ಬಗ್ಗೆ ವದಂತಿ ಕೇಳಿ ಬಂದಿತ್ತು. ಆ ಬಳಿಕ ಐಶ್ವರ್ಯಾ, ಅಭಿಷೇಕ್‌ ಆರಾಧ್ಯ ಅವರ ಸ್ಕೂಲ್​ನ ವಾರ್ಷಿಕ ದಿನಾಚರಣೆಯಲ್ಲಿ ಒಟ್ಟಿಗೆ ಭಾಗವಹಿಸಿದ್ದರು. ಅಂದಿನಿಂದ ವಿಚ್ಛೇದನದ ಗಾಸಿಪ್ ಕೊನೆಗೊಂಡಿವೆ. ಇದೀಗ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್‌ ಬಚ್ಚನ್‌ ತಮ್ಮ 18ನೇ ವಿವಾಹ ವಾರ್ಷಿಕೋತ್ಸವದ(Aishwarya-Abhishek Anniversary) ಸಂಭ್ರಮದಲ್ಲಿದ್ದು, ಐಶ್ವರ್ಯ ರೈ ತಮ್ಮ ಫೋಟೋವೊಂದನ್ನು ಇನ್‌ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಈ ಪೋಸ್ಟ್‌ ಅವರ ಅಭಿಮಾನಿಗಳು ಫುಲ್‌ ಫಿದಾ ಆಗಿದ್ದು,ಈ ಜೋಡಿಗೆ ಶುಭ ಕೋರಿದ್ದಾರೆ.

ಐಶ್ವರ್ಯಾ ರೈ ಮತ್ತು ಅಭಿಷೇಕ್ ದಾಂಪತ್ಯ ‌ಜೀವನವು 18 ವರ್ಷಗಳನ್ನು ಪೂರೈಸಿದೆ. ಹೀಗಾಗಿ ನಟಿ ಐಶ್ವರ್ಯಾ ಮತ್ತು ಅಭಿಷೇಕ್‌ ತಮ್ಮ ಇನ್‌ಸ್ಟಾಗ್ರಾಮ್​ ಖಾತೆಯಲ್ಲಿ ತನ್ನ ಕುಟುಂಬದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ಫೋಟೊದಲ್ಲಿ ಐಶ್ವರ್ಯಾ ಪತಿ ಅಭಿಷೇಕ್ ಮತ್ತು ಮಗಳು ಆರಾಧ್ಯ ಜೊತೆ ಪೋಸ್ ನೀಡಿದ್ದಾರೆ. ಅಭಿಷೇಕ್ ಬಚ್ಚನ್ ತಮ್ಮ ಪತ್ನಿ ಹಾಗೂ ಮಗಳನ್ನು ಹಿಡಿದಿಟ್ಟುಕೊಂಡು ಫೋಸ್ ನೀಡಿದ್ದಾರೆ. ಮಗಳು ಆರಾಧ್ಯ, ಐಶ್ವರ್ಯಾ ಜೊತೆಗೆ ನಗೆ ಬೀರಿದ್ದಾರೆ. ಮೂವರು ಬಿಳಿ ಬಣ್ಣದ ಉಡುಪು ಧರಿಸಿದ್ದು ಬಿಳಿ ಎಮೋಜಿ ಜೊತೆಗೆ ನಟಿ ಫೋಟೊ ಹಂಚಿಕೊಂಡಿದ್ದಾರೆ.

ಐಶ್ವರ್ಯ ಹಂಚಿಕೊಂಡ ಫೊಟೋ ಇಲ್ಲಿದೆ

ಈ ಫೋಟೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರೊಬ್ಬರು ಈ ಅಮೂಲ್ಯ ಕುಟುಂಬಕ್ಕೆ ದೇವರು ಆಶೀರ್ವದಿಸಲಿ" ಎಂದು ಬರೆದು‌ಕೊಂಡಿದ್ದಾರೆ. ಇನ್ನೊಬ್ಬ ಅಭಿಮಾನಿ ಈ ಪೋಸ್ಟ್ ಎಲ್ಲಾ ವಿಚ್ಛೇದನ ವದಂತಿಗಳಿಗೆ ಪ್ರತ್ಯುತ್ತರ ಕೊಟ್ಟಂತಾಗಿದೆ. ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕುಟುಂಬಕ್ಕಿಂತ ಉತ್ತಮವಾದದ್ದು ಯಾವುದೂ ಇಲ್ಲ. ಎಂದು ಪ್ರತಿಕ್ರಿಯೆnನೀಡಿದ್ದಾರೆ. ಅದರ ಜೊತೆಗೆ ಐಶ್ವರ್ಯಾ ಪೋಸ್ಟ್‌ಗೆ ಅಭಿಮಾನಿಗಳು ಶುಭಾಶಯಗಳ ಸುರಿಮಳೆ ಗೈದಿದ್ದಾರೆ.

ಇದನ್ನು ಓದಿ: Kaliyugam Movie: ʼಕಲಿಯುಗಂʼ ತಮಿಳು ಚಿತ್ರದಲ್ಲಿ ಕನ್ನಡಿಗರದ್ದೇ ಹವಾ; ಕಿಶೋರ್‌-ಶ್ರದ್ಧಾ ಶ್ರೀನಾಥ್‌ ನಟನೆಯ ಸಿನಿಮಾದ ರಿಲೀಸ್‌ ಡೇಟ್‌ ಅನೌನ್ಸ್‌

ಐಶ್ಚರ್ಯ ರೈ ಹಾಗೂ ಅಭಿಷೇಕ್​ ಬಚ್ಚನ್​ ‌ ಹಲವು ಹಿಟ್ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದರು. ಆ ಬಳಿಕ ಅವರ ನಡುವೆ ಸ್ನೇಹ ಬೆಳೆದು ನಂತರ ಈ ಜೋಡಿ‌ 2007ರಲ್ಲಿ ಹಸೆಮಣೆ ಏರಿದರು. 2011ರಲ್ಲಿ ಐಶ್ವರ್ಯಾ ರೈ ಅವರು ಹೆಣ್ಣು ಮಗು ಆರಾಧ್ಯಾ ಗೆ ಜನ್ಮ ನೀಡಿದರು. ಅಭಿಷೇಕ್ ಇತ್ತೀಚೆಗೆ ರೆಮೊ ಡಿಸೂಜಾ ನಿರ್ದೇಶನದ ಬಿ ಹ್ಯಾಪಿ ಚಿತ್ರದಲ್ಲಿ ಕಾಣಿಸಿ ಕೊಂಡಿದ್ದರು. ಅಭಿಷೇಕ್ ಮುಂದಿನ ಚಿತ್ರ ಹೌಸ್ ಫುಲ್ 5 ಮೂಲಕ ಕಾಣಿಸಿ ಕೊಳ್ಳಲಿದ್ದಾರೆ. ಈ ಹಾಸ್ಯ ಚಲನಚಿತ್ರದಲ್ಲಿ ಅಕ್ಷಯ್ ಕುಮಾರ್, ರಿತೇಶ್ ದೇಶ್ಮುಕ್, ಫರ್ದೀನ್ ಖಾನ್, ಜಾಕ್ಲಿನ್ ಫೆರ್ನಾಂಡಿಸ್, ನರ್ಗಿಸ್ ಫಖ್ರಿ, ಸಂಜಯ್ ದತ್ ಸೇರಿದಂತೆ ಹಲವಾರು ಪ್ರಮುಖ ನಟರು ಇದ್ದಾರೆ. ತರುಣ್ ಮಂಸುಖಾನಿ ನಿರ್ದೇಶನದ ಈ ಚಿತ್ರ ಜೂನ್ 6ರಂದು ತೆರೆಕಾಣಲಿದೆ.