ಹಿಂದಿ 'ದೃಶ್ಯಂ' ಫ್ರಾಂಚೈಸಿಯ ಮೂರನೇ ಭಾಗವಾದ 'ದೃಶ್ಯಂ 3' ಸಿನಿಮಾ ಭಾರಿ ಸಂಚಲನ ಮೂಡಿಸಿದೆ. ಅಜಯ್ ದೇವ್‌ಗನ್, ಶ್ರಿಯಾ ಶರಣ್ ಮತ್ತು ಪ್ರಕಾಶ್ ರಾಜ್ ನಟನೆಯ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ನಿರ್ಮಿಸಿದೆ. 'ದೃಶ್ಯಂ 3' ಚಿತ್ರಕ್ಕೂ ಮೊದಲು ಅಜಯ್ ದೇವ್‌ಗನ್ ಅವರ 'ತಾನಾಜಿ: ದಿ ಅನ್‌ಸಂಗ್ ವಾರಿಯರ್' ಸಿನಿಮಾ ಭಾರತದ ಬಾಕ್ಸಾಫೀಸ್‌ನಲ್ಲಿ ಒಟ್ಟು 279.59 ಕೋಟಿ ರೂ. ನಿವ್ವಳ ಗಳಿಕೆ ಹಾಗೂ ಜಾಗತಿಕವಾಗಿ 367.65 ಕೋಟಿ ರೂ. ಗಳಿಸಿತ್ತು.
ವಿಶ್ವಾದ್ಯಂತ 450 ಕೋಟಿ ರೂ. ದಾಟಿದ ಗಳಿಕೆ
ಮೂಲಗಳ ಪ್ರಕಾರ, 10ನೇ ದಿನ 'ದೃಶ್ಯಂ 3: ದಿ ಕನ್‌ಕ್ಲೂಷನ್' ಚಿತ್ರವು 14,872 ಪ್ರದರ್ಶನಗಳಿಂದ (ಶೋಗಳಿಂದ) 22.50 ಕೋಟಿ ರೂ. ನಿವ್ವಳ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ಗ್ರಾಸ್ ಗಳಿಕೆ 370.80 ಕೋಟಿ ರೂ.ಗೆ ತಲುಪಿದೆ. ವಿದೇಶಗಳಲ್ಲಿ 10ನೇ ದಿನದಂದು 6 ಕೋಟಿ ರೂ. ಗಳಿಕೆಯಾಗಿದ್ದು, ಒಟ್ಟು ಸಾಗರೋತ್ತರ ಗ್ರಾಸ್ ಕಲೆಕ್ಷನ್ 109 ಕೋಟಿ ರೂ. ಆಗಿದೆ. ಈ ಮೂಲಕ ಚಿತ್ರದ ಜಾಗತಿಕ ಒಟ್ಟು ಗಳಿಕೆ 479.80 ಕೋಟಿ ರೂ. ತಲುಪಿದೆ. 'ದೃಶ್ಯಂ 3' ತನ್ನ ಎರಡನೇ ಶನಿವಾರದಂದು ಕಲೆಕ್ಷನ್‌ನಲ್ಲಿ ಬರೋಬ್ಬರಿ 80% ಏರಿಕೆ ಕಂಡಿದೆ.
Drishyam 3: ‘ದೃಶ್ಯಂ 3’ ಒಟಿಟಿ ರಿಲೀಸ್ ಡೇಟ್ ಫಿಕ್ಸ್? ಇಲ್ಲಿದೆ ಅಪ್‌ಡೇಟ್
ಈ ಬಾರಿ ಸ್ವಂತ ಕಥೆಯೊಂದಿಗೆ ಬಂದ ಚಿತ್ರತಂಡ
ಮೊದಲ ಎರಡು ಭಾಗಗಳನ್ನು ಮಲಯಾಳಂನಿಂದ ರಿಮೇಕ್ ಮಾಡಲಾಗಿತ್ತು. ಆದರೆ ಈ ಬಾರಿ ನಿರ್ದೇಶಕ ಅಭಿಷೇಕ್ ಪಾಠಕ್ ಅವರೇ ಕಥೆ ಬರೆದು 'ದೃಶ್ಯಂ 3' ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಪನೋರಮಾ ಸ್ಟುಡಿಯೋಸ್ ಮತ್ತು ಸ್ಟಾರ್ ಸ್ಟುಡಿಯೋ 18 ಜಂಟಿಯಾಗಿ ನಿರ್ಮಿಸಿದ್ದು, ಇದು 'ದೃಶ್ಯಂ 2' (2022) ಚಿತ್ರದ ಮುಂದುವರಿದ ಭಾಗವಾಗಿದೆ. ಹಿಂದಿನ ಭಾಗಗಳಿಗಿಂತ ಭಿನ್ನವಾಗಿ, ಈ ಸಿನಿಮಾ ಸಂಪೂರ್ಣ ಹೊಸ ಕಥಾಹಂದರವನ್ನು ಹೊಂದಿದ್ದು, ಈಚೆಗೆ ಬಂದ ಮಲಯಾಳಂ ʻದೃಶ್ಯಂ 3ʼ ಸಿನಿಮಾದ ಕಥೆಗೆ ಇದು ಸಂಬಂಧಿಸಿಲ್ಲ.
ಈ ಚಿತ್ರದಲ್ಲಿ ಅಜಯ್ ದೇವ್‌ಗನ್, ಜೈದೀಪ್ ಅಹ್ಲಾವತ್, ಟಬು, ಶ್ರಿಯಾ ಶರಣ್, ರಜತ್ ಕಪೂರ್, ಪ್ರಕಾಶ್ ರಾಜ್ ಮತ್ತು ಇಶಿತಾ ದತ್ತಾ ಪ್ರಮುಖ ತಾರಾಗಣದಲ್ಲಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ.