Ajith Kumar: ಎದೆಯ ಮೇಲೆ ದೇವಿಯ ಟ್ಯಾಟೋ ಹಾಕಿಸಿಕೊಂಡ ಕಾಲಿವುಡ್ ನಟ ಅಜಿತ್ ಕುಮಾರ್!
Ajith Kumar's chest tattoo: ನಟ ಅಜಿತ್ ಅವರು ತಮ್ಮ ಕುಟುಂಬದೊಂದಿಗೆ ದೇವಸ್ಥಾನಕ್ಕೆ ಹೋಗಿದ್ದು ಅಲ್ಲಿ ಫೋಟೋವನ್ನು ಕೂಡ ತೆಗೆಸಿಕೊಂಡಿದ್ದಾರೆ. ಅವರ ಈ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು ಅದರಲ್ಲಿ ಅವರ ಎದೆಯ ಭಾಗದ ಮೇಲೆ ಹಚ್ಚೆ ಒಂದು ಇರುವುದನ್ನು ನೆಟ್ಟಿಗರು ಗಮನಿಸಿದ್ದಾರೆ. ಈ ಹಚ್ಚೆಯಲ್ಲಿ ಇರುವುದೇನು? ಅದು ರಿಯಲ್ ಹಚ್ಚೆಯೇ? ಎಂಬ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಚರ್ಚೆ ಏರ್ಪಟ್ಟಿದೆ.
-
ನವದೆಹಲಿ: ಕಾಲಿವುಡ್ ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್ ನಟ ಅಜಿತ್ (Ajith Kumar) ಅವರು ತಮ್ಮ ಅದ್ಭುತ ಅಭಿನಯದಿಂದ ಅಪಾರ ಅಭಿಮಾನಿಗಳ ಮನಗೆದಿದ್ದಾರೆ. 1993ರಲ್ಲಿ ತೆರೆಕಂಡ ಅಮರಾವತಿ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ನಾಯಕನಟನಾಗಿ ಮಿಂಚಿದ್ದ ಇವರು ಕಳೆದ 33 ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಇದುವರೆಗೆ 63 ಸಿನಿಮಾಗಳನ್ನು ಮಾಡಿ ದ್ದಾರೆ. ಸಿನಿಮಾ ಜೊತೆಗೆ ಕಾರ್ ರೇಸಿಂಗ್‌ನತ್ತ ವಿಶೇಷ ಆಸಕ್ತಿ ಹೊಂದಿದ್ದ ಇವರು ತಮ್ಮ ಕುಟುಂಬಕ್ಕೂ ಕೂಡ ಸಮಯ ನೀಡುತ್ತಾರೆ. ಅಂತೆಯೇ ಈ ಬಾರೀ ನಟ ಅಜಿತ್ ಅವರು ತಮ್ಮ ಕುಟುಂಬದೊಂದಿಗೆ ದೇವಸ್ಥಾನಕ್ಕೆ ಹೋಗಿದ್ದು ಅಲ್ಲಿ ಫೋಟೋವನ್ನು ಕೂಡ ತೆಗೆಸಿಕೊಂಡಿದ್ದಾರೆ. ಅವರ ಈ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಅವರ ಎದೆಯ ಭಾಗದ ಮೇಲೆ ಹಚ್ಚೆ ಒಂದು ಇರುವುದನ್ನು ನೆಟ್ಟಿಗರು ಗಮನಿಸಿದ್ದಾರೆ. ಈ ಹಚ್ಚೆಯಲ್ಲಿ ಇರುವುದೇನು? ಅದು ರಿಯಲ್ ಹಚ್ಚೆಯೇ? ಎಂಬ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಚರ್ಚೆ ಏರ್ಪಟ್ಟಿದೆ.
ಗುಡ್ ಬ್ಯಾಡ್ ಅಗ್ಲಿ ಸಿನಿಮಾದ ಯಶಸ್ಸಿನ ನಂತರ ನಟ ಅಜಿತ್ ಕುಮಾರ್ ಅವರು ಸಿನಿಮಾ ಕ್ಷೇತ್ರ ದಲ್ಲಿ ಅಷ್ಟಾಗಿ ಸಕ್ರಿಯವಾಗಿರಲಿಲ್ಲ. ಈ ವೇಳೆ ಅವರು ಕಾರು ರೇಸಿಂಗ್ ಹಾಗೂ ಕುಟುಂಬದ ವೈಯಕ್ತಿಕ ಕೆಲಸ ಕಾರ್ಯಕ್ಕೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಈ ನಡುವೆ ಕುಟುಂಬ ಸಮೇತರಾಗಿ ಅವರು ಪಾಲಕ್ಕಾಡ್‌ನಲ್ಲಿರುವ ಭಗವತಿಯಮ್ಮನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ಫೋಟೊಗಳನ್ನು ಅವರ ಪತ್ನಿ , ನಟಿ ಶಾಲಿನಿ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಸಾಂಪ್ರದಾಯಿಕ ಪಂಚೆ ಲುಕ್ ನಲ್ಲಿ ನಟ ಅಜಿತ್ ಕಾಣಿಸಿಕೊಂಡಿದ್ದು ಅವರ ಎದೆಯ ಬಲಭಾಗದಲ್ಲಿ ಹಚ್ಚೆ ಇರುವುದು ಫೋಟೊದಲ್ಲಿ ಸೆರೆಯಾಗಿದೆ.
ನಟ ಅಜಿತ್ ಅವರ ಎದೆಯ ಮೇಲೆ ಕಾಣಿಸಿಕೊಂಡಿರುವ ಹಚ್ಚೆಯಲ್ಲಿ ದೇವಿಯ ಚಿತ್ರ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಅದು ಯಾವ ದೇವರು ಎಂಬ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಏರ್ಪಟ್ಟಿದೆ. ವರದಿಯೊಂದರ ಪ್ರಕಾರ ಆ ಹಚ್ಚೆ ಅಜಿತ್ ಅವರ ಕುಟುಂಬ ದೇವತೆ ಭಗವತಿಯಮ್ಮನದ್ದಾಗಿದೆ ಎಂದು ಹೇಳಲಾಗುತ್ತಿದೆ. ಈ ದೇವಿಯ ದೇವಸ್ಥಾನವು ಕೇರಳದ ಪಾಲಕ್ಕಾಡ್ ಜಿಲ್ಲೆಯ ಪೆರುವೆಂಪ ಗ್ರಾಮದಲ್ಲಿದೆ. ನಟ ಅಜಿತ್ ಪೂರ್ವಜರಿಂದಲೂ ಈ ದೇವಿ ಯನ್ನು ಆರಾಧಿಸಿಕೊಂಡು ಬರಲಾಗುತ್ತಿದ್ದು ಈ ದೇವಾಲಯಕ್ಕೆ ತನ್ನ ಕುಟುಂಬದೊಂದಿಗೆ ಅವರು ಆಗಾಗ ಭೇಟಿ ನೀಡುತ್ತಾ ಇರುತ್ತಾರೆ. ಹೀಗಾಗಿ ಈ ಹಚ್ಚೆ ಕೂಡ ಅಲ್ಲೇ ಹಾಕಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ:Varna Movie: ಟೀಸರ್‌ನಲ್ಲೇ ಕುತೂಹಲ ಮೂಡಿಸಿದೆ ಅರ್ಜುನ್ ಯೋಗಿ ನಟನೆಯ ʼವರ್ಣʼ
ನಟ ಅಜಿತ್ ಅವರ ಅಭಿನಯದ ವಿದಾಮುಯರ್ಚಿ ಚಿತ್ರವು ಅಷ್ಟಾಗಿ ಯಶಸ್ಸು ಸಿಗಲಿಲ್ಲ. ಈ ಸಿನಿಮಾಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಅದರ ಬೆನ್ನಲ್ಲೆ ಅಜಿತ್ ಅವರ 'ಗುಡ್ ಬ್ಯಾಡ್ ಅಗ್ಲಿ' (Good Bad Ugly) ಚಿತ್ರವು ಸೂಪರ್ ಹಿಟ್ ಆಗುವ ಮೂಲಕ ಬಾಕ್ಸ್ ಆಫೀಸ್ ನಲ್ಲಿಯೂ ಭರ್ಜರಿ ಕಲೆಕ್ಷನ್ ಮಾಡಿತು. ಅವರ 64 ನೇ ಸಿನಿಮಾಕ್ಕೆ ಅಧಿಕ್ ರವಿಚಂದ್ರನ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಇದು ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಆಗಿರಲಿದೆ ಎಂಬ ಸುದ್ದಿ ಕೂಡ ಹರಿ ದಾಡಿತ್ತು.
ನಟ ಅಜಿತ್ ಅವರ ಮುಂದಿನ 64ನೇ ಸಿನಿಮಾಕ್ಕೆ ಹೆಸರು ಇನ್ನು ನಿಗಧಿಯಾಗಿಲ್ಲ. ಹಾಗಿದ್ದರೂ ಈಗಾಗಲೇ ಕಾಸ್ಟಿಂಗ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರಕ್ಕೆ ಕೆಜಿಎಫ್ ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ (Srinidhi Shetty) ಅವರು ಮುಖ್ಯಪಾತ್ರದಲ್ಲಿ ನಾಯಕಿಯಾಗಿ ನಟಿಸುವ ನಿರೀಕ್ಷೆ ಯಿದೆ. ಬೇರೆ ಬೇರೆ ಭಾಷೆಯಲ್ಲಿ ಈ ಸಿನಿಮಾ ಮಾಡಲು ಚಿಂತಿಸಲಾಗಿದ್ದು ಪ್ಯಾನ್-ಇಂಡಿಯಾ ಚಿತ್ರವನ್ನಾಗಿ ಮಾಡಲು ತಂಡ ಯೋಜಿಸುತ್ತಿದೆ .