ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಲ್ಲು ಅರ್ಜುನ್‌ ಬಗ್ಗೆ ಇಲ್ಲಸಲ್ಲದ ಹೇಳಿಕೆ; ಅಖಾಡಕ್ಕಿಳಿದ ‌ʻಐಕಾನ್‌ ಸ್ಟಾರ್‌ʼ ಟೀಮ್, ಮಾತಾಡಿದವರೀಗ ಕೋರ್ಟ್‌ ಮೆಟ್ಟಿಲು ಹತ್ತೋದು ಗ್ಯಾರಂಟಿ!

Allu Arjun Controversy: ಅಲ್ಲು ಅರ್ಜುನ್‌ ಅವರ ಪ್ರೊಟೊಕಾಲ್‌ ಕುರಿತು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ. ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಲು 42 ಕಠಿಣ ನಿಯಮಗಳಿವೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಿದವರ ವಿರುದ್ಧ ಅವರ ತಂಡ ಕಾನೂನು ಸಮರಕ್ಕೆ ಮುಂದಾಗಿದೆ.

'ಐಕಾನ್ ಸ್ಟಾರ್' ಅಲ್ಲು ಅರ್ಜುನ್ ಈಗ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿದ್ದಾರೆ. ಅವರ ‘ಪುಷ್ಪ’ ಸರಣಿಯ ಸಿನಿಮಾಗಳು ದೊಡ್ಡಮಟ್ಟದ ಗೆಲುವು ಪಡೆದುಕೊಂಡಿವೆ. ಮೆಗಾಸ್ಟಾರ್ ಚಿರಂಜೀವಿ ಅವರ ಸೋದರಳಿಯ ಆಗಿದ್ದರೂ, ಸ್ಟಾರ್ ನಿರ್ಮಾಪಕರ ಮಗನಾಗಿದ್ದರೂ, ಎಲ್ಲಾ ಏಳುಬೀಳುಗಳು ದಾಟಿ, ತಮ್ಮದೇ ಆದ ಒಂದು ಗುರತನ್ನು ಅಲ್ಲು ಅರ್ಜುನ್‌ ಮಾಡಿಕೊಂಡಿದ್ದಾರೆ. ಆದರೆ ಇದೀಗ ಅವರ ಬಗ್ಗೆ ಒಂದಷ್ಟು ಟ್ರೋಲ್‌ ಮತ್ತು ಟೀಕೆಗಳು ಹರಿದಾಡುತ್ತಿವೆ.

ಹೌದು, ಅಲ್ಲು ಅರ್ಜುನ್ ಬಗ್ಗೆ ಇದೀಗ ಏಕಾಏಕಿ ‘ಪ್ರೊಟೊಕಾಲ್’ ಎಂಬ ಸುದ್ದಿಯೊಂದು ಹರಿದಾಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ. ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಬೇಕಾದರೆ 42 ಕಠಿಣ ನಿಬಂಧನೆಗಳನ್ನು ಪಾಲಿಸಬೇಕು ಎಂಬ ವಿಡಿಯೋವೊಂದು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮಾಧ್ಯಮ ಪ್ರತಿನಿಧಿಗಳು ಮತ್ತು ಕಾರ್ಪೊರೇಟ್ ಎಕ್ಸಿಕ್ಯೂಟಿವ್‌ಗಳಿಗಾಗಿ ತಯಾರಿಸಲಾಗಿದೆ ಎನ್ನಲಾದ ಈ ಪ್ರೊಟೊಕಾಲ್ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

ವೈರಲ್‌ ವಿಡಿಯೋ



ಏನದು ಪ್ರೊಟೊಕಾಲ್?

"ಅಲ್ಲು ಅರ್ಜುನ್ ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಬಾರದು, ಅವರಿಗೆ ಹಸ್ತಲಾಘವ ನೀಡಬಾರದು, ಅನುಮತಿ ಇಲ್ಲದೆ ಮಾತನಾಡಬಾರದು, ಮಧ್ಯದಲ್ಲಿ ಅಲುಗಾಡಬಾರದು" ಎಂಬಿತ್ಯಾದಿ ಅನೇಕ ನಿಬಂಧನೆಗಳಿವೆ ಎಂದು ಪ್ರಚಾರ ಮಾಡಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, "ಅಲ್ಲು ಅರ್ಜುನ್ ನಮ್ಮಂತೆಯೇ ಮನುಷ್ಯರಲ್ವಾ" ಎಂದು ನೆಟ್ಟಿಗರು ವ್ಯಂಗ್ಯವಾಡಲು ಶುರುಮಾಡಿದ್ದಾರೆ. ಕೆಲವು ವಿರೋಧಿ ಬಣದ ಅಭಿಮಾನಿಗಳಂತೂ ಈ ಸಂದರ್ಭವನ್ನು ಬಳಸಿಕೊಂಡು ಅಲ್ಲು ಅರ್ಜುನ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

‌ರಾಯಲ್ ಎನ್‌ಫೀಲ್ಡ್‌ನ ಮಾಜಿ ಬ್ರ್ಯಾಂಡ್ ಸ್ಟ್ರಾಟಜಿಸ್ಟ್ ಕಾವೇರಿ ಬರುವ (Kaveri Baruah) ಅವರು ಪಾಡ್‌ಕಾಸ್ಟ್ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆಗಳೇ ಈ ಆರೋಪಗಳಿಗೆ ಮೂಲ ಕಾರಣ. ಅಲ್ಲು ಅರ್ಜುನ್ ಅವರನ್ನು ಭೇಟಿಯಾಗುವ ಮೊದಲು ತಮ್ಮ ತಂಡಕ್ಕೆ 42 ನಿಬಂಧನೆಗಳ ಪಟ್ಟಿಯನ್ನು ನೀಡಲಾಗಿತ್ತು ಮತ್ತು ಒಬ್ಬರ ನಂತರ ಮತ್ತೊಬ್ಬ ಮ್ಯಾನೇಜರ್ ಅನ್ನು ದಾಟಿಕೊಂಡು ಹೋಗಬೇಕಾಯಿತು ಎಂದು ಅವರು ಹೇಳಿದ್ದರು. ಅಲ್ಲದೆ, ಫೋಟೋಶೂಟ್ ಸಮಯದಲ್ಲೂ ಕಠಿಣ ನಿಯಮಗಳನ್ನು ಪಾಲಿಸಬೇಕಾಯಿತು ಎಂದು ಅವರು ಹೇಳಿದ ವಿಡಿಯೋ ವೈರಲ್ ಆಗಿದ್ದು, ಅಲ್ಲು ಅರ್ಜುನ್ ಅವರ ವರ್ಚಸ್ಸಿನ ಬಗ್ಗೆ ನಾನಾ ರೀತಿಯ ಸುದ್ದಿಗಳು ಹಬ್ಬಿವೆ.

ಅಖಾಡಕ್ಕಿಳಿದ ‌ʻಐಕಾನ್‌ ಸ್ಟಾರ್‌ʼ ಟೀಮ್



ಸ್ಪಷ್ಟನೆ ನೀಡಿದ ಬನ್ನಿ ಟೀಮ್!‌

ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ, ಅಲ್ಲು ಅರ್ಜುನ್ ಅವರ ತಂಡ ಅಧಿಕೃತವಾಗಿ ಪ್ರತಿಕ್ರಿಯಿಸಿ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. "ಅಲ್ಲು ಅರ್ಜುನ್ ಅವರ ಬಗ್ಗೆ ಬರುತ್ತಿರುವ ಈ ವರದಿಗಳು ಸಂಪೂರ್ಣವಾಗಿ ಆಧಾರರಹಿತ ಮತ್ತು ಸತ್ಯಕ್ಕೆ ದೂರವಾದವು. ಅವರು ಎಲ್ಲರೊಂದಿಗೂ ಗೌರವ ಮತ್ತು ಘನತೆಯಿಂದ ನಡೆದುಕೊಳ್ಳುತ್ತಾರೆ. ಈ ಸುಳ್ಳು ಆರೋಪಗಳನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಇದಕ್ಕೆ ಕಾರಣರಾದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಮ್ಮ ಕಾನೂನು ತಂಡ ಸಿದ್ಧವಾಗಿದೆ. ಸತ್ಯ ತಿಳಿಯದೆ ಯಾವುದೇ ಮಾಹಿತಿಯನ್ನು ಪ್ರಚಾರ ಮಾಡಬೇಡಿ" ಎಂದು ಹೇಳಿದೆ.