ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Amrita Mahotsav: ವಿಷ್ಣುವರ್ಧನ್ ಅಮೃತ ಮಹೋತ್ಸವಕ್ಕೆ ಬಹುಭಾಷಾ ತಾರೆ ರೋಜಾ ಆಗಮನ

Amrita Mahotsav: ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವವನ್ನು ಐತಿಹಾಸಿಕವಾಗಿ ಆಚರಿಸಲು ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಚಿತ್ರರಂಗದ ಹಲವು ಗಣ್ಯರು ಹಾಗೂ ವಿಷ್ಣುವರ್ಧನ್ ಅವರೊಂದಿಗೆ ಒಡನಾಟ ಹೊಂದಿದ್ದ ಕಲಾವಿದರು ಈ ಮಹೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ. ಸೆಪ್ಟೆಂಬರ್ 27ರಂದು ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಟೌನ್ ಹಾಲ್‌ನಿಂದ ಆರಂಭವಾಗುವ ಮೆರವಣಿಗೆ ನಾಯಂಡಹಳ್ಳಿಯವರೆಗೆ ಸಾಗಲಿದೆ. ಅರ್ಧ ಕಿಲೋಮೀಟರ್ ಉದ್ದದ ಬೃಹತ್ ಧ್ವಜವನ್ನು ಸಾವಿರಾರು ವಿಷ್ಣುವರ್ಧನ್ ಅಭಿಮಾನಿಗಳು ಹೆಮ್ಮೆಯಿಂದ ಹೊತ್ತು ಸಾಗಲಿದ್ದಾರೆ.

ನಟಿ ರೋಜಾ

ಸಾಹಸಸಿಂಹ ಡಾ. ವಿಷ್ಣುವರ್ಧನ್ (Vishnuvardhan) ಅವರ ಅಮೃತ ಮಹೋತ್ಸವಕ್ಕೆ ಬಹುಭಾಷಾ ಖ್ಯಾತ ನಟಿ ರೋಜಾ ಅವರು ಆಗಮಿಸುತ್ತಿದ್ದಾರೆ. ಅಮೃತ ಮಹೋತ್ಸವದ (Amrutha mahotsava) ಹಿನ್ನೆಲೆಯಲ್ಲಿ ಹಿರಿಯ ನಿರ್ದೇಶಕ ಡಾ. ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಹಾಗೂ ವೀರಕಪುತ್ರ ಶ್ರೀನಿವಾಸ ಅವರು ಇಂದು ರೋಜಾ ಅವರ ನಿವಾಸಕ್ಕೆ ಭೇಟಿ ನೀಡಿ, ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸಿ ಪ್ರೀತಿಯ ಸ್ವಾಗತ ಕೋರಿದರು.

ಈ ಭೇಟಿಯ ವೇಳೆ ಆಹ್ವಾನ ಪತ್ರಿಕೆಯ ಮೇಲಿದ್ದ ಡಾ. ವಿಷ್ಣುವರ್ಧನ್ ಅವರ ಭಾವಚಿತ್ರವನ್ನು ನೋಡಿದ ತಕ್ಷಣ ರೋಜಾ ಅವರ ಬಾಯಿಂದ ಬಂದ ಮೊದಲ ಪದ “ಲೆಜೆಂಡ್”. ಬಳಿಕ ವಿಷ್ಣುವರ್ಧನ್ ಅವರ ವ್ಯಕ್ತಿತ್ವ, ಚಿತ್ರರಂಗದ ಸಾಧನೆ ಹಾಗೂ ಅವರೊಂದಿಗಿನ ನೆನಪುಗಳ ಕುರಿತು ರೋಜಾ ಅವರು ಅಪಾರ ಪ್ರೀತಿಯಿಂದ ಮಾತನಾಡಿದರು.

ಇದನ್ನೂ ಓದಿ: BBK 13: ಅಗ್ನಿಪರೀಕ್ಷೆಯಲ್ಲಿ ಗೆದ್ದು ದೊಡ್ಮನೆಯೊಳಗೆ ಎಂಟ್ರಿ ಕೊಡೋದು ಯಾರು? 'ಬಿಗ್‌ ಬಾಸ್‌ ಕನ್ನಡ‌' ಟೀಮ್‌ನಿಂದ ಬಿಗ್‌ ಅಪ್ಡೇಟ್‌!

“ಯಜಮಾನ್ರ ಫೋಟೋ ನೋಡಿದ ತಕ್ಷಣ ಅವರ ಬಾಯಿಂದ ಬಂದ ಮೊದಲ ಪದ ‘ಲೆಜೆಂಡ್’. ಆಮೇಲೆ ಅದೆಷ್ಟು ಪ್ರೀತಿಯಿಂದ ಮಾತನಾಡಿದ್ರು ಗೊತ್ತಾ... ಅದನ್ನೆಲ್ಲ ಈಗಲೇ ಹೇಳುವುದಿಲ್ಲ. ಅಮೃತ ಮಹೋತ್ಸವದ ವೇದಿಕೆಯಲ್ಲೇ ಅವರ ಮಾತುಗಳಲ್ಲಿ ಕೇಳೋಣ,” ಎಂದು ವೀರಕಪುತ್ರ ಶ್ರೀನಿವಾಸ ತಿಳಿಸಿದ್ದಾರೆ.

ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವವನ್ನು ಐತಿಹಾಸಿಕವಾಗಿ ಆಚರಿಸಲು ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಚಿತ್ರರಂಗದ ಹಲವು ಗಣ್ಯರು ಹಾಗೂ ವಿಷ್ಣುವರ್ಧನ್ ಅವರೊಂದಿಗೆ ಒಡನಾಟ ಹೊಂದಿದ್ದ ಕಲಾವಿದರು ಈ ಮಹೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ.

ಸೆಪ್ಟೆಂಬರ್ 27ರಂದು ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಟೌನ್ ಹಾಲ್‌ನಿಂದ ಆರಂಭವಾಗುವ ಮೆರವಣಿಗೆ ನಾಯಂಡಹಳ್ಳಿಯವರೆಗೆ ಸಾಗಲಿದೆ. ಅರ್ಧ ಕಿಲೋಮೀಟರ್ ಉದ್ದದ ಬೃಹತ್ ಧ್ವಜವನ್ನು ಸಾವಿರಾರು ವಿಷ್ಣುವರ್ಧನ್ ಅಭಿಮಾನಿಗಳು ಹೆಮ್ಮೆಯಿಂದ ಹೊತ್ತು ಸಾಗಲಿದ್ದಾರೆ. ಇದು ಅಮೃತ ಮಹೋತ್ಸವದ ಅತ್ಯಂತ ವಿಶೇಷ ಹಾಗೂ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಲಿದೆ.

ಮೆರವಣಿಗೆಯ ನಂತರ ನಾಯಂಡಹಳ್ಳಿಯ ನಂದಿ ಲಿಂಕ್ ಗ್ರೌಂಡ್‌ನಲ್ಲಿ ದಿನವಿಡೀ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಬೆಳಗ್ಗೆ 6 ಗಂಟೆಗೆ ಆರಂಭವಾಗುವ ಸಂಭ್ರಮ ರಾತ್ರಿ 12 ಗಂಟೆಯವರೆಗೂ ಮುಂದುವರಿಯಲಿದೆ.

“ಆ ದಿನ ವಿಷ್ಣು ಸೇನಾನಿಗಳು ಕೇವಲ ಒಂದು ಕಾರ್ಯಕ್ರಮವನ್ನು ಮಾಡುವುದಿಲ್ಲ. ಒಬ್ಬ ಮಹಾನ್ ಕಲಾವಿದನ ಮೇಲಿನ ಅಭಿಮಾನ ಹೇಗಿರುತ್ತದೆ ಎಂಬುದನ್ನು ಇಡೀ ನಾಡಿಗೆ ತೋರಿಸಲಿದ್ದಾರೆ. ಈ ಅಮೃತ ಮಹೋತ್ಸವ ಅಭಿಮಾನಿಗಳ ಪಾಲಿಗೆ ಒಂದು ಐತಿಹಾಸಿಕ ಕ್ಷಣವಾಗಬೇಕು ಎಂಬ ಕನಸಿನಿಂದ ಪ್ರತಿಯೊಂದು ಹೆಜ್ಜೆಯನ್ನೂ ರೂಪಿಸುತ್ತಿದ್ದೇವೆ” ಎಂದು ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.

ಇದನ್ನೂ ಓದಿ: Bigg Boss kannada 13: ನಾಮಿನೇಷನ್ ಕಾವು! ತಾಂಡವ್ - ಗಗನ್ ಟಾರ್ಗೆಟ್‌ಗೆ ಟ್ರಿಗರ್ ಆದ ಆಸಿಯಾ

ಕಾರ್ಯಕ್ರಮದ ವಿವರ

ದಿನಾಂಕ: ಸೆಪ್ಟೆಂಬರ್ 27

ಸಮಯ: ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ

ಮೆರವಣಿಗೆ: ಟೌನ್ ಹಾಲ್‌ನಿಂದ ನಾಯಂಡಹಳ್ಳಿವರೆಗೆ

ಮುಖ್ಯ ಕಾರ್ಯಕ್ರಮದ ಸ್ಥಳ: ನಂದಿ ಲಿಂಕ್ ಗ್ರೌಂಡ್, ನಾಯಂಡಹಳ್ಳಿ, ಬೆಂಗಳೂರು

Yashaswi Devadiga

View all posts by this author