ನಟ, ನಿರ್ಮಾಪಕ ಡಾಲಿ ಧನಂಜಯ್ ಅವರು ತಮ್ಮ ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ 'ಜೆರಾಕ್ಸ್' ಎಂಬ ವೆಬ್ ಸರಣಿಯನ್ನು ನಿರ್ಮಿಸಿದ್ದಾರೆ. ಈ ಸಿರೀಸ್ ಅನ್ನು 'ಬ್ಲಿಂಕ್' ಚಿತ್ರದ ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ನಿರ್ದೇಶಿಸಿದ್ದು, ಶೀಘ್ರದಲ್ಲೇ ಇದರ ಟ್ರೇಲರ್ ರಿಲೀಸ್ ಆಗಲಿದೆ. ಅಂದಹಾಗೆ, ʻಜೆರಾಕ್ಸ್ʼ ವೆಬ್ ಸರಣಿಯ ಮುಖ್ಯಭೂಮಿಕೆಯಲ್ಲಿ ನಾಗಭೂಷಣ್ ನಟಿಸಿದ್ದು, ಅವರಿಗೆ ಜೋಡಿಯಾಗಿ ಪಾಯಲ್ ಚೆಂಗಪ್ಪ ಎಂಟ್ರಿ ಕೊಟ್ಟಿದ್ದಾರೆ.
ಕಿರುಚಿತ್ರಗಳಿಂದ ಫೇಮಸ್ ಆಗಿರುವ ಪಾಯಲ್
ಅನೇಕ ಕಿರುಚಿತ್ರ ಹಾಗೂ ಅಮೃತಾಂಜನ್ ಸಿನಿಮಾದ ತಮ್ಮ ನಟನಾ ಕೌಶಲ್ಯ ಪ್ರದರ್ಶಿಸಿರುವ ಪಾಯಲ್ ಚೆಂಗಪ್ಪ ಈಗ ಜೆರಾಕ್ಸ್ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದ ಸೆನ್ಸೇಷನ್ ಎನಿಸಿಕೊಂಡಿರುವ ಪಾಯಲ್, ತಮ್ಮ ಹಾಸ್ಯ ಪ್ರಜ್ಞೆಯಿಂದಲೇ ಫೇಮಸ್ ಆಗಿದ್ದಾರೆ. ಇದೀಗ ಜೆರಾಕ್ಸ್ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ನಕ್ಕು ನಗಿಸಲು ಸಿದ್ಧವಾಗಿದ್ದಾರೆ ಪಾಯಲ್ ಚೆಂಗಪ್ಪ
Daali Dhananjaya: ತಂದೆ ಆಗ್ತಿದ್ದಾರೆ ಡಾಲಿ ಧನಂಜಯ್; ವೇದಿಕೆಯಲ್ಲೇ ಸಂತೋಷದ ವಿಚಾರ ಹಂಚಿಕೊಂಡ ನಟ
ಮೈಸೂರು - ಮಂಡ್ಯದ ಸುತ್ತಮುತ್ತಲ ಕಥೆ
ʻಜೆರಾಕ್ಸ್ʼ ವೆಬ್ ಸರಣಿಯು ಶೀರ್ಷಿಕೆಯೊಂದಿಗೆ ಕುತೂಹಲವನ್ನು ಹುಟ್ಟುಹಾಕಿದ್ದು, ಮಂಡ್ಯ - ಮೈಸೂರು ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ. ಜೆರಾಕ್ಸ್ ಅಂಗಡಿಯ ಮಾಲೀಕ ಪ್ರಕಾಶ್ ಜೀವನದಲ್ಲಿ ನಡೆಯುವ ಅನಿರೀಕ್ಷಿತ ತಿರುವುಗಳನ್ನು ಈ ವೆಬ್ ಸರಣಿಯಲ್ಲಿ ಕಟ್ಟಿಕೊಡಲಾಗಿದೆಯಂತೆ. ಇದು ಡಾರ್ಕ್ ಥ್ರಿಲ್ಲರ್ ಜಾನರ್‌ನ ವೆಬ್ ಸರಣಿ ಎನ್ನಲಾಗಿದೆ.
ಇನ್ನು, ಟಗರು ಪಲ್ಯ, ವಿದ್ಯಾಪತಿ, ಇಕ್ಕಟ್ ಸಿನಿಮಾಗಳ ಜೊತೆಗೆ ಹನಿಮೂನ್ ವೆಬ್ ಸರಣಿಗಳ ಮೂಲಕ ಜನಪ್ರಿಯರಾಗಿರುವ ನಾಗಭೂಷಣ್, ಜೆರಾಕ್ಸ್ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Daali Dhananjay Birthday: ಡಾಲಿ ಧನಂಜಯ್‌ಗೆ ಹುಟ್ಟುಹಬ್ಬದ ಸಂಭ್ರಮ; ಹೊರಬಿತ್ತು ʼಜಿಂಗೋʼ ಚಿತ್ರದ ಪೋಸ್ಟರ್
ನಾಗಭೂಷಣ್ ಹೇಳೋದೇನು?
"ನಾನು ಈವರೆಗೂ ಕೆಲಸ ಮಾಡಿರವ ಎಲ್ಲಾ ಪ್ರಾಜೆಕ್ಟ್‌ಗಳಿಗಿಂತ ಜೆರಾಕ್ಸ್ ವೆಬ್ ಸರಣಿಯ ಕಂಟೆಂಟ್ ಭಿನ್ನವಾಗಿದೆ. ಇದು ಬಹಳ ಅನಿರೀಕ್ಷಿತ, ವಿಲಕ್ಷಣ ತಿರುವುಗಳನ್ನು ಹೊಂದಿದೆ. ಶ್ರೀನಿಧಿ ಬೆಂಗಳೂರು ಸೃಷ್ಟಿಸಿರುವ ಪ್ರಪಂಚವು ಅದೇ ಸಮಯದಲ್ಲಿ ಪರಿಚಿತ ಮತ್ತು ವಿಲಕ್ಷಣವೆನಿಸುತ್ತದೆ. ಒಬ್ಬ ಕಲಾವಿದನಾಗಿ ಈ ವೆಬ್ ಸರಣಿಯು ನನ್ನೊಳಗಿನ ನಟನಿಗೆ ಹುಡುಕಾಟ ನಡೆಸಲು ರೋಮಾಂಚನಕಾರಿ ಅನುಭವ ನೀಡಿತ್ತು" ಎಂದು ನಾಗಭೂಷಣ್ ಹೇಳಿದ್ದಾರೆ.
ಈ ಹಿಂದೆ ತರುಣ್ ಸುಧೀರ್, ಅಶ್ವಿನಿ ಪುನೀತ್ ರಾಜ್‌ಕುಮಾರ್, ಶ್ರುತಿ ನಾಯ್ಡು, ಕಾರ್ತಿಕ್ ಗೌಡ ಅವರುಗಳು ನಿರ್ಮಾಣ ಮಾಡಿದ್ದ ವೆಬ್ ಸರಣಿಗಳು ಜೀ5 ಕನ್ನಡದಲ್ಲಿ ಪ್ರಸಾರವಾಗಿವೆ. ಇದೀಗ ಡಾಲಿ ಧನಂಜಯ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಜೆರಾಕ್ಸ್ ಕೂಡ ಶೀಘ್ರದಲ್ಲೇ ಜೀ5 ಕನ್ನಡದಲ್ಲಿ ಸ್ಟ್ರೀಮಿಂಗ್ ಆಗಲಿದೆ.