ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಅಮೃತ ಅಂಜನ್‌ʼ ಸಿನಿಮಾವನ್ನು ಟಾರ್ಗೆಟ್‌ ಮಾಡಲಾಗಿದ್ಯಾ? ಸುಧಾಕರ್‌ ಗೌಡ ಹೇಳಿದ್ದೇನು?

Amrutha Anjan Movie: ಸುಧಾಕರ್‌ ಗೌಡ ನಟನೆಯ ಅಮೃತ ಅಂಜನ್‌ ಸಿನಿಮಾವು ಬಿಡುಗಡೆಗೆ ಸಜ್ಜಾಗಿದ್ದು, ಕಿರುಚಿತ್ರದಿಂದ ಬೆಳ್ಳಿತೆರೆಗೆ ಬಂದ ಈ ಟೀಮ್‌ ಜನರ ಬೆಂಬಲ ಕೋರಿದ್ದಾರೆ. ಈ ಮಧ್ಯೆ ನಟ ಸುಧಾಕರ್ ಗೌಡ ಅವರು "ಒಬ್ಬ ಸ್ಟಾರ್ ನಟನ ತಂಡ ನನ್ನನ್ನು ಟಾರ್ಗೆಟ್ ಮಾಡುತ್ತಿದೆ" ಎಂದು ಅಳಲು ತೋಡಿಕೊಂಡಿದ್ದಾರೆ.

ಈ ಹಿಂದೆ ಯುವ ಪ್ರತಿಭೆಗಳೆಲ್ಲಾ ಸೇರಿಕೊಂಡು ʻಅಮೃತಾಂಜನ್ʼ ಎಂಬ ಕಿರುಚಿತ್ರ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಈಗ ಇದೇ ತಂಡವು ಅಮೃತ ಅಂಜನ್ ಎನ್ನುವ ಸಿನಿಮಾ ಮೂಲಕ ಬೆಳ್ಳಿ ಪರದೆಗೆ ಬರಲು ಸಜ್ಜಾಗಿದೆ. ಈ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ. ಈ ವೇಳೆ ಚಿತ್ರದಲ್ಲಿ ನಟಿಸಿರುವ ಕಲಾವಿದ ಸುಧಾಕರ್‌ ಗೌಡ ಒಂದು ಅಚ್ಚರಿಯ ವಿಚಾರವನ್ನು ಹೊರಹಾಕಿದ್ದಾರೆ.

"ಈ ಸಿನಿಮಾ ಮಾಡಲು ಬಹಳಷ್ಟು ವರ್ಷಗಳ ಶ್ರಮ ನಮ್ಮದು ಅಡಗಿದೆ. ನಾವು ಜೀರೋ ಇಂದ ಈ ಮಟ್ಟಕ್ಕೆ ಬಂದಿದ್ದೇವೆ. ಈ ಹಿಂದಿನ ಒಂದು ವಿಚಾರಕ್ಕಾಗಿ ಈಗ ನನ್ನನ್ನು ಒಬ್ಬ ಸ್ಟಾರ್ ನಟನ ತಂಡ ಟಾರ್ಗೆಟ್ ಮಾಡಿದೆ. ನಾನು ಕ್ಷಮೆ ಕೇಳಿದ್ಮೇಲೂ ಮತ್ತೆ ಮತ್ತೆ ಅದೇ ವಿಚಾರ ಚರ್ಚೆಗೆ ಬರುತ್ತಿದೆ. ನಾವು ಚಿತ್ರರಂಗದಲ್ಲಿ ಬೆಳೆಯಬೇಕೆಂದು ಬಂದಿರುವಂತಹ ಯುವಕರು, ದಯವಿಟ್ಟು ನಮ್ಮನ್ನು ಹರಸಿ ಬೆಳೆಸಿ.‌ ನಮ್ಮ ಚಿತ್ರ ಬಹಳ ಉತ್ತಮವಾಗಿ ಮೂಡಿಬಂದಿದೆ. ನಮ್ಮ ಪಾತ್ರಗಳು ಹೇಗೆ ಇದೆ ಎಂಬುವುದನ್ನು ನೀವು ತೆರೆಯ ಮೇಲೆ ನೋಡಿ" ಎಂದು ಸುಧಾಕರ್‌ ಗೌಡ ಹೇಳಿದ್ದಾರೆ.

ನಿರ್ದೇಶಕರು ಹೇಳಿದ್ದೇನು?

"ನಾನು ಈ ಹಿಂದೆ ಸೋಡಾ ಬುಡ್ಡಿ ಎಂಬ ಚಿತ್ರವನ್ನ ಮಾಡಿದ್ದೆ. ಇದು ನನ್ನ ಎರಡನೇ ಚಿತ್ರ. ಈ ಸಿನಿಮಾ ಆರಂಭಿಸುವುದಕ್ಕೆ ನನ್ನ ಅಮೃತಾಂಜನ್ ಕಿರುಚಿತ್ರವೇ ಕಾರಣ. ಈ ಚಿತ್ರದ ಟೈಟಲ್ ವಿಚಾರವಾಗಿ ಬಹಳಷ್ಟು ಸಮಸ್ಯೆಗಳು ಎದುರಾಯ್ತು. ಹಾಗಾಗಿ, ಅಮೃತ ಅಂಜನ್ ಎಂಬ ಹೆಸರಿನೊಂದಿಗೆ ಚಿತ್ರ ನಿರ್ಮಾಣ ಮಾಡಿದ್ದು, ಇದೊಂದು ಕಂಪ್ಲೀಟ್ ಕಾಮಿಡಿ ಎಂಟರ್ಟೈನ್ಮೆಂಟ್ ಚಿತ್ರವಾಗಿದ್ದು 80 ಪರ್ಸೆಂಟ್ ಹಾಸ್ಯ, 20 ಪರ್ಸೆಂಟ್ ಸೆಂಟಿಮೆಂಟ್ ಅಂಶಗಳನ್ನು ಒಳಗೊಂಡಿದ್ದು, ಸಂಪೂರ್ಣ ಮನೋರಂಜನೆಯನ್ನು ಈ ಚಿತ್ರ ನೀಡಲಿದೆ" ಎನ್ನುತ್ತಾರೆ ನಿರ್ದೇಶಕ ಜ್ಯೋತಿ ರಾವ್ ಮೋಹಿತ್.

Mango Pachcha: ಸಂಕ್ರಾಂತಿಗೊಂದು ಕನ್ನಡ ಸಿನಿಮಾ; 'ಕಿಚ್ಚ' ಸುದೀಪ್ ಸೋದರಳಿಯನ 'ಮ್ಯಾಂಗೋ ಪಚ್ಚ' ರಿಲೀಸ್ ಡೇಟ್ ಫಿಕ್ಸ್

"ಈ ಸಿನಿಮಾ ಗೆಲ್ಲಲೇಬೇಕು, ಒಂದು ವೇಳೆ ಸಿನಿಮಾ ಸೋತರೆ ನಾನು ಸಿನಿಮಾ ಮಾಡಲ್ಲ. ಈ ಸಿನಿಮಾ ಪ್ರಚಾರಕ್ಕಾಗಿ ಹಿರಿಯ ಸ್ಟಾರ್ ನಟರನ್ನ ಭೇಟಿ ಮಾಡಿದರು ಯಾವುದೇ ಪ್ರಯೋಜನವಾಗಲಿಲ್ಲ, ಆದರೂ ಪರವಾಗಿಲ್ಲ ನಮ್ಮ ತಂಡಕ್ಕೆ ಹಿರಿಯ ವಿತರಕರು ಸಾಥ್ ನೀಡಿದ್ದು, ಜಯಣ್ಣ ಫಿಲ್ಮ್ಸ್‌ ಮೂಲಕ ನಮ್ಮ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ನೀವೆಲ್ಲರೂ ನಮ್ಮ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ" ಎಂದು ನಿರ್ದೇಶಕ ಜ್ಯೋತಿ ರಾವ್ ಮೋಹಿತ್ ಹೇಳಿದರು.

ಉರಿ ಎಂಬ ಪಾತ್ರ ಮಾಡಿರುವ ಪಾಯಲ್

"ಇದು ನನ್ನ ಮೊದಲ ಚಿತ್ರ.‌ ನಾನು ನಿರ್ದೇಶಕರಿಗೆ ಧನ್ಯವಾದ ಹೇಳುತ್ತೇನೆ. ನನಗೆ ಶಾರ್ಟ್ ಫಿಲಂನಲ್ಲೂ ಅವಕಾಶ ಕೊಟ್ಟಿದ್ದರು, ಈಗ ಸಿನಿಮಾದಲ್ಲೂ ಉರಿ ಎಂಬ ಪಾತ್ರವನ್ನು ನಿರ್ವಹಿಸಿದ್ದೇನೆ. ಈ ಚಿತ್ರದಲ್ಲಿ ಲವ್ ಸ್ಟೋರಿ, ಕಾಲೇಜು ಕಥೆ, ಫ್ಯಾಮಿಲಿ ಕಂಟೆಂಟ್ ಎಲ್ಲವೂ ಒಳಗೊಂಡಿದೆ. ನಮ್ಮ ಸಿನಿಮಾ ಜನವರಿ 30ರಂದು ಚಿತ್ರಮಂದಿರಕ್ಕೆ ಬರುತ್ತಿದೆ" ಎನ್ನುತ್ತಾರೆ ನಟಿ ಪಾಯಲ್ ಚಂಗಪ್ಪ.

ಕುಡುಕನ ಪಾತ್ರಕ್ಕಾಗಿ ಕುಡಿದು ನಟಿಸಿದ್ದೇನೆ

"ನಾನು ಈ ಚಿತ್ರದಲ್ಲಿ ಒಂದು ಕುಡುಕನ ಪಾತ್ರ ಮಾಡಿದ್ದು, ನನ್ನ ಹೆಂಡತಿ ಪಾತ್ರಧಾರಿ ಈ ಚಟವನ್ನು ಬಿಡಿಸಲು ಏನೆಲ್ಲ ಮಾಡ್ತಾಳೆ ಅನ್ನೋದು ನಮ್ಮ ಸಿನಿಮಾದಲ್ಲಿ ಇದೆ. ನಾವು ಒಂದು ಶೋ ಮಾಡಿದ್ದೇವೆ, ನೋಡಿದವರು ಇಂಟರ್ವಲ್ ವರೆಗೂ ತುಂಬಾ ನಕ್ಕಿದ್ದಾರೆ. ಅದೇ ರೀತಿ ಸೆಕೆಂಡ್ ಆಫ್‌ನಲ್ಲಿ ಎಮೋಷನ್ ಇದೆ. ನಂತರ ಒಂದಷ್ಟು ಚೇಂಜಸ್ ಗೊತ್ತಾಗಿ ಅದನ್ನು ಸಿದ್ಧಪಡಿಸಿ ಪೂರ್ತಿ ಪ್ರಿಪೇರ್ ಆಗಿ ಬಂದಿದ್ದೇವೆ. ಆಮೇಲೆ ಈ ಚಿತ್ರದ ಕೆಲವು ಸೀನ್ಸ್ ನೈಜವಾಗಿ ಬರುವುದಕ್ಕಾಗಿ ಕುಡಿದು ಆಕ್ಟ್ ಕೂಡ ಮಾಡಿದ್ದೇನೆ. ಇಡೀ ಫ್ಯಾಮಿಲಿ ಕುಳಿತು ನೋಡುವಂತಹ ಚಿತ್ರ ಇದಾಗಿದೆ. ದಯವಿಟ್ಟು ಎಲ್ಲರೂ ಸಪೋರ್ಟ್ ಮಾಡಿ" ಎಂದು ಗೌರವ್‌ ಶೆಟ್ಟಿ ಹೇಳಿದ್ದಾರೆ. ಜನವರಿ 30ಕ್ಕೆ ಈ ಸಿನಿಮಾ ತೆರೆಗೆ ಬರಲಿದೆ.