ಜೀ ಕನ್ನಡ ವಾಹಿನಿಯಲ್ಲಿ(Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಗೌತಮ್ ಮುಂದೆ ಮಾಹಾ ಸತ್ಯ ಅನಾವರಣ ಆಗಿದೆ. ಮಲ್ಲಿ ಮದುವೆ ಅಂತ ಅತ್ಯಂತ ಖುಷಿಯಲ್ಲಿ ಇದ್ದಿದ್ದರು ಗೌತಮ್ ಹಾಗೂ ಭೂಮಿಕಾ. ಸುನಿ ಕೂಡ ಜೈದೇವ್ (Jaidev) ಚೇಳ ಅನ್ನೋದು ಬೆಳಕಿಗೆ ಬರದೇ ಹೋಗಿತ್ತು. ಆದರೀಗ ಎಲ್ಲವೂ ರಿವೀಲ್ ಆಗಿದೆ. ಮಲ್ಲಿ ವಿವಾಹ ನಿಲ್ಲಿಸಲು ಜಯದೇವ್ ಸುನಿಯನ್ನು ಬಳಸಿಕೊಂಡಿದ್ದ. ಆದರೆ, ಭೂಮಿಕಾ ಸುನಿಯ (Bhoomika Suni) ಹಿನ್ನೆಲೆ ತಿಳಿದುಕೊಂಡು ಮದುವೆ ನಿಲ್ಲಿಸಲು ಸಿದ್ಧವಾಗಿದ್ದಾಳೆ. ಇದರಿಂದ ಜಯದೇವ್‌ಗೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ.
ಗೌತಮ್ ಎದುರು ಬಯಲಾಯ್ತು ಸುನಿ ಬಂಡವಾಳ
ಜೈದೇವ್ ನೇರವಾಗಿ ಮದುವೆ ನಡೆಯುವ ಜಾಗಕ್ಕೆ ಬಂದಿದ್ದಾನೆ. ಪಾರ್ಥ ಹಾಗೂ ಗೌತಮ್ ಮಾತನಾಡುವಾಗ, ಸುನಿಯನ್ನ ತೋರಿಸಿದ್ದಾನೆ ಗೌತಮ್. ಆಗ ಪಾರ್ಥಗೆ ಶಾಕ್ ಆಗಿದೆ. ಜೈದೇವ್ ಜೊತೆ ಸುನಿ ಕೆಲಸ ಮಾಡುತ್ತಿದ್ದಾನೆ ಎಂದಿದ್ದಾನೆ. ಇದಾದ ನಂತರ ಸುನಿಯನ್ನ ಫಾಲೋ ಮಾಡಿದ್ದಾರೆ ಗೌತಮ್ ಹಾಗೂ ಪಾರ್ಥ. ಆಗ ಸುನಿ ಹಾಗೂ ಜೈದೇವ್ ಮಾತನಾಡುತ್ತಿರೋದು ಗೌತಮ್ ನೋಡಿದ್ದಾನೆ.
ಇದನ್ನೂ ಓದಿ : Rajinikanth: ಪ್ರತಿಯೊಬ್ಬ ಭಾರತೀಯ ನೋಡಬೇಕಾದ ಸಿನಿಮಾ! ಧುರಂಧರ್ ಸಿನಿಮಾ ಬಗ್ಗೆ ರಜನಿಕಾಂತ್ ಹೇಳಿದ್ದೇನು?
ಜೈದೇವ್ ಸುನಿ ಬಳಿ, `ಇಲ್ಲಿ ಏನಾಗುತ್ತಿದೆ ಅಂತ ಒಂದೂ ಅಪ್‌ಡೇಟ್ ನೀನು ಕೊಡ್ತಾ ಇಲ್ಲ. ಯಾವಾಗ ಹಸೆಮಣೆ ಮೇಲೆ ನಿನ್ನ ಕೂರಿಸೋಕೆ ನೋಡ್ತಾರಲ್ಲ ಆಗ ನಿನ್ನ ಬುದ್ಧಿ ತೋರಿಸು. ಮಲ್ಲಿ ಲೈಫ್‌ಲಾಂಗ್ ಸಫರ್ ಆಗಬೇಕುʼ ಅಂತ ಹೇಳಿದ್ದಾನೆ. ಈ ಮಾತನ್ನು ಗೌತಮ್ ಕೇಳಿಸಿಕೊಂಡಿದ್ದಾನೆ.ಜೈದೇವ್ ಹಾಗೂ ಸುನಿ ಕಂಡು ಶಾಕ್ ಆಗಿದ್ದಾನೆ ಗೌತಮ್. ಜೈದೇವ್ ಹೋಸ ಬಳಿಕ ಸುನಿ ಕೂಡ ಗೌತಮ್ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಇನ್ನು ಸುನಿಗೆ ಗೌತಮ್ ಬಿಡ್ತಾನಾ? ಸುನಿಯನ್ನೇ ಬಳಸಿಕೊಂಡು ಮಾಸ್ಟರ್ ಪ್ಲ್ಯಾನ್ ಮಾಡಿ ಜೈದೇವ್‌ಗೆ ಠಕ್ಕರ್ ಕೊಡ್ತಾನಾ ಎನ್ನೋದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಮದುವೆ ನಡೆಯದಂತೆ ನೋಡಿಕೊಳ್ಳುವ ಪ್ಲ್ಯಾನ್‌ನಲ್ಲಿ ಭೂಮಿಕಾ
ಮತ್ತೊಂದು ಕಡೆ ಭೂಮಿಕಾಗೂ ಈ ವಿಚಾರ ಗೊತ್ತಾಗಿದೆ. ಮದುವೆ ಆಗದಂತೆ ಕೊನೆ ಕ್ಷಣದಲ್ಲಿ ನಿಲ್ಲಿಸಬೇಕು ಎಂಬುದು ಆತನ ಉದ್ದೇಶ ಆಗಿತ್ತು. ಆದರೆ, ಭೂಮಿಕಾಳೇ ಮದುವೆ ನಿಲ್ಲಿಸುತ್ತೇನೆ ಎಂದು ಹೊರಟಿದ್ದಾಳೆ. . ಸುನಿ ಯಾರು ಹಾಗೂ ಆತನ ಹಿನ್ನೆಲೆ ಏನು ಎಂಬುದು ಭೂಮಿಕಾಗೆ ಗೊತ್ತಾಗಿ ಹೋಗಿದೆ. ಈ ಕಾರಣಕ್ಕೆ ಯಾವುದೇ ಕಾರಣಕ್ಕೂ ಇಬ್ಬರ ಮದುವೆ ನಡೆಯದಂತೆ ನೋಡಿಕೊಳ್ಳುವ ಪ್ಲ್ಯಾನ್ ಅಲ್ಲಿದ್ದಾಳೆ.
ಮಾವನ ಕಾಲರ್‌ಗೆ ಕೈ ಹಾಕಿದ್ದಾನೆ ಜೈದೇವ್
ಜೈದೇವ್ ತನ್ನ ಮಾಸ್ಟರ್ ಪ್ಲ್ಯಾನ್‌ನಿಂದ ಗೌತಮ್ ಹಾಗೂ ಭೂಮಿಕಾಗೆ ತೊಂದರೆ ಕೊಡುತ್ತಲೇ ಇದ್ದ. ಆದರೆ ಈ ವಿಚಾರವನ್ನು ಆನಂದ್‌ಗೆ ವರದಿ ಒಪ್ಪಿಸೋದು ಮಾವ ಲಕ್ಷ್ಮೀಕಾಂತ್ ಆಗಿತ್ತು. ಆದರೀಗ ಈ ಎಲ್ಲ ಸತ್ಯಗಳು ಜೈದೇವ್‌ಗೆ ಗೊತ್ತಾಗಿದೆ. ಮಲ್ಲಿ ವಿಚಾರವಾಗಿ ಲಕ್ಷ್ಮೀಕಾಂತ್ ಕಾಲ್‌ನಲ್ಲಿ ಮಾತನಾಡಿರುವ ಬಗ್ಗೆ ಜೈದೇವ್‌ಗೆ ಗೊತ್ತಾಗಿದೆ. ಕುಚಿಕು ಕುಚಿಕು ಅಂತಾನೇ ಹಿಂದೆಯಿಂದ ಚೂರಿ ಹಾಕ್ತೀಯಾ ಅಂತ ಮಾವನ ಕಾಲರ್‌ಗೆ ಕೈ ಹಾಕಿದ್ದಾನೆ ಜೈದೇವ್. ಒಟ್ಟಾರೆಯಾಗಿ ಈ ಮದುವೆ ನಡೆದು ಹೋದರೆ ಜಯದೇವ್‌ಗೆ ದೊಡ್ಡ ಹಿನ್ನಡೆ ಆಗೋದು ಪಕ್ಕಾ. ಗೌತಮ್ ಹಾಗೂ ಭೂಮಿಕಾ ಮುಂದಿನ ನಡೆಯೇನು ಎನ್ನೋದು ವೀಕ್ಷಕರಲ್ಲಿ ಇರೋ ಕುತೂಹಲ.
ಇದನ್ನೂ ಓದಿ: Amruthadhaare Serial: ಜೈದೇವ್ ಕೈಯಲ್ಲಿ ಸಿಕ್ಕ ಲಕ್ಷ್ಮೀಕಾಂತನ ಕತೆ ಹರೋಹರ!
ʻಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.