ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Amruthadhaare serial: ಗೌತಮ್‌ಗೆ ಸಾಥ್‌ ಕೊಟ್ಟ ಅರಸನ ಕೋಟೆ ಅಖಿಲಾಂಡೇಶ್ವರಿ! ತನ್ನ ಸಾಮ್ರಾಜ್ಯಕ್ಕೆ ಮರಳಿದ ದಿವಾನ್‌

Amruthadhaare serial: ಇತ್ತ ಜೈದೇವ್‌, ಆಸ್ತಿ ಎಲ್ಲಾ ಕಳೆದುಕೊಂಡು ಬೀದಿಗೆ ಬಿದ್ದಿದ್ದಾನೆ. ಒಂದು ಮಗು ಬಳಿ ಚೆಕ್‌ ಕೊಟ್ಟು ಜೈದೇವ್‌ ಕೊಡಲು ಗೌತಮ್‌ ಹೇಳುತ್ತಾನೆ. ಇನ್ನೇನು ಜೈದೇವ್‌ ಆಸ್ತಿ ಕಳೆದುಕೊಳ್ಳಬೇಕು ಅನ್ನೋ ಅಷ್ಟರಲ್ಲಿ ಗೌತಮ್‌ ಎಂಟ್ರಿ ಆಗಿದೆ. ತನ್ನ ಸಾಮ್ರಾಜ್ಯವನ್ನು ಮರಳಿ ಪಡೆಯಲು ಬಂದಿದ್ದಾನೆ ಗೌತಮ್‌.

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಜೈದೇವ್‌ ಇದ್ದ ಆಸ್ತಿಯನ್ನೂ ಕಳೆದುಕೊಳ್ಳುವಂತಹ ಸ್ಥಿತಿಗೆ ಬಂದು ತಲುಪಿದ್ದಾನೆ. ಸದ್ಯ ‘ಪಾರು’ ಧಾರಾವಾಹಿಯ ಅಖಿಲಾಂಡೇಶ್ವರಿ ಪಾತ್ರವನ್ನ ‘ಅಮೃತಧಾರೆ’ ಜೊತೆಗೆ ಸಮೀಕರಿಸಲಾಗಿದೆ. ಗೌತಮ್‌ ದಿವಾನ್‌ (Gowtham Diwan) ಪಾಲಿಗೆ ದೇವರಂತೆ ಬಂದಿದ್ದಾರೆ ಅಖಿಲಾಂಡೇಶ್ವರಿ (Akhilandeshwari). ಅತ್ತ ಜೈದೇವ್‌ ಕಳೆದುಕೊಂಡ ಆಸ್ತಿಗಳನ್ನು ಮರಳಿ ಪಡೆಯಲು ರಾಜನಂತೆ ಎಂಟ್ರಿ ಕೊಟ್ಟಿದ್ದಾನೆ ಗೌತಮ್‌.

ಹೊಸ ಪ್ರೋಮೋ ಔಟ್‌ ಆಗಿದೆ. ಮೊದಲಿಗೆ ಗೌತಮ್‌, ಶಕುಂತಲಾ ಅವರನ್ನು ಹುಡುಕಲು ಹೊರಡುತ್ತಾನೆ. ಅದೇ ಸಮಯಕ್ಕೆ ಭೂಮಿ ಬಂದು ತಡೆದು, ಮೊದಲು ಕೆಲಸದ ಕಡೆ ಗಮನ ಕೊಡಿ. ತಾಯಿಯೂ ಮುಖ್ಯ. ಅಷ್ಟೇ ಮಾಡುವ ಕೆಲಸವೂ ಮುಖ್ಯ. ನಿಮ್ಮನ್ನು ನಂಬಿಕೊಂಡು ಅನೇಕ ಕೆಲಸಗಾರರು ಇದ್ದಾರೆ ಎಂದು ಬುದ್ಧಿಮಾತು ಹೇಳಿದ್ದಾಳೆ.ಹೀಗಾಗಿ ಗೌತಮ್‌, ಆನಂದ್‌ಗೆ ಕರೆ ಮಾಡಿ ಮೀಟಿಂಗ್‌ ಅರೆಂಜ್‌ ಮಾಡಲು ಹೇಳಿದ್ದಾನೆ.

ಇದನ್ನೂ ಓದಿ: Toxic Movie: 'ಟಾಕ್ಸಿಕ್' ಮತ್ತೆ ಪೋಸ್ಟ್‌ಪೋನ್‌? ಏನಿದು ಸುದ್ದಿ?

ಗೌತಮ್‌ಗೆ ನೆರವಾಗಿ ನಿಂತ್ರು ಅರಸನ ಕೋಟೆ ಅಖಿಲಾಂಡೇಶ್ವರಿ!

ಹಿರಿಯರು ಬಾಳಿ ಬದುಕಿದ ಮನೆ ಉಳಿಸಿಕೊಳ್ಳಲು ಗೌತಮ್‌ ದಿವಾನ್‌ ಅಖಿಲಾಂಡೇಶ್ವರಿ ಮನೆಗೆ ಬಂದಿದ್ದಾರೆ. ಅಲ್ಲೊಂದು ಮೀಟಿಂಗ್‌ ನಡೆಯುತ್ತೆ. ನಂತರ ಗೌತಮ್‌ ಕೈಗೆ ಬ್ಲ್ಯಾಂಕ್‌ ಚೆಕ್‌ ಕೊಟ್ಟು ಬಿಡ್ತಾರೆ ಅಖಿಲಮ್ಮ. ಚೆಕ್‌ ನೋಡಿದ ಗೌತಮ್‌ಗೆ ಶಾಕ್‌ ಜೊತೆಗೆ ಖುಷಿನೂ ಆಗುತ್ತೆ. ಆದರೂ ಏನಿದು ಮೇಡಮ್‌ ಅಂತ ಕೇಳ್ತಾರೆ. ಅದಕ್ಕೆ ಅಖಿಲಾಂಡೇಶ್ವರಿ ಇದು ನಾನು ದಿವಾನ್‌ ಕುಟುಂಬ ಉಳಿಸಿಕೊಳ್ಳುವುದಕ್ಕೆ ಗೌತಮ್‌ ದಿವಾನ್‌ಗೆ ಕೊಡ್ತಿರೋದು, ನಿಮಗೆ ಗೆಲುವು ಸಿಗಲಿ ಎನ್ನುತ್ತಾರೆ.

ಜೈದೇವ್‌ ಎದುರು ರಾಜನಂತೆ ಬಂದು ನಿಂತ ಗೌತಮ್‌

ಇತ್ತ ಜೈದೇವ್‌, ಆಸ್ತಿ ಎಲ್ಲಾ ಕಳೆದುಕೊಂಡು ಬೀದಿಗೆ ಬಿದ್ದಿದ್ದಾನೆ. ಒಂದು ಮಗು ಬಳಿ ಚೆಕ್‌ ಕೊಟ್ಟು ಜೈದೇವ್‌ ಕೊಡಲು ಗೌತಮ್‌ ಹೇಳುತ್ತಾನೆ. ಇನ್ನೇನು ಜೈದೇವ್‌ ಆಸ್ತಿ ಕಳೆದುಕೊಳ್ಳಬೇಕು ಅನ್ನೋ ಅಷ್ಟರಲ್ಲಿ ಗೌತಮ್‌ ಎಂಟ್ರಿ ಆಗಿದೆ. ತನ್ನ ಸಾಮ್ರಾಜ್ಯವನ್ನು ಮರಳಿ ಪಡೆಯಲು ಬಂದಿದ್ದಾನೆ ಗೌತಮ್‌.



ಇದಕ್ಕೂ ಮುಂಚೆ ಜೈದೇವ್‌ ತನ್ನ ಪತ್ನಿ ಬಳಿ, ವಿದೇಶಕ್ಕೆ ಹೋದರೂ ಇಲ್ಲಿ ಇರೋರಿಗೆ ನೆಮ್ಮದಿ ಸಿಗಬಾರದು. ಏನಾದರೂ ಒಂದು ಪ್ಲ್ಯಾನ್‌ ಮಾಡಬೇಕು ಅಂತ ಮತ್ತದೇ ಕೆಟ್ಟ ಯೋಚನೆ ಮಾಡಿದ್ದಾನೆ. ಇಷ್ಟಾದರೂ ಜೈದೇವ್‌ ಮಾತ್ರ ಬದಲಾದಂತಿಲ್ಲ. ಮುಂದೆ ಗೌತಮ್‌ ಅಷ್ಟೂ ಆಸ್ತಿಗಳನ್ನು ತನ್ನ ವಶಕ್ಕೆ ಪಡೆದುಕೊಳ್ತಾನಾ? ಜೈದೇವ್‌ ವಿದೇಶಕ್ಕೆ ಹೋಗಿ ಸೆಟಲ್‌ ಆಗ್ತಾನಾ? ಜೈದೇವ್‌ ಪತ್ನಿಯ ಮೋಸವೂ ಕೂಡ ಬಯಲಾಗುತ್ತಾ? ಶಕುಂತಲಾ ಕಥೆ ಏನು? ಗೌತಮ್‌ ಮುಂದಿನ ನಡೆಯೇನು? ಅನ್ನೋದು ವೀಕ್ಷಕರಲ್ಲಿ ಇರೋ ಕುತೂಹಲ.

ಇದನ್ನೂ ಓದಿ: Amruthadhaare Serial: ಶಕುಂತಲಾಗೆ ಮೃತ್ಯು ಕಂಟಕ! ದೇಶ ಬಿಟ್ಟು ಓಡಿ ಹೋಗಲು ಜೈದೇವ್‌ ಮಾಸ್ಟರ್‌ ಪ್ಲ್ಯಾನ್‌

ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.

Yashaswi Devadiga

View all posts by this author