ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Amruthadhaare Serial: ಮಲ್ಲಿಗೆ ಜೈದೇವ್‌ಗೆ ಕಾಟ; ಗೌತಮ್‌ಗೋಸ್ಕರ್‌ ಆನಂದ್‌ ಮಹಾತ್ಯಾಗ!

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಗೌತಮ್‌ ಈಗ ಕ್ಯಾಬ್‌ ಡ್ರೈವರ್‌ ಅಲ್ಲ. ಉದ್ಯಮಿಯಾಗಿದ್ದಾನೆ. ಭೂಮಿಕಾ ಸಾಥ್‌ ಗೌತಮ್‌ಗಿದೆ. ಅದರ ಜೊತೆಗೆ ಆಪ್ತ ಗೆಳೆಯ ಆನಂದ್‌ ಕೂಡ ಸಪೋರ್ಟ್‌ ಇದೆ. ಹೀಗಿರುವಾಗಲೇ ಜೈದೇವ್‌ ಮಾತ್ರ ಕಂಗಾಲಾಗಿ ಹೋಗಿದ್ದಾನೆ. ಶಕುಂತಲಾ ಕೂಡ ಬೆಚ್ಚಿ ಬಿದ್ದಿದ್ದು ತನ್ನ ಅಣ್ಣ ಲಕ್ಷ್ಮೀಕಾಂತ್ ಎದುರು ತನ್ನ ಆತಂಕ ವ್ಯಕ್ತಪಡಿಸಿದ್ದಾಳೆ. ಆದರೆ ಇದಕ್ಕೂ ಮೊದಲು ಲಕ್ಷ್ಮೀಕಾಂತ್‌ನ ಜೈದೇವ್ ಅವಮಾನ ಮಾಡಿದ್ದಾನೆ.

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಗೌತಮ್‌ ಈಗ ಕ್ಯಾಬ್‌ ಡ್ರೈವರ್‌ ಅಲ್ಲ. ಉದ್ಯಮಿಯಾಗಿದ್ದಾನೆ. ಭೂಮಿಕಾ ಸಾಥ್‌ ಗೌತಮ್‌ಗಿದೆ. ಅದರ ಜೊತೆಗೆ ಆಪ್ತ ಗೆಳೆಯ ಆನಂದ್‌ (anand) ಕೂಡ ಸಪೋರ್ಟ್‌ ಇದೆ. ಹೀಗಿರುವಾಗಲೇ ಜೈದೇವ್‌ ಮಾತ್ರ ಕಂಗಾಲಾಗಿ ಹೋಗಿದ್ದಾನೆ. ಶಕುಂತಲಾ ಕೂಡ ಬೆಚ್ಚಿ ಬಿದ್ದಿದ್ದು ತನ್ನ ಅಣ್ಣ ಲಕ್ಷ್ಮೀಕಾಂತ್ ಎದುರು ತನ್ನ ಆತಂಕ ವ್ಯಕ್ತಪಡಿಸಿದ್ದಾಳೆ. ಆದರೆ ಇದಕ್ಕೂ ಮೊದಲು ಲಕ್ಷ್ಮೀಕಾಂತ್‌ನ ಜೈದೇವ್ (Jaidev) ಅವಮಾನ ಮಾಡಿದ್ದಾನೆ.

ಮಲ್ಲಿ ಮೇಲೆ ಜೈದೇವ್‌ ಹಗೆ

ಈಗಾಗಲೇ ಮಲ್ಲಿ ಹಾಗೂ ಸುನಿಯ ನಿಶ್ಚಿತಾರ್ಥ ಆಗಿದ್ದು, ಡಿವೋರ್ಸ್‌ ವಿಚಾರವನ್ನೇ ಇಟ್ಟುಕೊಂಡು ಜೈದೇವ್‌ , ಗೌತಮ್‌ ಬಳಿ ತಂದೆಯ ಸಮಾಧಿ ಜಾಗವನ್ನೂ ಪಡೆದ. ಗೌತಮ್‌ ಇಷ್ಟೆಲ್ಲ ಬರೆದುಕೊಟ್ಟು, ಮಲ್ಲಿ ತಂಟೆಗೆ ಬರದಂತೆ ಎಚ್ಚರಿಕೆಯನ್ನೂ ನೀಡಿದ್ದಾನೆ. ಆದರೆ ಜೈದೇವ್‌ಗೆ ಮಾತ್ರ ಇದು ತಲೆಗೆ ಬಂದಂತೆ ಇಲ್ಲ. ಸುನಿಗೂ ಮಾತಲ್ಲೇ ಯಾಮಾರಿಸಿದ್ದಾನೆ. ಹೀಗಾಗಿ ಪ್ರೇಮದಾಟ ಮುಂದುವರೆದಿದೆ.

ಇದನ್ನೂ ಓದಿ: Rani Serial: ರಾಣಿಗೆ ಅಪ್ಪ ಇಲ್ವಾ? ಈ ಪಾತ್ರಕ್ಕೆ ನಟ ಯಾರು?

ಸಿವಿಲ್ ಸರ್ವಿಸ್ ಪರೀಕ್ಷೆಯ ತಯಾರಿ

ಇನ್ನೊಂದು ಕಡೆ ಸಿವಿಲ್ ಸರ್ವಿಸ್ ಪರೀಕ್ಷೆಯ ತಯಾರಿಯನ್ನು ಮಲ್ಲಿ‌ ಮಾಡಿಕೊಳ್ಳುತ್ತಿದ್ದು, ಸುನಿ ಭೇಟಿಯಾಗಲು ಬಂದಿದ್ದಾನೆ. ಮನೆಗೆ ಬಂದ ಸುನಿಗೆ ಭೇಟಿಗೆ ಅವಕಾಶ ಕೊಡಲು ಮೊದಲು ನಿರಾಕರಿಸುವ ಭೂಮಿಕಾ ಕೊನೆಗೆ ಐದು ನಿಮಿಷ ಮಾತನಾಡಲು ಅವಕಾಶ ನೀಡುತ್ತಾಳೆ. ಇದನ್ನೂ ಸುನಿ ಜೈದೇವ್‌ಗೆ ತಿಳಿಸುತ್ತಾನೆ.



ಇದರಿಂದ ಕೆರಳಿರುವ ಜೈದೇವ್,ಅದ್ಹೇಗೆ ಎಕ್ಸಾಂ ಬರಿತಿಯಾ ನೋಡೇ ಬಿಡ್ತೀನಿ ಎಂದು ಮನದಲ್ಲೇ ಲೆಕ್ಕಾಚಾರ ಹಾಕ್ತಾನೆ. ಮಲ್ಲಿಯನ್ನು ಜೈದೇವ್ ಕಿಡ್ನ್ಯಾಪ್ ಮಾಡುತ್ತಾನಾ..? ಬಿಸಿನೆಸ್ ಅಂಗಳಕ್ಕೆ ಮರಳಿರುವ ಗೌತಮ್ ಈ ಬಾರಿ ಮಲ್ಲಿಯನ್ನು ಕಾಪಾಡುತ್ತಾನಾ..? ಎನ್ನುವುದನ್ನು ಕಾದು ನೋಡಬೇಕಿದೆ.

ರಾಮ ಲಕ್ಷ್ಮಣನಂತೆ ಆನಂದ್‌

ಇದೆಲ್ಲದರ ನಡುವೆ ಆನಂದ್‌ ಕೂಡ ಗೌತಮ್ಗೆ ಸಾಥ್‌ ಕೊಡುತ್ತಿದ್ದಾನೆ. ತನಗೆ ಒಳ್ಳೆಯ ಕಂಪನಿಯಿಂದ ಆಫರ್‌ ಬಂದಿದ್ದರೂ ಕೂಡ ಗೌತಮ್‌ ಗೋಸ್ಕರ ಬಿಟ್ಟುಕೊಟ್ಟಿದ್ದಾನೆ. ಇದನ್ನು ಗಮನಿಸಿದ ಗೌತಮ್‌ ತಾಯಿ, ಪ್ರಶ್ನೆ ಇಟ್ಟಿದ್ದಾಳೆ. ಆದರೆ ಆನಂದ್‌ ಹಾಗೂ ಆತನ ಪತ್ನಿ ಮಾತ್ರ ಗೌತಮ್‌ ಪರವಾಗಿಯೇ ನಿಲ್ಲುತ್ತೇವೆ ಎಂದು ಹೇಳಿದ್ದಾರೆ. ರಾಮ ಲಕ್ಷ್ಮಣನಂತೆ ಇರೋ ಈ ಜೋಡಿ ಮೇಲೆ ವೀಕ್ಷಕರು ಸಂತಸ ಹೊರ ಹಾಕಿದ್ದಾರೆ.

ಗೌತಮ್ ಏನೇ ಮಾಡಿದರೂ ಅದರಲ್ಲಿ ಯಶಸ್ಸು ಕಾಣುತ್ತಾನೆ ಎಂಬುದನ್ನು ಆತ ಸರಿಯಾಗಿ ಬಲ್ಲನು. ಹೀಗಾಗಿ, ಜೈದೇವ್‌ಗೆ ಭಯ ಶುರುವಾಗಿದೆ. ಗೌತಮ್ ದೀವಾನ್ ಕುಟುಂಬದವರ ಒತ್ತಾಯಕ್ಕೆ ಕಂಪನಿ ಆರಂಭಿಸಿದ್ದಾನೆ. ಈ ಕಂಪನಿ ಶೇರು ಮಾರುಕಟ್ಟೆಗೆ ಸಂಬಂಧಿಸಿದ್ದು. ಆ್ಯಪ್ ತಯಾರಿಸುವ ಮೂಲಕ ಶೇರು ಮಾರುಕಟ್ಟೆ ಬ್ರೋಕರ್ ಆ್ಯಪ್ ಇದಾಗಿದೆ.

ಇದನ್ನೂ ಓದಿ: Amruthadhaare Serial: ಮಲ್ಲಿಗಾಗಿ ಮಹತ್ವದ ತ್ಯಾಗ ಮಾಡಿದ್ದಾರೆ ಗೌತಮ್-ಭೂಮಿಕಾ!

ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.

Yashaswi Devadiga

View all posts by this author