ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhare serial episode) ದಿನಕ್ಕೊಂದು ಟ್ವಿಸ್ಟ್ ಪಡೆದು ಸಾಗುತ್ತಿದೆ. ಅದರಲ್ಲೂ ಕೆಡಿ ಜಯಂತ್ ಒಂದಲ್ಲ ಒಂದು ಪ್ಲ್ಯಾನ್ ಮಾಡುತ್ತಲೇ ಇದ್ದಾನೆ. ಭೂಮಿ -ಭೂಮಿಕಾ ಜೀವನದಲ್ಲಿ ಕಾರ್ಮೋಡ ಸರಿದು ಮಳೆಯಾಗೋ ಹೊತ್ತಲ್ಲೇ ಹೊಸ ಆತಂಕವೊಂದು ಶುರುವಾಗಿದೆ. ಇದೀಗ ಮುದ್ದಿನ ಮಗ ಆಕಾಶ್ (Akash) ಕಾಣಾಯಾಗಿದ್ದಾನೆ. ಈ ಆಘಾತ ಭೂಮಿ ಮುಂದೆ ಬಂದಿದೆ. ಆದರೀಗ ಭೂಮಿಗೆ ಜಯದೇವ್ ಕಿಡ್‌ನ್ಯಾಪ್ (Kidnap) ಮಾಡಿರೋದು ಗೊತ್ತಾಗಿ, ಸ್ವತಃ ಅವಳೇ ಜಯದೇವ್ (Jaydev) ಹತ್ತಿರ ಹೋಗಿದ್ದಾಳೆ.
ಚಮಕ್ ಕೊಟ್ಟ ಅಜ್ಜಿ
ಶಕುಂತಲಾ ಭಯಕ್ಕೆ ಭೂಮಿ , ಗೌತಮ್‌ನಿಂದ ದೂರವಾಗಿ ಮಗನ ಜೊತೆ ಜೀವನ ನಡೆಸುತ್ತಿದ್ದಳು. ಬಳಿಕ ಗೌತಮ್‌ಗೂ ಸಿಕ್ಕಿ, ಅಂತೂ ಭಾಗ್ಯಮ್ಮ ಎಂಟ್ರಿ ಕೊಟ್ಟ ಮೇಲೆ ಜೋಡಿ ಹತ್ತಿರವಾಗುತ್ತಿದೆ. ಭೂಮಿಕಾ ಮನಸನ್ನು ಬದಲಿಸಲು ಭಾಗ್ಯಮ್ಮ ಕಡೆಯಿಂದಲೂ ಕೂಡ ಸಾಧ್ಯವಾಗಿಲ್ಲ. ಬದಲಿಗೆ ಭಾಗ್ಯಮ್ಮ ಅಜ್ಜಿ ಬಳಿ ಹೇಳಿ, ಅಜ್ಜಿ ತನ್ನ ಮಾಸ್ಟರ್ ಪ್ಲ್ಯಾನ್‌ನಿಂದ ಭೂಮಿ-ಗೌತಮ್ ಹತ್ತಿರವಾಗೋ ಹಾಗೇ ಮಾಡಿದ್ದಾಳೆ.
ಇದನ್ನೂ ಓದಿ: Kannada Serial TRP: ಅಮೃತಧಾರೆ ಟ್ವಿಸ್ಟ್ಗೆ ಮನಸೋತ ವೀಕ್ಷಕರು: ನಂ. 1 ಧಾರಾವಾಹಿ
ಅಪ್ಪು ಕಿಡನ್ಯಾಪ್
ಇನ್ನೊಂದು ಕಡೆ ಜೈದೇವ್ ಮೋಸ ಹೋಗಿದ್ದಾನೆ.ಅಜ್ಜಿ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡು ಗೌತಮ್ ಮಾಡಿದ 600 ಕೋಟಿ ರೂಪಾಯಿ ಸಾಲವನ್ನು ತೀರಿಸಬೇಕು ಎಂದುಕೊಂಡಿದ್ದನು. ಅಜ್ಜಿ ಬಳಿ ಮೋಸದಿಂದ ಬಾಂಡ್ ಪೇಪರ್‌ಗೆ ಹೆಬ್ಬೆಟ್ಟು ಹಾಕಿಸಿಕೊಂಡಿದ್ದನು. ಆದರೆ ಅವನು ತಪ್ಪಾಗಿ ಬಲಗೈ ಹೆಬ್ಬೆಟ್ಟು ಹಾಕಿಸಿಕೊಂಡಿದ್ದು, ನೆನಪಾಗಿ ಮತ್ತೆ ಹೆಬ್ಬೆಟ್ಟು ಹಾಕಿಸಿಕೊಳ್ಳಬೇಕು ಎಂದಿದ್ದನು.
ಆಗ ಅಜ್ಜಿ ನನ್ನ ಎಲ್ಲ ಆಸ್ತಿಯನ್ನು ಗೌತಮ್‌ಗೆ ಬರೆದಾಗಿದೆ, ನೀನು ಏನೂ ಮಾಡಿಕೊಳ್ಳೋಕೆ ಆಗೋದಿಲ್ಲ ಎಂದಿದ್ದಳು. ಹೀಗಾಗಿ ಈಗ ಜೈದೇವ್ ಅಪ್ಪುನನ್ನು ಕಿಡನ್ಯಾಪ್ ಮಾಡಿದ್ದಾನೆ. ಈ ವಿಚಾರ ಗೊತ್ತಾಗಿ ಭೂಮಿ ನೇರವಾಗಿ ಜೈದೇವ್ ಬಳಿ ಬಂದಿದ್ದಾಳೆ. ಇದೀಗ ಭೂಮಿಕಾ ಮತ್ತೆ ಇವರೆಲ್ಲರ ವಿರುದ್ಧ ಪಣ ತೊಟ್ಟು ನಿಲ್ತಾಳಾ? ಉಗ್ರ ಅವತಾರ ತಾಳ್ತಾಳ ಅನ್ನೋದೇ ವೀಕ್ಷಕರಲ್ಲಿ ಇರೋ ಕುತೂಹಲ.
ಈಗಾಗಲೇ ಅಜ್ಜಿ ಮಾಡಿದ ಪ್ಲ್ಯಾನಿಂದಾಗಿ ಭೂಮಿಕಾ, ಗೌತಮ್‌ಗೆ ಹತ್ತಿರವಾಗುತ್ತಿದ್ದಾಳೆ. ಈ ಹೊತ್ತಿಗೆ ಈಗ ಅಪ್ಪು ವಿಚಾರ ಭೂಮಿಕಾಗೆ ಆಘಾತ ತಂದಿದೆ.
ಇದನ್ನೂ ಓದಿ: Amruthadhaare Serial: ಅಜ್ಜಿ ಆಸೆ ಈಡೇರ್ಲೇ ಬೇಕು! ಗೌತಮ್- ಭೂಮಿಕಾ ಒಂದಾಗ್ಲೇ ಬೇಕು! ಅಂತ್ಯ ಹಾಡುತ್ತಾ ಅಮೃತಧಾರೆ?
ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ