ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯ (Amruthadhaare Serial ) ಎಪಿಸೋಡ್‌ಗೆ ವೀಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ. ಭಾಗ್ಯಮ್ಮಳಿಗೆ (Bhagyamma) ಮಾತು ಬಂದಿರೋದು ವೀಕ್ಷಕರಿಗೆ ಕೂಡ ಸಂತಸ ತಂದಿದೆ. ಅಂತೂ ಅಪ್ಪು ಅಜ್ಜಿ ಅಪ್ಪುಗೆಯಲ್ಲಿ ಖುಷಿ ಇಲ್ಲಿ ಇದ್ದಾನೆ. ಕೊನೆಗೂ ಭೂಮಿಕಾ (Bhoomika Akash), ಆಕಾಶ್‌ನಿಂದ ದೂರ ಇರಿ ಎಂದೇ ಭಾಗ್ಯಮ್ಮಳಿಗೆ ಹೇಳಿದ್ದಾಳೆ. ಭೂಮಿ (Bhoomi) ಮಾತಿಗೆ ತಲೆದೂಗದೆ, ಭಾಗ್ಯಮ್ಮ ಎಲ್ಲ ಸತ್ಯವನ್ನೂ ಹೇಳೋಹಾಗಿದೆ. ಭಾಗ್ಯಮ್ಮ ಕೂಡ ಭೂಮಿಕಾಗೆ ಸಾಲು ಸಾಲು ಪ್ರಶ್ನೆಗಳನ್ನು ಇಟ್ಟಿದ್ದಾರೆ.
ಭಾಗ್ಯಮ್ಮಗೆ ತಾಕೀತು ಹಾಕಿದ ಭೂಮಿಕಾ
ಭೂಮಿ ದೇವಸ್ಥಾನದಲ್ಲಿ ಇರುವಾಗ, ಸೀರೆಗೆ ಬೆಂಕಿ ಹಚ್ಚಿಕೊಂಡಿದೆ. ಅದು ಭಾಗ್ಯಮ್ಮ ಕಣ್ಣಿಗೆ ಬಿದ್ದಿದೆ. ಮಾತೇ ಆಡದ ಭಾಗ್ಯಮ್ಮ ಈಗ ಭೂಮಿಕಾ ಎಂದು ಕೂಗಿದ್ದಾಳೆ. ಶಕುಂತಲಾ ನೀಡಿದ ಹಿಂಸೆಗೆ ಭಾಗ್ಯಮ್ಮಗೆ ಮಾತು ಬರದಂತೆ ಆಗಿತ್ತು. ಆದರೀಗ ಭಾಗ್ಯಮ್ಮ ಮಾತಾಡಿದ್ದಾರೆ. ಒಂದು ಕಡೆ ಮಾತು ಬಂತು ಅನ್ನುವಷ್ಟರಲ್ಲಿ ಭೂಮಿಕಾ, ಮಗನಿಂದ ದೂರವಿರು ಎಂದು ತಾಕೀತು ಹಾಕಿದ್ದಾಳೆ. ಇದು ಭಾಗ್ಯಮ್ಮಳಿಗೆ ಬೇಸರ ತರಿಸಿದೆ.
ಜೀ ಕನ್ನಡ ವಾಹಿನಿ ಪ್ರೋಮೋ
ಇದನ್ನೂ ಓದಿ: Kannada Serial TRP: ಅಮೃತಧಾರೆ ಟ್ವಿಸ್ಟ್ಗೆ ಮನಸೋತ ವೀಕ್ಷಕರು: ನಂ. 1 ಧಾರಾವಾಹಿ
ಮೊದಲಿಗೆ ಭೂಮಿಕಾಳನ್ನು ಕಂಡು ಸಂತೋಷಗೊಂಡ ಭಾಗ್ಯಮ್ಮ, ಮೊಮ್ಮಗನ ಬಗ್ಗೆ ವಿಚಾರಿಸುತ್ತಾರೆ. ಮೊಮ್ಮಗನಿಗೆ ನೀವು ಯಾರೆಂಬುದು ಗೊತ್ತಾಗೋದು ಬೇಡ ಎಂದಿದ್ದಾಳೆ ಭೂಮಿಕಾ. ಇದು ಭಾಗ್ಯಮ್ಮಳಿಗೆ ಶಾಕ್ ಆಗಿದೆ.
ಅಷ್ಟೇ ಅಲ್ಲ ಗೌತಮ್ ಕೂಡ ಆಕಾಶ್‌ಗೆ ನಾನು ಅಪ್ಪ ಅನ್ನೋದು ಗೊತ್ತಿಲ್ಲ ಎಂದು ಹೇಳಿದ್ದಾನೆ. ಇದರಿಂದ ಬೇಸರಗೊಂಡ ಭಾಗ್ಯಮ್ಮ, ಗೌತಮ್ ಮೇಲೆ ಇರೋ ಕೋಪಕ್ಕೆ ಮಗನನ್ನು ಯಾಕೆ ದೂರ ಮಾಡುತ್ತಿದ್ದೀಯಾ. ಅವನಿಗೆ ಯಾಕೆ ಪ್ರೀತಿ ಸಿಗದಂತೆ ಮಾಡುತ್ತಿದ್ದೀಯಾ ಎಂದು ಪ್ರಶ್ನೆ ಇಟ್ಟಿದ್ದಾರೆ. ಆದರೂ ಭೂಮಿಕಾ ಈ ಬಗ್ಗೆ ಏನನ್ನು ಉತ್ತರ ನೀಡುವುದಿಲ್ಲ.
ಭೂಮಿ ಮಾತಿಗೆ ತಲೆದೂಗದೆ ಇರ್ತಾರಾ ಭಾಗ್ಯಮ್ಮ?
ಆಕಾಶ್‌ನನ್ನು ದೂರದಿಂದಲೇ ಭಾಗ್ಯಮ್ಮ ಅಪ್ಪಿಕೊಂಡು ಮಾತಾಡ್ತಾಳೆ. ಆದರೆ ಆಕಾಶ್ ಕೂಡ ಯಾರು ಎಂದು ಕೇಳಿದ್ರು, ಭಾಗ್ಯಮ್ಮ ಉತ್ತರಿಸುವುದಿಲ್ಲ. ಭೂಮಿಕಾ ಸತ್ಯವನ್ನು ಏಕೆ ಮುಚ್ಚಿಡುತ್ತಿದ್ದಾಳೆ ಎನ್ನುವ ಕಾರಣ ಭಾಗ್ಯಮ್ಮಳಿಗೆ ಗೊತ್ತಿಲ್ಲ. ಹೀಗಾಗಿ ಭೂಮಿ ಮಾತಿಗೆ ತಲೆದೂಗದೆ ಭಾಗ್ಯಮ್ಮ ಎಲ್ಲ ಸತ್ಯವನ್ನೂ ಹೇಳೋಹಾಗಿದೆ.
ಎಲ್ಲಿ ಮತ್ತೆ ಎಲ್ಲರೂ ಒಂದಾದರೆ ಶಕುಂತಾಳ ವಕ್ರದೃಷ್ಟಿ ಬೀಳುತ್ತೋ ಅನ್ನೋ ಭಯಕ್ಕೆ ಭೂಮಿಕಾ ಮಗನನ್ನು ಎಲ್ಲರಿಂದ ದೂರ ಇಡುತ್ತಿದ್ದಾಳೆ. ಮುಂದಿನ ದಿನಗಳಲ್ಲಿ ಭಾಗ್ಯಮ್ಮಳೇ ಮಗ ಸೊಸೆ ಜೀವನ ಸರಿ ಮಾಡ್ತಾಳಾ? ಅಥವಾ ಮತ್ತೆ ಜೈದೇವ ಕುತಂತ್ರಕ್ಕೆ ಸಮಸ್ಯೆಗೆ ಗುರಿಯಾಗ್ತಾರಾ ಅನ್ನೋದೇ ಕುತೂಹಲ.
ಇದನ್ನೂ ಓದಿ: Amruthadhare Serial: ಗೌತಮ್ - ಭೂಮಿ ಒಂದು ಮಾಡೋಕೆ ಮಿಂಚು - ಆಕಾಶ್ ಒಂದಾದ್ರು! ಇನ್ನು ಬರೀ ಒಲವ ಅಮೃತಧಾರೆ
ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.